ಸಿಆರ್‌ಪಿಎಫ್‌ನಲ್ಲಿ ವಿಶೇಷ ವೈದ್ಯಾಧಿಕಾರಿಯಾಗಲು ಏ.14 ನೇರ ಸಂದರ್ಶನ
ಕೇಂದ್ರೀಯ ಮೀಸಲು ಪಡೆ(ಸಿಆರ್‌ಪಿಎಫ್)ನಲ್ಲಿ ವಿಶೇಷ ವೈದ್ಯಾಧಿಕಾರಿಗಳ ನೇಮಕಾತಿಯ ಪ್ರಕ್ರಿಯನ್ನು ಆರಂಭಿಸಲಾಗಿದೆ. ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕವೇ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳು ಗುತ್ತಿಗೆ ಆಧಾರಿತವಾಗಿದ್ದು, ಆಯ್ಕೆಯಾದವರಿಗೆ ತಿಂಗಳಿಗೆ 85 ಸಾವಿರ ರೂ.ವರೆಗೂ ಸಂಬಳ ಸಿಗಲಿದೆ.
ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆ (ಸಿಆರ್‌ಪಿಎಫ್) ತಜ್ಞ ವೈದ್ಯಕೀಯ ಅಧಿಕಾರಿ ಹುದ್ದೆ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ನೇಮಕಾತಿ ಅಧಿಸೂಚನೆಯಲ್ಲಿ, ಅಸ್ಸಾಂನ ಸಿಲ್ಚಾರ್‌ನಲ್ಲಿರುವ ಸಿಆರ್‌ಪಿಎಫ್ ಆಸ್ಪತ್ರೆಗಳಲ್ಲಿ ನೇಮಕಗೊಳ್ಳುವ ವೈದ್ಯಕೀಯ ತಜ್ಞರಿಗಾಗಿ ಈ ನೇಮಕಾತಿ ಇದೆ ಎಂದು ಕೇಂದ್ರ ಸಂಸ್ಥೆ ಸ್ಪಷ್ಟಪಡಿಸಿದೆ. ಈ ನೇಮಕಾತಿಯ ಕಾಂಟ್ರಾಕ್ಟ್ ಬೇಸ್ಡ್ ನೇಮಕಾತಿಯಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆಸಕ್ತ ಅಭ್ಯರ್ಥಿಗಳಿಗೆ ಏಪ್ರಿಲ್ 14, 2021 ರಂದು ವಾಕ್-ಇನ್ ಇಂಟರ್‌ವ್ಯೂ ನಿಗದಿಪಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು crpf.gov.in ಗೆ ಭೇಟಿ ನೀಡಿ ವಿವರಗಳನ್ನು ಪರಿಶೀಲಿಸಬಹುದು.
ಬ್ಯಾಂಕ್ ಆಫ್ ಮಹಾರಾಷ್ಟ್ರದ ಜನರಲ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
ವಿಶೇಷ ವೈದ್ಯಾಧಿಕಾರಿ ನೇಮಕದ ಸಂಬಂಧ ಕೇಂದ್ರೀಯ ಮೀಸಲು ಪಡೆ(ಸಿಆರ್‌ಪಿಎಫ್) ಹೊರಡಿಸಿರುವ ಅಧಿಸೂಚನೆ ಬಗ್ಗೆ ಹಾಗೂ ಇನ್ನಿತರ ಮಾಹಿತಿಯನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಕೇಂದ್ರೀಯ ಮೀಸಲು ಪಡೆಯು ಅನಸ್ತೇಶಿಯಾ 1, ಪ್ಯಾಥೋಲಜಿ – 01, ಮೆಡಿಸಿನ್ – 01, ರೆಡಿಯಾಲಜಿ – 01, ಕಣ್ಣಿನ ವೈದ್ಯ - 01 ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ. ಆಸಕ್ತ ನಿಗದಪಡಿಸಿದ ನಿರ್ದಿಷ್ಟ ದಿನಾಂಕದಂದ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಅಭ್ಯರ್ಥಿಗಳು ವಿಶೇಷವಾಗಿ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ / ಡಿಪ್ಲೊಮಾ ಪಡೆದಿರಬೇಕು. ಅಭ್ಯರ್ಥಿಗಳು ಪದವಿ ಪಡೆದಿದ್ದರೆ ಒಂದೂವರೆ ವರ್ಷಗಳ ಅನುಭವ ಮತ್ತು ಡಿಪ್ಲೊಮಾ ಪಡೆದವರು ಎರಡೂವರೆ ವರ್ಷಗಳ ಅನುಭವ ಹೊಂದಿರಬೇಕು. ಸಂದರ್ಶನಕ್ಕೆ ಹಾಜರಾಗಲು ಇಚ್ಛಿಸುವ ಅಭ್ಯರ್ಥಿಗಳ ವಯೋಮಿತಿ ಬಗ್ಗೆ ಹೇಳುವುದಾದರೆ, ಅಭ್ಯರ್ಥಿಗಳು 70 ವರ್ಷ ವಯಸ್ಸು ಮೀರಿರಬಾರದು.
ಎನ್ಐಎಫ್‌ಟಿನಲ್ಲಿ ಪ್ರೊಫೆಸರ್ ಹುದ್ದೆ, 70 ಸಾವಿರ ರೂ.ವರೆಗೂ ವೇತನ
ನೇರ ಸಂದರ್ಶನ ಮೂಲಕ ಆಯ್ಕೆ: ಆಸಕ್ತ ಅಭ್ಯರ್ಥಿಗಳು 2021 ರ ಏಪ್ರಿಲ್ 14 ರಂದು ತಮ್ಮ ವಾಕ್-ಇನ್ ಸಂದರ್ಶನಕ್ಕಾಗಿ ಕಾಂಪೋಸಿಟ್ ಆಸ್ಪತ್ರೆ, ಸಿಆರ್ಪಿಎಫ್, ಜಿಸಿ ಕ್ಯಾಂಪಸ್, ಉದರ್ಬಂದ್, ದಯಾಪುರ, ಸಿಲ್ಚಾರ್ (ಅಸ್ಸಾಂ) ಗೆ ಭೇಟಿ ನೀಡಬೇಕು. ಅಂದು ಬೆಳಗ್ಗೆ ೯ ಗಂಟೆಗೆ ನೇರ ಸಂದರ್ಶನ ನಡೆಯಲಿದೆ. ಸಂದರ್ಶನದ ನಂತರ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ನೇರ ಸಂದರ್ಶನಕ್ಕೆ ಹಾಜರಾಗುವಾಗ, ಅಭ್ಯರ್ಥಿಗಳು ಎಲ್ಲಾ ಸಂಬಂಧಿತ ದಾಖಲೆಗಳ ಮೂಲ ಮತ್ತು ಫೋಟೊಕಾಪಿ ದಾಖಲೆಗಳನ್ನು ತರಬೇಕು. ಕಾಗದದ ಮೇಲೆ ಅರ್ಜಿ ಸಲ್ಲಿಸಿದ ಪೋಸ್ಟ್‌ನ ಹೆಸರಿನೊಂದಿಗೆ ಅರ್ಜಿ ನಮೂನೆಯನ್ನು ಸಲ್ಲಿಸಬೇಕು ಮತ್ತು ಐದು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳನ್ನು ಅರ್ಜಿ ಜೊತೆಗೆ ಲಗತ್ತಿಸಬೇಕು.
ಆಯ್ಕೆಯಾಗುವ ಸಿಆರ್ಪಿಎಫ್ ವೈದ್ಯ ಅಧಿಕಾರಿ ಹುದ್ದೆಗೆ 85,000 ರೂ.ವರೆಗೆ ಸಂಬಳ ಸಿಗಲಿದೆ.
ಕಾಂಟ್ರಾಕ್ಡ್ ಬೇಸಿಸ್ ನೇಮಕಾತಿ: ಕೇವಲ ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಒಪ್ಪಂದದ ಆರಂಭಿಕ ಅವಧಿಯು ಮೂರು ವರ್ಷಗಳವರೆಗೆ ಇರುತ್ತದೆ. ಗರಿಷ್ಠ 70 ವರ್ಷಕ್ಕೆ ಒಳಪಟ್ಟಂತೆ ನಂತ್ರ ಇದನ್ನು ಮತ್ತೆರಡು ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ. ಅಧಿಕಾರಾವಧಿಯು ಪೂರ್ಣಗೊಂಡ ನಂತರ ಒಪ್ಪಂದವು ತಂತಾನೇ ಮುಗಿದು ಹೋಗಲಿದೆ.. ಆದಾಗ್ಯೂ, ನೋಟಿಸ್ ಅವಧಿಯ ಒಂದು ತಿಂಗಳ ಸೇವೆ ಸಲ್ಲಿಸಿದ ನಂತರ ನೇಮಕಾತಿಯನ್ನು ಎರಡೂ ಕಡೆಗಳಲ್ಲಿ ಯಾವುದೇ ಸಮಯದಲ್ಲಿ ಕೊನೆಗೊಳಿಸಬಹುದು.
ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬೇಕು.
ಪತ್ರ ಬರೆದು, ಚಿನ್ನದ ಪದಕ ಗೆದ್ದು, ಸ್ವಿಜರ್ಲೆಂಡ್‌ಗೆ ಹೋಗಿ!