Asianet Suvarna News Asianet Suvarna News

'ನಿಂತ್ಕೊಂಡೇ ನಿದ್ರೆ ಮಾಡಿ..' ಜಪಾನ್‌ ಕಂಪನಿಯ ಹೊಸ ಪ್ರಯೋಗ ನೋಡಿದ್ರಾ?

ಆಫೀಸ್‌ನಲ್ಲಿ ಕೆಲಸ ಮಾಡೋವಾಗಲೇ ನಿದ್ರೆ ಬಂತಾ.. ಇನ್ಮುಂದೆ ಇದ್ದ ಕುರ್ಚಿಯಲ್ಲೇ, ಸೋಫಾದಲ್ಲೇ ನಿದ್ರೆ ಮಾಡೋ ಅಗತ್ಯವಲ್ಲ. ಜಪಾನ್‌ನ ಕಂಪನಿ ನಿಂತ್ಕೊಂಡೇ ನಿದ್ರೆ ಮಾಡುವ ಪಾಡ್‌ಅನ್ನು ಅಭಿವೃದ್ಧಿಪಡಿಸಿದೆ.

Japanese firm Giraffenap unveils a vertical pod that lets you sleep while UPRIGHT san
Author
First Published Aug 16, 2023, 5:13 PM IST

ನವದೆಹಲಿ (ಆ.16): ಕೆಲಸದ ಸಮಯದಲ್ಲಿ ಮಾಡುವ ಒಂದು ಚಿಕ್ಕ ಪವರ್‌ ನ್ಯಾಪ್‌, ಉದ್ಯೋಗಿಯಲ್ಲಿ ಅಲರ್ಟ್‌ನೆಸ್‌ಅನ್ನು ಹೆಚ್ಚುಸುತ್ತದೆ ಮಾತ್ರವಲ್ಲ ಅವರ ಉತ್ಪಾದಕತೆ ಅಂದರೆ ಪ್ರಾಡಕ್ಟಿವಿಟಿ ಹೆಚ್ಚಾಗುತ್ತದೆ. ಅದಲ್ಲದೆ, ಇನ್ನಷ್ಟು ಸೃಜನಶೀಲರಾಗಿಯೂ ಅವರು ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ತಜ್ಞರು ದೀರ್ಘಕಾಲದಿಂದ ವಾದ ಮಾಡುತ್ತಲೇ ಬಂದಿದ್ದಾರೆ. ಈಗ ಜಪಾನ್‌ನ ಕಂಪನಿಯೊಂದು ವಿಶೇಷವಾದ ಪಾಡ್‌ಅನ್ನು ಅಭಿವೃದ್ಧಿ ಮಾಡಿದೆ. ಇದು ಉದ್ಯೋಗಿಗಳಿಗೆ ಅತ್ಯಂತ ಕ್ವಿಕ್‌ ಆಗಿ ಪವರ್‌ ನ್ಯಾಪ್‌ ಅಂದರೆ ಚಿಕ್ಕನಿದ್ರೆ ತೆಗೆಯಲು ಸಾಧ್ಯವಾಗುತ್ತದೆ. ಜಿರಾಫೆನ್ಯಾಪ್‌ ಎನ್ನುವ ಪಾಡ್‌ಅನ್ನು ಜಪಾನ್‌ನ ಹೊಕ್ಕೈಡೊದಲ್ಲಿ ಕೊಯೊಜು ಪ್ಲೈವುಡ್ ಕಾರ್ಪೊರೇಶನ್‌ ಅಭಿವೃದ್ಧಿಪಡಿಸಿದೆ. ಈ ಪಾಡ್‌ನಲ್ಲಿ ಕಚೇರಿಯ ಉದ್ಯೋಗಿಗಳು ಉದ್ದನೆಯ ಕುತ್ತಿಗೆಯ ಸಸ್ತನಿಯಂತೆ ನೇರವಾಗಿ ಮಲಗಲು ಅನುವು ಮಾಡಿಕೊಡುತ್ತದೆ. ಮಲಗಿಕೊಳ್ಳಲು, ಸೋಫಾ, ಬೆಡ್‌ನಂಥ ಅವಶ್ಯಕತೆಗಳೇ ಇರೋದಿಲ್ಲ. ನಿಂತುಕೊಂಡೇ ನಿದ್ರೆ ಮಾಡಬಹುದದು ಎಂದು ಈ ಕಂಪನಿ ಹೇಳಿದೆ. ನೋಡಲು ಸಣ್ಣ ಪಬ್ಲಿಕ್‌ ಫೋನ್‌ ಬೂತ್‌ನಂತೆ ಇದು ಕಾಣುತ್ತದೆ. ಆದರೆ, ಇದರ ಒಳಗೆ ನಿದ್ರೆ ಮಾಡುತ್ತಿದ್ದರೆ ಹೊರಗಿನ ಯಾವ ಶಬ್ದಗಳು ಕೇಳಿಸೋದಿಲ್ಲ. ದೇಹತೂಕಕ್ಕೆ ಅನುಗುಣವಾಗಿ ಈ ಪಾಡ್‌ಗಳು ಇರಲಿದೆ.

ಆದರೆ, ಇದು ಕೇವಲ 8.4 ಅಡಿ ಎತ್ತರ ಹಾಗೂ ನಾಲ್ಕು ಅಡಿ ಅಗಲ ಮಾತ್ರವೇ ಇದೆ. ಹಾಗಾಗಿ ಸ್ಥೂಲಕಾಯದ ಉದ್ಯೋಗಿಗಳು ನಿದ್ರೆ ಮಾಡಬೇಕಾದಲ್ಲಿ, ಹಳೇ ರೀತಿಯ ವಿಧಾನವಾದ ಡೆಸ್ಕ್‌ ಅಥವಾ ಸೋಫಾಗಳನ್ನೇ ನೋಡಿಕೊಳ್ಳಬೇಕಾಗಿದೆ. ನಿಮಗೆ ನೆನಪಿರಲಿ, ವಿಶ್ವದಲ್ಲಿ ಉದ್ಯೋಗಿಗಳು ಕಚೇರಿ ಸಮಯದಲ್ಲಿ ನಿದ್ರೆ ಮಾಡಲು ಅವಕಾಶ ಕೊಟ್ಟಿರುವ ಏಕೈಕ ದೇಶ ಜಪಾನ್‌. ಬಹುತೇಕ ಜಪಾನ್‌ನ ಎಲ್ಲಾ ಕಂಪನಿಗಳು ಇದನ್ನು ಅಳವಡಿಸಿಕೊಂಡಿದೆ.

ಎಲ್ಲರೂ ಸುಲಭವಾಗಿ ನಿದ್ರೆ ಮಾಡಬಹುದಾದ ಸಮಾಜದ ಕಡೆಗೆ ಕೆಲಸ ಮಾಡುತ್ತಿದೆ ಮತ್ತು ಅಂತಿಮವಾಗಿ ಇದು ವ್ಯವಹಾರ ಮತ್ತು ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಕಂಪನಿ ಹೇಳಿದೆ. ಆದೆ, ಕಂಪನಿಗಳು ಈ ಪಾಡ್‌ಗಳನ್ನು ತಮ್ಮ ಕಚೇರಿಗೆ ಸೇರಿಸಲು ಆಗುವ ವೆಚ್ಚವೆಷ್ಟು ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ತಮ್ಮ ದೈಹಿಕ ಆಯಾಸ ಮತ್ತು ಒತ್ತಡವನ್ನು ತೊಡೆದುಹಾಕಲು ಸಾಧ್ಯವಾಗದೆ ಮತ್ತು ನಿದ್ರೆಯನ್ನು ಸಹಿಸಿಕೊಂಡು ಕೆಲಸ ಮುಂದುವರೆಸಿದ ಅನೇಕ ಜನರು ಜಪಾನ್‌ನಲ್ಲಿಯೂ ಸಿಗುತ್ತಾರೆ ಎಂದು ಕಂಪನಿ ಹೇಳಿದೆ. ಆದರೆ, ಈಗ ಅದಕ್ಕೆಲ್ಲಾ ಪರಿಹಾರ ಎನ್ನುವ ರೀತಿಯಲ್ಲಿ ಜಿರಾಫೆನ್ಯಾಪ್‌ ಅಭಿವೃದ್ಧಿ ಮಾಡಿದ್ದೇವೆ ಎಂದಿದ್ದಾರೆ.

