Asianet Suvarna News Asianet Suvarna News

ಹೇಗಿತ್ತು ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್ ಕೆಲಸಕ್ಕಾಗಿ ಕೊಟ್ಟ ರೆಸ್ಯೂಮ್? ಹೀಗಿದ್ದರೆ ನೀವೂ ದಿಗ್ಗಜರಾಗುವುದು ಖಚಿತ!

18ರ ವಯಸ್ಸಿನಲ್ಲಿ ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್ ಕೆಲಸಕ್ಕಾಗಿ ಕೊಟ್ಟ ರೆಸ್ಯೂಮ್ ಹೇಗಿತ್ತು? ನೀವು ಈ ರೀತಿ ರೆಸ್ಯೂಮ್ ಸಿದ್ಧಪಡಿಸಿದ್ದರೆ ದಿಗ್ಗಜರಾಗುವ ಸಾಧ್ಯತೆ ಇದೆ.

Bill gates steve jobs decade old resume viral vintage documents surface internet ckm
Author
First Published Aug 31, 2024, 12:16 PM IST | Last Updated Aug 31, 2024, 12:17 PM IST

ಕ್ಯಾಲಿಫೋರ್ನಿಯಾ(ಆ.31) ವಿದ್ಯಾಭ್ಯಾಸ, ವೃತ್ತಿಪರ ಕೋರ್ಸ್ ಮುಗಿಸಿ ಉತ್ತಮ ರೆಸ್ಯೂಮ್ ಸಿದ್ದಪಡಿಸಿ ಕೆಲಸ ಹುಡುಕುದು ಸಾಮಾನ್ಯ. ಉದ್ಯೋಗ ಅವಕಾಶವಿದ್ದ ಕಚೇರಿ, ಕಂಪನಿಗಳಿಗೆ ರೆಸ್ಯೂಮ್ ಕಳುಹಿಸಿ ಸಂದರ್ಶನದ ಕರೆಗೆ, ಇಮೇಲ್‌ಗೆ ಕಾಯುವಿಕೆ ಬಹುತೇಕರ ಜೀವನದಲ್ಲಿ ನಡೆದಿರುತ್ತದೆ. ಸದ್ಯ ಟೆಕ್ ದಿಗ್ಗಜರಾಗಿರುವ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್, ಆ್ಯಪಲ್ ಇಂಕ್ ಕಂಪನಿ ಸಂಸ್ಥಾಪಕ ಸ್ಟೀವ್ ಜಾಬ್ಸ್ 18ನೇ ವಯಸ್ಸಿನಲ್ಲಿ ಕೆಲಸಕ್ಕಾಗಿ ನೀಡಿದ ರೆಸ್ಯೂಮ್ ಇದೀಗ ಸದ್ದು ಮಾಡುತ್ತಿದೆ. ವಿಶ್ವದ ದಿಗ್ಗಜರಾಗಿ ಗುರುತಿಸಿಕೊಂಡಿರುವ ಬಿಲ್ ಗೇಟ್ಸ್ ಹಾಗೂ ಸ್ಟೀವ್ ಜಾಬ್ಸ್ ರೀತಿಯಲ್ಲೇ ನೀವೂ ರೆಸ್ಯೂಮ್ ಸಿದ್ದಮಾಡಿ ಕೆಲಸ ಗಿಟ್ಟಿಸಿಕೊಂಡಿದ್ದರೆ ಭವಿಷ್ಯದಲ್ಲಿ ದಿಗ್ಗಜರಾಗುವ ಸಾಧ್ಯತೆ ಇದೆ.

ಅಮೆರಿಕದ ರೆಡ್ ಕಾಲೇಜಿನನಲ್ಲಿ ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಯಾಗಿದ್ದ ಸ್ಟೀವ್ ಜಾಬ್ಸ್ , ತಮ್ಮ ರೆಸ್ಯೂಮ್‌ನಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಟೆಕ್ನಾಲಜಿ ಸ್ಪೆಷಲೇಶನ್ ಎಂದು ಉಲ್ಲೇಖಿಸಿದ್ದಾರೆ. ಸ್ಕಿಲ್ಸ್‌ನಲ್ಲಿ ಕಂಪ್ಯೂಟರ್, ಕ್ಯಾಲ್ಯುಕಲೇಶನ್ ಹಾಗೂ ಡಿಸೈನ್ ಎಂದು ಬರೆದುಕೊಂಡಿದ್ದಾರೆ. ಫೋನ್ ಇಲ್ಲ ಎಂದಿದ್ದರೆ, ಇನ್ನು ಡೈವಿಂಗ್ ಲೈಸೆನ್ಸ್ ಇದೆ ಎಂದಿದ್ದಾರೆ. ಸ್ಟೀವ್ಸ್ ಜಾಬ್ 1973ರಲ್ಲಿ ಕೆಲಸಕ್ಕಾಗಿ ನೀಡಿದ್ದ ಈ ರೆಸ್ಯೂಮ್ ಇದೀಗ ವೈರಲ್ ಆಗುತ್ತಿದೆ. ಸ್ಟೀವ್ಸ್ ಜಾಬ್ ರೆಸ್ಯೂಮ್ ಕೊಟ್ಟು ಕೆಲ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ಸ್ಟೀವ್ ಜಾಬ್ಸ್ ಬಳಿಕ ಆ್ಯಪಲ್ ಕಂಪನಿ ಹುಟ್ಟು ಹಾಕಿ ಜಗತ್ತಿನ ಅತೀ ದೊಡ್ಡ ಟೆಕ್ ಕಂಪನಿಯಾಗಿ ಹೊರಹೊಮ್ಮಿದೆ. 

