ವೆಚ್ಚವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೇಶದ ಸ್ಟಾರ್ಟ್‌ಅಪ್‌ಗಳು  ಹೂಡಿಕೆದಾರರಿಂದ ಒತ್ತಡವನ್ನು ಎದುರಿಸುತ್ತಿದೆ. ಹಾಗಾಗಿ ಬಹುತೇಕ ಸ್ಟಾರ್ಟ್‌ಅಪ್‌ಗಳಲ್ಲಿ ಹಣಕಾಸಿನ ಕೊರತೆ ಉಂಟಾಗಿದೆ. ತಮ್ಮ ಪಕ್ಕದಲ್ಲೇ ಕುಳಿತುಕೊಂಡಿರುತ್ತಿದ್ದ ಸಹೋದ್ಯೋಗಿಗಳಿಗೆ ಕಾರಣವೇ ಇಲ್ಲದೆ ಕಂಪನಿಯಿಂದ ಹೊರಹಾಕಲಾಗುತ್ತಿದೆ. ಇನ್ನೂ ಕೆಲವರು ತಾವಾಗಿಯೇ ತೊರೆದಿದ್ದಾರೆ, ಬಹುತೇಕರು ಎಲ್ಲವನ್ನೂ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ. 

ಬೆಂಗಳೂರು (ಏ.4): ಸಿಲಿಕಾನ್‌ ವ್ಯಾಲಿ ಬ್ಯಾಂಕ್‌, ಕ್ರೆಡಿಟ್‌ ಸೂಸಿ ಬ್ಯಾಂಕ್‌ಗಳ ಪತನ, ಜಾಗತಿಕ ಆರ್ಥಿಕ ಬಿಕ್ಕಟ್ಟು ವಿಶ್ವಕ್ಕೆ ತಾಕಿದೆ. ಇದು ಭಾರತದ ಮೇಲೆ ಅದರಲ್ಲೂ ಭಾರತದ ಸ್ಟಾರ್ಟ್‌ಅಪ್‌ಗಳ ಮೇಲೆ ಪರಿಣಾಮ ಬೀರಿದೆ. ಇತ್ತೀಚೆಗೆ ಒಳಾಂಗಣ ವಿನ್ಯಾಸ ಮಾಡುವ ಸ್ಟಾರ್ಟ್‌ಅಪ್‌ ತನ್ನ ವರ್ಕ್‌ಫೋರ್ಸ್‌ಅನ್ನು ಇಳಿಕೆ ಮಾಡಲು ಆರಂಭಿಸಿತು. ಇದರಿಂದಾಗಿ ಕಂಪನಿಯ ಉದ್ಯೋಗಿಯೊಬ್ಬರಿಗೆ ಹೃದಯಾಘಾತವೂ ಆಗಿತ್ತು. ಕಂಪನಿಯ ಮ್ಯಾನೇಜರ್‌ ಈ ವಿಚಾರವನ್ನು ಸಹೋದ್ಯೋಗಿಗಳಿಗೆ ತಿಳಿಸೋದು ಬಿಟ್ಟು, ಆಕೆ ನಾಪತ್ತೆಯಾಗಿದ್ದಾಳೆ ಎಂದು ಘೋಷಣೆ ಮಾಡಿದ್ದರು. ಕುಟುಂಬದಲ್ಲಿ ಯಾರಾದರೂ ಸಾವು ಕಂಡರೂ, ಪೋಷಕರು ಆಸ್ಪತ್ರೆಗೆ ದಾಖಲಾಗಿದ್ದರೂ, ಕೆಲಸ ಮಾಡುವಂತೆ ಹೇಳಲಾಗುತ್ತಿತ್ತು. ಕೆಲಸದಲ್ಲಿನ ತೀವ್ರವಾದ ಮಾನಸಿಕ ಕಿರುಕುಳ ಸಾಧ್ಯವಾಗದೇ, ತನ್ನ ತಂಡದ ಇತರ ಇಬ್ಬರು ವ್ಯಕ್ತಿಗಳ ಜೊತೆಗೆ ಆಕೆಯೂ ಕೂಡ ರಾಜೀನಾಮೆ ನೀಡಿದ್ದಳು. 'ಕಂಪನಿಗೆ ಅಪಾರವಾದ ನಿಧಿ ಹರಿದುಬಂದಾಗ, ಅಗತ್ಯಕ್ಕೂ ಮೀರಿ ಕೆಲಸಗಾರರನ್ನು ತೆಗೆದುಕೊಂಡಿತ್ತು. ಈಗ ಅವರೆಲ್ಲರಿಗೂ ಪಿಂಕ್‌ ಸ್ಲಿಪ್‌ ನೀಡುತ್ತಿದೆ. ಅವರಿಗೆ ರೆಫರೆನ್ಸ್‌ ಲೆಟರ್‌ ಆಗಿ ಇತರ ಯಾವುದೇ ವ್ಯವಸ್ಥೆಗಳನ್ನು ನೀಡಲಾಗುತ್ತಿಲ್ಲ. ನನಗೆ ಗೊತ್ತಿರುವ ಎಲ್ಲರೂ ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಮಾರ್ಕೆಟ್‌ ಪರಿಸ್ಥಿತಿ ಉತ್ತಮವಾಗಿಲ್ಲ. ತೀರಾ ಕಡಿಮೆ ಸಂಬಳಕ್ಕೆ ಬೇರೆ ಕಂಪನಿಗಳಿಗೆ ಹೋಗುತ್ತಿದ್ದಾರೆ ಎಂದು ಸ್ಟಾರ್ಟ್‌ಅಪ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಹೇಳಿದ್ದಾರೆ. ಅದಲ್ಲದೆ, ತಮ್ಮ ಕಂಪನಿ ಕೂಡ ಇಂದಿಗೂ ಪೂರ್ಣ ಪ್ರಮಾಣದ ವೇತನವನ್ನೂ ನೀಡಿಲ್ಲ ಎಂದಿದ್ದಾರೆ.

ಕಂಪನಿಗಳಿಗೆ ಫಂಡ್‌ಗಳು ಕಡಿಮೆ ಆಗುತ್ತಿದೆ. ಜಾಬ್‌ ಲಾಸ್‌ ಹೆಚ್ಚಾಗುತ್ತಿದೆ. ಎಲ್ಲಾ ಸ್ಟಾರ್ಟ್‌ಅಪ್‌ಗಳು ಒತ್ತಡಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ಸಾಧಿಸಲು ಅಸಾಧ್ಯವಾದ ಗುರಿಗಳು, ಕೆಟ್ಟ ಕೆಲಸದ ವಾತಾವರಣ ಹಾಗೂ ಪ್ರತಿ ಬಾರಿ ತಲೆಯ ಮೇಲೆ ನೇತಾಡುವ ಉದ್ಯೋಗ ಕಡಿತ ಎನ್ನುವ ವಿಚಾರದ ತೂಗುಗತ್ತಿಯ ಭಯ ಸ್ಟಾರ್ಟ್‌ಅಪ್‌ಗಳಲ್ಲಿದೆ. ಹೆಚ್ಚಿನವರು ಬಹುತೇಕ ಬೇರೆ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಹಲವರು ಈಗಾಗಲೇ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ಗಳಲ್ಲಿ ತಾವು ಕೆಲಸ ಹೊಂದಿದ್ದ ನಡುವೆಯೂ ಸಾರ್ವಜನಿಕವಾಗಿ #opentowork ಅನ್ನು ಹಾಕುತ್ತಿದ್ದಾರೆ. 

ಇದೇ ರೀತಿ, ಇತ್ತೀಚೆಗೆ ಎಡ್ಟೆಕ್ ಸಂಸ್ಥೆಯ ಹಿರಿಯ ಉದ್ಯೋಗಿಯೊಬ್ಬರು ತಮ್ಮ ಕಂಪನಿಯ ಮತ್ತೊಂದು ಸುತ್ತಿಗ ಉದ್ಯೋಗ ಕಡಿತವನ್ನು ಘೋಷಣೆ ಮಾಡಿದೆ ಎಂದು ಹೇಳಿದ್ದಾರೆ. ಕೆಲಸದ ಒತ್ತಡ ಹೊಸದೇನಲ್ಲ, ಈಗ ಪರಿಸ್ಥಿತಿ ಮತ್ತೊಂದು ಹಂತಕ್ಕೆ ಏರಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ರಿವರ್ ಸ್ಟಾರ್ಟ್‌ಅಪ್‌ನಿಂದ ಇಂಡೀ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

ಕಂಪನಿಯು ಅಧಿಕೃತವಾಗಿ ನಾಲ್ಕು ಬಾರಿ ಉದ್ಯೋಗ ಕಡಿತಗಳನ್ನು ಮಾಡಿದೆ. ಇದರ ನಡುವೆ ಇನ್ನೂ ಅನೇಕರನ್ನು ವಜಾ ಮಾಡಲಾಗಿದೆ. ಆದ್ದರಿಂದ ವಜಾಗೊಂಡವರ ಸಂಖ್ಯೆ ಕಡಿಮೆ ಎಂದು ತೋರಿಸಲಾಗುತ್ತಿದೆ. ಆರಂಭದಲ್ಲಿ ವಜಾ ಮಾಡುವ ವೇಳೆ, ಪರಿಸ್ಥಿತಿ ಸುಧಾರಿಸಿದಾಗ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಭರವಸೆ ನೀಡಲಾಗಿತ್ತು. ಆದರೆ, ಈಗೀಗ ಆಗುತ್ತಿರುವ ವಜಾ ಪ್ರಕ್ರಿಯೆಗಳನ್ನು ನೋಡಿ, ಆ ನಂಬಿಕೆಯೇ ಕಳೆದುಕೊಂಡಿದ್ದಾರೆ. ಉದ್ಯೋಗಿಗಳ ನೈತಿಕ ಸ್ಥೈರ್ಯ ತೀರಾ ಕುಸಿದು ಹೋಗಿದೆ. ಎಲ್ಲರೂ ಬೇರೆ ಅವಕಾಶವನ್ನು ನೋಡುತ್ತಿದ್ದಾರೆ ಎನ್ನುವುದು ಬಹಿರಂಗ ಸತ್ಯ ಎಂದಿದ್ದಾರೆ.

ಸೈನಿಕರಿಗಾಗಿ ಸ್ವದೇಶಿ ಜೆಟ್‌ಪ್ಯಾಕ್‌ ಸಿದ್ಧ: ಏರೋ ಇಂಡಿಯಾದಲ್ಲಿ ಗಮನ ಸೆಳೆದ ಸ್ವದೇಶಿ ಜೆಟ್‌ಸ್ಯೂಟ್‌

ಇನ್ನೊಂದು ಎಜುಟೆಕ್‌ ಕಂಪನಿಯ ಸೇಲ್ಸ್‌ ವಿಭಾಗದಲ್ಲಿ ಕೆಲಸ ಮಾಡುವ ಉದ್ಯೋಗಿ ಕೂಡ ಲೇಆಫ್‌ ಬಗ್ಗೆ ಮಾತನಾಡಿದ್ದಾರೆ. ಅಸಾಧ್ಯವಾದ ಟಾರ್ಗೆಟ್‌ ನೀಡಲಾಗುತ್ತಿದೆ. ಇದರ ಒತ್ತಡ ಹೇಳತೀರದ್ದು. ಪ್ರತಿ ದಿನವೂ ನಿಗದಿತ ಅವಧಿಗಿಂತ ಹೆಚ್ಚಿನ ಸಮಯ ಕೆಲಸ ಮಾಡುತ್ತಿದ್ದೇವೆ. ಇನ್ನೇನು ನನ್ನ ಕೆಲಸ ಕೂಡ ಹೋಗುವುದರಲ್ಲಿದೆ. ಆದರೆ, ಮನೆಯಲ್ಲಿ ನಾನೊಬ್ಬನೇ ಕೆಲಸ ಮಾಡುವ ವ್ಯಕ್ತಿ. ಪ್ರತಿ ದಿನ ಕೆಲಸಕ್ಕೆ ಹೋಗುವಾಗ ಏನಾದರೂ ಒಳ್ಳೆಯದಾಗಲಿದೆ ಎನ್ನುವ ನಂಬಿಕೆಯಲ್ಲೇ ಹೋಗುತ್ತೇನೆ ಎಂದಿದ್ದಾರೆ.