ನನ್ನ ಸ್ಯಾಲರಿಯಲ್ಲಿ ಫೋನ್ ಖರೀದಿಸಲೂ ಆಗುತ್ತಿಲ್ಲ, ಉದ್ಯೋಗಿ ರಾಜೀನಾಮೆ ಇಮೇಲ್ ಸಂಚಲನ

ನನ್ನ ತಿಂಗಳ ಸ್ಯಾಲರಿಯಲ್ಲಿ 51 ಸಾವಿರ ರೂಪಾಯಿ ಫೋನ್ ಖರೀದಿಸಲು ಆಗುತ್ತಿಲ್ಲ. ಕೆಲ ವರ್ಷಗಳಿಂದ ಕಠಿಣ ಪರಿಶ್ರಮ ಪಡುತ್ತಿದ್ದೇನೆ, ಆದರೆ ವೇತನ ಮಾತ್ರ ಮಂಜುಗಡ್ಡೆ ರೀತಿ ಕಲ್ಲಾಗಿದೆ. ಇದು ಉದ್ಯೋಗಿ ತನ್ನ ರಾಜೀನಾಮೆಯಲ್ಲಿ ಉಲ್ಲೇಖಿಸಿದ ಮಾತುಗಳು. ಅಷ್ಟಕ್ಕೂ ಈ ಉದ್ಯೋಗಿಯ ರಾಜೀನಾಮೆ ಇಮೇಲ್ ಕೋಲಾಹಲ ಸೃಷ್ಟಿಸಿದ್ದೇಕೆ?

Salary not allowing to buy phone Employee resignation letter create buzz

ನವದೆಹಲಿ(ಜ.09) ಕೆಲಸದ ಒತ್ತಡ, ಕಡಿಮೆ ವೇತನ, ಕಚೇರಿ ಕಿರಿಕಿರಿ ಸೇರಿದಂತೆ ಹಲವು ಕಾರಣಗಳಿಂದ ಉದ್ಯೋಗಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರಬರುವುದು ಸಾಮಾನ್ಯವಾಗಿದೆ. ರಾಜೀನಾಮೆ ವೇಳೆ ಕೆಲವೇ ಕೆಲವು ಮಂದಿ ಖಾರವಾಗಿ ಬರೆದು ಗುಡ್ ಬೈ ಹೇಳತ್ತಾರೆ. ಬಹುತೇಕರು ಅವಕಾಶಕ್ಕಾಗಿ ಧನ್ಯವಾದ ಎಂದು ಹೇಳಿ ಮುಂದೆ ಸಾಗುತ್ತಾರೆ. ಆದರೆ ಇಲ್ಲೊಬ್ಬ ಉದ್ಯೋಗಿ ತನ್ನು ಆಕ್ರೋಶ, ನೋವು ಎಲ್ಲವನ್ನೂ  ವ್ಯಂಗ್ಯವಾಗಿ, ಹಾಸ್ಯವಾಗಿ ರಾಜೀನಾಮೆ ಇಮೇಲ್‌ನಲ್ಲಿ ಉಲ್ಲೇಖಿಸಿದ ಘಟನೆ ನಡೆದಿದೆ. ಈ ಇಮೇಲ್ ಮೇಲ್ನೋಟಕ್ಕೆ ಫ್ರೌಡಿಮೆಯ ಕೊರತೆ ಎಂದು ಕಂಡರೂ ವಾಸ್ತವ ಹಾಗೂ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ವಿಚಾರಗಳ ಮೇಲೆ ಬೆಳಕು ಚೆಲ್ಲಿದೆ.

ಎಂಜನೀಯರಿಂಗ ಹಬ್ ಸಹ ಸಂಸ್ಥಾಪಕ ರಿಷಬ್ ಸಿಂಗ್, ಉದ್ಯೋಗಿಯ ಈ ರಿಸೆಗ್ನೇಶನ್ ಇಮೇಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  ಉದ್ಯೋಗಿ ಹೆಸರು ಗೌಪ್ಯವಾಗಿಡಲಾಗಿದೆ. ಇಮೇಲ್ ವಿಷಯವನ್ನು ರಾಜೀನಾಮೆ ಪತ್ರ ಎಂದು ಉಲ್ಲೇಖಿಸಿದ್ದಾರೆ. ಬಳಿಕ ಪ್ರೀತಿಯ ಹೆಚ್ಆರ್ ಎಂದು ತನ್ನ ರಾಜೀನಾಮೆಯ ಸಾಲುಗಳನ್ನು ಆರಂಭಿಸಿದ್ದಾನೆ. ಆದರೆ ಮುಂದಿನ ಒಂದೊಂದು ಸಾಲುಗಳು ಹಲವು ಅರ್ಥಗಳನ್ನು ನೀಡುತ್ತದೆ.

ಮಕ್ಕಳ ನೋಟ್‌ಬುಕ್ ಪೇಪರ್‌ನಲ್ಲಿ ರಾಜೀನಾಮೆ ಪತ್ರ, ಕಂಪನಿ CFO ರಿಸೈನ್ ಲೆಟರ್ ವೈರಲ್!

