ಕಾರ್ಪೊರೇಟ್ ಲೈಫ್ ಬೇಕಾ ಗುರು? ಐಟಿ ಉದ್ಯೋಗಕ್ಕಿಂತ ಕ್ಯಾಬ್ ಚಾಲಕನಾಗೇ ಹೆಚ್ಚು ದುಡೀತಾರೆ ಈ ಟೆಕ್ಕಿ!
ಎಂಜಿನಿಯರ್ ತನ್ನ ಕಾರ್ಪೊರೇಟ್ ಉದ್ಯೋಗಕ್ಕಿಂತ ಕ್ಯಾಬ್ ಡ್ರೈವಿಂಗ್ ಮೂಲಕ ಹೆಚ್ಚು ಹಣ ಗಳಿಸುತ್ತಾರೆ ಎಂದು ಮಹಿಳೆಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ನಾನಾ ಚರ್ಚೆಗಳನ್ನು ಹುಟ್ಟುಹಾಕಿದೆ.
ನವದೆಹಲಿ (ಆಗಸ್ಟ್ 8, 2023): ಎಂಜಿನಿಯರ್ ಆಗ್ಬೇಕು ಅಂತ ಹಲವಾರು ಪೋಷಕರು ತಮ್ಮ ಮಕ್ಕಳಿಗೆ ಒತ್ತಡ ಹೇರುತ್ತಿರುತ್ತಾರೆ. ಮಕ್ಕಳ ಇಷ್ಟ - ಕಷ್ಟಗಳನ್ನು ತಿಳಿದುಕೊಳ್ಳದೆ ಕಾರ್ಪೊರೇಟ್ ಕಂಪನಿಯಲ್ಲೇ ಕೆಲಸ ಮಾಡ್ಬೇಕೆಂದು ಪೋಷಕರು ಹಾಗೂ ನಮ್ಮ ಸಮಾಜದ ಅನೇಕರ ಒತ್ತಾಸೆಯೂ ಆಗಿದೆ. ಇದಕ್ಕೆ ಕಾರಣ ಒಳ್ಳೆ ಲೈಫ್ ಹಾಗೂ ಹೆಚ್ಚು ಸಂಬಳ ಸಿಗುತ್ತೆ, ರೆಪ್ಯುಟೇಷನ್ ಇರುತ್ತೆ ಅಂತ. ಆದರೆ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಈ ಪೋಸ್ಟ್ ವೈರಲ್ ಆಗಿದ್ದು, ಎಂಜಿನಿಯರ್ ಜೀವನ, ಸಂಬಳದ ಬಗ್ಗೆ ಅನುಮಾನ ಮೂಡಿಸುತ್ತದೆ.
ಎಂಜಿನಿಯರ್ ತನ್ನ ಕಾರ್ಪೊರೇಟ್ ಉದ್ಯೋಗಕ್ಕಿಂತ ಕ್ಯಾಬ್ ಡ್ರೈವಿಂಗ್ ಮೂಲಕ ಹೆಚ್ಚು ಹಣ ಗಳಿಸುತ್ತಾರೆ ಎಂದು ಮಹಿಳೆಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಹಲವು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. ಹಾಗೂ, ಇದನ್ನು ಬಹಿರಂಗಪಡಿಸಿರೋ ಮಹಿಳೆಯ ಪೋಸ್ಟ್‌ಗೆ ಹಲವರು ಪ್ರತಿಕ್ರಿಯೆ ನೀಡಿದ್ದು, ವೈರಲ್ ಆಗಿದೆ.
ಇದನ್ನು ಓದಿ: ಮೂನ್‌ಲೈಟಿಂಗ್ ಮಾಡೋರಿಗೆ ಶಾಕಿಂಗ್ ನ್ಯೂಸ್: ಹೆಚ್ಚುವರಿ ಆದಾಯ ಘೋಷಿಸದ ಸಾವಿರಾರು ಜನರಿಗೆ ಐಟಿ ನೋಟಿಸ್
ಇತ್ತೀಚಿನ ದಿನಗಳಲ್ಲಿ, ಕಾರ್ಪೊರೇಟ್ ಉದ್ಯೋಗಗಳ ಮೂಲಕವೇ ಆರಾಮದಾಯಕ ಜೀವನಶೈಲಿ ನಿರ್ವಹಿಸಲು ಸಾಕಾಗುವುದಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಟೆಕ್ಕಿಗಳು ಆದಾಯದ ಪರ್ಯಾಯ ಮೂಲಗಳನ್ನು ಹುಡುಕಲು ವ್ಯಕ್ತಿಗಳನ್ನು ಪ್ರೇರೇಪಿಸುತ್ತದೆ. ಇದೇ ರೀತಿ, ಎಂಜಿನಿಯರ್ ಒಬ್ಬರು ಕಾರ್ಪೊರೇಟ್ ಉದ್ಯೋಗ ತೊರೆದು ಕ್ಯಾಬ್ ಡ್ರೈವರ್ ಆಗಲು ನಿರ್ಧರಿಸಿದ ಗಮನಾರ್ಹ ಘಟನೆ ಬೆಳಕಿಗೆ ಬಂದಿದೆ. ಹಾಗೂ, ಅವರು ಈಗ ಮೊದಲಿಗಿಂತ ಹೆಚ್ಚು ಸಂಪಾದಿಸುತ್ತಾರೆ ಎಂದೂ ತಿಳಿದುಬಂದಿದೆ.
