ಜಮೀರ್ ಅಹ್ಮದ್ ಕಾಂಗ್ರೆಸ್‌ನ ಬಾಹುಬಲಿ: ಸತೀಶ್ ಜಾರಕಿಹೊಳಿ
ರಾಜ್ಯದಲ್ಲಿ ಜಾಫರ್ ಶರೀಫ್ ನಂತರ ಮತ್ತೊಬ್ಬ ಪ್ರಮುಖ ಮುಸ್ಲಿಂ ನಾಯಕರಾಗಲು ಜಮೀರ್ ಅಹ್ಮದ್ ಅವರಿಗೆ ಅವಕಾಶ
ಬೆಳಗಾವಿ(ಜು.24): ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಕಾಂಗ್ರೆಸ್ ಪಕ್ಷದ ಉನ್ನತ ನಾಯಕ. ಅವರು ನಮ್ಮ ಪಕ್ಷದ ಬಾಹುಬಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶನಿವಾರ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ಚಿಂತನಾ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಜಾಫರ್ ಶರೀಫ್ ನಂತರ ