ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಲು ಹೆಡ್ ಹೆಲ್ಡ್- ಕಲಬುರಗಿ ಜಿಲ್ಲಾಡಳಿತ ಒಪ್ಪಂದಕ್ಕೆ ಸಹಿ

ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಹೆಡ್ ಹೆಲ್ಡ್ ಹೈ ಟ್ರಸ್ಟ್‌ನ ಟ್ರಸ್ಟಿ ಮದನ ಪದಕಿ ಅವರ ಸಮಕ್ಷಮದಲ್ಲಿ ಹೆಡ್ ಹೆಲ್ಡ್ ಹೈ ಟ್ರಸ್ಟ್‌ನ ಸಿಇಓ ಪಂಕಜ್ ಸಿಂಗ್ ಠಾಕೂರ ಮತ್ತು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಒಪ್ಪಂದಕ್ಕೆ ಸಹಿ ಹಾಕಿ ಒಪ್ಪಂದ ಪತ್ರವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
 

Head Held Kalaburgi District Administration Signed an Agreement to Provide Job Based Skill Training grg

ಕಲಬುರಗಿ(ನ.03): ಕಲಬುರಗಿ ಸೇರಿದಂತೆ ಈ ಭಾಗದ ಯುವಕ-ಯುವತಿಯರ ಯುವ ಸಾಮರ್ಥ್ಯ ಹೊರಹಾಕಲು ಮತ್ತು ಯುವಜನರ ಉಜ್ವಲ ಭವಿಷ್ಯದ ನಿರ್ಮಾಣಕ್ಕೆ ಕೌಶಲ್ಯಗಳ ರೂಪಾಂತರದ ಮೂಲಕ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶ ಒದಗಿಸುವ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿ ನೀಡಲು ಹೆಡ್ ಹೆಲ್ಡ್ ಹೈ ಟ್ರಸ್ಟ್ ಮತ್ತು ಕಲಬುರಗಿ ಜಿಲ್ಲಾಡಳಿತವು ಕಲಬುರಗಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿತು.

ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಹೆಡ್ ಹೆಲ್ಡ್ ಹೈ ಟ್ರಸ್ಟ್‌ನ ಟ್ರಸ್ಟಿ ಮದನ ಪದಕಿ ಅವರ ಸಮಕ್ಷಮದಲ್ಲಿ ಹೆಡ್ ಹೆಲ್ಡ್ ಹೈ ಟ್ರಸ್ಟ್‌ನ ಸಿಇಓ ಪಂಕಜ್ ಸಿಂಗ್ ಠಾಕೂರ ಮತ್ತು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಒಪ್ಪಂದಕ್ಕೆ ಸಹಿ ಹಾಕಿ ಒಪ್ಪಂದ ಪತ್ರವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಕೆಇಎ ಪರೀಕ್ಷಾ ಅಕ್ರಮ: ದಾಖಲೆ ಇದ್ದರೆ ಮಾತನಾಡಿ, ಗಾಳಿಯಲ್ಲಿ ಗುಂಡು ಹೊಡಿಬೇಡಿ, ತೇಲ್ಕೂರ್‌ಗೆ ಖರ್ಗೆ ತಿರುಗೇಟು

3 ವರ್ಷದಲ್ಲಿ 25 ಸಾವಿರ ಜನರಿಗೆ ಕೌಶಲ್ಯ:

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಮತ್ತು ನವೋದ್ಯಮ ಸ್ಥಾಪನೆಯಿಂದ ಇಡೀ ವಿಶ್ವದಲ್ಲಿ ಕರ್ನಾಟಕವು ತನ್ನದೆ ಆದ ಸ್ಥಾನ ಹೊಂದಿದೆ. ಪ್ರಸ್ತುತ ದೇಶ ಮತ್ತು ಕರ್ನಾಟಕದಲ್ಲಿ ಇಲ್ಲಿನ ಉದ್ಯೋಗಕ್ಕೆ ತಕ್ಕಂತೆ ಕೌಶಲ್ಯ ನೀಡಲಾಗುತ್ತಿದೆ. ಇದನ್ನು ವಿಶ್ವಕ್ಕೆ ವಿಸ್ತರಿಸಬೇಕೆಂಬ ಚಿಂತನೆ ಇಟ್ಟುಕೊಂಡು ಕಲಬುರಗಿ ಸೇರಿದಂತೆ ಪ್ರದೇಶದ ಯುವ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಳ, ಉದ್ಯೋಗ ಆಧಾರಿತ ಕೌಶಲ್ಯ, ಸಂವಹನ ಕೌಶಲ್ಯ, ಪರೀಕ್ಷೆ ಮತ್ತು ಸಂರ್ದಶನ ಎದುರಿಸುವ ಸಾಮರ್ಥ್ಯ ಹೀಗೆ ಕೌಶಲ್ಯ ಕೊರತೆ ನೀಗಿಸುವುದರ ಜೊತೆಗೆ ಯುವ ಜನರ ಬೇಡಿಕೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಪಡೆಯಲು ಎಲ್ಲಾ ರೀತಿಯ ಸಜ್ಜುಗೊಳಿಸಲು ಇಂದಿಲ್ಲಿ ಹೆಡ್ ಹೆಲ್ಡ್ ಹೈ ಟ್ರಸ್ಟ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಹೆಡ್ ಹೆಲ್ಡ್ ಹೈ ಟ್ರಸ್ಟ್ ಮೊದಲು 30 ದಿನದಲ್ಲಿ ಇಲ್ಲಿನ ನಿರುದ್ಯೋಗಿ ಯುವಕರು, ಪದವೀಧರರು, ಡ್ರಾಪ್ ಔಟ್ ಯುವ ಜನರನ್ನು ಗುರುತಿಸಿ ಅವರ ವಿದ್ಯಾರ್ಹತೆ ಅನುಗುಣವಾಗಿ ಏನು ತರಬೇತಿ ನೀಡಬಹುದೆಂದು ತಿಳಿದು ವಿಸ್ತೃತ ಕೌಶಲ್ಯ ಮ್ಯಾಪ್ ಮಾಡಿ ಅದರ ಮುಖೇನ ಕ್ರಿಯಾ ಯೋಜನೆ ಹಾಕಿಕೊಂಡು ಮುಂದಿನ 3 ವರ್ಷದಲ್ಲಿ 25 ಸಾವಿರ ಜನರಿಗೆ ತರಬೇತಿ ನೀಡಲಿದೆ. ಇದರಿಂದ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ತುಂಬಾ ನೆರವಾಗಲಿದೆ ಎಂದರು.
ಇದಲ್ಲದೆ ಕಲಬುರಗಿ ನಗರದ ವಾಜಪೇಯಿ ಬಡಾವಣೆಯಲ್ಲಿ ನೈಸ್ ಅಕಾಡೆಮಿ-ಸೆಂಟರ್ ಫಾರ್ ಎಕ್ಸಿಲೆನ್ಸ್ ಫಾರ್ ಕ್ಯಾರಿಯರ್ ಡೆವಲೆಪ್‌ಮೆಂಟ್ ಸಂಸ್ಥೆ ಮುಂದಿನ ಆರ್ಥಿಕ ವರ್ಷದಿಂದ ಪ್ರಾರಂಭಿಸಲಾಗುತ್ತಿದೆ. ಈ ಸಂಸ್ಥೆಗೆ ಪ್ರತಿ ವರ್ಷ 10 ಕೋಟಿ ರು. ಕೆಕೆಆರ್‌ಡಿಬಿಯಿಂದ ನೀಡುವ ಮೂಲಕ ಪ್ರತಿ ವರ್ಷ ಈ ಭಾಗದ ಸುಮಾರು 2,000 ಅಭ್ಯರ್ಥಿಗಳಿಗೆ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಹಾಗೂ ರಾಜ್ಯ ಸರ್ಕಾರದ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಗೆ ದೂರದ ಬೆಂಗಳೂರು, ಮೈಸೂರು, ಧಾರವಾದ ಹೋಗುವುದು ತಪ್ಪಲಿದೆ. ಇಲ್ಲಿಯೆ ಗುಣಮಟ್ಟ ತರಬೇತಿ ಯುವಕರಿಗೆ ಸಿಗಲಿದೆ ಎಂದರು.

Latest Videos
Follow Us:
Download App:
  • android
  • ios