BMRCL Recruitment 2023: ಬೆಂಗಳೂರು ಮೆಟ್ರೋದಲ್ಲಿ ಕೆಲಸ ಖಾಲಿ ಇದೆ, 1,40,000 ರೂ ವೆರೆಗೂ ವೇತನ
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ( BMRCL) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 14 ಕೊನೆಯ ದಿನವಾಗಿದೆ.
ಬೆಂಗಳೂರು (ಫೆ.20): ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ( BMRCL) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. MRCL ನೇಮಕಾತಿ ಅಧಿಸೂಚನೆಯ ಪ್ರಕಾರ, ಎಇ, ಇನ್‌ಸ್ಪೆಕ್ಟರ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮತ್ತು ಚೀಫ್ ಇಂಜಿನಿಯರ್ ಹುದ್ದೆಗಳು ಹೀಗೆ ಒಟ್ಟು 10 ಖಾಲಿ ಹುದ್ದೆಗಳಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 1,40,000 ರೂ ವೆರೆಗೂ ವೇತನ ದೊರೆಯಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 14, ಕೊನೆಯ ದಿನವಾಗಿದೆ. ಬೆಂಗಳೂರು ಮೆಟ್ರೋ ನಿಗಮದ ಅಧಿಕೃತ ವೆಬ್ಸೈಟ್ https://kannada.bmrc.co.in/#/ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು 10 ಹುದ್ದೆಗಳ ಮಾಹಿತಿ ಇಂತಿದೆ
ಅಗ್ನಿಶಾಮಕ ನಿರೀಕ್ಷಕ 4 ಹುದ್ದೆಗಳು
ಡೈ. ಮುಖ್ಯ ಇಂಜಿನಿಯರ್ (ಸುರಕ್ಷತೆ) 1 ಹುದ್ದೆಗಳು
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಸುರಕ್ಷತೆ ಮತ್ತು ಆರೋಗ್ಯ) 2 ಹುದ್ದೆಗಳು
ಸಹಾಯಕ ಇಂಜಿನಿಯರ್ (ಸುರಕ್ಷತೆ ಮತ್ತು ಆರೋಗ್ಯ) 3 ಹುದ್ದೆಗಳು
ಶೈಕ್ಷಣಿಕ ಅರ್ಹತೆ: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ B.E, B.Tech, ಡಿಪ್ಲೊಮಾ ವಿದ್ಯಾರ್ಹತೆ ಪಡೆದಿರಬೇಕು.
ವಯೋಮಿತಿ: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಗರಿಷ್ಠ 55 ವರ್ಷದೊಳಗೆ ಇರಬೇಕು.
ಆಯ್ಕೆ ಪ್ರಕ್ರಿಯೆ: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ ವಿವರ: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ಮಾಸಿಕ 50,000 ದಿಂದ 140000 ವರೆಗೂ ವೇತನ ದೊರೆಯಲಿದೆ.
ಬೆಂಗಳೂರು ವಲಯದ 19 ರೈಲ್ವೆ ನಿಲ್ದಾಣಗಳಿಗೆ ಅಭಿವೃದ್ಧಿ ಭಾಗ್ಯ:
ಬೆಂಗಳೂರು ವಿಭಾಗದ 19 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ನೈಋುತ್ಯ ರೈಲ್ವೆ ವಲಯ ಮುಂದಾಗಿದ್ದು, ಶೀಘ್ರವೇ ನಿಲ್ದಾಣಗಳು ಮೂಲಸೌಲಭ್ಯ ಪಡೆಯುವ ಸಾಧ್ಯತೆ ಇದೆ.
ನಕಲಿ ಸರ್ಕಾರಿ ಕಚೇರಿ ತೆರೆದು ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂ. ವಂಚನೆ..!
‘ಅಮೃತ್ ಭಾರತ್’ ಯೋಜನೆಯಡಿ ಒಟ್ಟಾರೆ 52 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ವಲಯವು ತೀರ್ಮಾನಿಸಿದೆ. ಈಗಾಗಲೇ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿಗಳು ಆರಂಭವಾಗಿವೆ. ಜತೆಗೆ ‘ಗತಿ ಶಕ್ತಿ ಯೋಜನೆ’ಯಡಿ ದಂಡು ರೈಲ್ವೆ ನಿಲ್ದಾಣದ ಪ್ರಾಂಗಣ ಹಾಗೂ ಹೆಚ್ಚುವರಿ ಹಳಿಗಳ ಅಳವಡಿಸುವ ಕಾರ‍್ಯ ನಡೆಯುತ್ತಿದೆ.
ದಿನಕ್ಕೆ 36 ಸಾವಿರ ಸಂಬಳ... ಆದರೂ ಈ ಕೆಲ್ಸ ಮಾಡೋಕೆ ಜನ ಇಲ್ಲ.!
ಕಳೆದ ಬಜೆಟ್‌ನಲ್ಲಿ ಮರುನಿರ್ಮಾಣ, ನವೀಕರಣಗೊಳಿಸುವ ಬಗ್ಗೆ ತಿಳಿಸಿತ್ತಾದರೂ ಎಷ್ಟು ಮೊತ್ತ ಮೀಸಲಿಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿರಲ್ಲ. ಪ್ರಯಾಣಿಕ ಸ್ನೇಹಿಯಾಗಿ ಈ ನಿಲ್ದಾಣಗಳನ್ನು ಮರು ನಿರ್ಮಾಣ, ನವೀಕರಣ ಮಾಡಲಾಗುತ್ತಿದೆ. ಕುಡಿಯುವ ನೀರು, ಶೌಚಾಲಯ, ಅಂಗವಿಕಲರಿಗೆ ಅನುಕೂಲವಾಗುವಂತೆ ರಾರಯಂಪ್ ರೂಪಿಸಲಾಗುತ್ತಿದೆ. ಜತೆಗೆ ಲಿಫ್‌್ಟ, ಎಸ್ಕಲೇಟರ್ಸ್ ಅಳವಡಿಸಲಾಗುವುದು. ಎಸಿ ಕೋಚ್, ನಾನ್ ಎಸಿ ಕೋಚ್ ಎಲ್ಲಿ ನಿಲುಗಡೆಯಾಗಲಿವೆ? ಪ್ಲಾಟ್‌ಫಾರಂ ನಂಬರ್, ಅಪ್ಪರ್‌ಕ್ಲಾಸ್, ಸೆಕೆಂಡ್ ಕ್ಲಾಸ್ ವಿಶ್ರಾಂತಿ ಕೊಠಡಿ ಎಲ್ಲಿದೆ ಎಂಬುದರ ಬಗ್ಗೆ ಮಾಹಿತಿ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.