ಬೈಕ್‌ನಲ್ಲಿ ಪ್ರಯಾಣಿಸುತ್ತಲೇ ಲ್ಯಾಪ್‌ಟಾಪ್‌ನಲ್ಲಿ ಕೆಲಸ: ಯುವಕನ ಫೋಟೋ ವೈರಲ್
ಮನೆಯಿಂದಲೇ ಕೆಲಸ ಮಾಡುವ ಯೋಜನೆ ಬಂದ ನಂತರ ಕಚೇರಿಗೆ ಹೋಗಿ ಕೆಲಸ ಮಾಡುವ ವ್ಯಾಖ್ಯಾನವೇ ಬದಲಾಗಿದ್ದು, ಇಂಟರ್‌ನೆಟ್ ಲ್ಯಾಪ್‌ಟಾಪ್ ಇದ್ದಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಬಹುದಾಗಿದೆ.
ಮುಂಬೈ: ಕೋವಿಡ್ ಬಳಿಕ ಎಲ್ಲಾ ಖಾಸಗಿ ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳು ಸೇರಿದಂತೆ ಬಹುತೇಕ ಎಲ್ಲಾ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ಶುರು ಮಾಡಿದರು. ಈ ವರ್ಕ್ ಫ್ರಮ್ ಹೋಮ್‌ನ್ನು ಅನೇಕ ಸಂಸ್ಥೆಗಳು ಶಾಶ್ವತಗೊಳಿಸಿವೆ. ಮತ್ತೆ ಕೆಲವು ಸಂಸ್ಥೆಗಳು ವಾರಕ್ಕೆರಡು ದಿನ ಕಚೇರಿಗೆ ಬರುವಂತೆ ಉದ್ಯೋಗಿಗಳಿಗೆ ಸೂಚಿಸಿವೆ. ಮನೆಯಿಂದಲೇ ಕೆಲಸ ಮಾಡುವ ಯೋಜನೆ ಬಂದ ನಂತರ ಕಚೇರಿಗೆ ಹೋಗಿ ಕೆಲಸ ಮಾಡುವ ವ್ಯಾಖ್ಯಾನವೇ ಬದಲಾಗಿದ್ದು, ಇಂಟರ್‌ನೆಟ್ ಲ್ಯಾಪ್‌ಟಾಪ್ ಇದ್ದಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಬಹುದಾಗಿದೆ.
ಈ ಸೌಲಭ್ಯವನ್ನು ಎಂಜಾಯ್ ಮಾಡುತ್ತಿರುವ ಉದ್ಯೋಗಿಗಳು ಎಲ್ಲೆಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ವಾಹನ ಬಸ್ ರೈಲುಗಳಲ್ಲಿ ಪ್ರಯಾಣ ಮಾಡುತ್ತಾ ಕೆಲಸ ಮಾಡುವುದು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಲೇ ಪ್ರವಾಸ ಮಾಡುವುದು ಈಗ ಸಾಮಾನ್ಯವಾಗಿದೆ. ಅದೇ ರೀತಿ ಹೀಗೆ ಓರ್ವ ಸ್ಕೂಟರ್‌ನಲ್ಲಿ ಹಿಂಬದಿ ಕುಳಿತುಕೊಂಡು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದು, ಇದರ ಫೋಟೋವೀಗ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಫ್ಲೈಓವರ್ ಒಂದರ ಮಧ್ಯದಲ್ಲಿ ಸ್ಕೂಟರ್‌ನಲ್ಲಿ ಕುಳಿತುಕೊಂಡು ಯುವಕ ಲ್ಯಾಪ್‌ಟಾಪ್ ತೆರೆದಿಟ್ಟುಕೊಂಡು ಏನು ಕುಟ್ಟುತ್ತಿರುವುದು ಫೋಟೋದಲ್ಲಿ ಸೆರೆಯಾಗಿದೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣ ಲಿಂಕ್ಡಿನ್‌ನಲ್ಲಿ ಹರ್ಸ್ಮಿತ್ ಸಿಂಗ್ ಎಂಬುವವರು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಅನೇಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎಲ್ಲಿಂದ ಬೇಕಾದ್ರು ಕೆಲ್ಸ ಮಾಡಿ, ಸ್ಯಾಲರಿ ಕಡಿಮೆ ಮಾಡಲ್ಲ: ಉದ್ಯೋಗಿಗಳಿಗೆ Airbnb ಆಫರ್
