ಇಲ್ಲೊಂದು ಕಡೆ ಖಾಸಗಿ ಕಚೇರಿಯ ಸಿಇಒ ಒಬ್ಬರು ಕಚೇರಿಗೆ ತಡವಾಗಿ ಬಂದ ಉದ್ಯೋಗಿಗಳಿಗೆ ಇದೇ ರೀತಿಯ ಶಿಕ್ಷೆ ನೀಡಿದ್ದು, ಈ ವಿಚಾರವೀಗ ಚರ್ಚೆಗೆ ಗ್ರಾಸವಾಗಿದೆ.

ಸಾಮಾನ್ಯವಾಗಿ ಶಾಲಾ ದಿನಗಳಲ್ಲಿ ತರಗತಿಗೆ ತಡವಾಗಿ ಬಂದವರನ್ನು ಅವರಿಗೆ ಬುದ್ಧಿ ಕಲಿಸಲು ತರಗತಿ ಒಳಗೆ ಸೇರಿಸಿಕೊಳ್ಳದೇ ಶಿಕ್ಷಕರು ತರಗತಿಯ ಹೊರಭಾಗದಲ್ಲಿ ನಿಲ್ಲಿಸುವುದನ್ನು ನೀವು ನೋಡಿರಬಹುದು. ಶಾಲಾ ದಿನಗಳಲ್ಲಿ ನಿಮಗಿದರ ಅನುಭವವೂ ಆಗಿರಬಹುದು. ಹೀಗಾಗಿ ಈ ಭಯಕ್ಕೆ ಮಕ್ಕಳು ಸಮಯಕ್ಕೆ ಸರಿಯಾಗಿ ಅಥವಾ ತುಸು ಮೊದಲೇ ಶಾಲೆಯ ಆವರಣವನ್ನು ತಲುಪಿ ತರಗತಿ ಸೇರಿಕೊಳ್ಳುತ್ತಿದ್ದರು. ಆದರೆ ಇಲ್ಲೊಂದು ಕಡೆ ಖಾಸಗಿ ಕಚೇರಿಯ ಸಿಇಒ ಒಬ್ಬರು ಕಚೇರಿಗೆ ತಡವಾಗಿ ಬಂದ ಉದ್ಯೋಗಿಗಳಿಗೆ ಇದೇ ರೀತಿಯ ಶಿಕ್ಷೆ ನೀಡಿದ್ದು, ಈ ವಿಚಾರವೀಗ ಚರ್ಚೆಗೆ ಗ್ರಾಸವಾಗಿದೆ.

ಸಾಮಾಜಿಕ ಜಾಲತಾಣ ರೆಡಿಟ್‌ನಲ್ಲಿ shutterspice ಎಂಬ ಹೆಸರಿನ ಬಳಕೆದಾರ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ವಿಚಾರಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟಿ ಹಾಕಿದೆ. ಪೋಸ್ಟ್‌ನಲ್ಲಿ ಕಂಪನಿ ಸಿಇಒ ತಡವಾಗಿ ಬಂದವರನ್ನು ಕಚೇರಿಯ ಹೊರಗೆ ಕಾಯುವಂತೆ ಮಾಡಿದ್ದಾರೆ ಎಂದು ಉದ್ಯೋಗಿ ಹೇಳಿಕೊಂಡಿದ್ದಾರೆ, ಆರ್/ಇಂಡಿಯನ್‌ವರ್ಕ್‌ಪ್ಲೇಸ್‌ ಸಂಸ್ಥೆಯ ಉದ್ಯೋಗಿಯಾಗಿರುವ ರೆಡ್ಡಿಟ್ ಬಳಕೆದಾರ ಈ ವಿಚಾರ ತಿಳಿಸಿದ್ದಾರೆ. ಅನೇಕರು ಈ ಸಿಇಒ ನಡವಳಿಕೆಯನ್ನು ಶಾಲಾ ದಿನಗಳ ಶಿಕ್ಷೆಗೆ ಹೋಲಿಸಿದ್ದಾರೆ. 

