ಕೆಲ್ಸ ಯಾವ್ದೆ ಆಗಿರಲಿ, ಕೈತುಂಬ ಸಂಪಾದನೆ ಮಾಡೋದು ಮುಖ್ಯ. ಡೆಲಿವರಿ ಕೆಲ್ಸ ಮಾಡಿ ತಿಂಗಳಿಗೆ 5 -6 ಲಕ್ಷ ಸಂಪಾದನೆ ಮಾಡ್ತಿರೋ ಸಿಬ್ಬಂದಿ ಇದ್ದಾರೆ. ಈ ಕೆಲ್ಸದ ಬಗ್ಗೆ ಮಾಹಿತಿ ಇಲ್ಲಿದೆ. 

ಭಾರತದಲ್ಲಿ ಡೆಲಿವರಿ ಬಾಯ್ ಕೆಲ್ಸ ಅಂದ್ರೆ ಮೂಗು ಮುರಿಯೋರೇ ಹೆಚ್ಚು. ಇವ್ದು ಕೆಲ್ಸ ಇಲ್ಲ ಎನ್ನುವವರು ಇದನ್ನು ಮಾಡ್ತಾರೆ ಎನ್ನುವ ಒಂದು ಭಾವನೆ ಇದೆ. ಹಾಗೆ ಅವರು ಅತೀ ಕಡಿಮೆ ಸಂಬಳ ಪಡೀತಾರೆ ಅಂತ ಬಹುತೇಕರು ನಂಬಿದ್ದಾರೆ. ಭಾರದಲ್ಲಿ ಡೆಲಿವರಿ ಬಾಯ್ಸ್ ಸಂಬಳ 25 ರಿಂದ 30 ಸಾವಿರ ಇರುತ್ತೆ. ಇದಕ್ಕಿಂತ ಹೆಚ್ಚು ಸಂಪಾದನೆ ಮಾಡೋರಿದ್ರೂ ಅವರು ಹಗಲು – ರಾತ್ರಿ ಅಂದೆ ದುಡಿತಾರೆ. ಆದ್ರೆ ಅಮೆರಿಕಾದಲ್ಲಿ ಹಾಗಲ್ಲ. ಡೆಲಿವರಿ ಕೆಲ್ಸವನ್ನು ಯುನೈಟೆಡ್ ಸ್ಟೇಟ್ಸ್ನಂತಹ ದೇಶದಲ್ಲಿ ಮೋಜಿನ ಕೆಲಸವಾಗಿ ನೋಡಲಾಗುತ್ತೆ. ಹಾಗಾಗಿಯೇ ಹೆಣ್ಮಕ್ಕಳೂ ಈ ಕೆಲ್ಸದಲ್ಲಿ ಆಸಕ್ತಿ ತೋರಿಸ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೆರಿಕಾದಲ್ಲಿ ಡೆಲಿವರಿ ಕೆಲ್ಸಕ್ಕೆ ಎಷ್ಟು ಸಂಬಳ ?

ಡೆಲಿವರಿ ಕೆಲಸವನ್ನು ಅಮೆರಿಕಾದಲ್ಲಿ ಹೆಚ್ಚಾಗಿ ಅರೆಕಾಲಿಕ ಕೆಲಸವೆಂದು ಪರಿಗಣಿಸಲಾಗುತ್ತದೆ. ಕೆಲವು ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಿರುವವರಿಗೆ, ಡೆಲಿವರಿ ಕೆಲಸವು ಅತ್ಯುತ್ತಮ ಆಯ್ಕೆಯಾಗಿದೆ. ಕಡಿಮೆ ಸಮಯದಲ್ಲೇ ಇವರು ಸಿಕ್ಕಾಪಟ್ಟೆ ಹಣ ಸಂಪಾದನೆ ಮಾಡ್ತಾರೆ. ಇಲ್ಲಿ ಡೆಲಿವರಿ ಬಾಯ್ಸ್ ತಿಂಗಳಿಗೆ 5 ರಿಂದ 6 ಲಕ್ಷ ರೂಪಾಯಿ ಸಂಪಾದನೆ ಮಾಡ್ತಾರೆ. ಫುಲ್ ಟೈಮ ಡೆಲಿವರಿ ಕೆಲ್ಸ ಮಾಡುವ ಜನರೂ ಅಮೆರಿಕಾದಲ್ಲಿದ್ದಾರೆ. ಅವರು 8 ಗಂಟೆ ಕೆಲ್ಸ ಮಾಡಿದ್ರೆ ಪಾರ್ಟ್ ಟೈಂ ಕೆಲಸಗಾರರು 4 ಗಂಟೆ ಕೆಲ್ಸ ಮಾಡ್ತಾರೆ.

