Asianet Suvarna News Asianet Suvarna News

ಕ್ರಿಯೆಟಿವಿಟಿಗೆ ಸಿಕ್ತು ಮೆಚ್ಚುಗೆ, ಬ್ಲಿಂಕಿಟ್ ಮೂಲಕ ಉದ್ಯೋಗಕ್ಕಾಗಿ ರೆಸ್ಯೂಮ್ ಕಳುಹಿಸಿದ ಅಭ್ಯರ್ಥಿ!

ಉದ್ಯೋಗ ಹುಡುಕುವುದು ಸುಲಭದ ಕೆಲಸವಲ್ಲ. ರೆಸ್ಯೂಮ್ ಕಳುಹಿಸಬೇಕು, ಕಂಪನಿ ಎಲ್ಲರ ರೆಸ್ಯೂಮ್ ನೋಡಿ ಶಾರ್ಟ್ ಲಿಸ್ಟ್ ಮಾಡಿ ಸಂದರ್ಶನಕ್ಕೆ ಕರೆಯಬೇಕು. ಬಳಿಕ ಪ್ರತಿಭೆ, ಕೆಲಸಕ್ಕಾಗಿ ಇರುವ ಕೌಶಲ್ಯ ನೋಡಿ ಕಂಪನಿ ಆಯ್ಕೆ ಮಾಡುತ್ತದೆ. ಇಲ್ಲೊಬ್ಬ ಎಲ್ಲರಂತೆ ಇ ಮೇಲ್ ಮೂಲಕ ರೆಸ್ಯೂಮ್ ಕಳುಹಿಸದೇ ಆನ್‌ಲೈನ್ ಡೆಲಿವರಿ ಆ್ಯಪ್ ಬ್ಲಿಕಿಂಟ್ ಮೂಲಕ ರೆಸ್ಯೂಮ್ ಕಳುಹಿಸಿದ್ದಾನೆ. ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
 

Man sent resume hard copy through blinkit for job Post goes viral in Social Media ckm
Author
First Published Apr 25, 2024, 1:18 PM IST

ಉದ್ಯೋಗ ಹುಡುಕುವುದು, ಇಮೇಲ್ ಮೂಲಕ ರೆಸ್ಯೂಮ್ ಕಳುಹಿಸಿ, ಸಂದರ್ಶನ ಸೇರಿದಂತೆ ಈ ಪ್ರಕ್ರಿಯೆ ಎಲ್ಲರಿಗೂ ತಲೆನೋವಿನ ವಿಚಾರ. ಕಾರಣ ಖಾಸಗಿ ಕಂಪನಿಗಳಿಗೆ ಬರುವ ರೆಸ್ಯೂಮ್ ಶಾರ್ಟ್ ಲಿಸ್ಟ್ ಮಾಡಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಿದೆ. ಈ ಸಂದರ್ಶನದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಇಲ್ಲೊಬ್ಬ ಎಲ್ಲರಂತೆ ಇಮೇಲ್ ಮೂಲಕ ರೆಸ್ಯೂಮ್ ಕಳುಹಿಸಲು ಮುಂದಾಗಿಲ್ಲ. ಬದಲಾಗಿ, ಭಿನ್ನವಾಗಿ ರೆಸ್ಯೂಮ್ ಕಳುಹಿಸಿ ಕಂಪನಿ ಗಮನಸೆಳೆದಿದ್ದಾರೆ. ಆನ್‌ಲೈನ್ ಡೆಲಿವರಿ ಆ್ಯಪ್ ಬ್ಲಿಂಕಿಟ್ ಮೂಲಕ ಈತ ತನ್ನ ರೆಸ್ಯೂಮ್ ಕಳುಹಿಸಿದ್ದಾನೆ. ಈತನ ಕ್ರಿಯೆಟಿವಿಟಿ ವೈರಲ್ ಆಗಿದೆ.

ಆದಿತ್ಯ ಅನ್ನೋ ಟ್ವಿಟರ್ ಖಾತೆಯಲ್ಲಿ ಈತನ ರೆಸ್ಯೂಮ್ ಹಾಗೂ ಕವರ್ ಲೆಟರ್ ಪೋಸ್ಟ್ ಮಾಡಲಾಗಿದೆ. ಎಲ್ಲರಂತೆ ಇಮೇಲ್ ಮೂಲಕ ರೆಸ್ಯೂಮ್ ಕಳುಹಿಸಿ ಕಂಪನಿಯಿಂದ ಕರೆಗಾಗಿ ಈತ ಕಾಯಲು ಸಿದ್ದವಿರಲಿಲ್ಲ. ತನ್ನ ರೆಸ್ಯೂಮ್ ಹಾಗೂ ಅಪ್ರೋಚ್‌ನಲ್ಲಿ ಭಿನ್ನ ಹಾೂ ಕಿಯೆಟಿವಿಟಿ ತೋರಿಸಿದ್ದಾನೆ. ಇದಕ್ಕಾಗಿ ಅತ್ಯುತ್ತಮ ಕವರ್ ಲೆವಟರ್ ಬರೆದಿದ್ದಾನೆ. ಜೊತೆಗೆ ರೆಸ್ಯೂಮ್ ರೆಡಿ ಮಾಡಿ ಹಾರ್ಡ್ ಕಾಪಿಯನ್ನು ಬ್ಲಿಂಕಿಟ್ ಮೂಲಕ ಕಳುಹಿಸಿದ್ದಾನೆ.

