Asianet Suvarna News Asianet Suvarna News

ಕಚೇರಿಗೆ ಡ್ಯಾನ್ಸ್ ಮಾಡುತ್ತಾ ಬರದಿದ್ದರೆ ಕೆಲಸ ಮಾಡಲ್ಲ, ಉದ್ಯೋಗಿಗಳ ನೋಟಿಸ್‌ಗೆ ಮಣಿದ ಬಾಸ್!

ಡ್ಯಾನ್ಸ್ ಮಾಡದೆ ಕಚೇರಿಗೆ ಎಂಟ್ರಿಕೊಟ್ಟರೆ ನಾವು ಕೆಲಸ ಮಾಡಲ್ಲ, ಈ ನೋಟಿಸ್‌ಗೆ ಅಂಜಿದ ಬಾಸ್, ಕಚೇರಿಯೊಳಗೆ ಡ್ಯಾನ್ಸ್ ಮಾಡುತ್ತಾ ಆಗಮಿಸಿದ ವಿಡಿಯೋ ಒಂದು ಇದೀಗ ಕಚೇರಿಯಲ್ಲಿನ ಉತ್ತಮ ಕೆಲಸದ ವಾತಾವರಣದ ಚರ್ಚೆ ಶುರು ಮಾಡಿದೆ.

Come in office with dance Boss agree employees demand video spark debate ckm
Author
First Published Oct 2, 2024, 5:04 PM IST | Last Updated Oct 2, 2024, 5:04 PM IST

ಫ್ಲೋರಿಡಾ (ಅ.02)  ಕಚೇರಿಯಲ್ಲಿ ಬಾಸ್ ತಮ್ಮ ಉದ್ಯೋಗಿಗಳಿಗೆ ಕಂಡೀಷ್ ಹಾಕುವುದು, ರಜೆ ನೀಡದ ದುಡಿಸಿಕೊಳ್ಳುವುದು ಸೇರಿದಂತೆ ಇತರ ಹಲವು ಆಜ್ಞೆ ನೀಡಿರುವ ನಿದರ್ಶನಗಳು ವರದಿಯಾಗಿದೆ. ಆದರೆ ಇಲ್ಲೊಂದು ಕಚೇರಿಯಲ್ಲಿ ಬಾಸ್ ಅಲ್ಲ, ಉದ್ಯೋಗಿಗಳು ತಮ್ಮ ಬಾಸ್‌ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಬಾಸ್ ಕಚೇರಿಗೆ ಪ್ರವೇಶಿಸುವಾಗ ಡ್ಯಾನ್ಸ್ ಮಾಡುತ್ತಾ ಬರಬೇಕು. ಒಂದು ವೇಳೆ ಡ್ಯಾನ್ಸ್ ಮಾಡದೇ ನೇರವಾಗಿ ನಡೆದುಕೊಂಡು ಎಂಟ್ರಿಕೊಟ್ಟರೆ, ನಾವು ಕೆಲಸವೇ ಮಾಡುವುದಿಲ್ಲ ಕಚೇರಿ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ಉದ್ಯೋಗಿಗಳ ವಾರ್ನಿಂಗ್‌ಗೆ ಮಣಿದ ಬಾಸ್ ಡ್ಯಾನ್ಸ್ ಮಾಡುತ್ತಾ ಕಚೇರಿಗೆ ಪ್ರವೇಶಿಸಿದ ವಿಡಿಯೋ ಸದ್ದು ಮಾಡುತ್ತಿದೆ.

ಇದು ಫ್ಲೋರಿಡಾದ ಕಚೇರಿಯಲ್ಲಿ ನಡೆದ ಘಟನೆ. ಸದ್ಯ ಹಲವು ಕಚೇರಿಗಳಲ್ಲಿ ಟಾಕ್ಸಿಲ್ ಕಲ್ಚರ್ ಇದೆ. ಉದ್ಯೋಗಿಗಳಿಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದೆ ಅನ್ನೋ ಆರೋಪಗಳು, ಇದಕ್ಕೆ ಪೂರಕವಾದ ಘಟನೆಗಳು ನಡೆಯುತ್ತಿದೆ. ಇದರ ನಡುವೆ ಕೆಲಸ, ಉದ್ಯೋಗಿಗಳು, ಬಾಸ್ ಎಲ್ಲರ ನಡುವೆ ಉತ್ತಮ ವಾತಾವರಣ ಇರುವ ಕಚೇರಿಗಳು ಇದೆ ಅನ್ನೋದು ಈ  ವಿಡಿಯೋ ಸಾಬೀತು ಮಾಡಿದೆ.