ಬಿಪಿಸಿಎಲ್ ನೇಮಕಾತಿ: ಆಯ್ಕೆಯಾದವರಿಗೆ ಭರ್ಜರಿ ಜಾಕ್‌ಪಾಟ್‌ , ತಿಂಗಳಿಗೆ ₹1.40

ಆನ್ಲೈನ್ ಆಪ್ ಬಳಕೆ ಹೆಚ್ಚು

ಅಮೆರಿಕಾದಲ್ಲಿ ಆನ್ಲೈನ್ ಆಪ್ ಬಳಸುವವರ ಸಂಖ್ಯೆ ಹೆಚ್ಚಿದೆ. ಹಾಗೆ ಡೆಲಿವರಿ ಸಿಬ್ಬಂದಿ ಕೂಡ ಒಂದಕ್ಕಿಂತ ಹೆಚ್ಚು ಅಪ್ಲಿಕೇಷನ್ ಬಳಸ್ತಾರೆ. ಉಬರ್ ಈಟ್ಸ್ ಮತ್ತು ಡೋರ್ಡ್ಯಾಶ್ನಂತಹ ಅಪ್ಲಿಕೇಶನ್ ಗಳನ್ನು ಏಕಕಾಲದಲ್ಲಿ ಬಳಸುತ್ತಾರೆ. ಕಡಿಮೆ ದೂರದ, ಹೆಚ್ಚಿನ ಆದಾಯ ಬರುವ ಆರ್ಡರ್ ಮಾತ್ರ ಒಪ್ಪಿಕೊಂಡು, ಸಮಯ ಉಳಿಸೋ ಜೊತೆಗೆ ಹಣ ಸಂಪಾದನೆ ಮಾಡ್ತಾರೆ,

ಹೆಚ್ಚೆಚ್ಚು ಸಿಗುತ್ತೆ ಟಿಪ್

ಯುಎಸ್ ನಗರಗಳಲ್ಲಿ, ಡೆಲಿವರಿ ಸಿಬ್ಬಂದಿ ಡೆಲಿವರಿ ಹಣಕ್ಕಿಂತ ಟಿಪ್ ನಿಂದ ಹೆಚ್ಚು ಗಳಿಸ್ತಾರೆ. ಪ್ರತಿ ಡೆಲಿವರಿಗೆ ಟಿಪ್ ಮಾಡುವ ಸಂಸ್ಕೃತಿ ಇದೆ. ಹೆಚ್ಚಿನ ನಗರಗಳಲ್ಲಿ ಟಿಪ್ ಮೂಲಕ ಡೆಲಿವರಿ ಸಿಬ್ಬಂದಿ 10 ರಿಂದ 15 ಡಾಲರ್ ಗಳಿಸ್ತಾರೆ. ದೊಡ್ಡ ನಗರದಲ್ಲಿ ಇದು 30 ಡಾಲರ್ ಗಿಂತ ಹೆಚ್ಚಿದೆ.

