Asianet Suvarna News Asianet Suvarna News

IT Sector Increments: ಐಟಿ ಉದ್ಯೋಗಿಗಳಿಗೆ ಈ ವರ್ಷ ಸ್ಯಾಲರಿ ಹೈಕ್‌ ಡೌಟು!


ಒಂದೆಡೆ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ದೇಶದ ಯುವ ಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳುತ್ತಿದ್ದರೆ, ಇನ್ನೊಂದೆಡೆ ದೇಶದ ಐಟಿ ವಲಯದ ಉದ್ಯೋಗಿಗಳಿಗೆ ಈ ವರ್ಷವೂ ಸಮಾಧಾನದ ಸ್ಯಾಲರಿ ಹೈಕ್‌ ಸಿಗುವುದು ಅನುಮಾನ ಎನ್ನುವ ವರದಿಗಳು ಬಂದಿವೆ.
 

IT sector increments Xpheno reports Top IT giants may cut salary hikes by half as slump hurts san
Author
First Published Oct 27, 2023, 10:12 PM IST | Last Updated Oct 27, 2023, 10:12 PM IST

ಬೆಂಗಳೂರು (ಅ.27): ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣಮೂರ್ತಿ ಇತ್ತೀಚೆಗೆ ನೀಡಿದ ಒಂದು ಹೇಳಿಕೆ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದರ ನಡುವೆ ದೇಶದ ಅಗ್ರ ಐಟಿ ಸಂಸ್ಥೆಗಳು ಈ ಬಾರಿಯ ಸಂಬಳ ಹೆಚ್ಚಳದಲ್ಲಿ ದೊಡ್ಡ ಮಟ್ಟದ ಕುಸಿತವನ್ನು ನಿರೀಕ್ಷೆ ಮಾಡಲಾಗಿದೆ. 245 ಬಿಲಿಯನ್‌  ಯುಎಸ್‌ ಡಾಲರ್‌ ಉದ್ಯಮವು ಈ ವರ್ಷ ಕೂಡ ದೊಡ್ಡ ಮಟ್ಟದ ಹಿನ್ನಡೆ ಕಂಡಿದೆ. ಜಾಗತಿಕ ಮಟ್ಟದಲ್ಲಿ ಐಟಿ ಉದ್ಯಮಕ್ಕೆ ಹಿನ್ನಡೆಯಾಗಿದ್ದು ಈವರೆಗೂ ಮುಂದುವರಿದಿದೆ. 2023ರ ಹಣಕಾಸು ವರ್ಷದಲ್ಲಿ ಉದ್ಯಮ ಹಿನ್ನಡೆ ಕಂಡಿದ್ದರೂ, ದೇಶದಲ್ಲಿ ಐಟಿ ಕಂಪನಿಗಳು ಶೇ. 12 ರಿಂದ 18ರವರೆಗಿನ ಸರಾಸರಿಯಲ್ಲಿ ಸ್ಯಾಲರಿ ಹೈಕ್‌ ನೀಡಿದ್ದವು. ಆದರೆ, ಈ ಬಾರಿಯ ಸ್ಯಾಲರಿ ಹೈಕ್‌ ಇಷ್ಟು ಪ್ರಮಾಣದಲ್ಲಿ ಇರುವ ಸಾಧ್ಯತೆ ಬಹಳ ಕಡಿಮೆ. ಎಕಾನಾಮಿಕ್‌ ಟೈಮ್ಸ್‌ ವರದಿಯ ಪ್ರಕಾರ ಈ ಬಾರಿ ಶೇ. 6 ರಿಂದ ಶೇ. 10ರವರೆಗೆ ಸ್ಯಾಲರಿ ಹೈಕ್‌ ಆಗಬಹುದು ಎಂದು ಅಂದಾಜಿಸಿದೆ.