ಅತ್ಯಂತ ಕಡಿಮೆ ಸಮಯದಲ್ಲಿ ನಿಂತುಕೊಂಡೇ ಇದರಲ್ಲಿ ನೀವು ನಿದ್ರೆ ಮಾಡಬಹುದು ಹಾಗೂ ನಿಮ್ಮ ಮನಸ್ಸು ಮತ್ತು ದೇಹವನ್ನು ಚೇತರಿಸಿಕೊಳ್ಳಬಹುದು. ಕೊಯೊಜು ಪ್ಲೈವುಡ್ ಕಾರ್ಪೊರೇಷನ್ ತನ್ನ ಸ್ಲೀಪ್ ಪಾಡ್‌ಗಾಗಿ ಎರಡು ವಿನ್ಯಾಸಗಳನ್ನು ನೀಡಿದೆ. ಫ್ಯೂಚರಿಸ್ಟಿಕ್ 'ಸ್ಪೇಸಿಯಾ' ಮತ್ತು ಹೆಚ್ಚು ಹಳ್ಳಿಗಾಡಿನ 'ಅರಣ್ಯ' ಎನ್ನುವ ವಿನ್ಯಾಸವನ್ನು ನೀಡಿದೆ. ಹೊರಗಿನಿಂದ ನೋಡಿದರೆ, ಇದು ಸ್ಟೋರೇಜ್‌ ಯುನಿಟ್‌ ರೀತಿ ಕಾಣುತ್ತದೆ.

ಇಂಟರ್ನ್‌ಷಿಪ್‌ಗಾಗಿ 13 ಜಾಬ್‌ ಆಫರ್‌ ತಿರಸ್ಕರಿಸಿದ ಬೆಂಗಳೂರು ಟೆಕ್ಕಿ, ಈಗ ಆಕೆ ಸಂಬಳ ನೋಡಿದ್ರಾ?

ಈ ಪಾಡ್‌ನಲ್ಲಿ ಅಗ್ನ ಶಮನ ವ್ಯವಸ್ಥೆ, ಸ್ಮೋಕ್‌ ಡಿಟೆಕ್ಟರ್‌, ವೆಂಟಿಲೇಷನ್‌ ಫ್ಯಾನ್‌, ಸೀಲಿಂಗ್‌ ಮತ್ತು ಫ್ಲೋರ್‌ ಎಲ್‌ಇಡಿ ಲೈಟಿಂಗ್‌ ಹಾಗೂ ಜಾಕೆಟ್‌ಗಳನ್ನು ಹ್ಯಾಂಗ್‌ ಮಾಡುವ ಸಲುವಾಗಿ ಮೆಟಲ್‌ ಫಿಟಿಂಗ್‌ ಕೂಡ ಇದರಲ್ಲಿದೆ. 6.5 ಫೀಟ್‌ ಎತ್ತರದ 100ಕೆಜಿಗಿಂತ ಅಧಿಕ ತೂಕದ ವ್ಯಕ್ತಿಗಳಿಗೆ ಈ ಪಾಡ್‌ ಸೂಕ್ತವಲ್ಲ ಎಂದು ಕಂಪನಿಯೇ ತಿಳಿಸಿದೆ. ಅದರೊಂದಿಗೆ ಬ್ಯುಸಿ ಆಫೀಸ್‌ನ ಶಬ್ದಗಳು ಪಾಡ್‌ನ ಒಳಗಡೆ ಕೇಳದಂತೆ ವಿನ್ಯಾಸ ಮಾಡಲಾಗಿದೆ. ನೀವು ಶಾಂತ ಸ್ಥಳದಲ್ಲಿ ನಿದ್ರೆ ಮಾಡುತ್ತಿದ್ದೀರಿ ಎನ್ನುವುದನ್ನು ಇದು ಖಚಿತಪಡಿಸುತ್ತದೆ ಎಂದು ಕಂಪನಿ ತಿಳಿಸಿದೆ. ಇದು 20 ನಿಮಿಷಗಳ ನಿದ್ರೆಯ ಸಮಯವನ್ನು ಶಿಫಾರಸು ಮಾಡುತ್ತದೆ, ಏಕೆಂದರೆ 30 ನಿಮಿಷಗಳಿಗಿಂತ ಹೆಚ್ಚು ಸಮಯವು 'ರಾತ್ರಿಯಲ್ಲಿ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರಬಹುದು' ಎಂದು ಕಂಪನಿ ತಿಳಿಸಿದೆ.

ಟಾಟಾ ಕಂಪೆನಿಯ ಮೊದಲ ಮಹಿಳಾ ಉದ್ಯೋಗಿ ಕನ್ನಡತಿ, ಇಂದು ಕೋಟಿ ಸಾಮ್ರಾಜ್ಯಕ್ಕೆ ಒಡತಿ!

Follow Us:
Download App:
  • android
  • ios