Asianet Suvarna News Asianet Suvarna News

ನರ್ಸಿಂಗ್ ಆಗಿದ್ಯಾ? ಸೌದಿ ಅರೇಬಿಯಾದಲ್ಲಿದೆ ವಿಫುಲ ಅವಕಾಶ, ಕೈ ತುಂಬಾ ವೇತನ!

ಸೌದಿ ಕಮಿಷನ್ ಫಾರ್ ಹೆಲ್ತ್ ಸ್ಪೆಷಲಿಸ್ಟ್ ವೆಬ್‌ಸೈಟ್‌ನಲ್ಲಿರುವ ಮುಮಾರಿಸ್ ಪ್ಲಸ್ ಸೇವೆ ಅಡಿಯಲ್ಲಿ ಅಗತ್ಯ ತರಬೇತು ಪಡೆದವರಿಗೆ ಕೆಲಸ ಮಾಡಲು ಅವಕಾಶವಿದ್ದು, ಪ್ರಯತ್ನಿಸಬಹುದು.

Job opportunities for indian nurses in Saudi Arabia on demand
Author
First Published Aug 30, 2024, 2:52 PM IST | Last Updated Aug 30, 2024, 2:52 PM IST

ಬೆಂಗಳೂರು: ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯ (MoH-ಈಸ್ಟರ್ನ್ ಹೆಲ್ತ್ ಕ್ಲಸ್ಟರ್) ದಲ್ಲಿ ಕೆಲಸ ಮಾಡಲು  ನರ್ಸಿಂಗ್ ಆಗಿರುವ ನುರಿತವರಿಗೆ ವಿಫುಲ ಉದ್ಯೋಗ ಅವಕಾಶಗಳಿದ್ದು, ವಿಶೇಷವಾಗಿ ನಿಯೋಜಿಸಿಕೊಳ್ಳಲಾಗುತ್ತಿದೆ. ಕೌಶಲ್ಯ ಇರುವ ಅಭ್ಯರ್ಥಿಗಲು ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿ ಇಲ್ಲಿದೆ.

ಅಡಲ್ಟ್ ಆಂಕೊಲಾಜಿ (Adult Oncology), ಡಯಾಲಿಸಿಸ್ (Dialisis), ತುರ್ತು ನಿಗ್ರಹ ಕೋಣೆ (Emergeny Ward), ICU ವಯಸ್ಕರು, ವೈದ್ಯಕೀಯ, ನವಜಾತ ಶಿಶುಗಳ ತೀವ್ರ ನಿಗಾ ಘಟಕ (Infant Enmergency Ward), ನರಗಳು, NICU, ಆಪರೇಟಿಂಗ್ ರೂಮ್ (OR), ಅಂಗಾಂಗ ಕಸಿ (Organ Transplantation), ಪೀಡಿಯಾಟ್ರಿಕ್ ಆಂಕೊಲಾಜಿ, PICU, ಸ್ಪೆಷಲೈಸ್ಡ್ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಕಾರ್ಯ ನಿರ್ವಹಿಸಲು ವಿಫುಲ ಅವಕಾಶಗಳಿವೆ. ನರ್ಸಿಂಗ್‌ನಲ್ಲಿ ಪದವಿ/ಪಿ.ಜಿ. ಬಿ.ಎಸ್ಸಿ ಶಿಕ್ಷಣದ ಅರ್ಹತೆ ಇದ್ದವರು ಮತ್ತು ಕನಿಷ್ಠ ಒಂದು ವರ್ಷದ ಕೆಲಸದ ಅನುಭವ ಹೊಂದಿರುವವರು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು.

ವಿವರವಾದ ಬಯೋಡಾಟಾ ಮತ್ತು ಶಿಕ್ಷಣ (Educational Qualification), ಕೆಲಸದ ಅನುಭವ (Work Experience), ಪಾಸ್‌ಪೋರ್ಟ್‌ನ ಪ್ರತಿಗಳೊಂದಿಗೆ ಕೇರಳಿಗರು rmt3.norka@kerala.gov.in ಇ-ಮೇಲ್ ಐಡಿಗೆ ಸೆಪ್ಟೆಂಬರ್ 04 ರಂದು ಬೆಳಿಗ್ಗೆ 10 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬೇಕೆಂದು ನೋರ್ಕಾ ರೂಟ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜಿತ್ ತಿಳಿಸಿದ್ದಾರೆ. ಇದಕ್ಕಾಗಿ ಸಂದರ್ಶನವನ್ನು ಮುಂಬೈನಲ್ಲಿ ನಡೆಸಲಾಗುವುದು.

ಇದನ್ನೂ ಓದಿ -ನೂರಾರು ಜೀವ ಉಳಿಸಿದ್ದ ಸ್ಟಾಫ್ ನರ್ಸ್ ಆತ್ಮಹತ್ಯೆ; ಊರಿಗೆ ಊರೇ ಬಂದ್ ಮಾಡಿದ ಜನತೆ!

ಆದರೆ, ಈ ಅವಕಾಶಕ್ಕೆ ಸೌದಿ ಕಮಿಷನ್ ಫಾರ್ ಹೆಲ್ತ್ ಸ್ಪೆಷಲಿಸ್ಟ್ ವೆಬ್‌ಸೈಟ್‌ನಲ್ಲಿರುವ ಮುಮಾರಿಸ್ ಪ್ಲಸ್ ಸೇವೆ ಮೂಲಕ ವೃತ್ತಿಪರ ಕೌಶಲ್ಯ ತರಬೇತಿ ಪಡೆದಿರಬೇಕು. ಅರ್ಜಿದಾರರು ಈ ಹಿಂದೆ SAMR ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರಬೇಕು. ಕನಿಷ್ಠ ಆರು ತಿಂಗಳ ಸಿಂಧುತ್ವದೊಂದಿಗೆ ಪಾಸ್‌ಪೋರ್ಟ್ ಹೊಂದಿರಬೇಕು. ಸಂದರ್ಶನದ ಸಮಯದಲ್ಲಿ ಪಾಸ್‌ಪೋರ್ಟ್ ಅನ್ನು ಕಡ್ಡಾಯವಾಗಿ ತರಬೇಕು. ಹೆಚ್ಚಿನ ಮಾಹಿತಿಗಾಗಿ 0471-2770536, 539, 540, 577 ಈ ಸಂಖ್ಯೆಗಳನ್ನು (ರಜಾ ದಿನಗಳನ್ನು ಹೊರತುಪಡಿಸಿ, ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು) ಅಥವಾ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ನೋರ್ಕಾ ಗ್ಲೋಬಲ್ ಕಾಂಟ್ಯಾಕ್ಟ್ ಸೆಂಟರ್‌ನ ಟೋಲ್ ಫ್ರೀ ಸಂಖ್ಯೆಗಳು 1800 425 3939 (ಭಾರತದಿಂದ) +91-8802 012 345 ( ವಿದೇಶದಿಂದ, ಮಿಸ್ಡ್ ಕಾಲ್ ಸೇವೆ) ಸಂಪರ್ಕಿಸಬಹುದು.

Latest Videos
Follow Us:
Download App:
  • android
  • ios