ಲಿಂಗ ತಾರತಮ್ಯ ಮೊಕದ್ದಮೆ, 118 ಮಿಲಿಯನ್ ಡಾಲರ್  ಪಾವತಿಸಲು Google ಒಪ್ಪಿಗೆ

  • ಗೂಗಲ್ ವಿರುದ್ಧ ಲಿಂಗ ತಾರತಮ್ಯದ ಮೊಕದ್ದಮೆ
  • ರಾಜಿ ಇತ್ಯರ್ಥಗೊಳಿಸಲು 118 ಮಿಲಿಯನ್  ಪಾವತಿಸಲು ಒಪ್ಪಿಗೆ
  • 2017 ರಲ್ಲಿ ಲಿಂಗ ತಾರತಮ್ಯ ಪ್ರಕರಣ ದಾವೆ ಹೂಡಿದ್ದ ಮೂವರು ಉದ್ಯೋಗಿಗಳು
Google has agreed to pay 118 million dollar to settle a gender discrimination lawsuit gow

ವಿಶ್ವದ ಅತೀ ದೊಡ್ಡ ಟೆಕ್ ಕಂಪನಿಗಳಲ್ಲಿ (Tech Company) ಒಂದಾದ ಗೂಗಲ್  (Google) ಕೊನೆಗೂ  ಲಿಂಗ ತಾರತಮ್ಯ (Gender Discrimination) ಮತ್ತು ಸಮಾನ ವೇತನದ ಪ್ರಕರಣವನ್ನು ಶಮನ ಮಾಡಿಕೊಳ್ಳಲು ಮುಂದಾಗಿದೆ.

ವರ್ಷಗಳಿಂದ ತನ್ನ ವಿರುದ್ಧ  ಸುಮಾರು 15,500 ಮಹಿಳೆಯರು ಹೂಡಿದ್ದ ಲಿಂಗ ತಾರತಮ್ಯದ ಮೊಕದ್ದಮೆಯನ್ನು ಇತ್ಯರ್ಥ ಮಾಡಿಕೊಳ್ಳಲು ಮುಂದಾಗಿದ್ದು,  ಇದಕ್ಕಾಗಿ ಗೂಗಲ್ ಭಾರಿ ಮೊತ್ತದ ಬೆಲೆ ತೆರಬೇಕಾಗುತ್ತದೆ.  ಈ ಪ್ರಕಾರವಾಗಿ ಬರೋಬ್ಬರಿ 118 ಮಿಲಿಯನ್ ಡಾಲರ್ (ಸುಮಾರು 920 ಕೋಟಿ) ಹಣವನ್ನು  ಪಾವತಿಸಲು ಗೂಗಲ್  ಒಪ್ಪಿಕೊಂಡಿದೆ ಎನ್ನಲಾಗಿದೆ. ಈ ಹಿಂದೆ ಗೂಗಲ್ ಕಂಪನಿಯು ಮಹಿಳಾ ಉದ್ಯೋಗಿಗಳಿಗಿಂತಲೂ ಪುರುಷ ಉದ್ಯೋಗಿಗಳಿಗೆ ಹೆಚ್ಚು ವೇತನ ನೀಡುತ್ತಿರುವುದರ ಬಗ್ಗೆ ಕೆಲ ಮಹಿಳಾ ಉದ್ಯೋಗಿಗಳು ಗೂಗಲ್ ಕಂಪನಿಯ ವಿರುದ್ಧ  2017ರಲ್ಲಿ ಮೊಕದ್ದಮೆ ಹೂಡಿದ್ದರು.

Rainfall Forecast ಬೆಂಗಳೂರಿನಲ್ಲಿ ಮಳೆ ಮುನ್ಸೂಚನೆ, ಬೇಗ ಮನೆ ಸೇರ್ಕೊಳ್ಳಿ

ಭವಿಷ್ಯದಲ್ಲಿ ಕಂಪೆನಿಯ ನೇಮಕಾತಿ ಪ್ರಕ್ರಿಯೆ ವೇಳೆ ಸಮಾನತೆಯನ್ನು ಅಳವಡಿಸಲು ಸ್ವತಂತ್ರ ಕಾರ್ಮಿಕ ಅರ್ಥಶಾಸ್ತ್ರಜ್ಞರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಗೂಗಲ್ ಭರವಸೆ ನೀಡಿದೆ. 

