ಸ್ವಯಂ ನಿವೃತ್ತಿ ಪಡೆದುಕೊಂಡರೆ 1 ವರ್ಷದ ವೇತನ, ಉದ್ಯೋಗ ಕಡಿತಕ್ಕೆ ಗೂಗಲ್ ಹೊಸ ಮಾರ್ಗ!

ಈಗಾಗಲೇ ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡಿ ಭಾರಿ ಸಂಚಲನ ಸೃಷ್ಟಿಸಿದೆ. ಇದರ ವಿರುದ್ಧ ವಿಶ್ವದಲ್ಲೇ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ಬಹುರಾಷ್ಟ್ರೀಯ ಕಂಪನಿಗಳು ಇದೀಗ ಉದ್ಯೋಗ ಕಡಿತದ ಮಾರ್ಗ ಬದಲಾಯಿಸಿದೆ. ಗೂಗಲ್ ಇದೀಗ ಹಿರಿಯ ಹಾಗೂ ಟಾರ್ಗೆಟ್ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಪಡೆದುಕೊಳ್ಳಿ, 1 ವರ್ಷದ ವೇತನ ಅನ್ನೋ ಆಫರ್ ನೀಡಿದೆ. ಕೆಲವರು ಈ ಆಫರ್ ಒಪ್ಪಿಕೊಂಡರೆ, ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

New way of Layoff Google ask employees to quit voluntarily and get 1 year salary in France Germany ckm

ನ್ಯೂಯಾರ್ಕ್(ಏ.11): ಗೂಗಲ್, ಮೆಟಾ, ಅಮೇಜಾನ್ ಸೇರಿದಂತೆ ವಿಶ್ವದ ಅತೀ ದೊಡ್ಡ ಕಂಪನಿಗಳು ಉದ್ಯೋಗ ಕಡಿತದ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಲಕ್ಷಕ್ಕೂ ಅಧಿಕ ಉದ್ಯೋಗಿಗಳು ವಜಾಗೊಂಡಿದ್ದಾರೆ. ಗೂಗಲ್ ಈಗಾಗಲೇ ಹಲವು ಸುತ್ತಿನ ಉದ್ಯೋಗ ಕಡಿತ ಮಾಡಿದೆ. ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೆಲ ದೇಶಗಳಲ್ಲಿ ಗೂಗಲ್ ಉದ್ಯೋಗ ಕಡಿತಕ್ಕೆ ಕಾನೂನು ತೊಡಕುಗಳು ಎದುರಾಗಿದೆ. ಇದೀಗ ಗೂಗಲ್ ಉದ್ಯೋಗ ಕಡಿತಕ್ಕೆ ಹೊಸ ಮಾರ್ಗ ಕಂಡುಕೊಂಡಿದೆ. ಹಿರಿಯ ಉದ್ಯೋಗಿಗಳು ಹಾಗೂ ಟಾರ್ಗೆಟ್ ಮಾಡಿರುವ ಉದ್ಯೋಗಗಳಿಗೆ ಸ್ವಯಂ ನಿವೃತ್ತಿ ಪಡೆದುಕೊಳ್ಳುವಂತೆ ಸೂಚಿಸಿದೆ. ಸ್ವಯಂ ನಿವೃತ್ತಿ ಪಡೆದುಕೊಂಡರೆ 1 ವರ್ಷದ ವೇತನ ನೀಡುವುದಾಗಿ ಘೋಷಿಸಿದೆ.

ಗೂಗಲ್ ಇದೀಗ ಜರ್ಮನಿ ಹಾಗೂ ಫ್ರಾನ್ಸ್‌ನಲ್ಲಿ ಉದ್ಯೋಗ ಕಡಿತಕ್ಕೆ ಹೊಸ ಮಾರ್ಗ ಕಂಡುಕೊಂಡಿದೆ. ಸ್ವಯಂ ನಿವೃತ್ತಿ ಪ್ಲಾನ್ ಪರಿಚಯಿಸಿದೆ. ಹಿರಿಯ ಉದ್ಯೋಗಿಗಳು ಹಾಗೂ ಕಳಪೆ ಪರ್ಪಾಮೆನ್ನ್ ನೀಡಿ ಗೂಗಲ್ ಆಡಳಿತ ಮಂಡಳಿ ಟಾರ್ಗೆಟ್ ಲಿಸ್ಟ್‌ನಲ್ಲಿರುವ ಉದ್ಯೋಗಳಿಗೆ ಇ ಮೇಲ್ ಮಾಡಿದೆ. ಸ್ವಯಂ ನಿವೃತ್ತಿ ಪಡೆದುಕೊಳ್ಳಲು ಸೂಚಿಸಿದೆ. ಸ್ವಯಂ ನಿವೃತ್ತಿ ಪಡೆದುಕೊಂಡರೆ 1 ವರ್ಷದ ವೇತನ ನೀಡುವುದಾಗಿ ಘೋಷಿಸಿದೆ.

Apple layoffs: ಗೂಗಲ್‌, ಅಮೆಜಾನ್‌, ಮೆಟಾ ಬಳಿಕ ಅಪಲ್‌ನಿಂದಲೂ ಉದ್ಯೋಗಿಗಳ ವಜಾ?

