ಇತ್ತೀಚೆಗಷ್ಟೇ 12 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದ್ದ ತಂತ್ರಜ್ಞಾನ ದೈತ್ಯ ಗೂಗಲ್‌ ಈಗ ವೆಚ್ಚ ಕಡಿತಕ್ಕೆ ಕೆಲವು ಅಂಶಗಳನ್ನು ಘೋಷಣೆ ಮಾಡಿದೆ. ಇದರ ಜತೆಗೆ ಮುಖ್ಯವಾಗಿ ಕೃತಕ ಬುದ್ಧಿಮತ್ತೆಗೆ (artificial intelligence)ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದೆ.

ನವದೆಹಲಿ: ಇತ್ತೀಚೆಗಷ್ಟೇ 12 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದ್ದ ತಂತ್ರಜ್ಞಾನ ದೈತ್ಯ ಗೂಗಲ್‌ ಈಗ ವೆಚ್ಚ ಕಡಿತಕ್ಕೆ ಕೆಲವು ಅಂಶಗಳನ್ನು ಘೋಷಣೆ ಮಾಡಿದೆ. ಇದರ ಜತೆಗೆ ಮುಖ್ಯವಾಗಿ ಕೃತಕ ಬುದ್ಧಿಮತ್ತೆಗೆ (artificial intelligence)ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದೆ. ಇತ್ತೀಚೆಗೆ ಕಂಪನಿ ಬಿಡುಗಡೆ ಮಾಡಿರುವ ಜ್ಞಾಪನಪತ್ರದಲ್ಲಿ ಇವನ್ನು ಪ್ರಕಟಿಸಲಾಗಿದೆ. 

ನಮ್ಮ ಇತ್ತೀಚಿನ ಬೆಳವಣಿಗೆ, ಸವಾಲಿನ ಆರ್ಥಿಕ ವಾತಾವರಣದ ಹಿನ್ನೆಲೆಯಲ್ಲಿ ವೆಚ್ಚ ಕಡಿತ ಅನಿವಾರ್ಯ. ಜತೆಗೆ ತಂತ್ರಜ್ಞಾನವನ್ನು ಉನ್ನತಮಟ್ಟಕ್ಕೇರಿಸುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆಯತ್ತ ಹೆಚ್ಚಿನ ಗಮನ ಹರಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾವು ಹೂಡಿಕೆ ಹೆಚ್ಚಳ ಮಾಡಬೇಕಿದೆ. ಈ ಕಾರಣದಿಂದಲೂ ವೆಚ್ಚ ಕಡಿತ ಮಾಡಬೇಕಿದೆ ಎಂದು ಮೆಮೋದಲ್ಲಿ ಗೂಗಲ್‌ ತಿಳಿಸಿದೆ.

ವಿಶ್ವದ ಅತ್ಯಂತ ವೇಗದ ಮಹಿಳೆ ಕಿಟ್ಟಿ ಓನೀಲ್‌ಗೆ ಗೂಗಲ್ ಡೂಡಲ್‌ ಗೌರವ

ಅಲ್ಲದೇ ಮುಂದಿನ ದಿನಗಳಲ್ಲಿ ಸಿಬ್ಬಂದಿ ಕೆಫೆ (cafe), ಮೈಕ್ರೋ ಕಿಚನ್‌ ಮುಂತಾದ ಸೌಲಭ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಈ ಬದಲಾವಣೆಗಳು ಆಹಾರ ವ್ಯರ್ಥ ತಪ್ಪಿಸಲು ಮತ್ತು ಉತ್ತಮ ವಾತಾವರಣವನ್ನು ಕಲ್ಪಿಸಲು ಸಹಕಾರಿಯಾಗಲಿದೆ ಎಂದು ಕಂಪನಿ ಹೇಳಿದೆ.

ನಾವು ನಮ್ಮ ಕಚೇರಿ ಸೇವೆಗಳನ್ನು ಹೊಸ ಹೆಬ್ರೀಡ್‌ ವರ್ಕ್ವೀಕ್‌ಗೆ ಹೊಂದಿಸುತ್ತಿದ್ದೇವೆ. ಹಾಗಾಗಿ ಎಲ್ಲಾ ಕಡೆಗಳಲ್ಲೂ ಎಲ್ಲವನ್ನೂ ಬದಲಾಯಿಸುವುದಿಲ್ಲ. ಉದಾಹರಣೆ ಎಲ್ಲಿ ಕೆಫೆಯ ಬಳಕೆ ಕಡಿಮೆ ಇರುತ್ತದೋ ಅಲ್ಲಿ ಕೆಫೆಗಳನ್ನು ಮುಚ್ಚಲಾಗುತ್ತದೆ ಎಂದು ಹೇಳಿದೆ. ಈ ಬಗ್ಗೆ ಗೂಗಲ್‌ ಸಿಇಒ (Google CEO) ಸುಂದರ್‌ ಪಿಚೈ (Sundar Pichai) ಪ್ರತಿಕ್ರಿಯಿಸಿ, ನಿಜವಾಗಿಯೂ ಈ ಬದಲಾವಣೆ ನನ್ನ ಮೇಲೆ ಹೆಚ್ಚಿನ ಹೊರೆಯನ್ನು ಹೊರಿಸಲಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊರುತ್ತೇನೆ ಎಂದಿದ್ದಾರೆ.

ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಗೂಗಲ್ ಎಚ್ಚರಿಕೆ, ಮೊಬೈಲ್ ಹ್ಯಾಕ್ ಅಪಾಯ!

ಮನುಷ್ಯರು ಮಾತ್ರವಲ್ಲ, ರೋಬೋಟ್‌ಗಳನ್ನೂ ಕೆಲಸದಿಂದ ಕಿತ್ತು ಹಾಕಿದ ಗೂಗಲ್..!

ಇತ್ತೀಚೆಗೆ ಎಲ್ಲಿ ನೋಡಿದ್ರೂ ಲೇ ಆಫ್‌ನದ್ದೇ ಸುದ್ದಿ. ಜಾಗತಿಕ ದೊಡ್ಡ ಟೆಕ್ಕಿ ಸಂಸ್ಥೆಗಳು ನೇಮಕಾತಿಗಿಂತ ಹೆಚ್ಚಾಗಿ ಉದ್ಯೋಗಿಗಳನ್ನು, ಕಾರ್ಮಿಕರನ್ನು ವಜಾ ಮಾಡುವುದೇ ಹೆಚ್ಚಾಗಿದೆ. ಹಲವು ಕಂಪನಿಗಳು ತಮ್ಮ ಸಾವಿರಾರು ಉದ್ಯೋಗಿಗಳನ್ನು ಕಿತ್ತು ಹಾಕುತ್ತಿದ್ದು, ಇನ್ನು, ಈ ಲೇಆಫ್‌ ಮನುಷ್ಯರ ಮೇಲೆ ಮಾತ್ರವಲ್ಲ ರೋಬೋಟ್‌ಗಳ ಮೇಲೂ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ. ಆಲ್ಫಬೆಟ್‌ನ ಹೊಸ ಅಂಗಸಂಸ್ಥೆಯಾದ ಎವರಿಡೇ ರೋಬೋಟ್ಸ್, ಕೆಫೆಟೇರಿಯಾ ಟೇಬಲ್‌ಗಳು, ಪ್ರತ್ಯೇಕ ಕಸ ಮತ್ತು ತೆರೆದ ಬಾಗಿಲುಗಳನ್ನು ಸ್ವಚ್ಛಗೊಳಿಸಲು ನೂರಕ್ಕೂ ಹೆಚ್ಚು ಚಕ್ರಗಳುಳ್ಳ, ಒಂದು-ಸಶಸ್ತ್ರ ರೋಬೋಟ್‌ಗಳಿಗೆ ತರಬೇತಿ ನೀಡಿದ ತಂಡವಾಗಿದೆ. ಆದರೂ, ವೈರ್ಡ್‌ನಲ್ಲಿನ ವರದಿಯ ಪ್ರಕಾರ, ಪೋಷಕ ಕಂಪನಿಯನ್ನು ಆವರಿಸುವ ಬಜೆಟ್ ಕಡಿತದ ಭಾಗವಾಗಿ ಗೂಗಲ್ ಈ ತಂಡವನ್ನು ಮುಚ್ಚಿದೆ ಎಂದು ತಿಳಿದುಬಂದಿದೆ.

ಎವರಿಡೇ ರೋಬೋಟ್ಸ್‌ನ (Everyday Robots) ಮಾರ್ಕೆಟಿಂಗ್ ಮತ್ತು ಸಂವಹನದ ನಿರ್ದೇಶಕ ಡೆನಿಸ್ ಗ್ಯಾಂಬೋವಾ, "ಎವರಿಡೇ ರೋಬೋಟ್ಸ್‌ ಇನ್ನು ಮುಂದೆ ಆಲ್ಫಬೆಟ್‌ನಲ್ಲಿ (Alphabet) ಪ್ರತ್ಯೇಕ ಯೋಜನೆಯಾಗಿರುವುದಿಲ್ಲ. ಕೆಲವು ತಂತ್ರಜ್ಞಾನ (Technology) ಮತ್ತು ತಂಡದ ಭಾಗವನ್ನು ಗೂಗಲ್ (Google) ಸಂಶೋಧನೆಯಲ್ಲಿ ಅಸ್ತಿತ್ವದಲ್ಲಿರುವ ರೊಬೊಟಿಕ್ಸ್ ಪ್ರಯತ್ನಗಳಾಗಿ ಏಕೀಕರಿಸಲಾಗುತ್ತದೆ’’ ಎಂದು ಮಾಹಿತಿ ನೀಡಿದ್ದಾರೆ. ಇದು ಆಲ್ಫಬೆಟ್‌ನ ಎಕ್ಸ್ ಮೂನ್‌ಶಾಟ್ ಲ್ಯಾಬ್‌ನ ಅಂಗಸಂಸ್ಥೆಯಾಗಿದ್ದು, 2010 ರಲ್ಲಿ ಗೂಗಲ್ ಸ್ಥಾಪಿಸಿದ ರಹಸ್ಯ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯವಾಗಿದೆ. ರೋಬೋಟಿಕ್ಸ್ ತಜ್ಞರ ಪ್ರಕಾರ, ಅದರ ಪ್ರತಿಯೊಂದು ರೋಬೋಟ್‌ಗಳು ಹತ್ತು ಸಾವಿರ ಡಾಲರ್‌ಗಳಷ್ಟು ವೆಚ್ಚವಾಗಬಹುದು ಎಂದು ತಿಳಿದುಬಂದಿದೆ.