'Schooled by CEO' ಎಂಬ ಶೀರ್ಷಿಕೆಯ ರೆಡ್ಡಿಟ್ ಪೋಸ್ಟ್‌ನಲ್ಲಿ, ತಮ್ಮ ಸಿಇಒ ಮಧ್ಯಾಹ್ನ 12 ಗಂಟೆಗೆ ಕಚೇರಿಯ ಎಲ್ಲಾ ಪ್ರವೇಶ ದ್ವಾರಗಳನ್ನು ಮುಚ್ಚಿದರು, ಇದರಿಂದಾಗಿ ತಡವಾಗಿ ಬಂದವರು ಹೊರಗೆ ಉಳಿಯಬೇಕಾಯಿತು ಎಂದು ಉದ್ಯೋಗಿ ಹೇಳಿಕೊಂಡಿದ್ದಾರೆ. ಸ್ವಲ್ಪ ಸಮಯದ ನಂತರ, ಅವರು ಉತ್ಪಾದಕತೆ ಮತ್ತು ಸಮಯಪಾಲನೆಯ ಬಗ್ಗೆ ಅವರಿಗೆ 'ಉಪನ್ಯಾಸ' ಮಾಡಿದರು, ಆದರೆ ಹಿಂದಿನ ರಾತ್ರಿ ಇದೇ ಉದ್ಯೋಗಿಗಳು ತಡರಾತ್ರಿಯವರೆಗೂ ಕೆಲಸ ಮಾಡಿದ್ದಾಗಿ ನೀಡಿದ ಕಾರಣಗಳನ್ನು ಒಪ್ಪಿಕೊಳ್ಳಲಿಲ್ಲ ಎಂದು ಮಾಹಿತಿ ನೀಡಿದ್ದಾರೆ. 

'ಟೈಮ್ ಟ್ರಾವೆಲರ್‌ ಕ್ಷಣದಂತೆ ತೋರುತ್ತಿದ್ದ ನಮ್ಮ ಸಿಇಒ ಇಂದು ನಮ್ಮನ್ನು ಶಾಲಾ ದಿನಗಳಿಗೆ ಕರೆದೊಯ್ದರು! ಅವರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಚೇರಿಗೆ ಎಲ್ಲಾ ಪ್ರವೇಶದ್ವಾರಗಳನ್ನು ಬಂದ್ ಮಾಡಿದರು ಮತ್ತು ತಡವಾಗಿ ಬಂದವರೆಲ್ಲರನ್ನು ಕಚೇರಿಯ ಬಾಗಿಲುಗಳ ಹೊರಗೆ ನಿಲ್ಲುವಂತೆ ಮಾಡಿದರು. ಸ್ವಲ್ಪ ಸಮಯದ ನಂತರ, ಅವರು ಈ ಎಲ್ಲ ಹುಡುಗರಿಗೆ ಉತ್ಪಾದಕತೆ ಮತ್ತು ಸಮಯಪ್ರಜ್ಞೆಯ ಬಗ್ಗೆ ಉಪನ್ಯಾಸ ನೀಡಿದರು ಮತ್ತು 'ನಾನು ನಿನ್ನೆ ರಾತ್ರಿ 10 ಗಂಟೆಯವರೆಗೆ ಇಲ್ಲಿದ್ದೆ' ಎಂಬುದು ತಡವಾಗಿ ಬರಲು ಸರಿಯಾದ ಕಾರಣವಲ್ಲ ಎಂದು ಲೆಕ್ಚರ್ ನೀಡಿದರು. ಅದೃಷ್ಟವಶಾತ್, ನಾನು ಇಂದು ಬೇಗನೆ ಇಲ್ಲಿದ್ದೆ, ಆದ್ದರಿಂದ ನಾನು ಒಳಗಿನಿಂದ ಇದನ್ನು ನೋಡಲು ಸಾಧ್ಯವಾಯ್ತು . ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಬೆಳಿಗ್ಗೆ 8 ಗಂಟೆಯ ನಂತರ ನಾವು ಬಂದರೆ ನಮ್ಮ ಶಾಲೆಯ ಶಿಕ್ಷಕರು ನಮ್ಮನ್ನು ಬಿಸಿಲಿನಲ್ಲಿ ನಿಲ್ಲುವಂತೆ ಮಾಡುತ್ತಿದ್ದರು ಇದನ್ನು ನೆನಪಿಸಿಕೊಳ್ಳುವುದಕ್ಕೆ ತುಂಬಾ ಹಾಸ್ಯಾಸ್ಪದವೆನಿಸಿತು, ಎಂದು ಉದ್ಯೋಗಿ ತಮ್ಮ ರೆಡ್ಡಿಟ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. 

