ಅಕ್ಟೋಬರ್ 14, 15ರಂದು ‘ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೋಗ ಮೇಳ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅ.14,15ರಂದು ‘ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳುತ್ತಿದೆ. 200ಕ್ಕೂ ಅಧಿಕ ಕಂಪೆನಿಗಳು, 20 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳ ನಿರೀಕ್ಷೆ ಎಂದು ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದ್ದಾರೆ.
ಮಂಗಳೂರು (ಸೆ.16): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಲ್ಪಡುತ್ತಿರುವ ‘ಆಳ್ವಾಸ್ ಪ್ರಗತಿ-2022’ ಬೃಹತ್ ಉದ್ಯೋಗ ಮೇಳ ಅ.14, 15ರಂದು ಮೂಡುಬಿದಿರೆಯ ವಿದ್ಯಾಗಿರಿಯ ಕಾಲೇಜು ಆವರಣದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತವಾಗಿ ಉದ್ಯೋಗ ಅವಕಾಶ ಕಲ್ಪಿಸಿ ಕೊಡಬೇಕು ಎನ್ನುವ ಉದ್ದೇಶದಿಂದ 2007ರಿಂದ ಉದ್ಯೋಗ ಮೇಳ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿ 200ಕ್ಕೂ ಅಧಿಕ ಕಂಪೆನಿಗಳು, 20 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು. ಈ ವರ್ಷದ 12ನೇ ಆವೃತ್ತಿಯ ಉದ್ಯೋಗ ಮೇಳದಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ, ಐಟಿಎಸ್, ಮ್ಯಾನುಫ್ಯಾಕ್ಚರಿಂಗ್, ಹೆಲ್ತ್‌ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಹಾಸ್ಪಿಟಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಮತ್ತು ಎನ್‌ಜಿಒಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ನೇಮಕಾತಿ ನಡೆಸಲಿವೆ. ಈ ಕಂಪೆನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್‌ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ, ಎಸೆಸ್ಸೆಲ್ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ ಎಂದರು.
ಉಚಿತ ನೋಂದಣಿ: ಭಾಗವಹಿಸುವ ಅಭ್ಯರ್ಥಿಗಳಿಗೆ ನೋಂದಣಿ ಕಡ್ಡಾಯ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳ ವಿವರ ಹಾಗೂ ನವೀಕೃತ ಮಾಹಿತಿಗಳನ್ನು ಅಧಿಕೃತ ವೆಬ್‌ಸೈಟ್ ಡಿಡಿಡಿ.a್ಝvasp್ಟaಜaಠಿಜಿ.್ಚಟಞ ನಲ್ಲಿ ಪ್ರಕಟಿಸಲಾಗುವುದು. ಉದ್ಯೋಗ ನೀಡುವ ಕಂಪೆನಿಗಳ ಮಾಹಿತಿ, ಸಂದರ್ಶನ ಕೌಶಲ್ಯಗಳ ತರಬೇತಿಯನ್ನು ವಿವಿಧ ಕಡೆಗಳಲ್ಲಿ ಆನ್‌ಲೈನ್ ಹಾಗೂ ಆಫ್‌ಲೈನ್ ಆಗಿ ನಡೆಸಲಾಗುವುದು ಎಂದು ತಿಳಿಸಿದರು.
200ಕ್ಕೂ ಅಧಿಕ ಕಂಪೆನಿಗಳು: ಆಳ್ವಾಸ್ ಪ್ರಗತಿಗೆ ಸುಮಾರು 200ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಐಸಿಐಸಿಐ, ಆ್ಯಕ್ಸಿಸ್, ಕೋಟಕ್ ಮಹೀಂದ್ರಾ ಬ್ಯಾಂಕ್‌ನಂತಹ ಪ್ರತಿಷ್ಠಿತ ಬ್ಯಾಂಕ್‌ಗಳು ಅವಕಾಶ ನೀಡಲಿವೆ. ಅಮೆಝಾನ್, ನೆಟ್‌ಮೆಡ್‌್ಸ, ಅವಿನ್ ಸಿಸ್ಟಮ್ಸ್, ಮೆಡ್ ಪ್ಯಾಕ್ ಸಿಸ್ಟಮ್ಸ್‌ನಂತಹ ಪ್ರಮುಖ ಐಟಿ ಕಂಪೆನಿಗಳು ಭಾಗವಹಿಸಲಿವೆ. ಮಂಗಳೂರು ಮೂಲದ ಐಟಿ ಕಂಪನಿಗಳಾದ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್, ವಿನ್‌ಮ್ಯಾನ್ ಸಾಫ್ಟ್‌ವೇರ್, ದಿಯಾ ಸಿಸ್ಟಮ್ಸ್, ಅದ್ವೆ ೖತ ಸಿಸ್ಟಮ್ಸ್ ಮುಂತಾದವುಗಳು ಉದ್ಯೋಗವಕಾಶ ನೀಡಲಿವೆ ಎಂದು ಹೇಳಿದರು.
ಉತ್ಪಾದನಾ ವಲಯದಲ್ಲಿ ಏಸ್ ಮ್ಯಾನುಫ್ಯಾಕ್ಚರಿಂಗ್, ಸನ್ಸೆರಾ ಎಂಜಿನಿಯರಿಂಗ್, ಸ್ಟಂಪ್ ಶೂಲೆ ಆ್ಯಂಡ್ ಸೋಮಪ್ಪ ಸ್ಟ್ರಿಂಗ್‌್ಸ , ಸ್ವಿಚ್‌ಗೇರ್ ಆ್ಯಂಡ್ ಕಂಟ್ರೋಲ್, ಓರಿಯೆಂಟ್ ಬೆಲ್ ಸೇರಿದಂತೆ ಈ ವರ್ಷ ಮೆಕ್ಯಾನಿಕಲ್ ಎಂಜಿನಿಯರ್‌ಗಳಿಗಾಗಿ 100ಕ್ಕೂ ಹೆಚ್ಚು ಉದ್ಯೋಗವಕಾಶಗಳು ಇರಲಿವೆ. ಗಲ್‌್ಫನ ‘ಎಕ್ಸ್‌ಪರ್ಟೈಸ್’ ಬಹುರಾಷ್ಟ್ರೀಯ ಕಂಪೆನಿಯು ಮೆಕ್ಯಾನಿಕಲ್ ಎಂಜಿನಿಯರ್‌ಗಳ ನೇಮಕಾತಿ ನಡೆಸಲಿದೆ. ಟೊಯೊಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ, ಹೋಂಡಾ, ಫೌರೆಸಿಯಾ ಎಮಿಷನ್ಸ್ ಕಂಟ್ರೋಲ್ ಟೆಕ್ನಾಲಜೀಸ್ ಇಂಡಿಯಾ, ಟಫೆ, ಹರಿತಾ ಫೆಹ್ರೆರ್, ಟೊಯೋಟಾ ಸುಶೋ ಸ್ಟೀಲ್ ಸರ್ವಿಸ್ ಇಂಡಿಯಾ, ಎಒ ಸ್ಮಿತ್ ಇಂಡಿಯಾ ವಾಟರ್ ಪ್ರಾಡಕ್ಟ್$್ಸ ಮತ್ತು ಇನ್ನಿತರ ಐಟಿಐ ಹಾಗೂ ಡಿಪ್ಲೊಮಾ ಸಂಬಂಧಿತ ಕಂಪೆನಿಗಳು ನೇಮಕಾತಿ ಮಾಡಿಕೊಳ್ಳಲಿವೆ. ಮೈಸೂರು ಭಾಗದ ಕಂಪೆನಿಗಳಲ್ಲಿ ಕೇನ್ಸ್ ಟೆಕ್ನಾಲಜಿ, ವುತ್‌ರ್ ಎಲೆಕ್ಟ್ರಾನಿಕ್, ಟಿವಿಎಸ್ ಮೋಟಾರ್ಸ್, ಸುಂದರಂ ಆಟೋ ಕಾಂಪೊನೆಂಟ್ಸ್ ಲಿಮಿಟೆಡ್ ಸೇರಿದಂತೆ ವಿವಿಧ ಕಂಪೆನಿಗಳು ಭಾಗವಹಿಸಲಿದೆ ಎಂದು ವಿವೇಕ್ ಆಳ್ವ ತಿಳಿಸಿದರು.
ಬಿಕಾಂ ಪದವೀಧರರಿಗೆ ಉತ್ಪಾದನಾ ವಲಯದಲ್ಲಿ ಹೆಚ್ಚಿನ ಅಕೌಟೆಂಟ್ ಹುದ್ದೆಗಳು ಹಾಗೂ ಇತರ ಪದವೀಧರರಿಗೆ ವಿವಿಧ ವಲಯಗಳಲ್ಲಿ ವಿಫುಲ ಉದ್ಯೋಗಾವಕಾಶಗಳು ಇರಲಿವೆ. ನರ್ಸಿಂಗ್, ಬಿ.ಫಾರ್ಮಾ, ಎಂ.ಫಾರ್ಮಾ, ಬಿಎನ್‌ವೈಎಸ್ ಹಾಗೂ ಬಿಪಿಟಿ ವಿದ್ಯಾರ್ಹತೆಗಳೊಂದಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವ ಪ್ರಮುಖ ಆಸ್ಪತ್ರೆಗಳಾದ ನಾರಾಯಣ ಹೃದಯಾಲಯ ಸ್ಪೆಷಾಲಿಟಿ ಆಸ್ಪತ್ರೆ, ಫೋರ್ಟಿಸ್ ಆಸ್ಪತ್ರೆ ನಾರಾಯಣ ಹೆಲ್ತ್ ಕೇರ್, ಇಂಡಿಯಾನ ಹಾಸ್ಪಿಟಲ್ ಆ್ಯಂಡ್ ಹಾರ್ಚ್ ಇನ್‌ಸ್ಟಿಟ್ಯೂಟ್, ಕೆಎಂಸಿ ಆಸ್ಪತ್ರೆ, ಗೋವಾದ ಮಣಿಪಾಲ್ ಆಸ್ಪತ್ರೆ ಅಖಿಲಾ ಸೌಖ್ಯ ಹೆಲ್ತ್ ಕೇರ್, ಸ್ಪಶ್‌ರ್ ಹಾಸ್ಪಿಟಲ್ಸ್, ಸುಖಿನೋ ಹೆಲ್ತ್ ಕೇರ್ ಸೊಲ್ಯೂಷನ್ಸ್ ಮುಂತಾದ ಆಸ್ಪತ್ರೆಗಳು ಉದ್ಯೋಗ ನೀಡಲಿವೆ ಎಂದರು.
ನರ್ಸಿಂಗ್ ಪದವೀಧರ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯಲಿದ್ದಾರೆ. ಬಿಗ್ ಬಾಸ್ಕೆಟ್, ಟ್ರೆಂಟ್ ಹೈಪರ್ ಮಾರ್ಕೆಟ್, ಕೆಫೆ ಕಾಫಿ ಡೇ, ಮಣಿರಂಜನ್ ಡೀಸೆಲ್ ಸೇಲ್ಸ್ ಆ್ಯಂಡ್ ಸರ್ವಿಸ್ ಲಿಮಿಟೆಡ್ ಸೇರಿದಂತೆ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರನ್ನು ನೇಮಿಸಿಕೊಳ್ಳುವ ಪ್ರಮುಖ ಕಂಪೆನಿಗಳು. ಮಹೀಂದ್ರಾ, ಮಾಂಡೋವಿ ಮೋಟಾರ್ಸ್, ಆಟೋ ಮ್ಯಾಟ್ರಿಕ್ಸ್, ತಿರುಮಲ ಮೋಟಾರ್ಸ್ ಮುಂತಾದ ಆಟೋಮೊಬೈಲ್ ಶೋರೂಮ್‌ಗಳು ಡಿಪ್ಲೊಮಾ ಮತ್ತು ಪದವೀಧರರಿಗೆ ಅವಕಾಶ ನೀಡಲಿವೆ. ಶೈಕ್ಷಣಿಕ ವಲಯದಲ್ಲಿ ಎಕ್ಸ್‌ಟ್ರಾಮಾರ್ಕ್ಸ್, ದೇಶಪಾಂಡೆ ಫೌಂಡೇಶನ್, ಗೋವನ್ ಇನ್‌ಸ್ಟಿಟ್ಯೂಟ್ ಆಫ್ ಕೊಚ್ಚಿನ್ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರನ್ನು ನೇಮಿಸಿಕೊಳ್ಳಲಿದೆ. ಕಟ್ಟಡ ನಿರ್ಮಾಣ ಹಾಗೂ ಸಿಮೆಂಟ್ ಉತ್ಪಾದನಾ ವಲಯದಲ್ಲಿ ಅನುಭವಿ ಹಾಗೂ ಪ್ರಸಕ್ತ ಪದವಿ ಪೂರೈಸಿದ ಸಿವಿಲ್ ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಿದ್ದಾರೆ ಎಂದರು.
KKRTC RECRUITMENT 2022: ಕಲ್ಯಾಣ ಕರ್ನಾಟಕ ಸಾರಿಗೆಯ ವಿವಿಧ ವಿಭಾಗಕ್ಕೆ ಅರ್ಜಿ ಆಹ್ವಾನ
ಗೋಷ್ಠಿಯಲ್ಲಿ ಉದ್ಯೋಗ ಮತ್ತು ತರಬೇತಿ ವಿಭಾಗ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೊ, ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಸಂಯೋಜಕ ಪ್ರಸಾದ್ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ಪದ್ಮಾನಭ ಶೆಣೈ, ಕುಮಾರಸ್ವಾಮಿ ಇದ್ದರು.
BHEL RECRUITMENT 2022: ವಿವಿಧ 150 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಸತಿ ವ್ಯವಸ್ಥೆ, ನೋಂದಣಿ: ಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಅಭ್ಯರ್ಥಿಗಳ ಕಡ್ಡಾಯ ನೋಂದಣಿಗಾಗಿ https://alvaspragati.com/ ನಲ್ಲಿ ನೋಂದಣಿ ಮಾಡಬಹುದು. ಅಭ್ಯರ್ಥಿಗಳು 5-10 ಪಾಸ್‌ಪೋರ್ಚ್ ಭಾವಚಿತ್ರಗಳು, ಅಂಕ ಪಟ್ಟಿಗಳು (ಜೆರಾಕ್ಸ್), ಆನ್‌ಲೈನ್ ನೋಂದಣಿ ನಂಬರ್/ಐಡಿ ಇರಬೇಕು. ಉದ್ಯೋಗ ಮೇಳದಂದು ಬೆಳಗ್ಗೆ 8 ಗಂಟೆಗೆ ಸ್ಥಳದಲ್ಲಿ ಹಾಜರಿರಬೇಕು ಎಂದು ವಿವೇಕ್ ಆಳ್ವ ತಿಳಿಸಿದರು.
ಹೆಚ್ಚಿನ ಮಾಹಿತಿಗೆ 9008907716/ 9663190590/ 7975223865/ 9741440490.