ಮಕ್ಕಳ ನೋಟ್‌ಬುಕ್ ಪೇಪರ್‌ನಲ್ಲಿ ರಾಜೀನಾಮೆ ಪತ್ರ, ಕಂಪನಿ CFO ರಿಸೈನ್ ಲೆಟರ್ ವೈರಲ್!
ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳು ರಾಜೀನಾಮೆ ನೀಡುವುದು ಹೊಸದೇನಲ್ಲ. ಮುಖ್ಯಸ್ಥರು ಸೇರಿದಂತೆ ದೊಡ್ಡ ತಂಡವೇ ರಾಜೀನಾಮೆ ನೀಡಿ ಹೊರಹೋದ ಘಟನೆಗಳೂ ನಡೆದಿದೆ. ಆದರೆ ರಾಜೀನಾಮೆ ಸೇರಿದಂತೆ ಬಹುತೇಕ ಎಲ್ಲಾ ವ್ಯವಹಾರಗಳು ಇಮೇಲ್ ಮೂಲಕವೇ ನಡೆಯುತ್ತದೆ. ಆದರೆ ಇಲ್ಲೊಬ್ಬ ಕಂಪನಿ CFO ತಮ್ಮ ಮಕ್ಕಳ ನೋಟ್‌ಬುಕ್ ಪೇಜ್‌ನಲ್ಲಿ ರಾಜೀನಾಮೆ ಪತ್ರ ಬರೆದು ಕಂಪನಿಗೆ ನೀಡಿದ್ದಾರೆ. ಇದು ವೈರಲ್ ಆಗಿದೆ.
ನವದೆಹಲಿ(ಡಿ.22) ಕಂಪನಿಗಳ ಮುಖ್ಯಸ್ಥರು, ಪಾಲುದಾರರು, ಪ್ರಮುಖ ಹುದ್ದೆಯಲ್ಲಿರುವ ಉದ್ಯೋಗಿಗಳು ರಾಜೀನಾಮೆ ನೀಡಿ ಸುದ್ದಿಯಾದ ಹಲವು ಘಟನೆಗಳಿವೆ. ಇನ್ನು ರಾಜೀನಾಮೆ ವೇಳೆ ನಡೆದ ಜಗಳ, ಹೋರಾಟಗಳ ಉದಾಹರಣೆ ಇದೆ. ಇದೀಗ ಖಾಸಗಿ ಕಂಪನಿಯ ಸಿಎಫ್ಒ ರಾಜೀನಾಮೆ ಭಾರಿ ವೈರಲ್ ಆಗಿದೆ. CFO ತನ್ನ ರಾಜೀನಾಮೆಯನ್ನು ಇಮೇಲ್ ಮೂಲಕ ಕಳುಹಿಸಿಲ್ಲ. ಬದಲಾಗಿ, ಮಕ್ಕಳ ನೋಟ್‌ಬುಕ್‌ನ ಒಂದು ಪೇಜ್ ಹರಿದು, ಅದರಲ್ಲಿ ರಾಜೀನಾಮೆ ಪತ್ರ ಬರೆದು ಕಂಪನಿಗೆ ನೀಡಿದ್ದಾರೆ. ಇದು ಭಾರಿ ವೈರಲ್ ಆಗಿದೆ.
ಮಿಟ್‌ಶಿ ಇಂಡಿಯಾ ಕಂಪನಿಯ ಚೀಪ್ ಫಿನಾಶ್ಶಿಯಲ್ ಆಫೀಸರ್ ರಿಂಕು ಪಟೇಲ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ರಿಂಕು ಪಟೇಲ್ ಡಿಸೆಂಬರ್ 15 ರಂದು ಕಂಪನಿಯ CFO ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಖಾಸಗಿ ಕಂಪನಿಗಳಲ್ಲಿ ರಾಜೀನಾಮೆ ಸೇರಿದಂತೆ ಬಹುತೇಕ ಎಲ್ಲಾ ವ್ಯವಹಾರಗಳು ಇಮೇಲ್ ಮೂಲಕ ನಡೆಯುತ್ತದೆ. ಆದರೆ ರಿಂಕು ಪಟೇಲ್ ಮಾತ್ರ ಭಿನ್ನವಾಗಿ ರಾಜೀನಾಮೆ ನೀಡಿದ್ದಾರೆ.
