ಹೊಸಬರಿಗೆ ಶೇ.50 ರಷ್ಟು ವೇತನ ಕಡಿತ, ಕಾರಣ ಬಿಚ್ಚಿಟ್ಟ ವಿಪ್ರೋ ಸಿಎಫ್ಒ!

ನಿರುದ್ಯೋಗ ಸಮಸ್ಯೆ ಒಂದಡೆಯಾದರೆ, ಉದ್ಯೋಗ ಗಿಟ್ಟಿಸಿಕೊಳ್ಳುವ ಹೊಸಬರಿಗೆ ಕಡಿಮೆ ವೇತನದ ಸಮಸ್ಯೆ. ಆದರೆ ಐಟಿ ಕಂಪನಿಗಳಲ್ಲಿ ಹೊಸಬರಿಗೆ ಕೈತುಂಬ ಸಂಬಳ ನೀಡುವ ಪದ್ಧತಿಗೆ ಒಂದೊಂದೆ ಕಂಪನಿಗಳು ಗುಡ್ ಬೈ ಹೇಳುತ್ತಿದೆ.ಇದೀಗ ವಿಪ್ರೋ ಹೊಸಬರ ಸ್ಯಾಲರಿಯನ್ನು ಶೇಕಡಾ 50 ರಷ್ಟು ಕಡಿತಗೊಳಿಸಿದೆ. ಇದರ ಕಾರಣವನ್ನೂ ವಿಪ್ರೋ ಸಿಎಫ್ಒ ಬಿಚ್ಚಿಟ್ಟಿದ್ದಾರೆ.
 

Freshers want to join onboard quicky with low salary Wipro CFO justify slash job offers almost 50 percent ckm

ಬೆಂಗಳೂರು(ಮೇ.01): ಕೈತುಂಬಳ ಸ್ಯಾಲರಿ ನೀಡುವ ಐಟಿ ಕಂಪನಿಗಳು ಇದೀಗ ಉದ್ಯೋಗ ಕಡಿತ, ವೇತನ ಕಡಿತ ಸೇರಿದಂತೆ ಹಲವು ಪ್ರಯೋಗ ಮಾಡುತ್ತಿದೆ. ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಮಾಡಿದರೆ, ಭಾರತದಲ್ಲಿ ವೇತನ ಕಡಿತ ಆರಂಭಗೊಂಡಿದೆ. ಇದೀಗ ಪ್ರತಿಷ್ಠಿತ ವಿಪ್ರೋ ಕಂಪನಿ ಹೊಸಬರಿಗೆ ಶೇಕಡಾ 50 ರಷ್ಟು ವೇತನ ಕಡಿತ ಮಾಡಿದೆ. ವಿಪ್ರೋದಲ್ಲಿ ತರಬೇತಿ ಮುಗಿಸಿ ಕೆಲಸಕ್ಕೆ ಸೇರಿಕೊಳ್ಳುವ ಉದ್ಯೋಗಿಗಳಿಗೆ ವಾರ್ಷಿಕ  6.5 ಲಕ್ಷ ರೂಪಾಯಿ ಬದಲು 3.5 ಲಕ್ಷ ರೂಪಾಯಿ ವೇತನ ನೀಡಲು ವಿಪ್ರೋ ನಿರ್ಧರಿಸಿದೆ. ಇದಕ್ಕಾಗಿ ವಿಪ್ರೋ ಹೊಸಬರಿಗೆ ಆರಂಭದಲ್ಲಿ ನೀಡಿದ್ದ ಆಫರ್ ಲೆಟರ್ ಬದಲು ಹೊಸ ಆಫರ್ ಲೆಟರ್ ನೀಡಿದೆ. ಹೊಸ ಆಫರ್ ಲೆಟರ್‌ನಲ್ಲಿ ಶೇಕಡಾ 50 ರಷ್ಟು ವೇತನ ಕಡಿತ ಮಾಡಲಾಗಿದೆ.

