70,000ಕ್ಕೂ ಅಧಿಕ ಉದ್ಯೋಗ: ನಿರುದ್ಯೋಗಿಗಳಿಗೆ ಇದು ಬಿಗ್ ಡೇಸ್
ದೇಶಾದ್ಯಂತ ಫ್ಲಿಪ್‌ಕಾರ್ಟ್ 70,000ಕ್ಕೂ ಅಧಿಕ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ. ನಿರುದ್ಯೋಗಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ನವದೆಹಲಿ, (ಸೆ.15): ಆನ್‌ಲೈನ್ ಗ್ರಾಹಕರು ಪ್ರತಿವರ್ಷವೂ ಕುತೂಹಲದಿಂದ ಕಾಯುವಂತಹ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಮತ್ತೆ ಬಂದಿದೆ. ಈ ಸಂದರ್ಭದಲ್ಲಿ ದೇಶಾದ್ಯಂತ 70,000ಕ್ಕೂ ಅಧಿಕ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ.
ಇದೇ ಸೆ.18ರಿಂದ 20ರವರೆಗೆ ಬಿಗ್ ಬಿಲಿಯನ್ ಡೇಸ್ ಸೇಲ್ ಪ್ರಾರಂಭವಾಗುತ್ತಿದ್ದು, ಫ್ಲಿಪ್‌ಕಾರ್ಟ್ ಡೆಲಿವರಿ ಎಕ್ಸಿಕ್ಯೂಟಿವ್, ಪಿಕ್ಕರ್, ಪ್ಯಾಕರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹುಡುಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಿರುದ್ಯೋಗಿಗಳು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಹಾಕಿ
ಬಿಗ್ ಸೇವಿಂಗ್ ಡೇಸ್ ಸಮಯದಲ್ಲಿ ಅನೇಕ ವಸ್ತುಗಳು ಮಾರಾಟವಾಗುತ್ತದೆ. 3 ಕೋಟಿಗೂ ಅಧಿಕ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಈ ಸೇಲ್ನಲ್ಲಿ ಮಾರಾಟ ಮಾಡಲಾಗುತ್ತಿದೆ. ಹೀಗಿರುವಾಗ ಗ್ರಾಹಕರು ಖರೀದಿಸಿದ ವಸ್ತುಗಳನ್ನು ಪ್ಯಾಕ್ ಮಾಡಲು, ಸರಿಯಾದ ಜಾಗಕ್ಕೆ ತಲುಪಿಸುವಂತಹ ಕೆಲಸಗಳನ್ನು ಮಾಡಲು ಸಿದ್ಧರಿರಬೇಕು ಅಷ್ಟೇ.
ಕೊರೋನಾ ಬಂದು ಸಾವಿರಾರು ಜನರ ಉದ್ಯೋಗಕ್ಕೆ ಕುತ್ತು ತಂದಿದೆ. ಅದೆಷ್ಟೋ ಯುವಕರು ಕೆಲಸವಿಲ್ಲದೇ ಖಾಲಿ ಉಳಿದಿದ್ದಾರೆ. ಅಂತಹ ಆಸಕ್ತ ಯುವಕರಿಗೆ ಫ್ಲಿಪ್‌ಕಾರ್ಟ್ ಸೃಷ್ಟಿಸಲಿರುವ ಹುದ್ದೆಗಳಿಗೆ ಸೇರಿಕೊಳ್ಳುವ ಒಂದು ಉತ್ತಮ ಅವಕಾಶ ಒದಗಿಬಂದಿದೆ.
ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರ
ಫ್ಲಿಪ್‌ಕಾರ್ಟ್ ತನ್ನ ನೇರ ನೇಮಕಾತಿ ಮಾಡಿಕೊಂಡಿರುವ ಉದ್ಯೋಗಿಗಳಿಗೆ ವಿವಿಧ ಆಯಾಮಗಳಲ್ಲಿ ತರಬೇತಿಯನ್ನು ನೀಡುತ್ತಿದೆ. ಇದರಲ್ಲಿ ಪ್ರಮುಖವಾಗಿ ತರಗತಿ ಮತ್ತು ಡಿಜಿಟಲ್ ತರಬೇತಿಯನ್ನು ನೀಡುವ ಮೂಲಕ ವಿತರಣಾ ಜಾಲದ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತಿದೆ. ಈ ತರಬೇತಿಯಿಂದ ಉದ್ಯೋಗಿಗಳು ಈ ಬಗ್ಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಇವುಗಳಲ್ಲಿ ಗ್ರಾಹಕ ಸೇವೆ, ವಿತರಣೆ, ಸ್ಥಾಪಕತ್ವ, ಸುರಕ್ಷತೆ ಮತ್ತು ಸ್ಯಾನಿಟೈಸೇಷನ್ ಕ್ರಮಗಳು ಸೇರಿರುತ್ತವೆ.
ಉದ್ಯೋಗಾಕಾಂಕ್ಷಿಗಳು ಫಿಪ್ ಕಾರ್ಟ್‌ನಲ್ಲಿ ಕೆಲಸ ಮಾಡಲು ಇಚ್ಛಿಸುವವರು ಹತ್ತಿರದ ಫ್ಲಿಪ್ ಕಾರ್ಟ್ ಕಚೇರಿಗೆ ಹೋಗಿ ಮಾಹಿತಿ ಪಡೆದುಕೊಳ್ಳಬಹುದು.