Asianet Suvarna News Asianet Suvarna News

ಆನ್‌ಲೈನ್ ಕೋರ್ಸ್‌ ಮಾಡಲಿದು ಸುಸಮಯ

ಆನ್‌ಲೈನ್ ಕೋರ್ಸ್‌ಗಳನ್ನು ಮಾಡಿಕೊಳ್ಳಲು ಲಾಕ್‌ಡೌನ್ ಸರಿಯಾದ ಸಮಯ ಒದಗಿಸಿಕೊಟ್ಟಿದೆ. ಯಾವೆಲ್ಲ ಕೋರ್ಸ್‌ಗಳನ್ನು ಮಾಡಿಕೊಳ್ಳಬಹುದು ಎಂಬ ಗೊಂದಲಕ್ಕೆ ಇಲ್ಲಿದೆ ನೋಡಿ ಉತ್ತರ.

Online Courses You Can Take During This Lockdown
Author
Bangalore, First Published May 16, 2020, 4:21 PM IST
  • Facebook
  • Twitter
  • Whatsapp

ಕೊರೋನಾ ವೈರಸ್ ನಮ್ಮಿಂದ ಹಲವಷ್ಟನ್ನು ತೆಗೆದುಕೊಂಡಿದೆ ನಿಜ, ಆದರೆ, ಅದು ಅದಕ್ಕೆ ಬದಲಾಗಿ ನಮ್ಮಲ್ಲಿ ಬಹುತೇಕರಿಗೆ ನೀಡಿರುವುದು ಸಮಯ. ಸಮಯವೇ ಇಲ್ಲ ಎಂದು ಒದ್ದಾಡುತ್ತಿದ್ದವರೆಲ್ಲ ಈಗ ಸಿಕ್ಕ ಸಮಯದಲ್ಲಿ ಏನು ಮಾಡುವುದೆಂದು ಗೊತ್ತಾಗದೆ ಮೂವೀ ನೋಡುವುದು, ಅಡುಗೆ ಮಾಡುವುದು ಎಂದು ಕಾಲ ಕಳೆಯುತ್ತಿದ್ದಾರೆ. ಆಗಾಗ ಮನರಂಜನೆ ಬೇಕು, ಹಾಗಂಥ ಮನರಂಜನೆಯನ್ನೇ ಜೀವನವಾಗಿಸಿಕೊಂಡು ಸಮಯ ವ್ಯರ್ಥ ಮಾಡಬೇಡಿ. ಈ ಸಮಯವನ್ನು ಹೆಚ್ಚು ಬುದ್ಧಿವಂತಿಕೆಯಿಂದ ಬಳಸಿಕೊಂಡರೆ ಅದು ನಮಗೆ ದುಪ್ಪಟ್ಟು ಲಾಭವನ್ನು ಖಂಡಿತಾ ತಂದುಕೊಡುತ್ತದೆ. 

ಹೌದು, ಲಾಕ್‌ಡೌನ್ ಸಮಯದಲ್ಲಿ ಹೊಸ ಹೊಸ ಕೌಶಲ್ಯಗಳನ್ನು ಕಲಿಯುವುದು, ಹೊಸ ವಿಷಯಗಳನ್ನು ತಿಳಿದು ಕೊಳ್ಳುವುದರತ್ತ ಗಮನ ಹರಿಸಬಹುದು. ನೂರಾರು ಫ್ರೀ ಹಾಗೂ ಅಲ್ಪ ಹಣ ತೆತ್ತು ಮಾಡುವ ಆನ್‌ಲೈನ್ ಕೋರ್ಸ್‌ಗಳು ಇಂಟರ್ನೆಟ್‌ನಲ್ಲಿ ಲಭ್ಯವಿವೆ. ಅವುಗಳಲ್ಲಿ ನಿಮ್ಮ ಆಸಕ್ತಿಗೆ ತಕ್ಕಂತೆ ಒಂದೆರಡನ್ನಾದರೂ ಮಾಡಿಕೊಂಡರೆ ರೆಸ್ಯೂಮೆಗೆ ತೂಕ ಬರುತ್ತದೆ, ವ್ಯಕ್ತಿತ್ವಕ್ಕೆ ಕಳೆ ಬರುತ್ತದೆ. ನೀವು ಮಾಡಿಕೊಳ್ಳಬಹುದಾದ ಕೆಲ ಕೋರ್ಸ್‌ಗಳ ಬಗ್ಗೆ ಇಲ್ಲಿದೆ ನೋಡಿ. 