ಬೆಂಗಳೂರು ಅತ್ಯುತ್ತಮವಾದುದು ಕೆಟ್ಟದೋ ತಿಳಿಯದು. ರಾತ್ರಿ 11 ಗಂಟೆ ವೇಳೆಗೆ ಬೆಂಗಳೂರಿನ ಅತ್ಯಂತ ಜನಸಂದಣಿಯ ಫ್ಲೈಒವರ್ ಮೇಲೆ ಹಿಂಬದಿ ಸವಾರನೋರ್ವ ಲ್ಯಾಪ್‌ಟಾಪ್ ಬಿಡಿಸಿಟ್ಟು ಕೆಲಸ ಮಾಡುತ್ತಿದ್ದ. ಒಂದು ವೇಳೆ ನೀವು ಬಾಸ್ ಆಗಿದ್ದರೆ ನೀವು ನಿಮ್ಮ ಕಿರಿಯ ಉದ್ಯೋಗಿಗೆ ಎಂತಹ ಸಂದರ್ಭವೇ ಆಗಿದ್ದರೂ ಟಾರ್ಗೆಟ್ ಪೂರ್ಣಗೊಳ್ಳಲೇಬೇಕು ಎಂದು ಒತ್ತಡ ಹೇರುವವರಾಗಿದ್ದರೆ ಇದು ನಿಮಗೆ ನಿಮ್ಮ ನಿರ್ಧಾರವನ್ನು ಮತ್ತೊಮ್ಮೆ ಯೋಚಿಸುವ ಸಮಯವಾಗಿದೆ. ಇದು ತುರ್ತಾಗಿ ಬೇಕು ಎಂದು ಹೇಳುವ ಬದಲು ಎಷ್ಟು ಸಾಧ್ಯವೋ ಅಷ್ಟು ಬೇಗ ಪೂರ್ಣಗೊಳಿಸಿ ಎಂದು ಹೇಳುವುದೊಳಿತು. ನೀವು ಒಂದು ವೇಳೆ ಬಾಸ್ ಅಧಿಕಾರದ ಸ್ಥಾನದಲ್ಲಿದ್ದರೆ ಈ ರೀತಿಯ ಮಾತಿನಿಂದ ನಿಮ್ಮ ಒಬ್ಬರ ಜೀವ ಅಪಾಯಕ್ಕೆ ಒಳಗಾಗುವುದು ತಪ್ಪುವುದು ಎಂದು ಬರೆದು ಈ ಫೋಟೋವನ್ನು ಪೋಸ್ಟ್ ಮಾಡಲಾಗಿದೆ.
Work From Office: ಐಟಿ ಉದ್ಯೋಗಿಗಳಿಗೆ ಕಚೇರಿಗೆ ಸ್ವಾಗತಿಸಲು ಸಜ್ಜಾದ ಭಾರತೀಯ ಟೆಕ್ ಕಂಪನಿಗಳು!
ಸಮೀಕ್ಷೆ ಪ್ರಕಾರ, ಭಾರತದಲ್ಲಿ ಸುಮಾರು 73% ಉದ್ಯೋಗಿಗಳು ಹೈಬ್ರಿಡ್ ಕೆಲಸದ ವ್ಯವಸ್ಥೆ ಅಂದರೆ ಸ್ವಲ್ಪ ದಿನ ಮನೆಯಿಂದ ಮತ್ತು ಸ್ವಲ್ಪ ದಿನ ಆಫೀಸ್ ನಿಂದ ಕೆಲಸ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಕೋವಿಡ್ ನಂತರ ಭಾರತದಲ್ಲಿ ಹಲವಾರು ಕಾರ್ಪೊರೇಟ್ ಕಂಪೆನಿಗಳಲ್ಲಿ ಕಚೇರಿಗೆ ಹಿಂತಿರುಗುವ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆ. ಆದಾಗ್ಯೂ, ಸಾಂಕ್ರಾಮಿಕ ರೋಗದ ನಂತರ ಹೈಬ್ರಿಡ್ ಮಾದರಿ ವ್ಯಾಪಕವಾಗಿ ಅಳವಡಿಸಿಕೊಳ್ಳುವುದರೊಂದಿಗೆ, ಉದ್ಯೋಗಿಗಳ ಉತ್ಪಾದಕತೆ ಮತ್ತು ಸಂಪರ್ಕವನ್ನು ಹೆಚ್ಚಿಸಲು ಅಗತ್ಯವಿರುವ ನಮ್ಯತೆಯ ಮಟ್ಟವನ್ನು ಅನೇಕ ಕಂಪನಿಗಳು ಇನ್ನೂ ಪರಿಗಣಿಸುತ್ತಿವೆ ಎಂದು ಭಾರತ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಅಧ್ಯಕ್ಷ ಮತ್ತು ಸಿಇಒ ಅಂಶುಮಾನ್ ಹೇಳಿದ್ದಾರೆ.