Asianet Suvarna News

ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ

ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿದ್ದ ರಾಜ್ಯದ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ.

Karnataka govt Released guest lecturers Pending Salary Says DCM Ashwath narayan
Author
Bengaluru, First Published May 8, 2020, 10:39 PM IST
  • Facebook
  • Twitter
  • Whatsapp

ಬೆಂಗಳೂರು, (ಮೇ.08) : ರಾಜ್ಯದ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಬಾಕಿ ಉಳಿದಿರುವ ಗೌರವ ವೇತನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

2019-20 ನೇ ಸಾಲಿನ ರಾಜ್ಯದ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನವನ್ನು ಹಣಕಾಸು ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಾ.ಸಿ ಎನ್ ಅಶ್ವಥ್ ನಾರಾಯಣ್ ಮಾಹಿತಿ ನೀಡಿದ್ದಾರೆ.

ತನ್ನೆಲ್ಲಾ ನೌಕರರಿಗೆ ಮಹತ್ವದ ಸುತ್ತೋಲೆ ಹೊರಡಿಸಿದ ಕರ್ನಾಟಕ ಸರ್ಕಾರ..!

ಬಾಕಿ ಹಣ ಬಿಡುಗಡೆ ಸಂಬಂಧ ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಒಪ್ಪಿದ್ದು, ಮುಂದಿನ ವಾರ ಉಪನ್ಯಾಸಕರಿಗೆ ಹಣ ನೀಡಲಾಗುವುದು ಎಂದರು.

ಹಣ ಆದಷ್ಟೂ ಬೇಗ ಗೆಸ್ಟ್ ಟೀಚರ್ಸ್ ಕೈ ಸೇರುವಂತಾಗಲಿ. ಯಾಕಂದ್ರೆ ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೈಯಲ್ಲಿ ಹಣವಿಲ್ಲದೇ ಪರದಾಡುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರ ಈ ಒಂದು ನಿರ್ಧಾರ ಬರಗಾಲದಲ್ಲಿ  ಬಾಕಿ ಹಣ ಉಪನ್ಯಾಸಕರ ಕೈಸೇರುತ್ತಿರುವುದು ಸಂತಸದ ಸಂಗತಿ.

Follow Us:
Download App:
  • android
  • ios