ಪ್ರಸ್ತುತ ಇರುವಂಥವೇ ಸಮಸ್ಯೆಗಳು ಮುಂದುವರಿದಲ್ಲಿ ಹಾಗೂ ಜಾಗತಿಕ ಐಟಿ ಸಂಸ್ಥೆಗಳು ಖರ್ಚುಗಳು ಮತ್ತಷ್ಟು ಕುಸಿದಲ್ಲಿ, ಈ ಬಾರಿಯ ಉದ್ಯೋಗಿಗಳ ಸ್ಯಾಲರಿ ಹೈಕ್‌ ಪ್ರಮಾಣ ಸರಾಸರಿ ಶೇ. 6 ರಿಂದದ 10ರಷ್ಟು ಇರಲಿದೆ. ಆದರೆ, ಉತ್ತಮ ಉದ್ಯೋಗಿಗಳು ಮೇಲೆ ಕಂಪನಿಗಳು ಹೂಡಿಕೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದಲ್ಲಿ, ಕೆಲವು ಉದ್ಯೋಗಿಗಳಿಗೆ ಶೇ. 20ರವರೆಗೂ ಸ್ಯಾಲರಿ ಹೈಕ್‌ ಆಗಬಹುದು ಎಂದು ಬೆಂಗಳೂರು ಮೂಲದ ವಿಶೇಷ ಸಿಬ್ಬಂದಿ ಸಂಸ್ಥೆಯಾದ ಎಕ್ಸ್‌ಫೀನೋದ ಸಹ ಸಂಸ್ಥಾಪಕ ಕಮಲ್ ಕಾರಂತ್ ತಿಳಿಸಿದ್ದಾರೆ. ಇನ್ನು ವರ್ಷದಲ್ಲಿ ಸಾಧಾರಣ ಹಾಗೂ ಕಳಪೆ ನಿರ್ವಹಣೆ ತೋರಿರುವಂಥ ಉದ್ಯೋಗಿಗಳಿಗೆ ಶೇ 6 ರಿಂದ 10ರವರೆಗಿನ ಹೈಕ್‌ ನಿರೀಕ್ಷೆ ಮಾಡಬಹುದು ಎನ್ನಲಾಗಿದೆ. ಒಟ್ಟಾರೆಯಾಗಿ ಐಟಿ ಉದ್ಯಮದಲ್ಲಿ ಈ ಬಾರಿ ಸ್ಯಾಲರಿ ಹೈಕ್‌ ವಿಚಾರ ಆಶಾದಾಯಕವಾಗಿಲ್ಲ ಎಂದು ಕಾರಂತ್‌ ಹೇಳಿದ್ದಾರೆ.

