ಅಮೆಜಾನ್ H1B ಉದ್ಯೋಗಿಗಳ ಸ್ಯಾಲರಿ ಬಹಿರಂಗವಾಗಿದೆ. ಇ ಕಾಮರ್ಸ್ ಕಂಪನಿಯಲ್ಲಿ ನೌಕರಿ ಗಿಟ್ಟಿಸಿಕೊಂಡ ಪ್ರತಿಯೊಬ್ಬ ಉದ್ಯೋಗಿೂ ಕೈ ತುಂಬ ಸಂಬಳ. ಸಾಫ್ಟ್‌ವೇರ್ ಎಂಜಿನೀಯರ್ಸ್‌ಗೆ 2.3 ಕೋಟಿ ರೂಪಾಯಿ ವೇತನ ನೀಡಲಾಗುತ್ತಿದೆ. ಅಮೆಜಾನ್ ಉದ್ಯೋಗಿಗಳ ಸ್ಯಾಲರಿ ಪಟ್ಟಿ ಇಲ್ಲಿದೆ.

ವಾಶಿಂಗ್ಟನ್ (ಜು.24) ಹಲವು ದಿಗ್ಗಜ ಟೆಕ್ ಕಂಪನಿಗಳಲ್ಲಿ ಉದ್ಯೋಗ ಕಡಿತದ ಮಾತುಗಳು ಕೇಳಿಬರುತ್ತಿದೆ. ಕೆಲ ಕಂಪನಿಗಳು ಹಂತ ಹಂತವಾಗಿ ಉದ್ಯೋಗ ಕಡಿತ ಮಾಡುತ್ತಿದೆ. ಇದರ ನಡುವೆ ಅಮೇಜಾನ್ ಕಂಪನಿಯಲ್ಲಿ ಉದ್ಯೋಗಿಗಳ ಸ್ಯಾಲರಿ ಎಷ್ಟು ಅನ್ನೋದು ಬಹಿರಂಗವಾಗಿದೆ. ಹೆಚ್1ಬಿ ವೀಸಾದಡಿ ಅಮೇಜಾನ್‌ನಲ್ಲಿ ಕೆಲಸ ಮಾಡುತ್ತಿರುವರಿಗೆ ಭರ್ಜರಿ ಸ್ಯಾಲರಿ ನೀಡಲಾಗುತ್ತಿದೆ. ಸಾಫ್ಟ್‌ವೇರ್ ಎಂಜಿನೀಯರ್ಸ್‌ಗೆ 2.3 ಕೋಟಿ ರೂಪಾಯಿ, ಇನ್ನು ಮ್ಯಾನೇಜರ್ ಸೇರಿದಂತೆ ಹಲವರಿಗೆ ಕೋಟಿ ಕೋಟಿ ರೂಪಾಯಿ ವೇತನ ನೀಡಲಾಗುತ್ತಿದೆ. ಅಮೇಜಾನ್ ಹೆಚ್1ಬಿ ವೀಸಾ ಉದ್ಯೋಗಳ ಸಂಪೂರ್ಣ ವೇತನ ಪಟ್ಟಿ ಬಹಿರಂಗವಾಗಿದೆ.

ಭಾರತ ಸೇರಿದಂತೆ ಹಲವು ದೇಶದಲ್ಲಿದೆ ಅಮೆಜಾನ್

ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಅಮೆಜಾನ್ ಇ ಕಾಮರ್ಸ್ ಕಾರ್ಯನಿರ್ವಹಿಸುತ್ತಿದೆ. ವಿಶ್ವಾದ್ಯಂತ ಅಮೆಜಾನ್‌ನಲ್ಲಿ 15 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಜಗತ್ತಿನ ಅತೀ ದೊಡ್ಡ ಕಂಪನಿಗಳಲ್ಲಿ ಅಮೆಜಾನ್ ಕೂಡ ಒಂದಾಗಿದೆ. ಇದರಲ್ಲಿ 11,300 ವಿದೇಶಿ ಉದ್ಯೋಗಿಗಳು ಹೆಚ್1ಬಿ ವೀಸಾದಡಿ ಅಮೆರಿಕದ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಅಮೆಜಾನ್ ಹೆಚ್1ಬಿ ವೀಸಾದಡಿ ಕೆಲಸ ಮಾಡುತ್ತಿರುವ ಅಮೆಜಾನ್ ಉದ್ಯೋಗಿಗಳ ವೇತನ

ಸಾಫ್ಟ್‌ವೇರ್ ಎಂಜಿನೀಯರ್ (ಅಮೆಜಾನ್ ವೆಬ್ ಸೀರಿಸ್ ) ವೇತನ: $263,700

ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಎಂಜಿನೀಯರ್ (ಅಮೆಜಾನ್ ಡಾಟ್ ಕಾಂ) ವೇತನ: $263,700

ಡೇಟಾ ಸೈಂಟಿಸ್ಟ್ ಅಮೆಜಾನ್ ವೇತನ: $230,900

ಟೆಕ್ನಿಕಲ್ ಪ್ರೊಡಕ್ಟ್ ಮ್ಯಾನೇಜರ್ಸ್ ವೇತನ: $235,200

ಡೇಟಾ ಎಂಜಿನೀಯರ್ ವೇತನ:$236,344

ಫಿನಾನ್ಶಿಯಲ್ ಅನಾಲಿಸ್ಟ್ ವೇತನ:$204,028

ಸೊಲ್ಯುಶನ್ ಆರ್ಕಿಟೆಕ್ಟ್ ವೇತನ: $225,000

ಅನುಭವ, ಪರಿಣಿತಿ, ಕೌಶಲ್ಯದ ಆಧಾರದ ಮೇಲೆ ಈ ಗರಿಷ್ಠ ವೇತ ನೀಡಲಾಗುತ್ತದೆ. ಪ್ರಮುಖವಾಗಿ ಉದ್ಯೋಗದ ವಿಭಾಗ, ಅವರ ಜವಾಬ್ದಾರಿ, ಲೆವಲ್ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಸ್ಯಾಲರಿ ನೀಡಲಾಗುತ್ತದೆ. ಮೇಲೆ ಪ್ರತಿ ವಿಭಾಗದ ಗರಿಷ್ಠ ಸ್ಯಾಲರಿ ಪಟ್ಟಿ ನೀಡಲಾಗಿದೆ.

ಬ್ಯೂಸಿನೆಸ್ ಇಂಟಲಿಜೆನ್ಸ್ ಎಂಜಿನೀಯರ್ :$176,012

ಅಕೌಂಟ್ ಎಂಜನೀಯರ್ : $238,965

ಪ್ರೊಫೆಶನ್ ಸರ್ವೀಸ್ : $218,200

ಸಪೋರ್ಟ್ ಎಂಜಿನೀಯರ್ : $160,000

ಪ್ರೊಗ್ರಾಮ್ ಮ್ಯಾನೇಜರ್ : $162,700

ಕ್ವಾಲಿಟಿ ಅಶ್ಯುರೆನ್ಸ್ ಎಂಜಿನೀಯರ್ : $185,000

ಸಪ್ಲೈ ಚೈನ್ ಮ್ಯಾನೇಜರ್ : $168,000

ಸಿಸ್ಟಮ್ ಡೆಲವಪ್‌ಮೆಂಟ್ ಎಂಜಿನೀಯರ್ : $198,000

ಟೆಕ್ನಿಕಲ್ ಪ್ರೊಗ್ರಾಮ್ ಮ್ಯಾನೇಜರ್ : $231,400