ಟಿಸಿಎಸ್, ವಿಪ್ರೋ, ಇನ್ಫೋಸಿಸ್‌ಗೆ ತಟ್ಟಿದ ಹಿಂಜರಿತದ ಬಿಸಿ, ನೇಮಕಾತಿಗೆ ಭಾರೀ ಕತ್ತರಿ!
ದೇಶದ ಪ್ರಮುಖ ಐಟಿ ಕಂಪನಿಗಳ ತ್ರೈಮಾಸಿಕ ಫಲಿತಾಂಶ ನಿರೀಕ್ಷೆಗಿಂತ ದುರ್ಬಲವಾಗಿದೆ. ಫಲಿತಾಂಶದ ನಂತರ, ಜೂನ್ ತ್ರೈಮಾಸಿಕದಲ್ಲಿ ಕಂಪನಿಗಳಲ್ಲಿನ ಉದ್ಯೋಗಿಗಳ ಸಂಖ್ಯೆಯಲ್ಲಿ ದೊಡ್ಡ ಕುಸಿತ ಕಂಡುಬಂದಿದೆ ಮತ್ತು ಪ್ರಸ್ತುತ ಕಂಪನಿಗಳು ಹೊಸ ನೇಮಕಾತಿಗೆ ಉತ್ಸುಕರಾಗಿಲ್ಲ ಎನ್ನುವುದು ಗೊತ್ತಾಗಿದೆ.
ಮುಂಬೈ (ಜು.21): ದೇಶದ ಪ್ರಮುಖ ಐಟಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಇನ್ಫೋಸಿಸ್, ವಿಪ್ರೋ ಮತ್ತು ಎಚ್‌ಸಿಎಲ್‌ಟೆಕ್ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿವೆ. ಈ ಐಟಿ ಕಂಪನಿಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಮಾರ್ಚ್-ಜೂನ್ ತ್ರೈಮಾಸಿಕದಲ್ಲಿ ನೇಮಕಗೊಂಡ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜೂನ್ 2023ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಟಿಸಿಎಸ್ 523 ಉದ್ಯೋಗಿಗಳನ್ನು ಸೇರಿಸಿಕೊಂಡಿದೆ. ಅದೇ ಸಮಯದಲ್ಲಿ, ಒಂದು ವರ್ಷದ ಹಿಂದೆ, ಕಂಪನಿಯು ತ್ರೈಮಾಸಿಕದಲ್ಲಿ 14,136 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿತ್ತು. ತ್ರೈಮಾಸಿಕ ಫಲಿತಾಂಶಗಳ ನಂತರ, ಟಿಸಿಎಸ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಾಡ್ ಮಾತನಾಡಿದ್ದು, ಕಂಪನಿಯು ಹೆಚ್ಚಿನ ಉದ್ಯೋಗಿಗಳನ್ನು ಸೇರಿಸುವ ಬದಲು ಈಗಾಗಲೇ ಇರುವ ಉದ್ಯೋಗಿಗಳನ್ನು ಬಳಸಿಕೊಳ್ಳಲು ಯೋಜಿಸಿದೆ ಎಂದಿದ್ದಾರೆ. ನಮಗೆ ನೀಡಿದ ಎಲ್ಲಾ ಕೊಡುಗೆಗಳನ್ನು ಗೌರವಿಸಲು ನಾವು ಬದ್ಧರಾಗಿದ್ದೇವೆ. ಕಳೆದ ವರ್ಷ ರಚಿಸಲಾದ ವರ್ಕ್‌ಫೋರ್ಸ್‌ನ ಲಾಭ ಪಡೆಯುವತ್ತ ನಮ್ಮ ಗಮನ ಹರಿಸಲಾಗುವುದು ಎಂದು ಮಿಲಿಂದ್ ಲಕ್ಕಡ್ ಹೇಳಿದ್ದಾರೆ. Q1 FY24 ರ ಕೊನೆಯಲ್ಲಿ TCS ಒಟ್ಟು 6,15,318 ಉದ್ಯೋಗಿಗಳನ್ನು ಹೊಂದಿದೆ.