2100ರ ವೇಳೆಗೆ 1.2 ಶತಕೋಟಿ ಜನರನ್ನು ಕಾಡುತ್ತದಂತೆ #HeatStress

ನಿಕಾನ್‌ನಿಂದ ಫೋಟೋಗ್ರಫಿ ಕೋರ್ಸ್
ಫೋಟೋಗ್ರಫಿ ಬಗ್ಗೆ ಆಸಕ್ತಿ, ಆದರೆ ಅದನ್ನು ಕಲಿಯಲು ಇದುವರೆಗೂ ಸಮಯ ಸಿಕ್ಕಿಲ್ಲವೆಂದಾದರೆ, ನೀವು ನಿಕಾನ್‌ನ ಫೋಟೋಗ್ರಫಿ ಕೋರ್ಸ್ ಮಾಡಿಕೊಳ್ಳಬಹುದು. ನೀವು ಪ್ರೊಫೆಶನಲ್ ಆಗಿದ್ದರೂ ಸರಿ, ಅಮೆಚೂರ್ ಅದರೂ ಸರಿ- ನಿಕಾನ್ ನಡೆಸುವ ಹಲವಾರು ಕೋರ್ಸ್‌ಗಳಲ್ಲಿ ಬೇಕಾದ್ದನ್ನು ಆಯ್ಕೆ ಮಾಡಿಕೊಂಡು ಕಲಿಯಬಹುದು. 

ಕೃತಕ ಬುದ್ಧಿಮತ್ತೆ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇಂದಿನ ಟ್ರೆಂಡ್. ಈ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಇರುವವರು ಐಐಟಿ ದೆಲ್ಲಿ ನಡೆಸುವ 6 ವಾರಗಳ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೋರ್ಸ್ ಮಾಡಿಕೊಳ್ಳಬಹುದು. ಇವರ  ವೆಬ್‌ಸಾಟ್‌ನಲ್ಲಿ ಈ ಸಂಬಂಧ ಇನ್ನೂ ಹಲವು ಕೋರ್ಸ್‌ಗಳಿವೆ. ನಿಮಗಿಷ್ಟ ಬಂದಿದ್ದನ್ನು ಆಯ್ಕೆ ಮಾಡಿಕೊಳ್ಳಿ. 

ಸ್ಕಿಲ್ ಶೇರ್
ಅನಿಮೇಶನ್, ಬಿಸ್ನೆಸ್, ಮ್ಯೂಸಿಕ್ ಸೇರಿದಂತೆ ಯಾವ ವಿಷಯದ ಕುರಿತ ಕೌಶಲ್ಯಗಳನ್ನು ಬೇಕಾದರೂ ಕಲಿಯಲು, ಶಾರ್ಪ್ ಮಾಡಿಕೊಳ್ಳಲು ನೆರವಿಗೆ ಬರುತ್ತದೆ ಸ್ಕಿಲ್ ಶೇರ್. ಆಯಾ ಫೀಲ್ಡ್‌ನ ತಜ್ಞರು ವಿಷಯದ ಕುರಿತು ಆಳ ಜ್ಞಾನವನ್ನು ನೀಡುತ್ತಾರೆ. 2 ತಿಂಗಳ ಫ್ರೀ ಕ್ಲಾಸಸ್ ಇರುತ್ತದೆ. 

ಯುನಿಟಿ ಲರ್ನ್ ಪ್ರೀಮಿಯಂ
ಆ್ಯನಿಮೇಶನ್ ಹಾಗೂ ಗೇಮ್ ಅಭಿವೃದ್ಧಿಯಲ್ಲಿ ಆಸಕ್ತಿ ಇರುವವರು ಯುನಿಟಿ ಲರ್ನ್ ಪ್ರೀಮಿಯಂ ಮೂಲಕ 2ಡಿ, 3ಡಿ, ಎಆರ್, ವಿಆರ್‌ ಅಭಿವೃದ್ಧಿಪಡಿಸುವ ಕುರಿತ ಕೋರ್ಸ್ ಮಾಡಿಕೊಳ್ಳಬಹುದು. ಇದರಲ್ಲಿ ಲೈವ್ ಇಂಟರ್ಯಾಕ್ಟಿವ್ ಸೆಶನ್‌ಗಳು ಕೂಡಾ ಇರುತ್ತವೆ. 