ಕಳೆದ 2 ಅತ್ಯುತ್ತಮ ವರ್ಷಗಳಲ್ಲಿ ಕಠಿಣ ಪರಿಶ್ರಮ ಹಾಗೂ ಸಂಪೂರ್ಣ ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ. ಆದರೆ ನನ್ನ ತಿಂಗಳ ಸಂಬಳ ಮಾತ್ರ ಮಂಜುಗಡ್ಡೆಯಂತೆ ಕಲ್ಲಾಗಿದೆ.  ನಾನು ಡಿಸೆಂಬರ್ 5ರಂದು ಐಕ್ಯೂ 13 ಮೊಬೈಲ್ ಫೋನ್ ಪ್ರೀ ಬುಕ್ ಮಾಡಬೇಕಿತ್ತು. ಇದರ ಬೆಲೆ ಕೇವಲ 51,999 ರೂಪಾಯಿ ಮಾತ್ರ. ಆದರೆ ನನ್ನ ಈ ಸಂಬಂಳದಲ್ಲಿ ಇದು ಸಾಧ್ಯವಿಲ್ಲ. ಇದರಿಂದ ನಾನು ಆತಂಕಗೊಂಡಿದ್ದೇನೆ.ಕನಿಷ್ಠ ಭಾರತದಲ್ಲಿ ಲಭ್ಯವಿರುವ ವೇಗದ ಸ್ಮಾರ್ಟ್‌ಫೋನ್ ಖರೀದಿ ಮಾಡಲು ನನಗೆ ಸಾಧ್ಯವಾಗದಿದ್ದರೆ,  ನನ್ನ ವೃತ್ತಿಪರ ಜೀವನ ಹೇಗೆ ವೇಗವಾಗಿ ಮುಂದುವರಿಯಲು ಸಾಧ್ಯ? ಎಂದು ಉದ್ಯೋಗಿ ತನ್ನ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.

ಈ ಕಾರಣಗಳಿಂದ ನಾನು ಒಂದು ಸ್ಪಷ್ಟವಾಗಿ ನಿರ್ಧರಿಸಿದ್ದೇನೆ. ಎಲ್ಲಿ ಕರಿಯರ್‌ಗೆ ಉತ್ತಮ ಅವಕಾಶವಿದ್ದಲ್ಲಿ ಕೆಲಸ ಹುಡುಕಬೇಕು, ಆದರೆ ಆದು ಕೇವಲ ಮಾತುಗಳಿಗೆ ಮಾತ್ರ ಸೀಮಿತವಾಗಿರಬಾರದು. ನನ್ನ ಕೊನೆಯ ವರ್ಕಿಂಗ್ ಡೇ ಡಿಸೆಂಬರ್ 4. ಈ ಮೂಲಕ ನಾನು ನನ್ನ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ನನ್ನ ರಾಜೀನಾಮೆ ಪ್ರಕ್ರಿಯೆಗಳನ್ನು ಯಾವುದೇ ಅಡೆ ತಡೆ ಇಲ್ಲದೆ ಮುಗಿಸಿ. ಅನುಭವ ಹಾಗೂ ನೆನಪುಗಳಿಗೆ ಧನ್ಯವಾದ ಎಂದು ರಾಜೀನಾಮೆ ಪತ್ರದಲ್ಲಿ ಉದ್ಯೋಗಿ ಹೇಳಿದ್ದಾರೆ.

 

 

ಈ ರಾಜಿನಾಮೆ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದಂತೆ ಹಲವರು ಕಮೆಂಟ್ ಮಾಡಿದ್ದಾರೆ. ಉದ್ಯೋಗಿಗೆ 51,999 ರೂಪಾಯಿ ಫೋನ್ ಕೊಡಿಸಿ ಉಳಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದು ಎಚ್ಚರಿಕೆ ಕರೆ ಗಂಟೆಯಾಗಿದೆ. ಕಂಪನಿ ಸ್ಯಾಲರಿ ಹೈಕ್ ಯಾಕೆ ಮಾಡಿಲ್ಲ. ಉದ್ಯೋಗಿಗಳಿಗೆ ಪ್ರತಿ ವರ್ಷ ಕನಿಷ್ಠ ವೇತನ ಹೆಚ್ಚಳ ಮಾಡಬೇಕು. ಇದೀಗ ಒಬ್ಬ ಉದ್ಯೋಗಿ, ಮುಂದೆ ಇದೇ ರೀತಿ ಉದ್ಯೋಗಿಗಳು ಬಿಟ್ಟು ಹೋಗುತ್ತಾರೆ. ಉದ್ಯೋಗಿಗಳಿಗೆ ಪ್ರತಿ ವರ್ಷ ಉತ್ತಮ ಸ್ಯಾಲರಿ ಹೆಚ್ಚಳ ಮಾಡಬೇಕು ಎಂದು ಹಲವು ಆಗ್ರಹಿಸಿದ್ದಾರೆ.

ಇದೇ ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ಹಲವರು ಕಮೆಂಟ್ ಮಾಡಿದ್ದಾರೆ. ಇದೇ ರೀತಿಯ ಉದ್ಯೋಗಿ ವಿಶೇಷ ಹಾಗೂ ಅಸಲಿ ಕಾರಣ ನೀಡಿ ರಾಜೀನಾಮೆ ನೀಡಿ ಸುದ್ದಿಯಾದವರ ಕುರಿತು ಮಾಹಿತಿ ನೀಡಿದ್ದಾರೆ. ಈ ಒಂದು ಘಟನೆ ಹಲವು ರಾಜೀನಾಮೆಗಳನ್ನು ನೆನಪಿಸಿದೆ. ಇಷ್ಚೇ ಅಲ್ಲ ಹಲವರು ಉದ್ಯೋಗಿಗಳ ಚೆನ್ನಾಗಿ ನೋಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಮ್ಯಾನೇಜರ್ ಬೇಡಿಕೆಗೆ ಬೇಸತ್ತು, ಮೊದಲ ದಿನವೇ ಕೆಲಸ ಬಿಟ್ಟ ಉದ್ಯೋಗಿ!
 

Latest Videos
Follow Us:
Download App:
  • android
  • ios