ಈ ನಿರ್ಧಾರದ ಕುರಿತು ಮಾತನಾಡಿರುವ ವಿಪ್ರೋ ಸಿಎಫ್ಒ ಜತೀನ್ ದಲಾಲ್, ತರಬೇತಿ ಮುಗಿಸಿದ ಹೊಸಬರು ವಿಪ್ರೋ ಸೇರಿಕೊಳ್ಳಲು ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ನಾವು ಕಳುಹಿಸಿರುವ ಹೊಸ ಆಫರ್ ಲೆಟರ್ ಒಪ್ಪಿಕೊಂಡು ಕಡಿಮೆ ಸ್ಯಾಲರಿಗೆ ಕಂಪನಿ ಸೇರಿಕೊಳ್ಳಲು ಶೇಕಡಾ 92 ರಷ್ಟು ಮಂದಿ ಹೊಸಬರಲು ತಯಾರಿದ್ದಾರೆ. ಕಾರಣ ವೇತನ ಕಡಿತಗೊಂಡ ಹೊಸಬರ ನೇಮಕಾತಿ ಶೀಘ್ರದಲ್ಲೇ ಆಗಲಿದೆ. ಇನ್ನು ಹಳೇ ವೇತನ ಬಯಸುತ್ತಿರುವ ಹೊಸಬರ ಪರಾಮರ್ಶೆ ನಡೆಸಿ ನೇಮಕಾತಿ ನಡೆಯಲಿದೆ ಎಂದಿದ್ದಾರೆ. ಹಲವು ಕಾಲೇಜುಗಳ ಕ್ಯಾಂಪಸ್ ಆಯ್ಕೆಯಿಂದ ಆಯ್ಕೆಯಾಗಿರುವ ಹೊಸಬರು ವಿಪ್ರೋ ನೂತನ ಆಫರ್ ಲೆಟರ್ ಒಪ್ಪಿಕೊಂಡು ಕಂಪನಿ ಸೇರಲು ತಯಾರಿದ್ದಾರೆ ಎಂದು ಜಿತಿನ್ ದಲಾಲ್ ಹೇಳಿದ್ದಾರೆ.

 

ಭಾರತದ ಮೊದಲ ಆ್ಯಪಲ್ ಸ್ಟೋರ್ ಸಿಬ್ಬಂದಿ ಸ್ಯಾಲರಿ ಮಾಹಿತಿ ಕೇಳಿದರೆ ತಲೆ ತಿರುಗುತ್ತೆ!

ವಿಪ್ರೋ ತರಬೇತಿ ಪಡೆದವರನ್ನು ಇಲ್ಲಿ ಸೇರಿಕೊಳ್ಳಲು ಒತ್ತಾಯ ಮಾಡಿಲ್ಲ. ಅವರಿಗೆ ಇಷ್ಟ ಬಂದ ಕಡೆ ಕೆಲಸಕ್ಕೆ ಸೇರಿಕೊಳ್ಳಬಹುದು. ವಿಪ್ರೋದಲ್ಲಿ ಹೊಸ ವೇತನದಡಿ ತ್ವರಿತಗತಿಯಲ್ಲಿ ನೇಮಕಾತಿ ನಡೆಯಲಿದೆ ಎಂದಿದ್ದಾರೆ. ಫ್ರೆಶರ್ಸ್ ಹೆಚ್ಚು ವೇತನದ ಸ್ಯಾಲರಿಗಾಗಿ ಕಾಯುವ ಬದಲು,ಕಡಿಮೆ ಸ್ಯಾಲರಿಯಲ್ಲಿ ಬೇಗನ ಕೆಲಸಕ್ಕೆ ಸೇರಿಕೊಳ್ಳಲು ಇಷ್ಟಪಡುತ್ತಿದ್ದಾರೆ ಎಂದು ಜಿತಿನ್ ದಲಾಲ್ ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಉದ್ಯೋಗ ಕಡಿತದ ಪರಿಣಾಮ ಜನರು ಇದೀಗ ಕೆಲಸಕ್ಕೆ ಸೇರಿಕೊಳ್ಳಲು ಹಾಗೂ ಹಂತ ಹಂತವಾಗಿ ಸ್ಯಾಲರಿ ಹಾಗೂ ಪ್ರಮೋಶನ್ ಪಡೆಯಲು ಬಯಸುತ್ತಾರೆ. ಒಂದೇ ಸಮನೆ ಸ್ಯಾಲರಿ ಏರಿಕೆಯಿಂದ ಉದ್ಯೋಗ ಕಡಿತದಲ್ಲಿ ತೀವ್ರ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಕಾರಣದಿಂದ ಉದ್ಯೋಗ ಕಡಿತ ತೀವ್ರಗೊಳ್ಳುತ್ತಿದೆ. ಈಗಾಗಲೇ ಗೂಗಲ್, ಮೆಟಾ ಸೇರಿದಂತೆ ಹಲವು ಕಂಪನಿಗಳು ಉದ್ಯೋಗ ಕಡಿತ ಮಮಾಡಿದೆ.