ಲಾಂಗ್ವೇಜ್ ಕೋರ್ಸ್
ಭಾಷೆ ಎಂಬುದು ನಮ್ಮನ್ನು ಜಗತ್ತಿನ ಬೇರೆ ಬೇರೆ ಭಾಗದ ಜನರೊಂದಿಗೆ ಸಂಪರ್ಕ ಕಲ್ಪಿಸುವ ಒಂದು ದಾರಿ. ಇಂದು ಹೆಚ್ಚು ಹೆಚ್ಚು ಭಾಷೆಗಳು ಗೊತ್ತಿದ್ದಷ್ಟೂ ಅದರ ಲಾಭಗಳು ವೈಯಕ್ತಿಕವಾಗಿಯೂ, ಔದ್ಯೋಗಿಕ ಕ್ಷೇತ್ರದಲ್ಲೂ ಸಿಗುತ್ತವೆ. ಹೀಗೆ ನಿಮಗಿಷ್ಟ ಬಂದ, ಅಗತ್ಯವಿರುವ ಭಾಷೆಗಳನ್ನು ಕಲಿಯಲು ಆನ್‌ಲೈನ್‌ನಲ್ಲಿ ಹಲವಾರು ಲಾಂಗ್ವೇಜ್ ಕೋರ್ಸ್‌ಗಳಿವೆ. ಅವುಗಳ ಸದ್ಬಳಕೆ ಮಾಡಿಕೊಳ್ಳಿ. 

 ಮನೆಯಲ್ಲೇ ಸುಲಭವಾಗಿ ಬೆಳೆಯೋ ತರಕಾರಿಗಳಿವು

ಆನ್‌ಲೈನ್ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್
ಡಿಜಿಟಲ್ ಮಾರ್ಕೆಟಿಂಗ್ ಕೋರ್ಸನ್ನು ಗೂಗಲ್ ಸಿದ್ಧಪಡಿಸಿರುವ ಕಾರಣ ಅದರ ಗುಣಮಟ್ಟದ ಬಗ್ಗೆ ಅನುಮಾನವೇ ಬೇಡ. ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರ ಇಂದು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವ ಕಾರಣ ಈ ಸಂಬಂಧ ಕೋರ್ಸ್ ಮಾಡಿಕೊಂಡರೆ ಅದು ಎಲ್ಲಿಯೂ ವ್ಯರ್ಥ ಹೋಗದು. ಈ ಸಂಬಂಧ ಕೋರ್ಸ್ ಮುಗಿದ ಬಳಿಕ ಆನ್‌ಲೈನ್ ಎಕ್ಸಾಂ ಬರೆದು ಗೂಗಲ್‌ ಸರ್ಟಿಫಿಕೇಟ್ ಪಡೆಯಬಹುದು. 

ಡೇಟಾ ಸೈನ್ಸ್ ಎಕ್ಸ್‌ಪರ್ಟ್
ಈ ಸಂಬಂಧ ಉದ್ಯೋಗ ಕಟ್ಟಿಕೊಳ್ಳಲು ಬಯಸುವವರು 365 ಡೇಟಾ ಸೈನ್ಸ್‌ನಲ್ಲಿ 21 ಡೇಟಾ ಸೈನ್ಸ್ ಕೋರ್ಸ್‌ಗಳನ್ನು ಫ್ರೀಯಾಗಿ ಮಾಡಿಕೊಳ್ಳಬಹುದು. ಇದರ ಇಂಟರ್ಯಾಕ್ಟಿವ್ ಟ್ಯುಟೋರಿಯಲ್ಸ್ ನಿಮ್ಮ ಕೌಶಲ್ಯಗಳನ್ನು ಮೊನಚಾಗಿಸುತ್ತವೆ. 

ಇಷ್ಟೇ ಅಲ್ಲದೆ ಫೈನಾನ್ಸ್ ಮಾರ್ಕೆಟ್, ಕಂಟೆಂಟ್ ರೈಟಿಂಗ್, ಬಯೋಮೆಡಿಕಲ್ ರಿಸರ್ಚ್, ಕಂಪ್ಯೂಟರ್ ಸೈನ್ಸ್ ಫಂಡಮೆಂಟಲ್ ಕೋರ್ಸ್‌ಗಳು, ಗ್ರಾಫಿಕ್ ಡಿಸೈನಿಂಗ್, ಅಡ್ವಾನ್ಸ್ಡ್ ಮೈಕ್ರೋಸಾಫ್ಟ್ ಎಕ್ಸೆಲ್ ಕೋರ್ಸ್‌ಗಳನ್ನು ಕೂಡಾ ಆನ್‌ಲೈನ್ ಮೂಲಕ ಮಾಡಿಕೊಳ್ಳಬಹುದು. ಯಾವ ಕಲಿಕೆಯೂ ವ್ಯರ್ಥವಾಗುವುದಿಲ್ಲ ಎಂಬದನ್ನು ನೆನಪಿಟ್ಟು ಮುಂದುವರಿಯಿರಿ. ಹ್ಯಾಪಿ ಲರ್ನಿಂಗ್.

Follow Us:
Download App:
  • android
  • ios