ಕೇವಲ 4 ತಿಂಗ್ಳಲ್ಲಿ ಬರೋಬ್ಬರಿ 66 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡ್ರು..!
ಒಂದೆಡೆ ಇಡೀ ದೇಶವು ಕರೋನಾವೈರಸ್ ಸಾಂಕ್ರಾಮಿಕದಿಂದ ಬಳಲುತ್ತಿದೆ. ಮತ್ತೊಂದೆಡೆ ಉದ್ಯೋಗಗಳನ್ನು ಕಸಿದುಕೊಳ್ಳುವುದರಿಂದ ಜನರು ಬಳಲುತ್ತಿದ್ದಾರೆ.
ನವದೆಹಲಿ, (ಸೆ.18): ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಅಂದ್ರೆ ಮೇದಿಂದ ಆಗಸ್ಟ್ ವರೆಗೆ ದೇಶದ 6.6. ವೈಟ್ ಕಾಲರ್ ಉದ್ಯೋಗಿಳು ಕೆಲಸ ಕಳೆದುಒಂಡಿದ್ದಾ ಎಂದು ಭಾರತೀಯ ಆರ್ಥಿಕತೆ ಮೇಲ್ವಿಚಾರಣೆ ಕೇಂದ್ರ (CMIE) ತನ್ನ ವರದಿಯಲ್ಲಿ ಹೇಳಿದೆ.
ವೈಟ್ ಕಾಲ್ ಉದ್ಯೋಗಿಗಳ ಪೈಕಿ ಇಂಜಿನಿಯರ್, ವೈದ್ಯರು, ಹಾಗೂ ಶಿಕ್ಷಕರು ಸೇರಿದಂತೆ ಹಲವು ಕ್ಷೇತ್ರಗಳ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ . 4 ವರ್ಷಗಳ ಹಿಂದೆ ಸೃಷ್ಟಿಯಾಗಿದ್ದ ಉದ್ಯೋಗಗಳು ಸಹ ಕೊರೋನಾ ನಿಯಂತ್ರಿಸಲು ಹೇರಲಾಗಿದ್ದ ಲಾಕ್‌ಡೌನ್ ಸಮಯದಲ್ಲಿ ಕಳೆದು ಹೋಗಿವೆ ಎಂದು CMIE ಮಾಡಿದ ಸರ್ವೆಯ ವರದಿಯಲ್ಲಿ ತಿಳಿಸಿದೆ.
70,000ಕ್ಕೂ ಅಧಿಕ ಉದ್ಯೋಗ: ನಿರುದ್ಯೋಗಿಗಳಿಗೆ ಇದು ಬಿಗ್ ಡೇಸ್
2019ರ ಮೇ ಮತ್ತು ಆಸಗ್ಟ್ ತಿಂಗಳ ಅಂತರದಲ್ಲಿ 18.8 ಮಿಲಿಯನ್ ಜನರು ಉದ್ಯೋಗಿಗಳಾಗಿದ್ದರು. ಈ ಪೈಕಿ 2020ರ ಮೇ-ಆಗಸ್ಟ್ ತಿಂಗಳುಗಳಲ್ಲಿ ಆ ಸಂಖ್ಯೆ 12.2 ಮಿಲಿಯನ್ ಕುಸಿದಿದೆ. 2016ರ ನಂತರ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.
2016ರ ಜನವರಿ-ಏಪ್ರಿಲ್ ನಲ್ಲಿ 12.5 ಮಿಲಿಯನ್ ಮಂದಿ ಉದ್ಯೋಗ ಪಡೆದುಕೊಂಡಿದ್ದರು. ಬಳಿಕ 2019ರ ಮೇ-ಆಗಸ್ಟ್ 18.8 ಮಿಲಿಯನ್‌ಗೆ ಏರಿಕೆ ಕಂಡಿತ್ತು. ನಂತರ 2019ರ ಸೆಪ್ಟೆಂಬರ್-ಡಿಸೆಂಬರ್ ತಿಂಗಳಲ್ಲಿ 18.7 ಮಿಲಿಯನ್ಗೆ ಇಳಿಯಿತು. ಬಳಿಕ 2020ರ ಜನವರಿ-ಏಪ್ರಿಲ್‌ನಲ್ಲಿ 18.1 ಮತ್ತೆ ಇಳಿಕೆ ಕಂಡಿತು. ಇದೀಗ ಕೊರೋನಾ ಲಾಕ್‌ಡೌನ್ ಪರಿಣಾಮದಿಂದ 2020 ಮೇ-ಆಗಸ್ಟ್ ವೇಳೆಯಲ್ಲಿ ಬರೋಬ್ಬರಿ 12.2 ಮಿಲಿಯನ್ ಆಗಿದ್ದು, ಪಾತಾಳಕ್ಕೆ ಕುಸಿದಿದೆ.