ಶ್ವೇತಾ ಕುಕ್ರೇಜಾ ಅನ್ನೋ ಮಹಿಳೆ ಕ್ಯಾಬ್‌ನಲ್ಲಿ ಪ್ರಯಾಣಿಸಿದ ಅನುಭವವನ್ನು ಟ್ವೀಟ್ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕ್ಯಾಬ್ ಚಾಲಕನಾಗಿದ್ದೋರು ಎಂಜಿನಿಯರ್ ಆಗಿದ್ದು, ವೃತ್ತಿಜೀವನವನ್ನು ಬದಲಾಯಿಸಿದವರು ಎಂಬುದನ್ನು ತಿಳಿದುಕೊಂಡ ಮಹಿಳೆ ಅಚ್ಚರಿಗೀಡಾಗಿದ್ದಾಳೆ. ಅಷ್ಟೇ ಅಲ್ಲ, ಆತ ಈ ಹಿಂದೆ ಕಾರ್ಪೊರೇಟ್ ಕಂಪನಿ ಕ್ವಾಲ್‌ಕಾಮ್‌ನಲ್ಲಿ (Qualcomm) ನಲ್ಲಿ ದುಡಿಯುತ್ತಿದ್ದ ಹಣಕ್ಕಿಂತ ಕ್ಯಾಬ್ ಚಾಲಕನಾಗಿಯೇ ಹೆಚ್ಚು ಹಣ ದುಡಿಯುತ್ತಿರೋದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಫುಲ್ ಟೈಟಾಗಿ ಮಧ್ಯರಾತ್ರಿ ಬಾಸ್‌ಗೆ ಮೆಸೇಜ್ ಮಾಡಿದ ಉದ್ಯೋಗಿ: ವೈರಲ್ ಆಯ್ತು ಪೋಸ್ಟ್!
“ನಾನು ನಿನ್ನೆ ಕ್ಯಾಬ್‌ನಲ್ಲಿದ್ದೆ ಮತ್ತು ಆ ಚಾಲಕ ಎಂಜಿನಿಯರ್. ಕ್ವಾಲ್‌ಕಾಮ್‌ನಲ್ಲಿನ ಕಾರ್ಪೊರೇಟ್ ಉದ್ಯೋಗಕ್ಕಿಂತ ಕ್ಯಾಬ್ ಡ್ರೈವಿಂಗ್‌ನಿಂದ ಹೆಚ್ಚು ಗಳಿಸುತ್ತಾರೆ’’ ಎಂದು ಶ್ವೇತಾ X ನಲ್ಲಿ ಬರೆದುಕೊಂಡಿದ್ದಾರೆ. ಶ್ವೇತಾ ಅವರ ಟ್ವೀಟ್ ತ್ವರಿತವಾಗಿ ಹೆಚ್ಚು ಜನರನ್ನು ಸೆಳೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದ್ದು ಹಾಗೂ ಹೆಚ್ಚು ವೈರಲ್ ಆಯಿತು.
ಆದರೆ, ಕ್ವಾಲ್ಕಾಮ್ ದೇಶದ ಅತ್ಯುತ್ತಮ-ಪಾವತಿಸುವ ಕಂಪನಿಗಳಲ್ಲಿ ಒಂದೆಂದು ಖ್ಯಾತಿ ಪಡೆದಿದೆ. ಈ ಹಿನ್ನೆಲೆ ಈ ಪೋಸ್ಟ್‌ನ ಸತ್ಯಾಸತ್ಯತೆ ಬಗ್ಗೆ ಅನೇಕರು ಪ್ರಶ್ನೆಯನ್ನೂ ಮಾಡಿದರು.
ಕಾರ್ಪೊರೇಟ್ ಕೆಲಸವು ಹೆಚ್ಚು ಗೌರವಾನ್ವಿತವಾಗಿದೆ ಎಂದೂ ಕೆಲವರು ಸೂಚಿಸಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ವೇತಾ ಕುಕ್ರೇಜಾ, “ಕ್ಯಾಬ್ ಡ್ರೈವರ್‌ಗಿಂತ ಎಂಜಿನಿಯರ್ ಆಗಿರುವುದು ಏಕೆ ಹೆಚ್ಚು ಹೆಸರುವಾಸಿಯಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಯಾವುದೇ ಕೆಲಸವು ಚಿಕ್ಕದಲ್ಲ ಮತ್ತು ಅವರು ಕ್ಯಾಬ್ ಡ್ರೈವರ್ ಆಗಿ ಉತ್ತಮ ಹಣ ಗಳಿಸುತ್ತಿದ್ದರೆ. ಅವರು ಹೆಮ್ಮೆಪಡಬೇಕು’’ ಎಂದೂ ತಿಳಿಸಿದ್ದಾರೆ.
ಒಟ್ಟಾರೆ, ಅನೇಕ ಚರ್ಚೆಗಳನ್ನು ಹುಟ್ಟುಹಾಕಿರೋ ಈ ಘಟನೆಯು ಆದಾಯ ಉತ್ಪಾದನೆಯ ವಿಕಾಸಗೊಳ್ಳುತ್ತಿರುವ ಡೈನಾಮಿಕ್ಸ್ ಮತ್ತು ಸಾಂಪ್ರದಾಯಿಕ ಕಾರ್ಪೊರೇಟ್ ಉದ್ಯೋಗಗಳಲ್ಲಿ ವ್ಯಕ್ತಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಬೆಳಕು ಚೆಲ್ಲಿದೆ. ಅನೇಕರು ಸಾಮಾನ್ಯವಾಗಿ ಕಾರ್ಪೊರೇಟ್ ಉದ್ಯೋಗಕ್ಕಿಂತ ಇತರೆ ಬೇರೆ ಬೇರೆ ಕೆಲಸಗಳೇ ಹೆಚ್ಚಿನ ಹಣವನ್ನು ಪಾವತಿಸುತ್ತವೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.