Apple layoffs: ಗೂಗಲ್‌, ಅಮೆಜಾನ್‌, ಮೆಟಾ ಬಳಿಕ ಅಪಲ್‌ನಿಂದಲೂ ಉದ್ಯೋಗಿಗಳ ವಜಾ?

ಆರ್ಥಿಕ ಬಿಕ್ಕಟ್ಟು ವಿಶ್ವದ ಪ್ರಮುಖ ಕಂಪನಿಗಳ ಮೇಲೆ ಪರಿಣಾಮ ಬೀರಿದೆ. ಅಮೆಜಾನ್‌, ಮೆಟಾ ಹಾಗೂ ಗೂಗಲ್‌ ಬಳಿಕ ಆಪಲ್‌ ಕಂಪನಿ ಕೂಡ ತನ್ನ ಉದ್ಯೋಗಿಗಳನ್ನು ವಜಾ ಮಾಡಲು ಪಟ್ಟಿ ಸಿದ್ಧ ಮಾಡಿದೆ.
 

After Google Amazon Meta the iPhone maker Apple may start laying off employees san

ನವದೆಹಲಿ (ಏ.4): ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾ, ಅಮೆಜಾನ್‌, ಗೂಗಲ್‌ ಬಳಿಕ  ಅಮೆರಿಕದ ಮತ್ತೊಂದು ಪ್ರಖ್ಯಾತ ಸಂಸ್ಥೆ ಆಪಲ್‌ ಕೂಡ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಣೆ ಮಾಡಿದೆ. ಬ್ಲೂಮ್‌ಬರ್ಗ್‌ ನ್ಯೂಸ್‌ ವರದಿಯ ಪ್ರಕಾರ ಐಫೋನ್‌ ಮೇಕರ್‌ ಆಗಿರುವ ಆಪಲ್‌, ತನ್ನ ಕಾರ್ಪೋರೇಟ್‌ ರಿಟೇಲ್‌ ಟೀಮ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಿಸಿದೆ ಎಂದು ವರದಿ ಮಾಡಿದೆ.  ಉದ್ಯೋಗಿಗಳನ್ನು ವಜಾ ಮಾಡಿದ್ದರಿಂದ ಕಂಪನಿಯ ಅಭಿವೃದ್ಧಿ ಮತ್ತು ಸಂರಕ್ಷಣಾ ತಂಡಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಆದರೆ, ಎಷ್ಟು ಪ್ರಮಾಣದ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತದೆ ಎನ್ನುವ ವಿಚಾರ ಅಸ್ಪಷ್ಟವಾಗಿಯೇ ಉಳಿದಿದೆ. ಇದು ಕನಿಷ್ಠವಾಗಿರಬಹುದು ಎಂದು ಹೇಳಲಾಗಿದೆ. ಬ್ಯುಸಿನೆಸ್ ಇನ್‌ಸೈಡರ್‌ನ ವರದಿಯ ಪ್ರಕಾರ, ಹಾಗೇನಾದರೂ ಉದ್ಯೋಗಿಗಳು ವಜಾಗೊಂಡರೆ, ಅವರು ಮತ್ತೊಮ್ಮೆ ಆಪಲ್‌ನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದೂ ಹೇಳಲಾಗಿದೆ. ಪ್ರಪಂಚದಾದ್ಯಂತ ಆಪಲ್ ರಿಟೇಲ್‌ ಮಳಿಗೆಗಳು ಮತ್ತು ಇತರ ಸೌಲಭ್ಯಗಳ ನಿರ್ಮಾಣ ಮತ್ತು ನಿರ್ವಹಣೆಗೆ ಹೆಚ್ಚು ಜವಾಬ್ದಾರರಾಗಿರುವ ಟೀಮ್‌ನ ಉದ್ಯೋಗಿಗಳು ಎಂದು ವರದಿ ಹೇಳುತ್ತದೆ.


