Asianet Suvarna News Asianet Suvarna News

School on Scooty: ಈ ಶಿಕ್ಷಕನಿಗೆ ನೀವು ಸೆಲ್ಯೂಟ್ ಹೊಡೆಯಲೇಬೇಕು!

ಕೊರೋನಾ ಸೋಂಕು ನಮ್ಮೆಲ್ಲರ ಬದುಕಿನ ಪಥವನ್ನೇ ಬದಲಿಸಿದೆ. ಎಂದೂ ಬಾಗಿಲು ಹಾಕದ ಶಾಲೆಗಳು ವರ್ಷಪೂರ್ತಿ ಬಾಗಿಲು ಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಇಂಥ ಪರಿಸ್ಥಿತಿಯಲ್ಲಿ ಮಕ್ಕಳನ್ನು ಕಲಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲು. ಹಲವು ಶಿಕ್ಷಕರು ತಮ್ಮದೇ ವಿಶಿಷ್ಟ ರೀತಿಯಲ್ಲಿ ಕಲಿಸುವ ಕಾರ್ಯವನ್ನು ಮುಂದವರಿಸಿದ್ದಾರೆ. ಆ ಪೈಕಿ ಮಧ್ಯಪ್ರದೇಶಗ ಈ ಶಿಕ್ಷಕ ಭಿನ್ನವಾಗಿ ನಿಲ್ಲುತ್ತಾರೆ.

A teacher turned his scooty in to school and library
Author
Bengaluru, First Published Mar 30, 2021, 2:22 PM IST

ಕೊರೋನಾ ಈ ಶೈಕ್ಷಣಿಕ ವರ್ಷವನ್ನ ಉಪಯೋಗಕ್ಕೆ ಬಾರದಂತೆ ಮಾಡಿಬಿಡ್ತು. ದೀರ್ಘಕಾಲ ಮುಚ್ಚಿದ್ದ ಶಾಲೆಗಳಿಂದಾಗಿ ಮಕ್ಕಳು ಕಲಿಕೆಯಿಂದ ವಂಚಿತರಾದ್ರು. ನಗರ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣಕ್ಕೆ ಒಗ್ಗಿಕೊಂಡ್ರೆ, ಗ್ರಾಮೀಣ ಪ್ರದೇಶಗಳಿಗೆ ಯಾವುದೇ ಪಾಠ-ಪ್ರವಚನಗಳು ಸಿಗಲಿಲ್ಲ. ಅದರಲ್ಲೂ ಸರ್ಕಾರಿ ಶಾಲೆಗಳ ಮಕ್ಕಳ ಸ್ಥಿತಿ ನಿಜಕ್ಕೂ ಆಯೋಮಯ.

ಸಿಆರ್‌ಪಿಎಫ್‌ನಲ್ಲಿ ವಿಶೇಷ ವೈದ್ಯಾಧಿಕಾರಿಯಾಗಲು ಏ.14 ನೇರ ಸಂದರ್ಶನ

ಹಳ್ಳಿಗಾಡಿನ ಮಕ್ಕಳಿಗೆ ಆಫ್ಲೈನ್ ಶಿಕ್ಷಣವೊಂದೇ ಆಧಾರ. ಸರ್ಕಾರಿ ಶಾಲೆಗಳ ಮಕ್ಕಳ ಸಮಸ್ಯೆಗಳು ಒಂದೆರಡಲ್ಲ. ಅವರಿಗೆ ಮೊಬೈಲ್ ಸಿಗುವುದು, ನೆಟ್ವರ್ಕ್ ಸಂಪರ್ಕ ಅನ್ನೋದು ದೂರದ ಮಾತು.ಕೆಲ ರಾಜ್ಯಗಳಲ್ಲಿ ಹಳ್ಳಿಗಾಡಿನ ಮಕ್ಕಳಿಗಾಗಿಯೇ ಸರ್ಕಾರಗಳು ವಿದ್ಯಾಗಮದಂತಹ ಕಾರ್ಯಕ್ರಮಗಳನ್ನ ನಡೆಸಿವೆ.  ಕೊರೊನಾ ಭೀತಿಯಲ್ಲೇ ಶಿಕ್ಷಕರು, ಮಕ್ಕಳಿಗೆ ಪಾಠ ಹೇಳಿಕೊಡುವಂತಾಗಿತ್ತು.  ಆದ್ರೆ ಇಲ್ಲೊಬ್ಬ ಸರ್ಕಾರಿ ಶಿಕ್ಷಕ ಮಕ್ಕಳ ಬಳಿಗೆ ಹೋಗಿ ವಿನೂತನ ಮಾದರಿಯಲ್ಲಿ ಶಿಕ್ಷಣ ನೀಡುತ್ತಿದ್ದಾರೆ.. ತಮ್ಮ ಸ್ಕೂಟಿಯನ್ನೇ ಅನ್ನೇ ಪುಟ್ಟ ಶಾಲೆಯನ್ನಾಗಿ ರೂಪಿಸಿದ್ದಾರೆ ಆ ಶಿಕ್ಷಕ.

A teacher turned his scooty in to school and library


 
ಹೌದು.. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಹಳ್ಳಿಗಳ ಬಡ ಮಕ್ಕಳಿಗೆ ಶಿಕ್ಷಕ ಚಂದ್ರ ಶ್ರೀವಾಸ್ತವ್ ವಿನೂತನ ರೀತಿಯಲ್ಲಿ ಪಾಠ ಕಲಿಸಿಕೊಡುತ್ತಿದ್ದಾರೆ. ತಮ್ಮ ಸ್ಕೂಟಿಯಲ್ಲಿ  ಮಿನಿ-ಸ್ಕೂಲ್ ಮತ್ತು ಲೈಬ್ರರಿಯನ್ನು ಸ್ಥಾಪಿಸಿದ್ದಾರೆ. ಈ ಸ್ಕೂಟರ್ ಮೂಲಕ ಹಳ್ಳಿಗಳಿಗೆ ತೆರಳಿ ಮರದ ಕೆಳಗಿನ ನೆರಳಿನಲ್ಲಿ ಹೊರಾಂಗಣ ತರಗತಿ ನಡೆಸ್ತಿದ್ದಾರೆ. ತಮ್ಮ ಸ್ಕೂಟಿಯಲ್ಲಿ ಒಂದೆಡೆ ಬ್ಲಾಕ್ಬೋರ್ಡ್, ಇನ್ನೊಂದೆಡೆ ಪಠ್ಯ ಪುಸ್ತಕ ಹಾಗೂ ನೋಟ್ಬುಕ್ಗಳನ್ನ ಜೋಡಿಸಿರುವ ಪುಟ್ಟ ಗ್ರಂಥಾಲಯವೇ ಇದೆ. ಕೆಲವು ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಾರೆ. ಇನ್ನು ಕೆಲ ಪಠ್ಯಪುಸ್ತಕಗಳು ಮತ್ತು ಕಥೆ ಪುಸ್ತಕಗಳನ್ನು ನಿಗದಿತ ಸಮಯದೊಳಗೆ ಹಿಂದಿರುಗಿಸಬೇಕೆಂಬ ಷರತ್ತಿನ ಮೇಲೆ ವಿದ್ಯಾರ್ಥಿಗಳಿಗೆ ನೀಡುತ್ತಾರೆ.

3,479 ಶಿಕ್ಷಕ ಹುದ್ದೆಗೆ ನೇಮಕಾತಿ ಶುರು, ಕೂಡಲೇ ಅರ್ಜಿ ಹಾಕಿ

ಸ್ಕೂಟಿ ಜೊತೆ ಹಳ್ಳಿಗಳಿಗೆ ತೆರಳುವ ಚಂದ್ರ ಶ್ರೀವಾಸ್ತವ್, ಮಕ್ಕಳಿಗೆ ಪಾಠ ಹೇಳಿಕೊಡಲು ಸಣ್ಣ ಮೈಕ್ ಬಳಸುತ್ತಾರೆ. ಪದ್ಯದ ತರಗತಿಯಲ್ಲಿ , ಮೈಕ್ ಮೂಲಕ ಮಕ್ಕಳಿಗೆ ಹೇಳುವುದು ಹಾಗೂ ಮಕ್ಕಳು ಪದ್ಯಗಳನ್ನು ಏಕರೂಪವಾಗಿ ಗಟ್ಟಿಯಾಗಿ ಹೇಳೋದನ್ನ ಗಮನಿಸಬಹುದು. ಹೀಗೆ ಕೊರೊನಾದಿಂದ ಶಾಲೆಗಳಿಗೆ ಹೋಗಲು ಸಾಧ್ಯವಾಗದ ತಮ್ಮ ಮಕ್ಕಳಿಗಾಗಿ ತಮ್ಮೂರಿಗೆ ಬಂದು ಮೈಕ್ ಬಳಸಿ  ನಿಯಮಿತವಾಗಿ ತರಗತಿಗಳನ್ನು ತೆಗೆದುಕೊಳ್ಳುತ್ತಿರೋ ಶಿಕ್ಷಕನಿಗೆ ಧನ್ಯವಾದ ಅರ್ಪಿಸುತ್ತಾರೆ ಪೋಷಕರು.

ಕೊರೋನಾ ಬಿಕ್ಕಟ್ಟು ಇರುವುದರಿಂದ ಮಾಸ್ಟರ್ ಚಂದ್ರ ಸಾರ್, ತಮ್ಮೂರಿಗೆ ಬಂದು ನಮಗೆ ಗಣಿತ ಹಾಗೂ ಮತ್ತಿತರ ವಿಷಯಗಳನ್ನು ಕಲಿಸುತ್ತಾರೆ ಅಂತಾನೆ 6 ನೇ ತರಗತಿಯ ವಿದ್ಯಾರ್ಥಿ ಕೇಶವ್.

ಇಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಬಡ ಕುಟುಂಬಗಳಿಗೆ ಸೇರಿದವರಾಗಿದ್ದು, ಸ್ಮಾರ್ಟ್‌ಫೋನ್‌ಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೆ ಅಂತಾರೆ ಚಂದ್ರ ಶ್ರೀವಾಸ್ತವ್.

ನಮಗೆ ಇಲ್ಲಿ ಸರಿಯಾಗಿ ನೆಟ್‌ವರ್ಕ್ ಸಿಗುವುದಿಲ್ಲ. ಮೊದಲು ವೀಡಿಯೊಗಳನ್ನು ಡೌನ್‌ಲೋಡ್ ಮಾಡಿ, ಅವುಗಳನ್ನು ಮೊಬೈಲ್‌ ಮೂಲಕ ಮಕ್ಕಳಿಗೆ ತೋರಿಸುತ್ತಿದ್ದೆ. ಆನಂತರ ಸ್ಕೂಟರ್ನಲ್ಲಿ ಹಳ್ಳಿಗಳಿಗೆ ತೆರಳಿ ಕಲಿಸಲು ಪ್ರಾರಂಭಿಸಿದೆ. ಆ ಸ್ಕೂಟರ್ನಲ್ಲಿ ಒಂದು ಬದಿಯಲ್ಲಿ ಹಸಿರು ಬೋರ್ಡ್ ಮತ್ತು ಇನ್ನೊಂದು ಕಡೆ ಪುಸ್ತಕಗಳಿವೆ ಎಂದು ವಿವರಿಸುತ್ತಾರೆ ಚಂದ್ರ ಶ್ರೀವಾಸ್ತವ್.

ಪತ್ರ ಬರೆದು, ಚಿನ್ನದ ಪದಕ ಗೆದ್ದು, ಸ್ವಿಜರ್ಲೆಂಡ್‌ಗೆ ಹೋಗಿ!

ಶಿಕ್ಷಕ ಚಂದ್ರ ಶ್ರೀವಾಸ್ತವ್ ಅವರ ಪ್ರಯತ್ನಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಕೊರೋನಾ ಕಾಲಘಟ್ಟದಲ್ಲಿ ಮಕ್ಕಳು ಕಲಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಹಾಗಾಗಿಯೇ, ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಪ್ರಯತ್ನಿಸುತ್ತಿವೆ. ಜೊತೆಗೆ, ಚಂದ್ರ ವಾಸ್ತವ್‌ನಂಥ ಕ್ರಿಯಾಶೀಲ ಶಿಕ್ಷಕರು ತಮ್ಮದೇ ಆದ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥ ಶಿಕ್ಷಕರಿಗೆ ನಾವು ಸಲಾಂ ಹೇಳಲೇಬೇಕು.

Follow Us:
Download App:
  • android
  • ios