ರಾಜೀನಾಮೆ ನೀಡಿ ಬೇರೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ತಮ್ಮ ಬಾಸ್‌ ಪ್ರೀತಿಯಿಂದ ಬೀಳ್ಕೊಟ್ಟ ಬಗೆಯನ್ನು ಭಾವುಕರಾಗಿ ಯುವತಿಯೊಬ್ಬರು ಹೇಳಿದ್ದಾರೆ. ವಿಡಿಯೋ ವೈರಲ್‌ ಆಗಿದೆ. 

ಒಂದು ಉದ್ಯೋಗಕ್ಕೆ ರಾಜೀನಾಮೆ ನೀಡಿ ಇನ್ನೊಂದು ಕಂಪೆನಿಗೆ ಹೋಗುವುದು ಹೊಸ ವಿಷಯವೇನಲ್ಲ. ಆದರೆ ಅಂಥ ಸಂದರ್ಭಗಳಲ್ಲಿ, ಹಿಂದೆ ಕೆಲಸ ಮಾಡುತ್ತಿರುವ ಕಂಪೆನಿಯ ಕೆಲವು ಬಾಸ್‌ಗಳು ಅದಕ್ಕೆ ತಡೆಯೊಡ್ಡಿದರೆ, ಮತ್ತೆ ಕೆಲವರು ಖುಷಿಯಿಂದ ಕಳುಹಿಸಿಕೊಡುತ್ತಾರೆ. ನೌಕರರು ತುಂಬಾ ಚೆನ್ನಾಗಿ ಕೆಲಸ ಮಾಡುವವರಾಗಿದ್ದರೆ, ಅವರನ್ನು ಅದೇ ಕಂಪೆನಿಯಲ್ಲಿ ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ. ರಾಜೀನಾಮೆ ಕೊಟ್ಟೇ ಕೊಡುತ್ತೇನೆ ಎಂದಾಗ ಕೆಲವೊಮ್ಮೆ ಅವರು ಅಡೆತಡೆಗಳನ್ನೂ ಮಾಡಬಹುದು. ಅಸಮಾಧಾನ ವ್ಯಕ್ತಪಡಿಸಿ ಕೆಟ್ಟ ನುಡಿಗಳನ್ನೂ ಆಡಬಹುದು. ಕೆಲವರು ಖುಷಿಯಿಂದಲೇ ಪ್ರೋತ್ಸಾಹಿಸಿ ಶುಭವಾಗಲಿ ಎಂದು ಕಳುಹಿಸುವವರೂ ಇದ್ದಾರೆ. ಆದರೆ, ಇಲ್ಲೊಬ್ಬ ಯುವತಿ ತಮ್ಮ ಬಾಸ್‌ ತೋರಿದ ಪ್ರೀತಿಗೆ ಭಾವುಕರಾಗಿದ್ದಾರೆ. ಕೆಲಸಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದಾಗ ತಮ್ಮ ಬಾಸ್‌ ಯಾವ ರೀತಿ ಪ್ರತಿಕ್ರಿಯೆ ತೋರಿದರು ಎಂಬ ವಿಡಿಯೋ ಶೇರ್‍‌ ಮಾಡಿಕೊಂಡಿರುವ ಯುವತಿ, ಕಣ್ಣೀರಾಗಿದ್ದಾರೆ. 

 ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಸಿಮಿ ಎಂಬ ಯುವತಿ ತಮ್ಮ ಲೇಡಿ ಬಾಸ್‌ ವಿಡಿಯೋ ಶೇರ್‍‌ ಮಾಡಿದ್ದಾರೆ. ತಮ್ಮ ರಾಜೀನಾಮೆ ಕುರಿತು ಅವರು ತಮ್ಮ ನಿರ್ದೇಶಕಿ ಜೊತೆ ಆನ್‌ಲೈನ್‌ ಮೂಲಕ ನಡೆಸಿದ ಸಂಭಾಷಣೆಯ ವಿಡಿಯೋ ಹಂಚಿಕೊಂಡು ಕಣ್ಣೀರಾಗಿದ್ದಾರೆ. ಅದರಲ್ಲಿ ಅವರು, ನಿಜ ಹೇಳಬೇಕು ಎಂದರೆ, ಈ ಪೋಸ್ಟ್‌ ಮಾಡಲು ನನಗೆ ತುಂಬಾ ಕಷ್ಟವಾಗುತ್ತಿದೆ. ಏಕೆಂದರೆ ಇದು ತುಂಬಾ ಭಾವುಕ ಸನ್ನಿವೇಶ. ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ, ಇಂಥ ಬಾಸ್‌ ಕೂಡ ಇರುತ್ತಾರೆ ಎನ್ನುವುದೇ ಖುಷಿ. ಇಂಥ ಬಾಸ್‌ ಪಡೆದ ನಾನು ಧನ್ಯ. ಆದ್ದರಿಂದ ಮೇಡಂ ಕುರಿತು ಎಲ್ಲರಿಗೂ ತಿಳಿಯಲಿ, ಎಲ್ಲರಿಗೂ ಇಂಥ ಬಾಸ್‌ ಸಿಗಲಿ ಎಂದೇ ಹಾರೈಸುತ್ತಾ, ಈ ವಿಡಿಯೋ ಶೇರ್‍‌ ಮಾಡಿಕೊಳ್ಳುತ್ತಿದ್ದೇನೆ ಎಂದು ಸಿಮಿ ಹೇಳಿದ್ದಾರೆ.

ಅನುಷ್ಕಾ- ವಿರಾಟ್‌ ದಾಂಪತ್ಯದಲ್ಲಿ ಬಿರುಕು? ಕೊಹ್ಲಿ ಭಾವನಾತ್ಮಕ ಪೋಸ್ಟ್‌ಗೆ ಫ್ಯಾನ್ಸ್ ಶಾಕ್‌!

ನನ್ನ ಜೀವನದಲ್ಲಿ ನನ್ನ ಬಾಸ್‌ ಅವರಂಥ ವ್ಯಕ್ತಿಗಳನ್ನು ಇದುವರೆಗೂ ಭೇಟಿಯಾಗಿಲ್ಲ. ಇವರು ತುಂಬಾ ಒಳ್ಳೆಯವರು. ಎಲ್ಲರಿಗೂ ಇಂಥ ಬಾಸ್‌ ಸಿಗಬೇಕು. ಇಷ್ಟು ಉತ್ತಮ ವ್ಯವಸ್ಥಾಪಕರನ್ನು ಪಡೆಯುವುದು ಎಷ್ಟು ಮುಖ್ಯ ಎಂದು ನಾನು ನಿಜಕ್ಕೂ ಕಲಿತಿದ್ದೇನೆ ಎಂದಿರುವ ಸಿಮಿ, ಇದರ ವಿಡಿಯೋ ಶೇರ್‍‌ ಮಾಡಿದ್ದಾರೆ. 

ವಿಡಿಯೋದಲ್ಲಿ, ಸಿಮಿ ತಮ್ಮ ಮ್ಯಾನೇಜರ್‌ಗೆ ರಾಜೀನಾಮೆ ನೀಡುತ್ತಿರುವ ವಿಷಯ ತಿಳಿಸಿದ್ದಾರೆ. ಅದನ್ನು ಹೇಗೆ ಹೇಳಬೇಕು ಎನ್ನುವ ಅಳುಕು ಇತ್ತು. ಆದರೆ ಅವರ ಬಾಸ್‌, ಪ್ರತಿಕ್ರಿಯೆ ಸಿಮಿ ನಿರೀಕ್ಷೆಗಿಂತ ಭಿನ್ನವಾಗಿತ್ತು ಎಂದು ವಿಡಿಯೋದಲ್ಲಿ ಕಂಡುಬರುತ್ತದೆ. ರಾಜೀನಾಮೆ ಸುದ್ದಿ ಹೇಳುತ್ತಿದ್ದಂತೆಯೇ ಅವರ ಲೇಡಿಮ್ಯಾನೇಜರ್‍‌, “ಅಭಿನಂದನೆಗಳು” ಎಂದಿದ್ದಾರೆ. ತಮ್ಮ ಸಿಬ್ಬಂದಿಯ ಹೊಸ ಪಯಣಕ್ಕೆ ಉತ್ಸಾಹ ತುಂಬಿದ ಅವರು, ಹೊಸ ವೃತ್ತಿಜೀವನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ನಿಮ್ಮ ಬಗ್ಗೆ ನನಗೆ ನಿಜಕ್ಕೂ ಖುಷಿಯಾಗುತ್ತಿದೆ. ನಿಮ್ಮೊಂದಿಗೆ ಇಷ್ಟು ದಿನ ಕೆಲಸ ಮಾಡುವುದು ನನಗೆ ನಿಜಕ್ಕೂ ಅದ್ಭುತ ಅನುಭವ. ಮುಂದಿನ ಜೀವನ ಒಳ್ಳೆಯದಾಗಲಿ ಎಂದಿದ್ದಾರೆ. ಇದನ್ನು ಕೇಳಿ ಸಿಮಿ ಕಣ್ಣೀರು ಹರಿಸಿದ್ದಾರೆ. ಇದಕ್ಕೆ ಮಿಲಿಯನ್‌ಗಟ್ಟಲೆ ಲೈಕ್ಸ್‌, ಕಮೆಂಟ್‌ ಬಂದಿದ್ದು, ಇಷ್ಟು ಒಳ್ಳೆಯ ಬಾಸ್‌ ಸಿಗುವುದು ಕಷ್ಟ ಎಂದಿದ್ದಾರೆ. ಮತ್ತೆ ಕೆಲವರು, ಕೆಲವು ಕಡೆಗಳಲ್ಲಿ ಇಂಥವರೂ ಇರುತ್ತಾರೆ, ಆದರೆ ಯಾರೂ ಆ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್‍‌ ಮಾಡುವುದಿಲ್ಲವಷ್ಟೇ ಎಂದಿದ್ದಾರೆ. 

ಸತ್ತ ವ್ಯಕ್ತಿ ಎದ್ದು ಬಂದ! ಚಿತೆಗೆ ಬೆಂಕಿ ಇಡುವಷ್ಟರಲ್ಲಿಯೇ ಎದ್ದ ಯುವಕ- ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ

View post on Instagram