ಹತ್ತು ನಿಮಿಷ ಟಾಯ್ಲೆಟ್ ಬ್ರೇಕ್ ತಗೊಂಡಿದ್ದನ್ನು ಪ್ರಶ್ನಿಸಿದ ಬಾಸ್, ರಿಸೈನ್ ಮಾಡಿದ ಮಹಿಳೆ; ಪೋಸ್ಟ್ ವೈರಲ್
ಮನವಿ, ದೂರು ಸೇರಿದಂತೆ ಯಾವುದೇ ವ್ಯವಹಾರಗಳಿಗೆ ಅಧಿಕೃತವಾಗಿ A4 ಶೀಟ್ ಬಳಕೆ ಮಾಡಲಾಗುತ್ತದೆ. ಸರ್ಕಾರಿ ಕಚೇರಿ ಆಗಿರಲಿ, ಖಾಸಗಿ ಕಂಪನಿ ಆಗಿರಲಿ, A4 ಶೀಟ್ ಮೂಲಕವೇ ನೀಡುತ್ತಾರೆ. ಆದರೆ ರಿಂಕು ಪಟೇಲ್ ತಮ್ಮ ರಾಜೀನಾಮೆಯನ್ನು ಪೇಪರ್ ಮೂಲಕ ನೀಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ A4 ಶೀಚ್ ಬದಲು ತಮ್ಮ ಮಕ್ಕಳ ಶಾಲಾ ನೋಟ್‌ಬುಕ್‌ನಲ್ಲಿನ ಒಂದು ಪೇಜ್ ಹರಿದು ಅದರಲ್ಲೇ ರಾಜೀನಾಮೆ ಪತ್ರ ಬರೆದಿದ್ದಾರೆ.
ತಕ್ಷಣಕ್ಕೆ ಜಾರಿಗೆ ಬರುವಂತೆ ನಾನು ಸಿಎಫ್‌ಒ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೆ ಎಂದು ಈ ಮೂಲಕ ನಿಮಗೆ ವಿನಂತಿಸುತ್ತಿದ್ದೇನೆ. ವೈಯುಕ್ತಿಕ ಕಾರಣಗಳಿಂದ ನಾನು ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ಈ ಸಂಸ್ಥೆಯಲ್ಲಿ ಕೆಲಸ ಮಾಡಿರುವುದು ಹೆಚ್ಚು ಸಂತೋಷ ತಂದಿದೆ. ಜೊತೆಗೆ ಅತ್ಯುತ್ತಮ ಅನುಭವ ನೀಡಿದೆ ಎಂದು ರಿಂಕು ಪಟೇಲ್ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜೀನಾಮೆ ನೀಡದಿದ್ದರೆ ವೇತನ ಸ್ಥಗಿತ, ಬೈಜುಸ್ ಬೆದರಿಕೆಗೆ ಕುಗ್ಗಿ ಹೋದ ಮಹಿಳಾ ಉದ್ಯೋಗಿ!
ಎರಡು ಪ್ಯಾರಾದ ಮೂಲಕ ಬರೆದಿರುವ ರಾಜೀನಾಮೆ ಪತ್ರ ಇದೀಗ ಭಾರಿ ವೈರಲ್ ಆಗಿದೆ. ಷೇರು ಮಾರ್ಕೆಟ್‌ನಲ್ಲಿ ಲಿಸ್ಟೆಡ್ ಆಗಿರುವ ಮಿಟ್‌ಶಿ ಇಂಡಿಯಾ ಕಂಪನಿಯ ಸಿಎಫ್ಒ ರಾಜೀನಾಮೆ ಘಟನೆ ಇದೀಗ ಷೇರು ಮಾರುಕಟ್ಟೆಯಲ್ಲೂ ಭಾರಿ ಸಂಚಲನ ಸೃಷ್ಟಿಸಿದೆ.