ಯುವ ಉದ್ಯೋಗಿಗಳಿಗೆ ಮೂನ್‌ಲೈಟ್ ಮಾಡದಂತೆ  ಇನ್ಫೋಸಿಸ್ ಸಂಸ್ಥಾಪಕ ಎನ್‌ ಆರ್ ನಾರಾಯಣ ಮೂರ್ತಿ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ (ಫೆ.25): ಇನ್ಫೋಸಿಸ್ ಸಂಸ್ಥಾಪಕ ಎನ್‌ ಆರ್ ನಾರಾಯಣ ಮೂರ್ತಿ ಅವರು ಶುಕ್ರವಾರ ಯುವ ಉದ್ಯೋಗಿಗಳಿಗೆ ಮೂನ್‌ಲೈಟ್ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ 'ವರ್ಕ್ ಫ್ರಮ್ ಹೋಮ್' ಮಾಡಬೇಡಿ ಎಂದು ಸೂಚಿಸಿದ್ದಾರೆ. ದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಯೋಜಿಸಿದ್ದ ಏಷ್ಯಾ ಆರ್ಥಿಕ ಸಂವಾದದಲ್ಲಿ ಮಾತನಾಡಿದ ನಾರಾಯಣ ಮೂರ್ತಿ , ಯುವ ಉದ್ಯೋಗಿಗಳಿಗೆ ಕಚೇರಿಯಿಂದ ಕೆಲಸ ಮಾಡುವುದನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಯುವ ಉದ್ಯೋಗಿಗಳಿಗೆ ಬಲವಾದ ಸಂದೇಶವನ್ನು ನೀಡಿದ ನಾರಾಯಣ ಮೂರ್ತಿ, ಯುವಕರು ಮನೆಯಿಂದ ಕೆಲಸ ಮಾಡುವುದನ್ನು ತೊಡಗಿಸಿಕೊಳ್ಳಬಾರದು. ಮನೆಯಿಂದ ಕೆಲಸ ಮಾಡುವ ಸಂಸ್ಕೃತಿಯನ್ನು ಆನಂದಿಸಬಾರದು ಎಂದು ಹೇಳಿದರು. ಯುವ ಪೀಳಿಗೆಗೆ ನೈತಿಕತೆಯನ್ನು ತಿಳಿದು ಸೋಮಾರಿತನಕ್ಕೆ ಗಮನ ಕೊಡಬಾರದು . ಮೂನ್‌ಲೈಟಿಂಗ್ ಅಥವಾ ವರ್ಕ್ ಫ್ರಮ್‌ ಹೋಮ್‌ನಂತಹ ಸಂಸ್ಕೃತಿಗೆ ಯುವ ಪೀಳಿಗೆ ದಾಸರಾಗಬಾರದು. ನಾನು ವಾರದಲ್ಲಿ ಮೂರು ಬಾರಿ ಮಾತ್ರ ಆಫೀಸ್‌ಗೆ ಬರುತ್ತೇನೆ, ಉಳಿದ ದಿನ ವರ್ಕ್ ಫ್ರಮ್ ಹೋಮ್ ಮಾಡುತ್ತೇನೆ ಎಂದು ಕೂಡಾ ಹೇಳಬಾರದು. 

ವಿಶೇಷವೆಂದರೆ ಇನ್ಫೋಸಿಸ್ ಮೊದಲಿನಿಂದಲೂ ಮೂನ್ ಲೈಟಿಂಗ್ ಸಂಸ್ಕೃತಿಯನ್ನು ವಿರೋಧಿಸುತ್ತಾ ಬಂದಿದೆ ಮತ್ತು ಮೂನ್ ಲೈಟಿಂಗ್ ಅಭ್ಯಾಸಕ್ಕಾಗಿ ಹಲವಾರು ಉದ್ಯೋಗಿಗಳನ್ನು ತನ್ನ ಸಂಸ್ಥೆಯಿಂದ ವಜಾ ಮಾಡಿದೆ. ಐಟಿ ಸಂಸ್ಥೆಯು ಇತ್ತೀಚೆಗೆ ಹೆಚ್ಚುವರಿ ಹಣವನ್ನು ಗಳಿಸಲು ಬಯಸುವ ಉದ್ಯೋಗಿಗಳಿಗೆ ವಿಷಯಗಳನ್ನು ಸುಲಭಗೊಳಿಸಲು ಕ್ರಮಗಳನ್ನು ಘೋಷಿಸಿದೆ. ಫ್ರೀಲ್ಯಾನ್ಸಿಂಗ್ ನ ಭಾಗವಾಗುವ ಮೊದಲು ಉದ್ಯೋಗಿಗಳು ಸಂಸ್ಥೆಯ ಅನುಮತಿಯನ್ನು ತೆಗೆದುಕೊಳ್ಳಬೇಕೆಂದು ಇನ್ಫೋಸಿಸ್ ಬಯಸುತ್ತದೆ.

