ಸಂಬಳ ಕಟ್ ಆಯ್ತಾ? ಬದುಕುವುದು ಹೇಗೆ?
ಕೊರೋನಾ ವೈರಸ್ ತಂದಿಟ್ಟ ಲಾಕ್‌ಡೌನ್‌ನಿಂದಾಗಿ ಇಂಡಸ್ಟ್ರಿಗಳು ಬಾಗಿಲು ಹಾಕಿವೆ. ಕಾರ್ಪೊರೇಟ್ ಸಂಸ್ಥೆಗಳು ನಷ್ಟ ಮಾಡಿಕೊಂಡಿವೆ. ಇಂಥ ಸಂದರ್ಭದಲ್ಲಿ ಇವು ಉದ್ಯೋಗಿಗಳ ಸಂಬಳದಲ್ಲಿ ಕಡಿತ ಮಾಡುವುದು ಸಹಜ. ಇಂಥ ಸಂದರ್ಭದಲ್ಲಿ ಬದುಕು ಕಷ್ಟವಾಗಿಬಿಡುತ್ತದೆ.
ಕೊರೋನಾ ವೈರಸ್ ತಂದಿಟ್ಟ ಲಾಕ್‌ಡೌನ್‌ನಿಂದಾಗಿ ಇಂಡಸ್ಟ್ರಿಗಳು ಬಾಗಿಲು ಹಾಕಿವೆ. ಕಾರ್ಪೊರೇಟ್ ಸಂಸ್ಥೆಗಳು ನಷ್ಟ ಮಾಡಿಕೊಂಡಿವೆ. ಇಂಥ ಸಂದರ್ಭದಲ್ಲಿ ಇವು ಉದ್ಯೋಗಿಗಳ ಸಂಬಳದಲ್ಲಿ ಕಡಿತ ಮಾಡುವುದು ಸಹಜ. ಇಂಥ ಸಂದರ್ಭದಲ್ಲಿ ಬದುಕು ಕಷ್ಟವಾಗಿಬಿಡುತ್ತದೆ. ಯಾಕೆಂದರೆ ನಮ್ಮ ಸಂಬಳವನ್ನು ಅನುಸರಿಸಿ ನಮ್ಮ ಕುಟುಂಬದ ಖರ್ಚುವೆಚ್ಚಗಳು ನಡೆಯುತ್ತಿರುತ್ತವೆ. ಅವುಗಳಲ್ಲಿ ಕೆಲವನ್ನಾದರೂ ಕಡಿತ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಕೆಲವು ಬಯಕೆಗಳನ್ನೇ ಹತ್ತಿಕ್ಕಿಕೊಳ್ಳಬೇಕಾದೀತು. ಹಾಗಿದ್ದರೆ, ಹೇಗೆ ಇಂಥ ಸಂದರ್ಭದಲ್ಲಿ ಜೀವನ ಮಾಡುವುದು?
ವೋಲ್ವೋ ಕಂಪನಿಯಲ್ಲಿ ಕೆಲಸ ಕಡಿತ
- ಸಂಬಳ ಎಷ್ಟು ಕಡಿತವಾಯಿತೋ, ಅದಕ್ಕೆ ತಕ್ಕಂತೆ ನಮ್ಮ ಖರ್ಚುವೆಚ್ಚಗಳನ್ನೂ ಕಡಿತ ಮಾಡುವ ಬಗೆಯಲ್ಲಿ ಒಂದು ಬಜೆಟ್ ತಯಾರಿಸಬೇಕು. ಉದಾಹರಣೆಗೆ, ಸಂಬಳ ೩೦ ಶೇಕಡಾ ಕಡಿತವಾಯಿತು ಎಂದಿಟ್ಟುಕೊಳ್ಳಿ. ಆಗ ಖರ್ಚುವೆಚ್ಚವನ್ನೂ ಶೇಕಡಾ ೩೦ರಷ್ಟು ಕಡಿಮೆ ಮಾಡುವುದು ಅನಿವಾರ್ಯ ಆಗುತ್ತದೆ. ಅದಕ್ಕೆ ತಕ್ಕಂತೆ ಪ್ರತ್ಯೇಕ ಬಜೆಟ್ ತಯಾರಿಸಿಕೊಳ್ಳಿ.
