Asianet Suvarna News Asianet Suvarna News

ಬಿಎಚ್‌ಇಎಲ್‌ನಲ್ಲಿ 40 ಟ್ರೈನಿ ಹುದ್ದೆಗಳಿಗೆ ನೇಮಕಾತಿ, ಬಿಕಾಂ ಪದವೀಧರರಿಗೆ ಅವಕಾಶ

ಸಾರ್ವಜನಿಕ ವಲಯದ ಪ್ರಮುಖ ಕಂಪನಿಯಾಗಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಕಂಪನಿಯು(ಬಿಎಚ್ಇಎಲ್) 40 ಟ್ರೈನಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಿದೆ. ಬಿ ಕಾಂ ಪದವೀಧರರು ಈ ಟ್ರೈನಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬುಹದು. ಅರ್ಜಿ ಸಲ್ಲಿಸಲು ಏಪ್ರಿಲ್ 26 ಕೊನೆಯ ದಿನವಾಗಿದೆ.

BHEL is recruiting for its 40 trainee posts in Financial department
Author
Bengaluru, First Published Apr 1, 2021, 1:30 PM IST

ಸಾರ್ವಜನಿಕ ವಲಯದ  ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್(ಬಿಎಚ್ಇಎಲ್) 40 ಟ್ರೈನಿ ಹುದ್ದೆಗಳಿಗೆ ಅರ್ಜಿಯನ್ನ ಆಹ್ವಾನಿಸಿದ್ದು, ಈ ಸಂಬಂಧ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಖಾಲಿ ಹುದ್ದೆಗಳಿಗೆ ಏಪ್ರಿಲ್ 5 ರಿಂದ 26 ರೊಳಗೆ ಅಧಿಕೃತ ವೆಬ್ಸೈಟ್ careers.bhel.in ಮೂಲಕ ಅರ್ಜಿ ಸಲ್ಲಿಸಬಹುದು. ಬಿಎಚ್ಇಎಲ್ ನೇಮಕಾತಿ 2021 ಅನ್ನು ತಾತ್ಕಾಲಿಕವಾಗಿ ಮೇ 23, 2021 ರಂದು ನಡೆಸಲು ನಿರ್ಧರಿಸಲಾಗಿದೆ.

ಬಿಎಚ್ಇಎಲ್ ತನ್ನ ವೆಬ್‌ಸೈಟ್‌ನಲ್ಲಿ ಹಣಕಾಸು ವಿಭಾಗದಲ್ಲಿ ಮೇಲ್ವಿಚಾರಕ ಟ್ರೈನಿ ಹುದ್ದೆಗೆ ಕಿರು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಬಿಎಚ್ಇಎಲ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾವು ವಾಣಿಜ್ಯ ವಿಭಾಗದಲ್ಲಿ (ಬಿ.ಕಾಂ) ಪದವಿ ಪಡೆದಿರಬೇಕು.

ಯೋಗ ಪದವಿ ಇದ್ದರೆ ಕೈತುಂಬಾ ದುಡಿಮೆ ಗ್ಯಾರಂಟಿ!

ಬಿಎಚ್‌ಇಎಲ್ 40 ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ 2021 ಏಪ್ರಿಲ್ 5ರಿಂದ ಆರಂಭವಾಗಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2021 ಏಪ್ರಿಲ್ 26 ಕೊನೆಯ ದಿನವಾಗಿದೆ. ಜೊತೆಗೆ 2021 ಮೇ 23 ರಂದು ಈ ಸಂಬಂಧ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಈ ಪರೀಕ್ಷೆ ನಡೆಸುವ ದಿನಾಂಕ ತಾತ್ಕಾಲಿಕವಾಗಿದೆ. ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಈ ಬಗ್ಗೆ ಗಮನಹರಿಸುವುದು.