ಜೂನ್‌ನಲ್ಲಿ ಬಿಡುಗಡೆಯಾದ ಟಿಸಿಎಸ್‌ ನ ವಾರ್ಷಿಕ ವರದಿಯ ಪ್ರಕಾರ, ದೇಶದ ಅತಿದೊಡ್ಡ ಐಟಿ ಸಂಸ್ಥೆಯಾದ ಟಿಸಿಎಸ್‌ನಲ್ಲಿ ಉದ್ಯೋಗಿಗಳ ಸರಾಸರಿ ವೇತನ ಹೆಚ್ಚಳವು ಒಂದೇ ಅಂಕಿಗೆ ಇಳಿದಿದೆ. 2023ರ ಹಣಕಾಸು ವರ್ಷದಲ್ಲಿ ಶೇ. 6% ರಿಂದ 9% ರ ವರೆಗೆ ಇಳಿದಿತ್ತು. ಹಿಂದಿನ ವರ್ಷದಲ್ಲಿ 10.5% ಹೆಚ್ಚಳವಾಗಿತ್ತು. ಅದರಲ್ಲೂ ಮ್ಯಾನೇಜರ್ ಹುದ್ದೆಗಳಿಗೆ ವೇತನ ಹೆಚ್ಚಳವು ಗಮನಾರ್ಹ ಇಳಿಕೆಯನ್ನು ಕಂಡಿದೆ, 2022ರ ಹಣಾಕಸು ವರ್ಷದಲ್ಲಿ ಶೇ.27.4 ರಿಂದ ಕಳೆದ ಆರ್ಥಿಕ ವರ್ಷದಲ್ಲಿ 13.6% ಕ್ಕೆ ಇಳಿದಿತ್ತು. Xpheno ದ ಮಾಹಿತಿಯು ಕಳೆದ ಮೂರು ವರ್ಷಗಳಲ್ಲಿ, ಪ್ರಮುಖ IT ಸೇವಾ ಕಂಪನಿಗಳು ಒಟ್ಟಾರೆಯಾಗಿ ಪರಿಹಾರ ವೆಚ್ಚವನ್ನು 64% ಹೆಚ್ಚಿಸಿವೆ, ಆದರೆ ಅವುಗಳ ಸಂಯೋಜಿತ ಆದಾಯವು 57% ಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಇನ್‌ಪುಟ್‌ಗಳ ವೆಚ್ಚವು ಉತ್ಪತ್ತಿಯಾಗುವ ಉತ್ಪಾದನೆಯನ್ನು ಗಮನಾರ್ಹವಾಗಿ ಮೀರಿಸುತ್ತದೆ ಎಂದು ಇದು ಸೂಚಿಸಿದೆ.

ಐಟಿ ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿದೆ: ಇನ್ಫೋಸಿಸ್‌ ನಾರಾಯಣ ಮೂರ್ತಿ!

ಜಾಗತಿಕ ನೇಮಕಾತಿ ಸಂಸ್ಥೆಯ ರಾಂಡ್‌ಸ್ಟಾಡ್ ಇಂಡಿಯಾದ ಎಂಡಿ ಮತ್ತು ಸಿಇಒ ವಿಶ್ವನಾಥ್ ಪಿಎಸ್, ಈ ಹಿಂದೆ, ಐಟಿಯು ಇತರ ಉದ್ಯಮಗಳಿಗೆ ಹೋಲಿಸಿದರೆ ದೊಡ್ಡ ಮಟ್ಟದಲ್ಲಿ ಸ್ಯಾಲರಿ ಹೈಕ್‌ ನೀಡುವ ವಿಶಿಷ್ಟ ವಲಯವಾಗಿತ್ತು. ಆದರೆ, ಈಗ ಅದೇ ರೀತಿ ಇರುವ ಲಕ್ಷಣ ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ. ವಿಶ್ವನಾಥ್ ಪ್ರಕಾರ, ಐಟಿ ವಲಯದಲ್ಲಿ ವೇತನ ಹೆಚ್ಚಳವು ಸರಿಸುಮಾರು 11-12% ರಿಂದ 10.8% ಕ್ಕೆ ಇಳಿದಿದೆ. ಮುಂದಿನ ವರ್ಷದ ಏಪ್ರಿಲ್ ವೇಳೆಗೆ ಐಟಿ ವಲಯವು ಮತ್ತೆ ತನ್ನ ಬಲವನ್ನು ಪಡೆದುಕೊಳ್ಳವ ಸಾಧ್ಯತೆ ಇದೆ ಎಂದು ಅಶಾಭಾವ ವ್ಯಕ್ತಪಡಿಸಿದ್ದಾರೆ.

 

ನಾನು ಸಿಕ್ಕಾಪಟ್ಟೆ ಮಾತಾಡ್ತೀನಿ ನಾರಾಯಣ ಮೂರ್ತಿ ಕೇಳ್ತಾ ಇರ್ತಾರಷ್ಟೇ, ಪತಿಯ ಬಗ್ಗೆ ಸುಧಾಮೂರ್ತಿ ಮಾತು ವೈರಲ್‌!

Latest Videos
Follow Us:
Download App:
  • android
  • ios