ಸಿಕ್ ಲೀವ್ ನಿರಾಕರಿಸಿದ ಬಾಸ್, ಆಫೀಸ್‌ಗೆ ಬಂದ 20 ನಿಮಿಷದಲ್ಲಿ ಕುಸಿದು ಬಿದ್ದು ಉದ್ಯೋಗಿ ಸಾವು!

ಎಂದಿನಂತೆ ಕಚೇರಿಗೆ ಆಗಮಿಸಿದ ಉದ್ಯೋಗಿಗಳು ನೋಟಿಸ್ ಪ್ರಿಂಟ್ ಮಾಡಿದ್ದಾರೆ. ಈ ನೋಟಿಸ್‌ನಲ್ಲಿ ಬಾಸ್, ನೀವು ಡ್ಯಾನ್ಸ್ ಮಾಡುತ್ತಾ ಆಫೀಸ್‌ಗೆ ಪ್ರವೇಶಿಸದಿದ್ದರೆ ಈ ದಿನ ನಾವು ಕೆಲಸ ಮಾಡುವುದಿಲ್ಲ ಎಂದಿದ್ದಾರೆ. ಈ ನೋಟಿಸ್‌‍‌ನ್ನು ಕಚೇರಿಯ ಗಾಜಿನ ಬಾಗಿಲಿಗೆ ಅಂಟಿಸಿದ್ದಾರೆ. ಅತ್ತ ಕಾರು ಪಾರ್ಕ್ ಮಾಡಿ ನಡೆದುಕೊಂಡು ಕಚೇರಿಗೆ ಆಗಮಿಸಿದ ಬಾಸ್, ಬಾಗಿಲ್ ಬಳಿ ಬರುತ್ತಿದ್ದಂತೆ ಈ ನೋಟಿಸ್ ಗಮನಿಸಿದ್ದಾರೆ. ನೋಟಿಸ್ ಓದಿದ ಬಾಸ್ ಮುಖದಲ್ಲಿ ನಗು ಮೂಡಿದೆ.

ಬಳಿಕ ಬಾಗಿಲು ತೆಗೆದು ಕಚೇರಿ ಒಳಗೆ ಪ್ರವೇಸಿಸುತ್ತಿದ್ದಂತೆ ಬಾಸ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.  ಉದ್ಯೋಗಿಗಳು ಹಾಕಿದ ಕಂಡೀಷನ್‌ಗೆ ಒಪ್ಪಿ ಬಾಸ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ಉದ್ಯೋಗಿಗಳು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಇಷ್ಟೇ ಅಲ್ಲ ಕಚೇರಿಯ ಉತ್ತಮ ವಾತಾವರಣ ಕುರಿತು ಹ್ಯಾಶ್‌ಟ್ಯಾಗ್ ಬಳಸಲಾಗಿದೆ. 

 

 

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಚೇರಿಯ ವಾತಾವರಣ ಕುರಿತ ಚರ್ಚೆ ಮತ್ತೆ ಜೋರಾಗಿದೆ. ಇತ್ತೀಚೆಗೆ ಹಲವು ಘಟನೆಗಳು ಉತ್ತಮ ವಾತಾವರಣಕ್ಕೆ ವಿರುದ್ಧವಾಗಿತ್ತು. ಸತತ ಕೆಲಸ, ಒತ್ತಡದಿಂದ ಬದುಕು ಅಂತ್ಯಗೊಳಿಸಿದ ಘಟನೆ, ಅನಾರೋಗ್ಯಕ್ಕೆ ರಜೆ ನೀಡಿದ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಸೇರಿದಂತೆ ಹಲವು ಘಟನೆಗಳು ವರದಿಯಾಗಿದೆ. ಇದರ ನಡುವೆ ಈ ವಿಡಿಯೋ ಎಲ್ಲರ ಗಮನಸೆಳೆದಿದೆ.

ನಮ್ಮ ಮೆಟ್ರೋದಲ್ಲಿ ಮ್ಯಾನೇಜರ್ ಸೇರಿ ವಿವಿಧ ಹುದ್ದೆಗಳ ನೇಮಕಾತಿ, ತಿಂಗಳಿಗೆ 2 ಲಕ್ಷ ರೂ ವೇತನ!
 

Latest Videos
Follow Us:
Download App:
  • android
  • ios