ಸಂಸ್ಥೆಯ ಸಿಇಒ ಅವರ ಈ ನಡೆ, ಕಾರ್ಪೊರೇಟ್ ಸಂಸ್ಕೃತಿಯ ಬಗ್ಗೆ ಮತ್ತು ಅಂತಹ ನಿಯಮಗಳು ಆಧುನಿಕ ಕಚೇರಿಗಳಿಗೆ ಸರಿ ಇವೆಯೇ ಎಂಬುದರ ಕುರಿತು ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ಚರ್ಚೆ ನಡೆಸುವಂತೆ ಮಾಡಿತ್ತು. ಹಲವರು ಸಿಇಒ ಅವರ ಈ ನಿಯಮವನ್ನು ಟೀಕಿಸಿದರು, ಇದನ್ನು ಅನಗತ್ಯ ಮತ್ತು ವೃತ್ತಿಪರವಲ್ಲದ ಕ್ರಮ ಎಂದು ಕರೆದರು. ಇದು ಅಗೌರವದ ವರ್ತನೆ. ಅವರು, ತಡವಾಗಿ ಬಂದರಿಗೆ ಅರ್ಧ ದಿನದ ಹಾಜರಾತಿ ನೀಡಬಹುದಿತ್ತು. ಅಲ್ಲದೇ ವೇತನ ಕಡಿತದ ಅಪಾಯವಿದ್ದರೆ, ಹೆಚ್ಚಿನವರು ತಡವಾಗಿ ಬರುವುದಿಲ್ಲ ಎಂಬುದು ನನಗೆ ಖಚಿತವಾಗಿದೆ. ಆದರೆ ಇದು 'ಬಾಲಿಶ' ನಡವಳಿಕೆ, ಎಂದು ಒಬ್ಬರು ಹೇಳಿದರು, ಮತ್ತೊಬ್ಬರು 'ಕೆಲಸಕ್ಕೆ ತಡವಾಗಿ ಬರುವುದು ಸ್ವೀಕಾರಾರ್ಹವಲ್ಲದಿದ್ದರೆ ಮತ್ತು ವೇತನ ಕಡಿತಕ್ಕೆ ಅರ್ಹವಾಗಿದ್ದರೆ, ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ 8-9 ಗಂಟೆಗಳ ಸ್ಲಾಟ್ ನಂತರವೂ ಮಾಡಿದ ಕೆಲಸಕ್ಕೆ ಓವರ್‌ಟೈಮ್ ಡ್ಯೂಟಿ ಸ್ಯಾಲರಿ ನೀಡಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ. ಆದರೂ ಕೆಲವರು ಸಿಒಒ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. 

ನಿಮ್ಮ ಕಂಪನಿಯ ಬಗ್ಗೆ ನನಗೆ ನಿರ್ದಿಷ್ಟವಾಗಿ ತಿಳಿದಿಲ್ಲ ಆದರೆ 12 ಗಂಟೆ ಅಂದರೆ ತಡವಾಗಿದೆ, ಮತ್ತು ನಾನು ತಡವಾಗಿ ಬರುತ್ತಿದ್ದರೆ ನನ್ನ ಮ್ಯಾನೇಜರಿಗೆ ಆ ಬಗ್ಗೆ ಮುಂಚಿತವಾಗಿ ತಿಳಿಸಲು ನಾನು ಯಾವಾಗಲೂ ಸಿದ್ಧನಿದ್ದೇನೆ ಎಂದು ಒಬ್ಬ ಬಳಕೆದಾರರು ಹೇಳಿದರು. ಮತ್ತೊಬ್ಬ ರೆಡ್ಡಿಟ್ ಬಳಕೆದಾರರು ತೀರ್ಪು ನೀಡುವ ಮೊದಲು ಉದ್ಯೋಗಿಗಳ ರಿಪೋರ್ಟಿಂಗ್ ಸಮಯದ ಬಗ್ಗೆ ವಿಚಾರಿಸಿದರು: 'ದಯವಿಟ್ಟು ನಿಮ್ಮ ಸಾಮಾನ್ಯ ರಿಪೋರ್ಟ್ ಮಾಡುವ ಸಮಯ ಎಷ್ಟು ಎಂದು ಹೇಳಿ. ಇದು ಕೇವಲ ಅರ್ಧದಷ್ಟು ಮಾಹಿತಿ. ನನ್ನ ಪ್ರಕಾರ ಬಹುತೇಕ ಎಲ್ಲಾ ಕೆಲಸದ ಸ್ಥಳಗಳಲ್ಲಿ, 12 ಗಂಟೆಗೆ ಕೆಲಸಕ್ಕೆ ಬರುವುದು ನಿಜವಾಗಿಯೂ ತಡವಾಗಿರುತ್ತದೆ ಎಂದಿದ್ದಾರೆ.