ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸಲು ರೆಸ್ಯೂಮ್ ತುಂಬಾ ಇಂಪಾರ್ಟೆಂಟ್. ಸರ್ಕಾರಿ ಉದ್ಯೋಗಗಳಿಗಾದ್ರೆ ಕೊಟ್ಟಿರುವ ಅರ್ಜಿಯನ್ನು ನಮೂದಿಸಿ ಕೊಟ್ಟು ಬಿಡ್ತೇವೆ. ಆದ್ರೆ ಖಾಸಗಿ ಕಂಪನಿಗಳಿಗೆ ಹಾಗಾಗಲ್ಲ. ಸುಂದರವಾಗಿ, ಆಕರ್ಷಕವಾಗಿ ರೆಸ್ಯೂಮ್ ತಯಾರಿಸಿ ಕೊಡಬೇಕು. ಬಹುತೇಕ ಉದ್ಯೋಗದಾತರು  ರೆಸ್ಯೂಮ್‌ ಅನ್ನು ನೀವು ಹೇಗೆ ರೆಪ್ರೆಸೆಂಟ್ ಮಾಡ್ತಿರಾ ಅನ್ನೋದನ್ನ ಗಮನಿಸ್ತಾರೆ. ಚಿಕ್ಕದಾಗಿ ಚೊಕ್ಕದಾಗಿ ಕ್ರಿಯಾತ್ಮಕವಾಗಿ ರೆಸ್ಯೂಮ್ ಇದ್ದರೆ ಸಾಕು, ಸಂದರ್ಶಕರು ಇಂಪ್ರೆಸ್ ಆಗೋದರಲ್ಲಿ ಡೌಟೇ ಇಲ್ಲ.

ಅಂದಹಾಗೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ತಯಾರಿಸುವ ರೆಸ್ಯೂಮ್ ಅನ್ನು ಸಿವಿ ಅಥವಾ ಕೆರಿಕ್ಯುಲಮ್ ವಿಟಾ ಅಂತಲೂ ಕರೆಯುತ್ತೇವೆ. ಅಲ್ಲಿಗೆ ರೆಸ್ಯೂಮ್ ಅಥವಾ ಸಿವಿ ಎರಡೂ ಒಂದೇ ಅಂದುಕೊಂಡಿದ್ದೇವೆ. ಆದ್ರೆ ಅವೆರಡಕ್ಕೂ ಬಹಳ ವ್ತತ್ಯಾಸವಿದೆ ಅನ್ನೋದು ನಿಮಗೆ ಗೊತ್ತಾ?