ಪ್ರತಿಷ್ಠಿತ ಕಂಪೆನಿಗಳಾದ ಟಿಸಿಎಸ್‌, ಇನ್ಫಿ, ವಿಪ್ರೋದಿಂದ 64000 ಉದ್ಯೋಗಿಗಳ ಕಡಿತ!

ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪೋಸ್ಟ ಮಾಡಿರುವ ಆದಿತ್ಯ ಖಾತೆಯಲ್ಲಿ, ಬ್ಲಿಂಕಿಟ್ ಸಿಇಒ, ಸಹ ಸಂಸ್ಥಾಪಕ ಅಲ್ಬಿಂದರ್ ದಿಂದ್ಸಾಗೆ ಟ್ಯಾಗ್ ಮಾಡಿದ್ದಾರೆ. ಉದ್ಯೋಗ ಅಭ್ಯರ್ಥಿಯ ಬ್ಲಿಂಕಿಟ್ ರೆಸ್ಯೂಮ್ ಇದೀಗ ವೈರಲ್ ಆಗಿದೆ. ಈ ರೆಸ್ಯೂಮ್‌ಗೆ ಕಂಪನಿಯ ಉತ್ತರವೇನು? ಈತನ ಆಯ್ಕೆಯಾಗಿದಾ ಅನ್ನೋ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. 

 

 

ಅರಬ್ ಎಮಿರೈಟ್ಸ್‌ನಲ್ಲಿ ಈ ರೀತಿ ಭಿನ್ನವಾಗಿ ಉದ್ಯೋಗ ಅರಿಸಿದ ಘಟನೆ ನಡೆದಿತ್ತು ಅನ್ನೋ ಮಾಹಿತಿಗಳನ್ನು ಸಾಮಾಜಿಕ ಮಾಧ್ಯಮಗಳು ಹೊರತೆಗಿದೆ. ಯುಎಇನಲ್ಲಿ ವ್ಯಕ್ತಿಯೊಬ್ಬ ಕೆಲಸಕ್ಕಾಗಿ ಪ್ರಮುಖ ರಸ್ತೆಗಳ ಟ್ರಾಫಿಕ್ ಸಿಗ್ನಲ್ ಬಳಿ ಪೋಸ್ಟರ್ ಹಾಕಿದ್ದರು. ಟ್ರಾಫಿಕ್ ನಿಯಮ ಪಾಲನೆ ಸೇರಿದಂತೆ ಇತರ ಮಾಹಿತಿಗಳನ್ನು ಹಾಕಿ, ನನಗೊಂದು ಕೆಲಸ ಹುಡುಕಿ ಕೊಡಿ ಎಂಬ ಮನವಿ ಮಾಡಿದ್ದ.

ಈತನ ಬ್ಲಿಂಕಿಟ್ ಮೂಲಕ ರೆಸ್ಯೂಮ್ ಕಳುಹಿಸದ ನಡೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಇಂತಹ ನಡೆಗಳು ಉದ್ಯೋಗ ನೀಡುವುದಿಲ್ಲ. ಪ್ರತಿಭೆ ಕೌಶಲ್ಯಗಳು ಮುಖ್ಯ. ಕ್ರಿಯೆಟಿವಿಟಿ ಕೆಲಸದಲ್ಲಿ ಮುಖ್ಯ, ಕೆಲಸ ಗಿಟ್ಟಿಸಿಕೊಳ್ಳುವುದರಲ್ಲಿ ಅಲ್ಲ ಎಂದು ಸಲಹೆ ನೀಡಿದ್ದಾರೆ.

'ಕೆಲಸದ ಸ್ಥಳದಲ್ಲಿ ರಾಜಕೀಯಕ್ಕೆ ಇಳಿಯಬೇಡಿ..' 28 ಉದ್ಯೋಗಿಗಳ ವಜಾ ಬಳಿಕ ಗೂಗಲ್‌ ಸಿಇಒ ಸುಂದರ್‌ ಪಿಚೈ ಪತ್ರ
 

Follow Us:
Download App:
  • android
  • ios