ಗೂಗಲ್ ನೀಡಿರುವ ಈ ಆಫರ್‌ನ್ನು ಬೆರಳೆಣಿಕೆ ಮಂದಿ ಸ್ವೀಕರಿಸಿದ್ದಾರೆ. ಆದರೆ ಬಹುತೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್ಥಿಕ ಹಿಂಜರಿತ ಕಾರಣ ನೀಡಿ ಗೂಗಲ್ ಬೇಕಾಬಿಟ್ಟಿ ವರ್ತಿಸುತ್ತಿದೆ. ಕಂಪನಿಗೆ ಹೊರೆಯಾಗುತ್ತಿದೆ ಎಂದು ಹೇಳುವುದಾದರೆ ನೇಮಕ ಮಾಡಿದ್ದೇಕೆ?ಎಂದು ಉದ್ಯೋಗಿಗಳು ಆಕ್ರೋಶಹೊರಹಾಕಿದ್ದಾರೆ. ಆದರೆ ಗೂಗಲ್ ಮಾತ್ರ ತನ್ನ ಉದ್ಯೋಗ ಕಡಿತ ಸದ್ಯಕ್ಕೆ ನಿಲ್ಲಿಸುವ ಲಕ್ಷಣಗಳು ಕಾಣುತ್ತಿಲ್ಲ.

ಆರ್ಥಿಕ ಹಿಂಜರಿತ ಹಿನ್ನೆಲೆಯಲ್ಲಿ ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ಆರಂಭವಾಗಿದ್ದ ಉದ್ಯೋಗ ಕಡಿತ ಪರ್ವ 2023ರಲ್ಲೂ ಮುಂದುವರೆದಿದ್ದು, ಈ ವರ್ಷದ ಮೊದಲ ಮೂರು ತಿಂಗಳಲ್ಲೇ ಮಾಹಿತಿ ತಂತ್ರಜ್ಞಾನ ವಲಯವೊಂದರಲ್ಲೇ ಹೆಚ್ಚೂಕಡಿಮೆ 1.50 ಲಕ್ಷ ಉದ್ಯೋಗಗಳನ್ನು ಕಡಿತ ಮಾಡಲಾಗಿದೆ. ಜಾಗತಿಕ ಉದ್ಯೋಗ ಕಡಿತದ ಮೇಲೆ ನಿಗಾ ಇಡುವ ವೆಬ್‌ಸೈಟ್‌ವೊಂದರ ಮಾಹಿತಿ ಅನ್ವಯ, 2023ರ ಮೊದಲ ಮೂರು ತಿಂಗಳಲ್ಲಿ ಇದುವರೆಗೂ ಮಾಹಿತಿ ತಂತ್ರಜ್ಞಾನ ವಲಯದ 503 ಕಂಪನಿಗಳ 1.48 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ.

ಗೂಗಲ್‌ ವೆಚ್ಚಕಡಿತ ಮಂತ್ರ: ಉದ್ಯೋಗಿಗಳಿಗಿದ್ದ ಕೆಫೆ, ಮೈಕ್ರೋ ಕಿಚನ್‌ ಸೌಲಭ್ಯ ಕಟ್‌

ಈ ಪೈಕಿ ಅಮೆಜಾನ್‌, ಮೆಟಾ ಮೊದಲಾದ ಕಂಪನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ತೆಗೆದು ಹಾಕಿವೆ. ಅಮೆಜಾನ್‌ ಕಳೆದ ಜನವರಿಯಲ್ಲಿ 18000 ಜನರನ್ನು ತೆಗೆದುಹಾಕಿದ್ದರೆ, ಸೋಮವಾರ ಮತ್ತೆ 9000 ಜನರನ್ನು ತೆಗೆದು ಹಾಕುವ ಘೋಷಣೆ ಮಾಡಿದೆ. ಮತ್ತೊಂದೆಡೆ ಮೆಟಾ ಈಗಾಗಲೇ 10000 ಜನರನ್ನು ತೆಗೆದು ಹಾಕುವ ಪ್ರಕ್ರಿಯೆ ಆರಂಭಿಸಿದೆ. ಗೂಗಲ್‌ ಕೂಡ 12000 ಸಿಬ್ಬಂದಿ ತೆಗೆದುಹಾಕುವ ಕಾರ್ಯವನ್ನು ಬಹುತೇಕ ಪೂರ್ಣಗೊಳಿಸಿದೆ. ಮೈಕ್ರೋಸಾಫ್‌್ಟಸಂಸ್ಥೆಯೂ 10000 ಸಿಬ್ಬಂದಿಗಳನ್ನು ತೆಗೆದು ಹಾಕಿದೆ.ಈ ನಡುವೆ ಇನ್ನೂ ಹಲವಾರು ಕಂಪನಿಗಳು, ಮುಂದಿನ ದಿನಗಳಲ್ಲಿ ಕಂಪನಿಯ ಪುನರ್‌ರಚನೆಯ ಮಾತುಗಳನ್ನು ಆಡಿರುವ ಹಿನ್ನೆಲೆಯಲ್ಲಿ ಟೆಕ್‌ ವಲಯದಲ್ಲಿ ಇನ್ನಷ್ಟುಸಾವಿರಾರು ಹುದ್ದೆಗಳು ಕಡಿತಗೊಳ್ಳುವ ಭೀತಿ ಎದುರಾಗಿದೆ.

Latest Videos
Follow Us:
Download App:
  • android
  • ios