ಏನಿದು ಪ್ರಕರಣ: ಕ್ಯಾಲಿಫೋರ್ನಿಯಾ ಸರ್ಕಾರದ ಸಮಾನ ವೇತನ ಕಾಯಿದೆ ಪ್ರಕಾರ  ಉದ್ಯೋಗಿಗಳಿಗೆ ಅವರ ಲಿಂಗ, ಜನಾಂಗ ಅಥವಾ ವರ್ಗದ ಆಧಾರದಲ್ಲಿ ವೇತನದಲ್ಲಿ ತಾರತಮ್ಯ ಮಾಡುವಂತಿಲ್ಲ. ಸಮಾನ ಕೆಲಸಗಳನ್ನು ಮಾಡುವ ಉದ್ಯೋಗಿಗಳು ಅದು ಹೆಣ್ಣಾಗಿರಲಿ ಗಂಡಾಗಿರಲಿ, ಯಾವುದೇ ಜನಾಂಗಕ್ಕೆ ಸೇರಿದವರಾಗಿರಲಿ, ಯಾವುದೇ ವರ್ಗಕ್ಕೆ ಸೇರಿದವರಾಗಿರಲಿ , ಯಾವುದೇ  ಪ್ರದೇಶಕ್ಕೆ ಸೇರಿದವರೇ ಆಗಿರಲಿ, ಎಲ್ಲರಿಗೂ ಸಮಾನವಾದ ವೇತನವನ್ನೇ ನೀಡಬೇಕು ಎಂಬುದಿದೆ. ಆದರೆ ಗೂಗಲ್ ಈ ಸಮಾನ ವೇತನ ಕಾಯಿದೆಯನ್ನು ಉಲ್ಲಂಘಿಸಿದೆ. ಕಂಪನಿಯಲ್ಲಿ ದುಡಿಯುತ್ತಿರುವ ಪುರುಷರು ಮತ್ತು ಮಹಿಳೆಯರ ನಡುವೆ ಸುಮಾರು 13.26 ಲಕ್ಷ  ವೇತನದ ಅಂತರವಿದೆ  ಎಂದು ಮೂವರು ಮಹಿಳೆಯರು 2017ರಲ್ಲಿ ಕೋರ್ಟ್ ಮೆಟ್ಟಲೇರಿದ್ದರು.

Ballari Pearl Scam; ಮುತ್ತಿನ ಮತ್ತಲ್ಲಿ ಕೋಟಿ ಕಳೆದುಕೊಂಡ ನೂರಾರು ಜನ!

ಲಿಂಗ ತಾರತಮ್ಯಕ್ಕಾಗಿ ಗೂಗಲ್ ಈ ರೀತಿಯ ಪ್ರಕರಣದಲ್ಲಿ ಸಿಲುಕಿರುವುದು ಇದೇ ಮೊದಲಲ್ಲ. ಕಳೆದ ವರ್ಷವಷ್ಟೇ, ಗೂಗಲ್ ಮಹಿಳಾ ಇಂಜಿನಿಯರ್‌ಗಳಿಗೆ ಕಡಿಮೆ ವೇತನ ನೀಡುತ್ತಿದೆ ಮತ್ತು ಏಷ್ಯನ್ ಉದ್ಯೋಗದ ಅರ್ಜಿದಾರರನ್ನು ಕಡೆಗಣಿಸಿದೆ ಎಂದು ಹೇಳುವ ಮೊಕದ್ದಮೆಯನ್ನು ಇತ್ಯರ್ಥಗೊಳಿಸಲು ಟೆಕ್ ದೈತ್ಯ  ಗೂಗಲ್ 2.5 ಮಿಲಿಯನ್ ಪಾವತಿಸಲು ಒಪ್ಪಿಕೊಂಡಿತು. ಇನ್ನು, ಕ್ಯಾಲಿಫೋರ್ನಿಯಾ ಡಿಪಾರ್ಟ್ಮೆಂಟ್ ಆಫ್ ಫೇರ್ ಎಂಪ್ಲಾಯ್ಮೆಂಟ್ ಅಂಡ್ ಹೌಸಿಂಗ್ (DFEH) ಕಪ್ಪು ಮಹಿಳಾ ಉದ್ಯೋಗಿಗಳ ವಿರುದ್ಧ ಕಿರುಕುಳ ಮತ್ತು ತಾರತಮ್ಯದ ವಿಚಾರವಾಗಿ ಮೇಲೆ Google ಅನ್ನು ತನಿಖೆ ಮಾಡುತ್ತಿದೆ.

Latest Videos
Follow Us:
Download App:
  • android
  • ios