ಬೋನಸ್ ವ್ಯವಸ್ಥೆ

ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಂತಹ ಅಮೆರಿಕ ನಗರಗಳಲ್ಲಿ, ಆರ್ಡರ್ಗಳ ಸಂಖ್ಯೆ ತುಂಬಾ ಹೆಚ್ಚು. ಹಾಗಾಗಿ ಡೆಲಿವರಿ ಬಾಯ್ಸ್ ಗಳಿಕೆ ಕೂಡ ಹೆಚ್ಚು. ಈ ಪ್ರದೇಶಗಳಲ್ಲಿನ ಕಂಪನಿಗಳು ಬೋನಸ್ ಸಹ ನೀಡುತ್ವೆ. ಇದು ಗಳಿಕೆಯನ್ನು ದ್ವಿಗುಣಗೊಳಿಸುತ್ತೆ. ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ ಅಥವಾ ಲಾಸ್ ಏಂಜಲೀಸ್ನಂತಹ ದುಬಾರಿ ನಗರಗಳಲ್ಲಿ ಡೆಲಿವರಿಗೆ ಬೇಡಿಕೆ ಮತ್ತು ಸಂಬಳ ಹೆಚ್ಚಿದೆ.

ಕೃಷಿ ಇಲಾಖೆಯಲ್ಲಿ ನಿಮಗಿದೋ ಸುವರ್ಣಾವಕಾಶ,

ದಿನಕ್ಕಿಷ್ಟು ಗಳಿಸ್ತಾರೆ ಡೆಲಿವರಿ ಸಿಬ್ಬಂದಿ

ಯುಎಸ್ನಲ್ಲಿ ಡೆಲಿವರಿ ಸಿಬ್ಬಂದಿ ತಿಂಗಳಿಗೆ 5 ಲಕ್ಷ ರೂಪಾಯಿ ಗಳಿಸುವ ಅವಕಾಶ ಇದೆ. ದಿನಕ್ಕೆ ಸರಿಸುಮಾರು 20,000 ಸಾವಿರ ಗಳಿಸುವ ಅವಕಾಶ ಇದೆ. ಡೆಲಿವರಿ ಕೆಲಸಗಾರರು ಗಂಟೆಗೆ 20 ರಿಂದ 25 ಡಾಲರ್ ಗಳಿಸುತ್ತಾರೆ. ಕೆಲವರು ಕೇವಲ 4 ಗಂಟೆಗಳಲ್ಲಿ 100 ಡಾಲರ್ ಅಂದ್ರೆ 9,000ದವರೆಗೆ ಗಳಿಸುತ್ತಾರೆ. ಅದೇ ಫುಲ್ ಟೈಂ ಡೆಲಿವರಿ ಕೆಲಸಗಾರರು 200 ರಿಂದ 220 ಡಾಲರ್ ಕಡ್ಡಾಯವಾಗಿ ಗಳಿಸುತ್ತಾರೆ.

ಪೀಕ್ ಅವರ್ಗಳು, ಬೋನಸ್ಗಳು ಮತ್ತು ಉತ್ತಮ ಸಲಹೆಗಳನ್ನು ಹೊಂದಿರುವ ಪ್ರದೇಶಗಳಲ್ಲಿ, ಡೆಲಿವರಿ ಕೆಲಸಗಾರರು ಗಂಟೆಗೆ 30 ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಗಣ ಸಂಪಾದನೆ ಮಾಡ್ತಾರೆ. ಎಲ್ಲ ಲೆಕ್ಕ ಹಾಕಿದ್ರೆ 8 ಗಂಟೆ ಡೆಲಿವರಿ ಕೆಲ್ಸ ಮಾಡುವ ವ್ಯಕ್ತಿ ತಿಂಗಳಿಗೆ 6 ಲಕ್ಷದವರೆಗೆ ಗಳಿಸಬಹುದು. ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟದ ಸಮಯದಲ್ಲಿ ಕೆಲ್ಸ ಮಾಡುವ ಸಿಬ್ಬಂದಿ ಗಳಿಕೆ ಮತ್ತಷ್ಟು ಹೆಚ್ಚಿರುತ್ತದೆ. ಇಲ್ಲಿ ಕೆಲ್ಸ ಮಾಡೋಕೆ ಯಾವುದೇ ಒತ್ತಡ ಇಲ್ಲ. ಹಾಗಾಗಿ ಮಹಿಳೆಯರು ಆರಾಮವಾಗಿ ಕೆಲ್ಸ ಮಾಡ್ತಾರೆ. ಪಾರ್ಟ್ ಟೈಂ ಕೆಲ್ಸ ಮಾಡಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ.