#ExcelCourse ಮಾಡಿ ಉದ್ಯೋಗಾವಕಾಶ ಹೆಚ್ಚಿಸಿಕೊಳ್ಳಿ

ಕಂಪ್ಯೂಟರ್ ಬಳಸುವ ಬಹುತೇಕ ಉದ್ಯೋಗಗಳಲ್ಲಿ ಎಕ್ಸೆಲ್ ಬಳಕೆ ಇರುತ್ತದೆ. ಹಾಗಾಗಿ, ಎಕ್ಸೆಲ್ ಬಗ್ಗೆ ಚೆನ್ನಾಗಿ ತಿಳಿದಿದ್ದರೆ ಅದು ನಿಮ್ಮ ರೆಸ್ಯೂಮೆಗೆ ಪ್ಲಸ್ ಪಾಯಿಂಟ್ ಆಗುತ್ತದೆ. ಆನ್‌ಲೈನ್‌ನಲ್ಲಿ ಎಕ್ಸೆಲ್ ಕುರಿತ ಹಲವಾರು ಕೋರ್ಸ್ ಮಾಡಿಕೊಳ್ಳುವ ಅವಕಾಶಗಳಿವೆ.

How taking an online Excel course can benefit you

ಮೈಕ್ರೋಸಾಫ್ಟ್ ಎಕ್ಸೆಲ್ ಬಹಳ ಜನಪ್ರಿಯ ಸ್ಪ್ರೆಡ್‌ಶೀಟ್ ಪ್ರೋಗ್ರಾಂ. ಸಾಮಾನ್ಯವಾಗಿ ಬಿಸ್ನೆಸ್‌ಗಳಲ್ಲಿ ಖರ್ಚು, ಆದಾಯದ ಲೆಕ್ಕವಿಡಲು ಇದನ್ನು ಬಳಸುತ್ತಾರೆ. ಚಾರ್ಟ್‌ಗಳನ್ನು ಮಾಡಲು, ಮಾಹಿತಿಗಳನ್ನು ಜೋಡಿಸಿಡಲು, ಟೇಬಲ್ ತಯಾರಿಸಲು, ಲೆಕ್ಕ ಹಾಗೂ ಸ್ಟ್ಯಾಟಿ‌ಸ್ಟಿಕ್ಸ್ ಸಮಸ್ಯೆಗಳನ್ನು ಬಿಡಿಸಲು ಕೂಡಾ ಅನೇಕರು ಮೈಕ್ರೋಸಾಫ್ಟ್ ಎಕ್ಸೆಲ್‌ನ ಪ್ರಯೋಜನ ಪಡೆದುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಎಕ್ಸೆಲ್ ಗೊತ್ತಿದೆ ಎಂಬುದು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಯ ಪ್ಲಸ್ ಪಾಯಿಂಟ್ ಆಗುತ್ತದೆ, ಅಷ್ಟೇ ಅಲ್ಲ, ಕೆಲವೊಮ್ಮೆ ಅತ್ಯಗತ್ಯ ಕೂಡಾ ಆಗಿರುತ್ತದೆ. 

ಎಕ್ಸೆಲನ್ನು ನೀವು ಈವರೆಗೂ ಬಳಕೆ ಮಾಡದಿದ್ದರೆ ಅಯ್ಯೋ ಈ ಬಗ್ಗೆ ಗೊತ್ತಿಲ್ಲವಲ್ಲ ಎಂದು ಟೆನ್ಷನ್ ಆಗುವುದು ಬೇಡ. ಎಕ್ಸೆಲ್ ಬಗ್ಗೆ ತಿಳಿಯಬೇಕೆನ್ನುವವರಿಗೆ ಹಲವಾರು ಆನ್‌ಲೈನ್ ಕೋರ್ಸ್‌ಗಳು ಲಭ್ಯವಿವೆ. ಯೂಟ್ಯೂಬ್ ವಿಡಿಯೋಸ್, ರೆಡ್ಡಿಟ್ ಟ್ಯೂಟೋರಿಯಲ್ಸ್ ಹೊರತಾಗಿ ಈ ಬಗ್ಗೆ ಸಹಾಯಕ್ಕೆ ಬರುವ ಆನ್‌ಲೈನ್ ಕೋರ್ಸ್‌ಗಳು ನಿಮಗೆ ಸರ್ಟಿಫಿಕೇಟ್ ಕೂಡಾ ನೀಡುತ್ತವೆ. 

ಆನ್‌ಲೈನ್ ಕೋರ್ಸ್‌ ಮಾಡಲಿದು ಸುಸಮಯ

ಆನ್‌ಲೈನ್ ಕೋರ್ಸ್‌ನ ಪ್ರಮುಖ ಲಾಭಗಳು
ಬಹುತೇಕರಿಗೆ ಈ ಸಾಫ್ಟ್‌ವೇರ್‌ನ ಬೇಸಿಕ್ ಬಳಕೆಯ ಬಗ್ಗೆಯಷ್ಟೇ ಜ್ಞಾನವಿರುತ್ತದೆ. ಆದರೆ ಮೈಕ್ರೋಸಾಫ್ಟ್ ಎಕ್ಸೆಲ್ ಕೋರ್ಸ್‌ಗಳನ್ನು ಮಾಡಿಕೊಳ್ಳುವುದರಿಂದ ಎಕ್ಸೆಲನ್ನು ಹೆಚ್ಚು ಪವರ್‌ಫುಲ್ ಟೂಲ್ ಆಗಿ ಹೇಗೆ ಬಳಸಿಕೊಳ್ಳಬಹುದು ಎಂಬ ಐಡಿಯಾ ಸಿಗುತ್ತದೆ. 

ಸೂಪರ್ ಸ್ಪ್ರೆಡ್‌ಶೀಟ್ಸ್, ಚಾರ್ಟ್ಸ್ ಹಾಗೂ ಗ್ರಾಫ್ಸ್
ಸ್ಪ್ರೆಡ್‌ಶೀಟ್ ತಯಾರಿಸುವುದರಲ್ಲಿ ಮೈಕ್ರೋಸಾಫ್ಟ್ ಎಕ್ಸೆಲ್‌ ಎತ್ತಿದ ಕೈ. ಇವುಗಳಲ್ಲಿ ಮಾಹಿತಿ ತುಂಬಿದರೆ ಓದುವುದು ಸುಲಭ,  ಎಡಿಟ್ ಮಾಡುವುದೂ ಸುಲಭ, ನಂಬಲರ್ಹ ಕೂಡಾ. ಸ್ವಲ್ಪ ಎಕ್ಸ್ಟ್ರಾ ತರಬೇತಿ ಪಡೆದುಕೊಳ್ಳುವುದರಿಂದ ಹೆಚ್ಚಿನ ಜನರಿಗೆ ಅರಿವಿಲ್ಲದ ಹಲವಾರು ಶಾರ್ಟ್‌ಕಟ್‌ಗಳ ಕುರಿತು ತಿಳಿಯಬಹುದು, ಇವನ್ನು ಬಳಸಿ ನಿಮ್ಮ ಬಿಸ್ನೆಸ್‌ನ ಪವರ್‌ಹೌಸ್ ಆಗಿ ಎಕ್ಸೆಲನ್ನು ಬಳಸಿಕೊಳ್ಳಬಹುದು. ಯಾವುದೇ ವಿಷಯದ ಚಾರ್ಟ್ ಹಾಗೂ ಗ್ರಾಫ್ ತಯಾರಿಸಲು ಎಕ್ಸೆಲ್ ಬಳಕೆಯಾಗುತ್ತದೆ. ಇದರ ಕೋರ್ಸ್ ಮಾಡಿಕೊಳ್ಳುವುದರಿಂದ ಇದರ ಪರಿಣಾಮಕಾರಿ ಬಳಕೆ ಹೇಗೆ ಎಂಬುದು ತಿಳಿಯುತ್ತದೆ. 

ಟೇಬಲ್ಸ್, ಮ್ಯಾಕ್ರೋಸ್
ಟೇಬಲ್‌ಗಳನ್ನು ತಯಾರಿಸುವಾಗ ಅವನ್ನು ಎಷ್ಟು ದೊಡ್ಡ ಬೇಕಾದರೂ ವಿಸ್ತರಿಸುವ ಅವಕಾಶ ಒದಗಿಸುತ್ತವೆ. ಜೊತೆಗೆ, ಟೆಕ್ಸ್ಟ್ ಹಾಗೂ ಫೋಟೋಗಳು ಸರಿಯಾದ ಸ್ಥಳದಲ್ಲೇ ಫಿಟ್ ಆಗುವಂತೆ ನೋಡಿಕೊಳ್ಳುತ್ತದೆ. ಡೇಟಾ ಎಂಟ್ರಿಯ ಸಮಯವನ್ನು ಸುಲಭ ಮಾಡುವ ಮ್ಯಾಕ್ರೋಸ್ ಇದರಲ್ಲಿದ್ದು, ಇದರಿಂದ ಪ್ರತಿದಿನದ ಕಚೇರಿ ಕೆಲಸಗಳ ವೇಗ ಹೆಚ್ಚುತ್ತದೆ. ಇವೆಲ್ಲವುಗಳ ನಡುವೆ ಡೇಟಾ ಸುರಕ್ಷತೆ ಹೇಗೆ, ಎಲ್ಲನ್ನೂ ಅಡ್ವಾನ್ಸ್ಡ್ ಮಟ್ಟದಲ್ಲಿ ಮಾಡುವುದು  ಹೇಗೆ ಎಂಬುದನ್ನು ಆನ್‌ಲೈನ್ ಕೋರ್ಸ್ ಮೂಲಕ ತಿಳಿಯಬಹುದು. 

ಹೀಗೆ ಆನ್‌ಲೈನ್ ಕೋರ್ಸ್ ಮಾಡಬೇಕೆಂದು ಹೊರಟರೆ ಕೆಲವು ಉಚಿತ ಹಾಗೂ ಮತ್ತೆ ಕೆಲವು ಪೇಯ್ಡ್ ಇರಬಹುದು. ಕೆಲವು ಬಿಗಿನರ್ಸ್‌ಗೆ ಮತ್ತೆ ಕೆಲವು ಈಗಾಗಲೇ ಎಕ್ಸೆಲ್ ಅನುಭವ ಇರುವವರಿಗೆ ಇರುತ್ತದೆ. ಆದರೆ, ನೀವು ನಿಜವಾಗಿಯೂ ಎಕ್ಸೆಲ್ ಬಗ್ಗೆ ಗಂಭೀರವಾಗಿ ಕಲಿಯುವ ಇಚ್ಛೆ ಹೊಂದಿದ್ದಲ್ಲಿ ಪೇಯ್ಡ್ ಕೋರ್ಸ್ ನಿಮಗೆ ಹಾಕಿದ ಖರ್ಚಿಗಿಂತ ಹೆಚ್ಚನ್ನು ಕಲಿಸಬಲ್ಲದು, ಮುಂದೆ ಅವಕಾಶವಾಗಿ ಒದಗಬಲ್ಲದು. ಇನ್ನು ನೀವು ಯಾವ ಹಂತದಲ್ಲಿದ್ದೀರಿ ಎಂಬ ಆಧಾರದ ಮೇಲೆ ಕೋರ್ಸನ್ನು ಆಯ್ಕೆ ಮಾಡಿಕೊಳ್ಳಬಹುದು. ಇನ್ನು ಈಗಾಗಲೇ ಎಕ್ಸೆಲ್ ಕೋರ್ಸ್ ಮಾಡಿದ್ದರೂ ಅಪ್ಡೇಟೆಡ್ ವರ್ಶನ್ ಬಗ್ಗೆ ತಿಳಿದುಕೊಂಡಿದ್ದರೆ ಸಂದರ್ಶನಕ್ಕೆ ಆಯ್ಕೆ ಮಾಡುವಾಗ ನೀವು ಇತರರಿಗಿಂತ ಮೊದಲ ಸ್ಥಾನದಲ್ಲಿರುತ್ತೀರಿ. 

ನಾನೆಷ್ಟು ಹಣ ವ್ಯರ್ಥ ಮಾಡುತ್ತಿದ್ದೇನೆಂದು ತಿಳಿಯಲು ಲಾಕ್‌ಡೌನ್ ಹೇರಬೇ ...

ಯಾವುದರ ಕುರಿತು ಆನ್‌ಲೈನ್ ಕೋರ್ಸ್ ಮಾಡಬಹುದು?
ಎಕ್ಸೆಲ್‌ನಲ್ಲಿಯೂ ಹಲವು ವಿಭಾಗಗಳಿರುವುದರಿಂದ ಯಾವ ವಿಷಯದ ಕುರಿತ ಕೋರ್ಸ್ ಹೆಚ್ಚು ಪ್ರಯೋಜನಕಾರಿ ಎಂಬ ಗೊಂದಲ ನಿಮ್ಮನ್ನು ಕಾಡಬಹುದು. ಅದಕ್ಕೆ ಟಾಪ್ ಆಯ್ಕೆಗಳು ಇಲ್ಲಿವೆ ನೋಡಿ;
 ದಿ ಕಂಪ್ಲೀಟ್ ಎಕ್ಸೆಲ್ ಸಿರೀಸ್, ಫ್ರಂ ಬಿಗಿನರ್ ಟು ಎಕ್ಸ್‌ಪರ್ಟ್ ಇನ್ 6 ಅವರ್ಸ್, ಪೈವೋಟ್ ಟೇಬಲ್ಸ್ ಆ್ಯಂಡ್ ಚಾರ್ಟ್ಸ್, ಬೇಸಿಕ್-ಅಡ್ವಾನ್ಸ್ಡ್, ಮ್ಯಾನೇಜಿಂಗ್ ಆ್ಯಂಡ್ ಅನಲೈಜಿಂಗ್ ಡೇಟಾ ಇನ್ ಎಕ್ಸೆಲ್, ಪ್ರಾಬ್ಲಂ ಸಾಲ್ವಿಂಗ್ ವಿಥ್ ಎಕ್ಸೆಲ್ ಇವೆಲ್ಲವೂ ಬಹೂಪಯೋಗಿ ಕೋರ್ಸ್‌ ಆಯ್ಕೆಗಳು. 

Latest Videos
Follow Us:
Download App:
  • android
  • ios