ಹೆಚ್ಚುತ್ತಿರುವ ಬಡ್ಡಿದರಗಳಿಂದ ಸಂಭಾವ್ಯ ಆರ್ಥಿಕ ಕುಸಿತದ ಬಗ್ಗೆ ಕಳವಳದ ನಡುವೆ ಈ ಸುದ್ದಿ ಬಂದಿದೆ, ಇದು ಈಗಾಗಲೇ ಇತ್ತೀಚಿನ ತಿಂಗಳುಗಳಲ್ಲಿ ವಿವಿಧ ಉದ್ಯಮಗಳಲ್ಲಿ ಸಾಮೂಹಿಕ ಉದ್ಯೋಗ ಕಡಿತಕ್ಕೆ ಕಾರಣವಾಗಿದೆ. ಇನ್ನು  ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ (ಹಿಂದೆ ಫೇಸ್‌ಬುಕ್ ಎಂದು ಕರೆಯಲಾಗುತ್ತಿತ್ತು) ಕಳೆದ ತಿಂಗಳು ನೀಡಿದ್ದ ಪ್ರಕಟಣೆಯಲ್ಲಿ 2022ರಲ್ಲಿ 10 ಸಾವಿರ ಉದ್ಯೋಗಿಗಳನ್ನು ಕಡಿತ ಮಾಡಿದ್ದಾಗಿ ಘೋಷಣೆ ಮಾಡಿತ್ತು. ಈ ವರ್ಷವೂ ಕೂಡ ಇಷ್ಟೇ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡೋದಾಗಿ ಕಂಪನಿ ಹೇಳಿದೆ.  ಮೊದಲ ಸುತ್ತಿನಲ್ಲಿ, ಕಂಪನಿಯು 11,000 ಉದ್ಯೋಗಿಗಳನ್ನು ವಜಾಗೊಳಿಸಿತು. ಮೆಟಾ ಈ ಕ್ರಮಗಳನ್ನು ತಮ್ಮ 'ದಕ್ಷತೆಯ ವರ್ಷ' ಉಪಕ್ರಮದ ಅಡಿಯಲ್ಲಿ ಮಾಡಿದೆ.

ಹೊಸ ಜಾಬ್‌ಗಳ ನಿರೀಕ್ಷೆಯಲ್ಲಿ ಸ್ಟಾರ್ಟ್‌ಅಪ್‌ ಉದ್ಯೋಗಿಗಳು!

ಗೂಗಲ್ ಈ ವರ್ಷದ ಆರಂಭದಲ್ಲಿ 12,000 ಉದ್ಯೋಗಿಗಳನ್ನು ವಜಾಗೊಳಿಸಿತು, ಇದು ಜಾಗತಿಕವಾಗಿ ಎಲ್ಲ ದೇಶಗಳ ಮೇಲೆ ಪರಿಣಾಮ ಬೀರಿತ್ತು. ಕಂಪನಿಯ ಸಿಇಒ ಸುಂದರ್ ಪಿಚೈ ಅವರು ಯೋಜಿತ ರೀತಿಯಲ್ಲಿ ಈ ಕ್ರಮಕ್ಕೆ ಬದ್ಧವಾಗಿದೆ ಮತ್ತು ಪರಿಸ್ಥಿತಿಯು ಹದಗೆಡುವುದನ್ನು ತಡೆಯಲು ಇದನ್ನು ಮಾಡಲಾಗಿದೆ ಎಂದು ವಿವರಿಸಿದ್ದರು.

iPhone 14: ನೂತನ ಫೋನ್‌ಗಳ ಬಿಡುಗಡೆ ವಿರುದ್ಧ ಕಿಡಿ ಕಾರಿದ ಸ್ಟೀವ್‌ ಜಾಬ್ಸ್‌ ಪುತ್ರಿ

ಇನ್ನೊಂದೆಡೆ ಅಮೆಜಾನ್‌ ಎರಡು ಸುತ್ತಿನ ವಜಾ ಪ್ರಕ್ರಿಯೆಯಲ್ಲಿ 27 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿತ್ತು. ಮೊದಲ ಸುತ್ತಿನಲ್ಲಿ ಕಂಪನಿ 18 ಸಾವಿರ ಮಂದಿಯನ್ನು ವಜಾ ಮಾಡಿದ್ದರೆ, 2ನೇ ಸುತ್ತನಲ್ಲಿ 9 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿತ್ತು.

Latest Videos
Follow Us:
Download App:
  • android
  • ios