ಕ್ರೀಡಾ ಕೋಟಾದಲ್ಲಿ ತೆರಿಗೆ ಇಲಾಖೆಯಲ್ಲಿ ಉದ್ಯೋಗ, ಅರ್ಜಿ ಹಾಕಿ

ಕೆರಿಕ್ಯುಲಮ್ ವಿಟಾ ಅಥವಾ ಸಿವಿ
ಕೆರಿಕ್ಯುಲಮ್ ವಿಟಾ ಅಥವಾ ಸಿವಿ, ಸಾಮಾನ್ಯವಾಗಿ ಇದನ್ನ ನಾವು ಸುದೀರ್ಘವಾದ ದಾಖಲೆ ಎನ್ನುತ್ತೇವೆ. ಇದು ಎರಡು ಅಥವಾ ಹೆಚ್ಚಿನ ಪುಟಗಳನ್ನು ಒಳಗೊಂಡಿರುತ್ತದೆ. ಇದು ನಿಮ್ಮ ಎಲ್ಲಾ ಸಾಧನೆಗಳನ್ನು ವಿವರವಾಗಿ ಹೊಂದಿರುತ್ತದೆ. ಶಿಕ್ಷಣದ ಹೊರತಾಗಿ, ನಿಮ್ಮ ಇತರ ಸಾಧನೆಗಳಾದ ಪ್ರಶಸ್ತಿಗಳು, ಗೌರವಗಳು, ಪ್ರಕಟಣೆಗಳು ಇತ್ಯಾದಿಗಳನ್ನು ಸಹ ಸಿವಿ ಒಳಗೊಂಡಿರುತ್ತದೆ. ಏಕೆಂದರೆ ಇದು ನಿಮ್ಮ ವೃತ್ತಿಜೀವನದ ಇತಿಹಾಸದ ಸಂಪೂರ್ಣ ದಾಖಲೆಯಾಗಿರುತ್ತದೆ. ನೀವು ಎಲ್ಲಾ ವಿವರಗಳನ್ನು ಕಾಲಾನುಕ್ರಮದಲ್ಲಿ ಪಟ್ಟಿ ಮಾಡಬೇಕು. ಆಗ ನಿಮ್ಮ ಪೂರ್ಣ ವೃತ್ತಿಜೀವನದ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ಸುಲಭವಾಗುತ್ತದೆ. ಸಿ.ವಿ ಅನ್ನೋದು ಒಂದು ಸ್ಥಿರವಾದ ದಾಖಲೆಯಾಗಿದ್ದು, ಅದು ವಿಭಿನ್ನ ಉದ್ಯೋಗಗಳಿಗೆ ಬದಲಾಗುವುದಿಲ್ಲ. ಅದು ಕವರ್ ಲೆಟರ್‌ ಆಗಿದ್ದು, ಸ್ಥಾನಕ್ಕೆ ಅನುಗುಣವಾಗಿ ಬದಲಾಗುತ್ತದೆ. ಪ್ರಮುಖವಾಗಿ ಇದನ್ನು ಇಂಗ್ಲೆಂಡ್‌ನಲ್ಲಿ ಹಾಗೂ ಕಚೇರಿಯಾತ್ಮಕ ಉದ್ದೇಶಗಳಿಗೆ ಮಾತ್ರ ಬಳಸಲಾಗುತ್ತದೆ.

ರೆಸ್ಯೂಮ್ ಏನು?
ರೆಸ್ಯೂಮ್ ಅನ್ನೋದು ಒಂದು ಸಂಕ್ಷಿಪ್ತ ದಾಖಲೆಯಾಗಿದ್ದು, ಸಾಮಾನ್ಯವಾಗಿ ಇದು ಒಂದು ಪುಟಕ್ಕಿಂತ ಹೆಚ್ಚು ಉದ್ದ ಇರುವುದಿಲ್ಲ. ಸ್ಪಷ್ಟವಾಗಿ ಅಚ್ಚುಕಟ್ಟಾಗಿ ನಿಮ್ಮ ಕುರಿತ ವಿವರಣೆ, ಒಂದೇ ಪುಟದಲ್ಲಿರಬೇಕು. ರೆಸ್ಯೂಮ್ ತಯಾರಿಸುವದಕ್ಕೂ ಒಂದು ವಿಧಾನವಿದೆ. ಯಾವುದಾದ್ರೂ ಕೆಲ್ಸಕ್ಕೆ ರೆಸ್ಯೂಮ್ ಸಲ್ಲಿಸಿದಾಗ, ಉಳಿದ ಅರ್ಜಿದಾರರ ನಡುವೆ ನಿಮ್ಮ ರೆಸ್ಯೂಮ್ ಎದ್ದು ಕಾಣುವ ರೀತಿಯಲ್ಲಿ ತಯಾರಿಸಬೇಕು. ನೀವು ಅರ್ಜಿ ಸಲ್ಲಿಸುವ ಪ್ರತಿಯೊಂದು ಸ್ಥಾನಕ್ಕೆ ತಕ್ಕಂತೆ ಇದನ್ನು ಹೊಂದಿಸಬೇಕು. ಆದ್ರೆ ಇದು ಕಾಲಾನುಕ್ರಮವಾಗಿಯೇ ಇರಬೇಕಾಗಿಲ್ಲ. ಜೊತೆಗೆ ಹೆಚ್ಚು ಗ್ರಾಹಕೀಯಗೊಳಿಸಬಹುದು.

ಈ ವಿಶ್ವವಿದ್ಯಾಲಯದಲ್ಲಿ ಓದುತ್ತಲೇ ಪಾರ್ಟ್ ಟೈಮ್ ಜಾಬ್ ಕೂಡ ಮಾಡಬಹುದು!

ನಿಮ್ಮ ಹೆಸರು, ಜನ್ಮ ದಿನಾಂಕ, ಸಂಪರ್ಕಿಸಬೇಕಾದ ವಿಳಾಸ, ಶೈಕ್ಷಣಿಕ ವಿವರ, ಹವ್ಯಾಸ, ಸಾಧನೆ ಇವಿಷ್ಟು ಕೂಡ ಸಂಕ್ಷಿಪ್ತವಾಗಿ ರೆಸ್ಯೂಮ್‌ನಲ್ಲಿ ಇರಬೇಕು. ವಿವರಗಳನ್ನು ಕ್ರಮಬದ್ಧವಾಗಿ ಅರ್ಥಪೂರ್ಣವಾಗಿ ಬರೆಯುವುದೇ ಸುಂದರ ರೆಸ್ಯೂಮ್ ನ ಹಿಂದಿರುವ ಗುಟ್ಟು. ಸರಳವಾಗಿರುವ ರೆಸ್ಯೂಮ್ ಗಳು ಹೆಚ್ಚು ಗಮನ ಸೆಳೆಯುತ್ತವೆ. ಸಂದರ್ಶಕನು ಕೇವಲ 30 ಸೆಕೆಂಡ್‌ಗಳಲ್ಲಿ ರೆಸ್ಯೂಮ್ ಓದಿ ಮುಗಿಸುವಂತೆ ಅದನ್ನ ಸಿದ್ಧಪಡಿಸಬೇಕು. ಅತ್ಯಂತ ಮಹತ್ವದ ಮಾಹಿತಿಯನ್ನು ಮಾತ್ರ ರೆಸ್ಯೂಂನಲ್ಲಿ ಹೈಲೈಟ್‌ ಮಾಡಬೇಕು. ಪ್ಯಾರಗ್ರಾಫ್‌ಗಳಲ್ಲಿ ವಿವರಿಸುವ ಬದಲು ಬುಲೆಟ್‌ಗಳನ್ನು ಬಳಸುವುದು ಉತ್ತಮ. ರೆಸ್ಯೂಮ್‌ನಲ್ಲಿ ಬೇಡವಾದ ಹವ್ಯಾಸಗಳು, ಸ್ಕಿಲ್‌, ಸಾಧನೆಗಳ ಬಗ್ಗೆ ಮಾಹಿತಿ ಇರುವುದಿಲ್ಲ.
 
ಬಳಕೆ ಹೇಗೆ?
ಅಮೆರಿಕ ಮತ್ತು ಕೆನಡಾದಲ್ಲಿ ಜನರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವಾಗ ಸಾಮಾನ್ಯವಾಗಿ ರೆಸ್ಯೂಮ್ ಹಾಕಲು ಬಯಸುತ್ತಾರೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವಾಗ ಅಥವಾ ಶೈಕ್ಷಣಿಕ ಅಥವಾ ಸಂಶೋಧನಾ ಸ್ಥಾನವನ್ನು ಹುಡುಕುವಾಗ ಮಾತ್ರ ಸಿ.ವಿ. ಸಲ್ಲಿಸಲಾಗುತ್ತದೆ.ಇಂಗ್ಲೆಂಡ್, ಐರ್ಲೆಂಡ್ ಮತ್ತು ನ್ಯೂಜಿಲೆಂಡ್‌ನಲ್ಲಿ ಎಲ್ಲಾ ಸಂದರ್ಭಗಳಲ್ಲಿಯೂ ಸಿವಿಯನ್ನು ಬಳಸಲಾಗುತ್ತದೆ. ರೆಸ್ಯೂಮ್ ಅನ್ನು ಬಳಕೆ ಮಾಡುವುದಿಲ್ಲ.

ಸೋ.. ನೀವು ಸ್ಮಾರ್ಟ್ ಆಗಿರಿ, ಸ್ಮಾರ್ಟ್ ಆಗಿ ವರ್ತಿಸಿ. ನಿಮ್ಮ ಆಯ್ಕೆಯ ಕೆಲಸವನ್ನು ಪಡೆಯಲು ಸಿವಿ ಹಾಗೂ ರೆಸ್ಯೂಮ್‌ನ ವ್ಯತ್ಯಾಸವನ್ನು ತಿಳಿಯಿರಿ.

ಕಾಲೇಜ್ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್