ಐಟಿ ನೌಕರರಿಗೆ ಯಾವಾಗಿಂದ ವರ್ಕ್ ಫ್ರಂ ಆಫೀಸ್ ಆರಂಭ?
ಐಟಿ ನೌಕರರಿಗೆ ಇನ್ನಷ್ಟು ದಿನ ವರ್ಕ್ ಫ್ರಂ ಹೋಂ| ಅಲ್ಪ ನೌಕರರಿಗಷ್ಟೇ ಕಂಪನಿಗಳ ಬುಲಾವ್| ಇನ್ನೂ ಕೆಲವು ತಿಂಗಳುಗಳ ಕಾಲ ಐಟಿ ಹಾಗೂ ಇತರ ಪ್ರಮುಖ ಕಂಪನಿಗಳಲ್ಲಿ ಶೇ.50 ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್
ಮುಂಬೈ/ ಬೆಂಗಳೂರು(ಮೇ.13): ಲಾಕ್‌ಡೌನ್ ನಿಯಮಗಳನ್ನು ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಫ್ಲಿಪ್‌ಕಾರ್ಟ್, ಪ್ಯಾನಸೋನಿಕ್, ಇಸ್ಫೋಸಿಸ್, ಟಿಸಿಎಸ್ ಸೇರಿದಂತೆ ಭಾರತದ ಹಲವು ಕಂಪನಿಗಳು ಉದ್ಯೋಗಿಗಳನ್ನು ಪುನಃ ಕಚೇರಿಗಳಿಗೆ ಕರೆಸಿಕೊಳ್ಳುತ್ತಿವೆ. ಆದರೆ, ಬಹುತೇಕ ಕಂಪನಿಗಳು ಸದ್ಯ ಮೂರನೇ ಒಂದರಷ್ಟುಉದ್ಯೋಗಿಗಳನ್ನು ಮಾತ್ರ ಕರೆಸಿಕೊಂಡಿದ್ದು, ಲಾಕ್‌ಡೌನ್ ಮುಗಿದ ಬಳಿಕ ಇನ್ನೂ ಕೆಲವು ತಿಂಗಳುಗಳ ಕಾಲ ಐಟಿ ಹಾಗೂ ಇತರ ಪ್ರಮುಖ ಕಂಪನಿಗಳಲ್ಲಿ ಶೇ.50 ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅನ್ನು ಕಡ್ಡಾಯಗೊಳಿಸುವ ಸಾಧ್ಯತೆ ಇದೆ.
ಸಂಬಳ ಕಟ್ ಆಯ್ತಾ? ಬದುಕುವುದು ಹೇಗೆ?
ದೇಶದ ಐಟಿ ದಿಗ್ಗಜ ಕಂಪನಿಗಳಲ್ಲಿ ಒಂದಾದ ಇಸ್ಫೋಸಿಸ್ ಕಂಪನಿಯು ಬೆಂಗಳೂರು, ಮಂಗಳೂರು, ಮೈಸೂರು, ತಿರುವನಂತಪುರಂ, ಪುಣೆ ಮತ್ತು ಹೈದರಾಬಾದ್‌ಗಳಲ್ಲಿನ ಕ್ಯಾಂಪಸ್‌ಗಳಲ್ಲಿ ಕಳೆದ ವಾರದಿಂದ ಶೇ.5ರಷ್ಟುಸಿಬ್ಬಂದಿ ಬಲದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಮುಂದಿನ ಹಂತದಲ್ಲಿ ಸಿಬ್ಬಂದಿ ಬಲವನ್ನು ಶೇ.20ಕ್ಕೆ ಹಾಗೂ ಬಳಿಕ ಸಿಬ್ಬಂದಿ ಬಲವನ್ನು ಶೇ.40ಕ್ಕೆ ಏರಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ಪ್ರಕ್ರಿಯೆಗೆ 4 ರಿಂದ 6 ತಿಂಗಳು ಬೇಕಾಗಬಹುದು ಎಂದು ಇಸ್ಫೋಸಿಸ್ ಸಿಒಒ ಯುಬಿ ಪ್ರವೀಣ್ ರಾವ್ ಹೇಳಿದ್ದಾರೆ.
ಇನ್ನು ಟಿಸಿಎಸ್ ಸದ್ಯ ಶೇ.1ರಷ್ಟುಸಿಬ್ಬಂದಿ ಬಲದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಹಂತ ಹಂತವಾಗಿ ಸಿಬ್ಬಂದಿ ಬಲವನ್ನು ಏರಿಸಲು ಉದ್ದೇಶಿಸಿದೆ. ಅದೇ ರೀತಿ ಎಚ್‌ಸಿಎಲ್ ಮುಂದಿನ 12 ರಿಂದ 18 ತಿಂಗಳ ವರೆಗೂ ಶೇ.50ರಷ್ಟುಸಿಬ್ಬಂದಿ ಮನೆಯಿಂದಲೇ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಕಟಿಸಿದೆ.
ಜಿಯೋ ವರ್ಕ್ ಫ್ರಂ ಹೋಂ ಧಮಾಕಾ; ವರ್ಷವಿಡಿ ಎಂಜಾಯ್ ಮಾಡಿ
ಇನ್ನು ಉತ್ಪಾದನಾ ವಲಯದ ಟಾಟಾ ಸ್ಟೀಲ್, ದಾಲ್ಮಿಯಾ ಭಾರತ್ ಗ್ರೂಪ್ ಶೇ.30ರಷ್ಟುಸಿಬ್ಬಂದಿ ಬಲದೊಂಗಿದೆ ಫ್ಯಾಕ್ಟರಿಗಳಲ್ಲಿ ಕೆಲಸ ಕಾರ್ಯಗಳನ್ನು ಆರಂಭಿಸಿದೆ.