ಇನ್ನು, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಿಪ್ರೊದಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ 8,812ಕ್ಕೆ ಕುಸಿಸಿದೆ. ಇದು ಹಿಂದಿನ ವರ್ಷದ ತ್ರೈಮಾಸಿಕಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಅಂದು ಕಂಪನಿಯು 15,446 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸೇರಿಸಿಕೊಂಡಿತ್ತು. ಮುಂಬರುವ ತ್ರೈಮಾಸಿಕಗಳಲ್ಲಿ ಪ್ರಮುಖ ಹುದ್ದೆಗಳಿಗೆ ಮಾತ್ರ ವಿಪ್ರೋ ನೇಮಕ ಮಾಡಿಕೊಳ್ಳಲಿದೆ ಎಂದು ಕಂಪನಿಯ ಮುಖ್ಯ ಅಧಿಕಾರಿ ಸೌರಭ್ ಗೋವಿಲ್ ಹೇಳಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಮಾತ್ರವೇ ಹೊಸ ನೇಮಕಾತಿಯನ್ನು ಮಾಡಿಕೊಳ್ಳಲಿದ್ದೇವೆ. ಹಾಗಿದ್ದರೂ ಕೆಲವೊಂದು ಪ್ರಮುಖ ವಲಯದ ನೇಮಕಾತಿಗಳನ್ನು ಮುಂದುವರಿಸುತ್ತೇವೆ ಎಂದು ಸೌರಭ್ ಗೋವಿಲ್ ತಿಳಿಸಿದ್ದಾರೆ. ಎಐ, ಡೇಟಾ, ಸೆಕ್ಯುರಿಟಿ, ಇಂಜಿನಿಯರಿಂಗ್ ನಲ್ಲಿ ಭಾರಿ ಹೂಡಿಕೆಯನ್ನು ನಾವು ಮಾಡುತ್ತಿದ್ದೇವೆ.ಬೇಡಿಕೆಯ ಆಧಾರದ ಮೇಲೆ, ನಾವು ಪ್ರತಿ ತ್ರೈಮಾಸಿಕದಲ್ಲಿ ಈ ವಿಶೇಷ ಕೌಶಲ್ಯಗಳಿಗಾಗಿ ನೇಮಕಾತಿಗಳನ್ನು ಮಾಡುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
ಮಣಿಪುರ ಯುವತಿಯರ ಬೆತ್ತಲೆ ಪ್ರಕರಣಕ್ಕೆ ಪ್ರಧಾನಿಯ ಟೀಕಿಸಿದ ಕಿಶೋರ್, 'ನಿಮ್ಮ 56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ..'
ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಎಚ್‌ಸಿಎಲ್ ಟೆಕ್‌ನ ಉದ್ಯೋಗಿ ಸಾಮರ್ಥ್ಯವು 2506 ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಕಂಪನಿ ಸುಮಾರು 2089 ಉದ್ಯೋಗಿಗಳನ್ನು ಸೇರಿಸಿಕೊಂಡಿತ್ತು. ಕಂಪನಿಯು ಕೆಲವು ಉದ್ಯೋಗಿಗಳಿಗೆ ವಾರ್ಷಿಕ ವೇತನ ಹೆಚ್ಚಳವನ್ನು ಮುಂದೂಡುವುದಾಗಿ ಈಗಾಗಲೇ ಘೋಷಣೆ ಮಾಡಿದೆ.
ಗ್ಯಾರಂಟಿ ಮೂಲಕ ಮತದಾರರಿಗೆ ಆಮಿಷ, ಶಾಸಕ ಸ್ಥಾನದಿಂದ ಅನರ್ಹರಾಗ್ತಾರಾ ಸಿದ್ಧರಾಮಯ್ಯ?
FY24 ರ ಮೊದಲ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಉದ್ಯೋಗಿಗಳ ಸಂಖ್ಯೆಯನ್ನು 7000 ಕ್ಕಿಂತ ಹೆಚ್ಚು ಕಡಿಮೆ ಮಾಡಿದೆ. ಕಂಪನಿಯ ಉದ್ಯೋಗಿಗಳ ಸಂಖ್ಯೆ ಈಗ 3,36,294 ಆಗಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ತಮ್ಮ ಎಐ ಸಾಮರ್ಥ್ಯಗಳನ್ನು ನಿರ್ಮಿಸುವತ್ತ ಗಮನಹರಿಸುವುದಾಗಿ ಕಂಪನಿಯ ಸಿಇಒ ಸಲೀಲ್ ಪರೇಖ್ ಹೇಳಿದ್ದಾರೆ. 80 ಸಕ್ರಿಯ ಕ್ಲೈಂಟ್ ಯೋಜನೆಗಳೊಂದಿಗೆ, ನಮ್ಮ ಜೆನೆರಿಕ್ AI ಸಾಮರ್ಥ್ಯಗಳು ಉತ್ತಮವಾಗಿ ವಿಸ್ತರಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.