ಗೂಗಲ್ ಉದ್ಯೋಗ ಕಡಿತ ಮಾಡಿದ್ರೂ ಸಿಇಒ ಗಳಿಕೆಗೇನೂ ಧಕ್ಕೆಯಾಗಿಲ್ಲ; 2022ರಲ್ಲಿ ಪಿಚೈ ಪಡೆದ ಹಣವೆಷ್ಟು ಗೊತ್ತಾ?

ಪ್ರಸಿದ್ಧ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸಾಪ್‌ ಹಾಗೂ ಇನ್‌ಸ್ಟಾಗ್ರಾಂಗಳ ಮಾತೃಸಂಸ್ಥೆಯಾದ ಮೆಟಾ 10000, ಅರ್ನೆಸ್ಟ್‌ ಆ್ಯಂಡ್‌ ಯಂಗ್‌ 3,000 ಹಾಗೂ ಡಿಸ್ನಿ 7000 ಸಿಬ್ಬಂದಿ ತೆಗೆದು ಹಾಕುವುದಾಗಿ ಘೋಷಿಸಿವೆ. ಮೆಟಾ ಕಳೆದ ನವೆಂಬರ್‌ನಲ್ಲಿ ಕೂಡಾ 11000 ಜನರನ್ನು ತೆಗೆದು ಹಾಕಿತ್ತು.ಇದೇ ವಾರದಲ್ಲಿ ಎಲೆಕ್ಟ್ರಿಕ್‌ ವಾಹನ ತಯಾರಕ ಲೂಸಿಡ್‌ ಕಂಪನಿ 13,000 ಹಾಗೂ ವೀಡಿಯೋ ಗೇಢಮ್‌ನ ಎಲೆಕ್ಟ್ರಿಕ್‌ ಆಟ್ಸ್‌ರ್‍ 800 ಮತ್ತು ಏರೋಸ್ಪೇಸ್‌ ಕಂಪನಿ ವರ್ಜಿನ್‌ ಆರ್ಬಿಟ್‌ 675 ಉದ್ಯೋಗಿಗಳನ್ನು ಕೆಲಸದಿಂದ ಕೈಬಿಟ್ಟಿವೆ. ಅಲ್ಲದೇ ಆ್ಯಕ್ಸೆಂಚರ್‌ ಕಂಪನಿಯು ಮುಂದಿನ 18 ತಿಂಗಳಲ್ಲಿ ಶೇ.2.6 ಉದ್ಯೋಗಿಗಳ ತೆಗೆಯುವ ಘೋಷಣೆ ಮಾಡಿದೆ. ಈ ವರ್ಷವೊಂದರಲ್ಲಿ ಜಗತ್ತಿನಾದ್ಯಂತ 596 ಬೃಹತ್‌ ಟೆಕ್‌ ಕಂಪನಿಗಳು 17,1308 ಉದ್ಯೋಗಿಗಳನ್ನು ವಜಾ ಮಾಡಿವೆ. 
 

Latest Videos
Follow Us:
Download App:
  • android
  • ios