ಉದ್ಯೋಗಕ್ಕಾಗಿ ರೆಸ್ಯೂಮ್ ಜೊತೆ ಫಿಜಾ ಕಳುಹಿಸಿದ ಅಭ್ಯರ್ಥಿ, ವಿನೂತನ ಐಡಿಯಾಗೆ ಬಾಸ್ ಇಂಪ್ರೆಸ್!

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ 1971ರಲ್ಲಿ ತಯಾರಿಸಿದ ರೆಸ್ಯೂಮ್ ಈಗಲೂ ಕೆಲಸ ಗಿಟ್ಟಿಸಿಕೊಳ್ಳಲು ಪ್ರಸ್ತುತವಾಗಿದೆ. ಕಾರಣ ಬಿಲ್ ಗೇಟ್ಸ್ ರೆಸ್ಯೂಮ್‌ನಲ್ಲಿ ತಮ್ಮ ವಿಶೇಷ ಪ್ರತಿಭೆ, ವಿಷಯಗಳ ಕುರಿತು ಉಲ್ಲೇಖಿಸಿದ್ದಾರೆ. ಈ ಪೈಕಿ ಪ್ರೋಗ್ರಾಮಿಂಗ್ ಲಾಗ್ವೆಂಜ್‌ಗಳ ಉಲ್ಲೇಖವನ್ನು ಮಾಡಿದ್ದಾರೆ. BASIC, COBOL ಹಾಗೂ  FORTRAN ಪ್ರೋಗ್ರಾಮಿಂಗ್ ಲಾಗ್ವೆಂಜ್‌ನಲ್ಲಿ ಪರಿಣಿತಿ ಹೊಂದಿರುವುದಾಗಿ ಬರೆದುಕೊಂಡಿದ್ದಾರೆ.

 

 

ಪಿಡಿಪಿ 10, ಪಿಡಿಪಿ 8, ಸಿಡಿಸಿ 6400 ಕಂಪ್ಯೂಟರ್ ಪ್ರೊಗ್ರಾಂ ಪರಿಣಿತಿ ಹೊಂದಿರುವುದಾಗಿ ಹೇಳಿದ್ದಾರೆ. 1971ರಲ್ಲಿ ಬಿಲ್ ಗೇಟ್ಸ್ ವೇತನ ನಿರೀಕ್ಷೆಯಲ್ಲಿ ಸರಿಸುಮಾರು 29 ಲಕ್ಷ ರೂಪಾಯಿ ಎಂದು ನಮೂದಿಸಿದ್ದಾರೆ. ಬಳಿಕ ಬಿಲ್ ಗೇಟ್ಸ್ ಟೆಕ್ ದೈತ್ಯ ಮೈಕ್ರೋಸಾಫ್ಟ್ ಸಂಸ್ಥೆಯನ್ನು ಹುಟ್ಟುಹಾಕಿ ವಿಶ್ವಕ್ಕೆ ಮಾದರಿಯಾಗಿದ್ದಾರೆ.

ಬಿಲ್ ಗೇಟ್ಸ್ ಹಾಗೂ ಸ್ಟೀವ್ ಜಾಬ್ಸ್, ಇವರಿಬ್ಬರ ರೆಸ್ಯೂಮ್‌ನ್ನು ಬಿಎನ್ಎನ್ ಬ್ಲೂಮ್‌ಬರ್ಗ್‌ನ ಜಾನ್ ಎಲ್ರಿಚ್‌ನ್ ಹಂಚಿಕೊಂಡಿದ್ದಾರೆ. ಇವರಂತೆ ನಿಮ್ಮ ಪ್ರತಿಭೆ, ಕೌಶಲ್ಯ, ಪರಿಣಿತಿ ಬಗ್ಗೆ ಸ್ಪಷ್ಟವಾಗಿ ನಮೂದಿಸಿದರೆ ಮುಂದೊಂದು ದಿನ ಇದೇ ರೀತಿ ಟೆಕ್ ದಿಗ್ಗಜರಾಗುವುದರಲ್ಲಿ ಅನುಮಾನವಿಲ್ಲ.

ಕ್ರಿಯೆಟಿವಿಟಿಗೆ ಸಿಕ್ತು ಮೆಚ್ಚುಗೆ, ಬ್ಲಿಂಕಿಟ್ ಮೂಲಕ ಉದ್ಯೋಗಕ್ಕಾಗಿ ರೆಸ್ಯೂಮ್ ಕಳುಹಿಸಿದ ಅಭ್ಯರ್ಥಿ!
 

Latest Videos
Follow Us:
Download App:
  • android
  • ios