ಭಾರತಕ್ಕೆ ಪ್ರಾಮಾಣಿಕತೆಯ ಸಂಸ್ಕೃತಿ ಬೇಕು, ಅಲ್ಲಿ ಯಾವುದೇ ಪಕ್ಷಪಾತವಿಲ್ಲ ಮತ್ತು ದೇಶವು ಅಭಿವೃದ್ಧಿ ಹೊಂದಲು ತ್ವರಿತ ನಿರ್ಧಾರ ಮತ್ತು ಜಗಳ-ಕಡಿಮೆ ವಹಿವಾಟುಗಳ ಅಗತ್ಯವಿದೆ . ತ್ವರಿತ ನಿರ್ಧಾರ ತೆಗೆದುಕೊಳ್ಳುವ, ತ್ವರಿತ ಅನುಷ್ಠಾನ, ಜಗಳ ಕಡಿಮೆ ವಹಿವಾಟು, ವಹಿವಾಟುಗಳಲ್ಲಿ ಪ್ರಾಮಾಣಿಕತೆ, ಒಲವು ಇಲ್ಲದ ಸಂಸ್ಕೃತಿಯನ್ನು ನಾವು ನಿರ್ಮಿಸಬೇಕಾಗಿದೆ ಎಂದು ಅವರು ಹೇಳಿದರು.

BMRCL Recruitment 2023: ಬೆಂಗಳೂರು ಮೆಟ್ರೋದಲ್ಲಿ ಕೆಲಸ ಖಾಲಿ ಇದೆ, 1,40,000 ರೂ ವೆರೆಗೂ

ದೇಶದಲ್ಲಿ ಕಷ್ಟಪಟ್ಟು ದುಡಿಯುವ, ಪ್ರಾಮಾಣಿಕ ಮತ್ತು ಉತ್ತಮ ಕೆಲಸದ ನೀತಿ ಮತ್ತು ಶಿಸ್ತನ್ನು ಹೊಂದಿರುವುದು ಒಂದು ಸಣ್ಣ ಗುಂಪು ಮಾತ್ರ. ನಾವು ಶೀಘ್ರ ನಿರ್ಧಾರ ಕೈಗೊಳ್ಳುವಂತಾಗಬೇಕು, ಶೀಘ್ರ ಜಾರಿ ಕೂಡಾ ಮಾಡುವಂತಾಗಬೇಕು, ಯಾವುದೇ ಫೇವರಿಟಿಸಮ್ ಇರಬಾರದು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್‌ ಆರ್ ನಾರಾಯಣ ಮೂರ್ತಿ ಅಭಿಪ್ರಾಯಪಟ್ಟರು.

INDIAN ARMY: ಸೈನಿಕರಾಗಲು ಆನ್‌ಲೈನ್‌ ಸಿಇಟಿ : ನೇಮಕಾತಿ ವೇಳೆ ಮೊಬೈಲ್‌ನಲ್ಲಿಯೂ ಪರೀಕ್ಷೆಗೆ ಅವಕಾಶ

ಮೂನ್‌ಲೈಟಿಂಗ್‌ ಎಂದರೇನು?
ಒಂದು ಕಂಪನಿಯಲ್ಲಿ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿರುವಾಗಲೇ, ಹೆಚ್ಚುವರಿಯಾಗಿ ಇನ್ನೊಂದು ಉದ್ಯೋಗವನ್ನು ಯಾರಿಗೂ ತಿಳಿಯದಂತೆ ಮಾಡುವುದು. ಉದ್ಯೋಗಿಗಳು ಈ ರೀತಿ ಮಾಡುವಾಗ ಉದ್ಯೋಗದಾತ ಕಂಪನಿಯ ಗಮನಕ್ಕೆ ಬರದಂತೆ ಸಂಬಾಳಿಸಿರುತ್ತಾನೆ. ಈ ಪ್ರವೃತ್ತಿಯನ್ನೇ ಮೂನ್‌ಲೈಟಿಂಗ್‌ ಎನ್ನುತ್ತಾರೆ. ಇದನ್ನೇ ಸಾಮಾನ್ಯರ ಭಾಷೆಯಲ್ಲಿ ಉಪಕಸುಬು, ಸೈಡ್‌ ಜಾಬ್‌, ಸೈಡ್‌ ಇನ್‌ಕಂ ಕೊಡುವ ಅರೆಕಾಲಿಕ ಉದ್ಯೋಗ ಎನ್ನುತ್ತಾರೆ. ಇದನ್ನು ಸಾಮಾನ್ಯವಾಗಿ ರಾತ್ರಿ ವೇಳೆಯೋ ಅಥವಾ ವಾರದ ಕೊನೆಯ ದಿನಗಳಲ್ಲೋ ಮಾಡುತ್ತಾರೆ. ಮೂನ್‌ಲೈಟಿಂಗ್‌ ಪದ ಬಳಕೆ ಅಮೆರಿಕನ್ನರ ನಡುವೆ ಚಾಲ್ತಿಯಲ್ಲಿದೆ. ಅಲ್ಲಿ ಅವರು ಬೆಳಗ್ಗೆ 9ರಿಂದ ಸಂಜೆ 5ರ ತನಕ ಕೆಲಸ ಮಾಡಿದ ಬಳಿಕ ಪೂರಕ ಆದಾಯಕ್ಕಾಗಿ ಹೊರಗಿನ ಕೆಲಸ ಮಾಡುತ್ತಾರೆ. ಹೀಗಾಗಿ ಮೂನ್‌ಲೈಟಿಂಗ್‌ ಪದ ಬಳಕೆಗೆ ಬಂತು.