ಎರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಭಾರತ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಖಾಲಿ ಇರುವ ಸೀನಿಯರ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 10 ಕೊನೆ ದಿನ.

ಎರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಭಾರತ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಇಲ್ಲಿ ಖಾಲಿ ಇರುವ ಸೀನಿಯರ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ: ಒಟ್ಟು 64 ಹುದ್ದೆಗಳು

1. ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್) : 14 ಹುದ್ದೆ

2. ಹಿರಿಯ ಸಹಾಯಕ (ಕಾರ್ಯಾಚರಣೆಗಳು) : 02 ಹುದ್ದೆ

3. ಹಿರಿಯ ಸಹಾಯಕ (ಅಕೌಂಟ್ಸ್)‌ : 05 ಹುದ್ದೆ

4. ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆಗಳು) : 43 ಹುದ್ದೆ

ಪ್ರಮುಖ ದಿನಾಂಕಗಳು

ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-02-2024

ಅರ್ಜಿ ಶುಲ್ಕ

ಸಾಮಾನ್ಯ / ಒಬಿಸಿ /ಇಡಬ್ಲ್ಯೂಎಸ್‌ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ : ರು. 1000

ಎಸ್‌ ಸಿ / ಎಸ್‌ ಟಿ / ಮಾಜಿ ಸೈನಿಕ / ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ: ಇರುವುದಿಲ್ಲ

ವಯಸ್ಸಿನ ಮಿತಿ (30-12-2023)

ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು

ಗರಿಷ್ಠ ವಯಸ್ಸಿನ ಮಿತಿ: 30 ವರ್ಷಗಳು

ವೇತನ ಶ್ರೇಣಿ

1. ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್) - 36,000 -1,10,000

2. ಹಿರಿಯ ಸಹಾಯಕ (ಕಾರ್ಯಾಚರಣೆಗಳು) - 36,000 - 1,10,000

3. ಹಿರಿಯ ಸಹಾಯಕ (ಖಾತೆಗಳು) -36,000 -1,10,000

4. ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆ) -31,000-92,000

ಅರ್ಹತೆ ಮತ್ತು ಅನುಭವ

1. ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆಗಳು) ಹುದ್ದೆಗೆ :

ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ 10 ನೇ ತರಗತಿ ಉತ್ತೀರ್ಣ ಹೊಂದಿರಬೇಕು ಹಾಗೂ ಮೆಕ್ಯಾನಿಕಲ್ / ಆಟೋ ಮೊಬೈಲ್ / ಫೈರ್ ವಿಭಾಗದಲ್ಲಿ ಡಿಪ್ಲೊಮಾ ಪಡೆದಿರಬೇಕು.

2. ಹಿರಿಯ ಸಹಾಯಕ (ಕಾರ್ಯಾಚರಣೆಗಳು) ಹುದ್ದೆಗೆ :

ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು ಹಾಗೂ ವಾಹನ ಚಾಲನಾ ಪರವಾಗಿ ಹೊಂದಿರಬೇಕು ಹಾಗೂ ಸಂಬಂಧಪಟ್ಟ ವಿಭಾಗದಲ್ಲಿ 2 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ

ಸಾಮಾನ್ಯ ಜ್ಞಾನ, ಸಾಮಾನ್ಯ ಬುದ್ಧಿವಂತಿಕೆ, ಸಾಮಾನ್ಯ ಯೋಗ್ಯತೆ ಮತ್ತು ಇಂಗ್ಲಿಷ್‌ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗಂಟೆಗಳ ಅವಧಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇಲ್ಲಿ ಸಾಮಾನ್ಯ / ಒಬಿಸಿ/ ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳು ಕನಿಷ್ಠ 50 ಅಂಕಗಳು ಮತ್ತು ಎಸ್‌ ಸಿ / ಎಸ್‌ ಟಿ ಅಭ್ಯರ್ಥಿಗಳು ಕನಿಷ್ಠ 40 ಅಂಕಗಳನ್ನು ಕಡ್ಡಾಯವಾಗಿ ಪಡೆಯಬೇಕಾಗುತ್ತದೆ.

3. ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್) ಹುದ್ದೆಗೆ :

ಎಲೆಕ್ಟ್ರಾನಿಕ್ಸ್ / ಟೆಲಿಕಮ್ಯುನಿಕೇಶನ್ / ರೇಡಿಯೊ ವಿಭಾಗದಲ್ಲಿ ಡಿಪ್ಲೊಮಾ ಪಡೆದಿರಬೇಕು ಹಾಗೂ ಸಂಬಂಧಪಟ್ಟ ವಿಭಾಗದಲ್ಲಿ 2 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು.

4. ಹಿರಿಯ ಸಹಾಯಕ (ಖಾತೆಗಳು) ಹುದ್ದೆಗೆ :

ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಬಿ.ಕಾಂ ಪದವಿ ಪಡೆದಿರಬೇಕು. ಕಂಪ್ಯೂಟರ್ ತರಬೇತಿ ಹೊಂದಿರಬೇಕು ಹಾಗೂ ಸಂಬಂಧಪಟ್ಟ ವಿಭಾಗದಲ್ಲಿ 2 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ

ಸಾಮಾನ್ಯ ಜ್ಞಾನ, ಜನರಲ್ ಇಂಟೆಲಿಜೆನ್ಸ್, ಜನರಲ್ ಆಪ್ಟಿಟ್ಯೂಡ್ , ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ಶೇಕಡಾ 30 ರಷ್ಟು ಪ್ರಶ್ನೆಗಳನ್ನು ಹಾಗೂ ಶೈಕ್ಷಣಿಕ ಅರ್ಹತೆಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಶೇಕಡಾ 70 ರಷ್ಟು ಪ್ರಶ್ನೆಗಳನ್ನು ಒಳಗೊಂಡ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ. ಇಲ್ಲಿ ಸಾಮಾನ್ಯ / ಒಬಿಸಿ /ಇಡಬ್ಲ್ಯೂಎಸ್‌ ವರ್ಗದ ಅಭ್ಯರ್ಥಿಗಳು ಕನಿಷ್ಠ 50 ಅಂಕಗಳು ಮತ್ತು ಎಸ್‌ ಸಿ / ಎಸ್‌ ಟಿ ಅಭ್ಯರ್ಥಿಗಳು ಕನಿಷ್ಠ 40 ಅಂಕಗಳನ್ನು ಪಡೆಯಬೇಕಾಗುತ್ತದೆ. ಅರ್ಹ ಅಭ್ಯರ್ಥಿಗಳನ್ನು ಅಂತಿಮವಾಗಿ ದಾಖಲಾತಿ ಪರಿಶೀಲನೆಗೆ ಕರೆಯಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ : www.aai.aero