ಬೋರಾದ ಕೆಲಸ... ವಾರಾಂತ್ಯದಲ್ಲಿ ಕ್ಯಾಬ್ ಡ್ರೈವರ್ ಆದ ಸಾಫ್ಟ್‌ವೇರ್ ಡೆವಲಪರ್
ಕೆಲವೊಮ್ಮೆ ನಾವು ಮಾಡುವ ಕೆಲಸ ನಮಗೆ ಬೋರೆನಿಸುತ್ತದೆ. ಮಾಡಿದ ಕೆಲಸವನ್ನೇ ದಿನಾ ಮಾಡಬೇಕಲ್ಲ. ಏನಾದರೂ ಹೊಸ ಕೆಲಸ ಸಿಕ್ಕರೆ ಚೆನ್ನಾಗಿರುತ್ತದೆ ಎಂದು ನಾವು ಯೋಚನೆ ಮಾಡ್ತೇವೆ. ಅದೇ ರೀತಿ ಕೆಲಸ ಬೋರೆನಿಸಿದ ಸಾಫ್ಟ್‌ವೇರ್ ಡೆವಲಪರ್ ಒಬ್ಬರು ಹೊಸ ಉಪಾಯ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲವೊಮ್ಮೆ ನಾವು ಮಾಡುವ ಕೆಲಸ ನಮಗೆ ಬೋರೆನಿಸುತ್ತದೆ. ಮಾಡಿದ ಕೆಲಸವನ್ನೇ ದಿನಾ ಮಾಡಬೇಕಲ್ಲ. ಏನಾದರೂ ಹೊಸ ಕೆಲಸ ಸಿಕ್ಕರೆ ಚೆನ್ನಾಗಿರುತ್ತದೆ ಎಂದು ನಾವು ಯೋಚನೆ ಮಾಡ್ತೇವೆ. ಅದೇ ರೀತಿ ಕೆಲಸ ಬೋರೆನಿಸಿದ ಸಾಫ್ಟ್‌ವೇರ್ ಡೆವಲಪರ್ ಒಬ್ಬರು ಹೊಸ ಉಪಾಯ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಒಂಭತ್ತು ಗಂಟೆಯಿಂದ ಐದು ಗಂಟೆಯ ಒಂದೇ ರೀತಿಯ ಕೆಲಸದಿಂದ ಬೇಸರಗೊಂಡ ಸಾಫ್ಟ್‌ವೇರ್ ಡೆವಲಪರ್ ಡ್ರೈವರ್ ಆಗಿ ಕೆಲಸ ಮಾಡಲು ಮುಂದಾಗಿದ್ದಾರೆ. ಹೀಗೆ ಇವರ ಗಾಡಿಯಲ್ಲಿ ಪ್ರಯಾಣಿಸುತ್ತಿದ್ದ ಗ್ರಾಹಕನೋರ್ವ ಇವರು ಸಾಫ್ಟ್‌ವೇರ್ ಎಂದು ತಿಳಿದು ದಂಗಾಗಿದ್ದು, ಇವರ ಕತೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಟ್ವಿಟ್ಟರ್ ಬಳಕೆದಾರರೊಬ್ಬರು ರಾಪಿಡೋ ರೈಡ್ ಅನ್ನು ಬುಕ್ ಮಾಡಿದ್ದಾರೆ. ಆದರೆ ಬೈಕ್ ಹತ್ತಿ ಕುಳಿತ ಅವರಿಗೆ ತಮ್ಮ ಗಾಡಿಯ ಚಾಲಕ ಬೆಂಗಳೂರಿನ ಮೈಕ್ರೋಸಾಫ್ಟ್‌ನಲ್ಲಿ ಎಸ್‌ಡಿಇಟಿ (Software development engineer in test ) ಎಂದು ತಿಳಿದು ಶಾಕ್ ಆಗಿದೆ. ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುವ ಈ ಸುಶಿಕ್ಷಿತ ಸಾಫ್ಟ್ವೇರ್ ಇಂಜಿನಿಯರ್‌ಗೆ ಚಾಲಕನಾಗುವಂತಹ ಸ್ಥಿತಿ ಏಕೆ ಬಂತು ಎಂದು ಅವರು ಗಾಬರಿಯಾಗಿದ್ದಾರೆ. ಆದರೆ ಚಾಲಕನೊಂದಿಗೆ ಮಾತನಾಡಿದ ಬಳಿಕ ಅವರು ನಿರಾಳರಾಗಿದ್ದಾರೆ.
ಇನ್ನು ಈ ರೀತಿ ಚಾಲಕನಾಗಿ ಕೆಲಸ ಮಾಡುವ ಸಾಫ್ಟ್‌ವೇರ್ ಇಂಜಿನಿಯರ್ ಯಾರೂ ಎಂಬುದನ್ನು ಅವರು ಇಲ್ಲಿ ಉಲ್ಲೇಖಿಸಿಲ್ಲ. ಆದರೆ ಈತ ಹೊಸ ಹೊಸ ಜನರೊಂದಿಗೆ ಬೆರೆಯುವ ಸಲುವಾಗಿ ಈ ರೀತಿ ವಾರಾಂತ್ಯದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವುದಾಗಿ ಟ್ವಿಟ್ಟರ್ ಬಳಕೆದಾರ ನಿಖಿಲ್ ಸೇಠ್ ತಿಳಿಸಿದ್ದಾರೆ. ಇಂದು ನನ್ನ Rapido ಡ್ರೈವರ್ ಮೈಕ್ರೋಸಾಫ್ಟ್‌ನಲ್ಲಿ SDET ಆಗಿದ್ದಾರೆ. ಮತ್ತು ಅವರು ವಾರಾಂತ್ಯದಲ್ಲಿ ಜನರೊಂದಿಗೆ ಮಾತನಾಡಲು ಮತ್ತು ಹವ್ಯಾಸವಾಗಿ ಈ ಗಾಡಿ ಚಾಲನೆ ಮಾಡುತ್ತಾರೆ ಎಂದು ಅವರು ನನಗೆ ಹೇಳಿದರು ಎಂದು ನಿಖಿಲ್ ಸೇಠ್ ಬರೆದುಕೊಂಡಿದ್ದಾರೆ.
Success Story: ಕ್ಯಾಬ್ ಡ್ರೈವರ್ ಆಗಿದ್ದವ ಸಾಫ್ಟ್‌ವೇರ್ ಇಂಜಿನಿಯರ್ ಆದ!
ಇವರ ಟ್ವಿಟ್‌ಗೆ ನೂರಾರು ಜನ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಕ್ಷಣದಲ್ಲೇ ಈ ಟ್ವಿಟ್ ವೈರಲ್ ಆಗಿದೆ. ಅನೇಕರು ಈ ಟ್ವಿಟ್‌ಗೆ ಪ್ರತಿಕ್ರಿಯಿಸಿದ್ದಾರೆ. ತನಗೊಮ್ಮೆ ಉದ್ಯಮಿಯೊಬ್ಬರು ಕ್ಯಾಬ್ ಡ್ರೈವರ್ ಆಗಿ ಬಂದಿದ್ದರು. ಉದ್ಯಮಿಯಾಗಿ ಏಕೆ ಕ್ಯಾಬ್ ಚಲಾಯಿಸುತ್ತಿದ್ದೀರಿ ಎಂದು ಕೇಳಿದಾಗ ತನ್ನ ಮಕ್ಕಳು ಬಹಳ ಬ್ಯುಸಿಯಾಗಿದ್ದು, ನನ್ನೊಂದಿಗೆ ಮಾತನಾಡಲು ಅವರಿಗೆ ಸಮಯವಿಲ್ಲ. ಹೀಗಾಗಿ ವಾರದಲ್ಲಿ ಮೂರು ನಾಲ್ಕು ಬಾರಿ ಚಾಲಕನಾಗಿ ತಾನು ಕೆಲಸ ಮಾಡುತ್ತಿರುವುದಾಗಿ ಆ ಉದ್ಯಮಿ ಹೇಳಿದ್ದರು ಇದನ್ನು ಕೇಳಿ ನಾನು ಗಾಬರಿ ಅದೇ ಎಂದು ಮತ್ತೊಬ್ಬರು ತಮ್ಮ ಅನುಭವವನ್ನು ಕಾಮೆಂಟ್ ಮಾಡಿದ್ದಾರೆ.
ಒಂದು ವೇಳೆ ಅವರು ಕೆಲಸ ಮಾಡುವ ಕಂಪನಿಗೆ ತಿಳಿದರೆ ಎರಡೂ ಕೆಲಸಗಳನ್ನು ಮಾಡುವ ಕಾರಣಕ್ಕಾಗಿ ಕಂಪನಿ ಅವರನ್ನು ಕೆಲಸದಿಂದ ತೆಗೆದು ಹಾಕಲಿದೆ ಎಂದು ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಜುಲೈ 24 ರ ಭಾನುವಾರದಂದು ಆನ್‌ಲೈನ್‌ನಲ್ಲಿ ಪೋಸ್ಟ್ ಆದ ಈ ಟ್ವಿಟ್‌ನ್ನು
1700ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.
ಒಟ್ಟಿನಲ್ಲಿ ಕಾರ್ಪೊರೇಟ್ ಉದ್ಯೋಗಿಗಳ ದೈನಂದಿನ ಜೀವನವು ಕೆಲವೊಮ್ಮೆ ಏಕತಾನತೆಯಿಂದ ಕೂಡಿ ಬೋರು ಹೊಡೆಸುತ್ತಿರುತ್ತದೆ. ಭಾರೀ ಮೊತ್ತದ ಸಂಬಳ ಬಂದರೂ ಕೆಲಸ ಖುಷಿ ನೀಡುವುದಿಲ್ಲ. ಹೀಗಾಗಿಯೇ ಕೆಲವೊಮ್ಮೆ ಜನರು ಏಕತಾನತೆಯ ಬದುಕಿನಿಂದ ಬ್ರೇಕ್ ಪಡೆಯಲು ವಿದೇಶ ಪ್ರವಾಸಗಳನ್ನು ಕೈಗೊಂಡರೆ ಮತ್ತೆ ಅನೇಕರು ತಮ್ಮ ವಿರಾಮದ ಸಮಯವನ್ನು ಜಿಮ್, ಟ್ರೆಕ್ಕಿಂಗ್, ಕ್ಯಾಂಪಿಂಗ್ ಅಥವಾ ಪಾರ್ಟಿಗಳಲ್ಲಿ ಕಳೆಯಲು ಮುಂದಾಗುತ್ತಾರೆ. ಅದೇ ರೀತಿ ಇಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಬೋರು ಹೊಡೆಸುವ ಬದುಕಿಗೆ ತಮ್ಮದೇ ರೀತಿಯಲ್ಲಿ ಪರಿಹಾರ ಕಂಡುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿಗೆ ಬ್ರೇಕ್ - 170 ಸ್ಕೂಟರ್ ವಶಕ್ಕೆ!