ಬಿಎಚ್ಇಎಲ್ ಸಂಸ್ಥೆ, ಹಣಕಾಸು ಇಲಾಖೆಯಲ್ಲಿ ಖಾಲಿ ಇರುವ 40 ಹುದ್ದೆಗಳನ್ನು ಪೂರೈಸುವ ಗುರಿ ಹೊಂದಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ತಮ್ಮ ಎಲ್ಲ ದಾಖಲೆಗಳನ್ನು ಹೊಂದಿರಬೇಕು. ಹಾಗೆಯೇ ಅರ್ಜಿಯ ಪ್ರಕ್ರಿಯೆಯಲ್ಲಿ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಲ್ಲಿಸಲು ಅರ್ಜಿದಾರರು ಒಮ್ಮೆ ಖಚಿತಪಡಿಸಿಕೊಳ್ಳಬೇಕು.

BHEL is recruiting for its 40 trainee posts in Financial department

ಬಿಎಚ್ಇಎಲ್ ನೇಮಕ ಮಾಡಿಕೊಳ್ಳುತ್ತಿರುವ 40 ಟ್ರೈನಿ ಹುದ್ದೆಗಳು ಈ ರೀತಿಯಾಗಿ ಮೀಸಲಾಗಿವೆ: ಯುಆರ್‌ಗೆ 25 ಹುದ್ದೆಗಳು, ಆರ್ಥಿಕವಾಗಿ ಹಿಂದುಳಿದ ವರ್ಗ(ಇಡಬ್ಲ್ಯೂಎಸ್)ಕ್ಕೆ ಎರಡು ಹುದ್ದೆಗಳು, ಹಿಂದುಳಿದ ವರ್ಗ(ಒಬಿಸಿ)ಕ್ಕೆ 19 ಹುದ್ದೆಗಳು, ಪರಿಶಿಷ್ಟ ಜಾತಿ(ಎಸ್‌ಸಿ) ವರ್ಗಕ್ಕೆ 2 ಹುದ್ದೆಗಳು ಮತ್ತು ಪರಿಶಿಷ್ಟ ಪಂಗಡ(ಎಸ್‌ಟಿ)ಕ್ಕೆ ಒಂದು ಹುದ್ದೆಯನ್ನು ಮೀಸಲಿಡಲಾಗಿದೆ.

School on Scooty: ಈ ಶಿಕ್ಷಕನಿಗೆ ನೀವು ಸೆಲ್ಯೂಟ್ ಹೊಡೆಯಲೇಬೇಕು!

ಬಿಎಸ್ಇಎಲ್ ಸೂಪರ್ವೈಸರ್ ಟ್ರೈನಿ ಹುದ್ದೆಗಳಿಗೆ ಅರ್ಜಿ  ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು  ಬಿ ಕಾಂ ಪದವೀಧರರಾಗಿರಬೇಕು. ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿರಬೇಕು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆದರಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BHEL ಅಧಿಕೃತ ವೆಬ್‌ಸೈಟ್‌ careers.bhel.in ನಲ್ಲಿ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು. ಏಪ್ರಿಲ್ 5 ರಿಂದ ಏಪ್ರಿಲ್ 26ರೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು.

ಅಭ್ಯರ್ಥಿಗಳು ಸಲ್ಲಿಸುವ ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು. ಬಳಿಕ ಆಯ್ಕೆಯಾದ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕರೆಯಲಾಗುತ್ತದೆ. ನೇಮಕಾತಿ ಕುರಿತಂತೆ ಹೆಚ್ಚಿನ ನವೀಕರಣ ಅಥವಾ ಮಾಹಿತಿಗಾಗಿ ಅರ್ಜಿದಾರರು ಅಧಿಕೃತ ವೆಬ್ಸೈಟ್ ಮತ್ತು ಅಧಿಸೂಚನೆಯನ್ನ ಗಮನಿಸಬಹುದು.

ಸಿಆರ್‌ಪಿಎಫ್‌ನಲ್ಲಿ ವಿಶೇಷ ವೈದ್ಯಾಧಿಕಾರಿಯಾಗಲು ಏ.14 ನೇರ ಸಂದರ್ಶನ

Follow Us:
Download App:
  • android
  • ios