Asianet Suvarna News Asianet Suvarna News

ನ್ಯೂಇಂಡಿಯಾ ಅಶ್ಯೂರೆನ್ಸ ಕಂಪನಿಯಲ್ಲಿ ಬರೋಬ್ಬರಿ 300 ಸಹಾಯಕರ ಹುದ್ದೆ ನೇಮಕಾತಿ

ನ್ಯೂಇಂಡಿಯಾ ಅಶ್ಯೂರೆನ್ಸ್‌ ಕಂಪನಿ ಲಿಮಿಟೆಡ್‌ ನಲ್ಲಿ ಖಾಲಿ ಇರುವ ಸಹಾಯಕರ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆನ್‌ಲೈನ್‌ ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆ ದಿನ.

New India Assurance Company Recruitment for   Assistant  post gow
Author
First Published Feb 7, 2024, 4:37 PM IST

ನ್ಯೂಇಂಡಿಯಾ ಅಶ್ಯೂರೆನ್ಸ್‌ ಕಂಪನಿ ಲಿಮಿಟೆಡ್‌ ನಲ್ಲಿ ಖಾಲಿ ಇರುವ ಸಹಾಯಕರ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆನ್‌ಲೈನ್‌ ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆ ದಿನ.

ನ್ಯೂಇಂಡಿಯಾ ಅಶ್ಯೂರೆನ್ಸ್‌ ಕಂಪನಿ ಲಿಮಿಟೆಡ್‌ ನಲ್ಲಿ (ಎನ್ಐಎಸಿಎಲ್)ನಲ್ಲಿ ಖಾಲಿ ಇರುವ 300 ಸಹಾಯಕರ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ : ಸಹಾಯಕ : 300 ಹುದ್ದೆ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಡೆಪ್ಯೂಟಿ ಮ್ಯಾನೇಜರ್ ನೇಮಕಾತಿ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-02-2024

ವಯಸ್ಸಿನ ಮಿತಿ (01-01-2024 ರಂತೆ) ಕನಿಷ್ಠ ವಯಸ್ಸಿನ ಮಿತಿ :  21ವರ್ಷ

ಗರಿಷ್ಠ ವಯಸ್ಸಿನ ಮಿತಿ:  30ವರ್ಷ

ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : ರು. 600

ಎಸ್‌ಸಿ / ಎಸ್‌ಸ್ಟಿ ಅಭ್ಯರ್ಥಿಗಳಿಗೆ : ರು. 100

ವೇತನ ಶ್ರೇಣಿ: 
37,000 (ಮಾಸಿಕ) ಶೈಕ್ಷಣಿಕ ವಿದ್ಯಾರ್ಹತೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು ಹಾಗೂ ತಾವು ಆಯ್ಕೆ ಬಯಸುವ ರಾಜ್ಯದ ಪ್ರಾದೇಶಿಕ ಭಾಷೆ ಮಾತನಾಡಲು, ಓದಲು ತಿಳಿದಿರಬೇಕು. ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳನ್ನು (ಪ್ರಿಲಿಮ್ಸ್‌ ಮತ್ತು ಮುಖ್ಯ ಪರೀಕ್ಷೆ) ಒಳಗೊಂಡಿರುತ್ತದೆ.

ಕ್ರಿಕೆಟಿಗನ ಜೊತೆ ಪ್ರೀತಿಯಲ್ಲಿದ್ದ ಲತಾ ಮಂಗೇಶ್ಕರ್‌ ಕೊನೆವರೆಗೂ ಮದುವ ...

ಪ್ರಿಲಿಮ್ಸ್ ಪರೀಕ್ಷೆ: ಇಂಗ್ಲಿಷ್‌ ಭಾಷೆ, ತಾರ್ಕಿಕ ಸಾಮರ್ಥ್ಯ, ಸಂಖ್ಯಾತ್ಮಕ ಸಾಮರ್ಥ್ಯ ವಿಷಯಕ್ಕೆ ಸಂಬಂಧಿಸಿದಂತೆ ಒಟ್ಟು 100 ಪ್ರಶ್ನೆಗಳಿದ್ದು, 100 ಅಂಕಗಳಿಗೆ 60 ನಿಮಿಷಗಳ ಅವಧಿಯಲ್ಲಿ ಆನ್‌ಲೈನ್‌ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಗಳಿಸಿದ ಕಟ್ ಆಫ್ ಅಂಕಗಳ ಆಧಾರದ ಮೇಲೆ ಮುಂದಿನ ಹಂತದ ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.

ಮುಖ್ಯ ಪರೀಕ್ಷೆ: ತಾರ್ಕಿಕ ಪರೀಕ್ಷೆ, ಇಂಗ್ಲಿಷ್‌ ಭಾಷೆ, ಸಾಮಾನ್ಯ ಅರಿವು, ಕಂಪ್ಯೂಟರ್‌ ಜ್ಞಾನ, ಸಂಖ್ಯಾ ಸಾಮರ್ಥ್ಯ ವಿಷಯಕ್ಕೆ ಸಂಬಂಧಸಿದಂತೆ ಒಟ್ಟು 200 ಪ್ರಶ್ನೆಗಳಿದ್ದು, 250 ಅಂಕಗಳಿಗೆ ಎರಡು ಗಂಟೆಯ ಅವಧಿಯಲ್ಲಿ ಆನ್‌ಲೈನ್‌ ಪರೀಕ್ಷೆ ನಡೆಸಲಾಗುತ್ತದೆ.

ಸೂಚನೆ: ಪತ್ರಿಯೊಂದು ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ:  https://www.newindia.co.in/

Follow Us:
Download App:
  • android
  • ios