- ಹೆಚ್ಚಿನ ಹಣ ಮನೆ ಬಾಡಿಗೆಗೆ ಹೋಗುತ್ತದೆ. ನಿಮ್ಮ ಮತ್ತು ಮಾಲಿಕರ ಸಂಬಂಧ ಉತ್ತಮವಾಗಿದ್ದರೆ, ಬಾಡಿಗೆ ಹಣದಲ್ಲಿ ತುಡು ಕಡಿತ ಮಾಡಬಹುದೇ ಅಥವಾ ಈ ವರ್ಷದ ಬಾಡಿಗೆ ಹೆಚ್ಚಳ ಬಿಡಬಹುದೇ ಎಂದು ವಿಚಾರಿಸಿ. ಸ್ವಂತ ಮನೆ ಇದ್ದು, ಲೋನ್ ಕಟ್ಟುವವರಾಗಿದ್ದರೆ, ಬೇಕಿದ್ದರೆ ಮೊರಾಟೋರಿಯಮ್ ಅನ್ನು ಪಡೆದುಕೊಳ್ಳಬಹುದು. ಅಥವಾ ಪ್ರೀಮಿಯಂ ಮೊಬಲಗಿನಲ್ಲಿ ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಸಾದ್ಯವೇ ಎಂಬುದನ್ನು ಬ್ಯಾಂಕ್‌ನವರ ಜೊತೆ ಚರ್ಚಿಸಬೇಕು.
- ವಾರಕ್ಕೊಮ್ಮೆ ಕುಟುಂಬ ಸಮೇತ ಹೋಟೆಲ್‌ಗೆ ಹೋಗಿ ಊಟ ಮಾಡಿ ಬರುವವರಾಗಿದ್ದರೆ ಅದನ್ನು ತಿಂಗಳಿಗೊಮ್ಮೆ ಮುಂದೂಡಿ. ಅಥವಾ ಕೈಬಿಟ್ಟರೂ ಓಕೆ. ಇನ್ನು ಬೇಕರಿ ಸಾಮಗ್ರಿಗಳಿಗೆ ಹೆಚ್ಚಿನ ಹಣ ಖರ್ಚಾಗುತ್ತದೆ. ಇದರಲ್ಲಿ ಅನಿವಾರ್ಯ ಆಹಾರ ಎಷ್ಟು. ಬಾಯಿಚಪಲಕ್ಕೆ ತಿನ್ನುವುದು ಎಷ್ಟು. ಇದು ನಿಜಕ್ಕೂ ಅಗತ್ಯವಾ, ಇದು ಆರೋಗ್ಯಕ್ಕೆ ಒಳ್ಳೆಯದಾ ಅಥವಾ ಹಾಳಾ- ಹೀಗೆಲ್ಲ ನೀವೇ ಪ್ರಶ್ನಿಸಿಕೊಂಡರೆ ಅನಗತ್ಯ ಖರ್ಚು ಮಾಡುವುದು ತಪ್ಪುತ್ತದೆ.
- ಮನೆಗೆ ಒಂದೂವರೆ ಲೀಟರ್ ಹಾಲು ತರಿಸುತ್ತಿದ್ದರೆ, ಒಂದು ಲೀಟರ್‌ನಲ್ಲೇ ನಿಭಾಯಿಸಬಹುದಾ ನೋಡಿ. ಪ್ರತಿತಿಂಗಳೂ ತರುವ ದಿನಸಿ ಸಾಮಗ್ರಿಯಲ್ಲಿ ಕಡಿಮೆ ಮಾಡಿಕೊಳ್ಳಲು ಸಾಧ್ಯವೇ ಯೋಚಿಸಿ.
- ವರ್ಷಕ್ಕೊಮ್ಮೆ ಕುಲು ಮನಾಲಿ ಅಂತ ದೂರದ ಹಿಲ್‌ಸ್ಟೇಶನ್‌ಗಳಿಗೆ ಟ್ರಾವೆಲ್ ಮಾಡುವವರು ಈ ವರ್ಷ ಅದರ ಆಸೆ ಕೈಬಿಡುವುದು ಒಳ್ಳೆಯದು. ವಿದೇಶ ಪ್ರಯಾಣದ ಆಸೆ ಇದ್ದರೆ ಅದನ್ನು ಬಿಟ್ಟುಬಿಡಿ. ಸದ್ಯ ಯಾವ ವಿದೇಶ ಪ್ರಯಾಣ ಮಾತ್ರವಲ್ಲ, ದೇಶದೊಳಗಿನ ಪ್ರವಾಸವೂ ಕಷ್ಟದಾಯಕವಾಗಲಿದೆ. ವಿಮಾನ, ರೈಲು, ಬಸ್ಸುಗಳಲ್ಲಿ ಸೋಶಿಯಲ್ ಡಿಸ್ಟೆನ್ಸ್ ಇರುವುದರಿಂದ ಪ್ರಯಾಣ ದರಗಳೂ ದುಪ್ಪಟ್ಟು ಆಗಲಿವೆ.
ಇನ್ನು ಸಂದರ್ಶನದಲ್ಲಿ ಕೇಳೋ ಪ್ರಶ್ನೆ, ವರ್ಕ್ ಫ್ರಮ್ ಹೋಮ್ ಹೇಗ್ ಮಾಡ್ತೀರಾ?...
- ವಾರಕ್ಕೊಮ್ಮೆ ಮಲ್ಪಿಪ್ಲೆಕ್ಸ್‌ಗೆ ಹೋಗಿ ಸಿನಿಮಾ ನೋಡಿ ಬರುವವರಾಗಿದ್ದರೆ ಅದನ್ನು ತಿಂಗಳಿಗೊಮ್ಮೆ ಮುಂದೆ ಹಾಕುವುದು ಒಳ್ಳೆಯದು. ಅಥವಾ ಮನೆಯಲ್ಲೇ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್‌ನಂಥ ಒಟಿಟಿಗಳಲ್ಲಿ ಸಿನಿಮಾ ನೋಡುವ ಹವ್ಯಾಸ ರೂಢಿಸಿಕೊಳ್ಳಿ.
- ಇಂಟರ್‌ನೆಟ್ ಬಳಕೆ, ಮೊಬೈಲ್ ಕರೆನ್ಸಿಯ ಮೇಲೆ ಹಿಡಿತ ಇರಲಿ. ಅದರ ಬಳಕೆಯ, ಅದರ ವೇಗ, ತಿಂಗಳಿಗೊಮ್ಮೆ ಎಷ್ಟು ಸಲ ಕರೆನ್ಸಿ ಹಾಕಿಸುತ್ತೀರಿ, ಒಟಿಟಿ ಫ್ಲಾಟ್‌ಫಾರಂಗಳು ಸಬ್‌ಸ್ಕ್ರಿಪ್ಷನ್ ಎಷ್ಟು, ಅದರಲ್ಲಿ ಕಡಿತ ಸಾಧ್ಯವಾ- ಇದೆಲ್ಲ ಗಮನಿಸಿ.
ಲಾಕ್ ಡೌನ್ ಮುಗಿದ ನಂತ್ರ ನೌಕರರ ಮನಸ್ಥಿತಿ ಹೇಗಿರುತ್ತೆ?
- ಸಿಗರೇಟ್, ಮದ್ಯ ಇಂಥ ಚಟಗಳಿಗೆ ಹೆಚ್ಚು ಹಣ ಸುರಿಯಬೇಡಿ, ಅವು ಆರೋಗ್ಯಕ್ಕೂ ಒಳ್ಳೆಯದಲ್ಲ, ಜೇಬಿಗೂ ಕನ್ನ. ಕುಟುಂಬದ ಆರೋಗ್ಯಕ್ಕೂ ನಷ್ಟ.
- ಮೆಡಿಕಲ್ ಖರ್ಚುಗಳನ್ನು ತಪ್ಪಿಸಿಕೊಳ್ಳಿ. ಜಂಕ್ ಫುಡ್ ಸೇವಿಸುವುದಕ್ಕಿಂತಲೂ ಮನೆಯಲ್ಲೇ ಮಾಡಿದ ಆರೋಗ್ಯಕರ ಬಿಸಿಬಿಸಿ ಆಹಾರ, ಕಷಾಯ ಸೇವಿಸಿ. ಕುಟುಂಬದ ಜೊತೆ ಕುಳಿತು ಒಟ್ಟಾಗಿ ಊಟ ಮಾಡಿ. ಆಟವಾಡಿ, ನಕ್ಕು ಸಂತೋಷವಾಗಿರಿ, ಇದರಿಂದ ಒತ್ತಡಗಳಿಂದ ಬರುವ ಯಾವುದೇ ಕಾಯಿಲೆ ಬರುವುದಿಲ್ಲ.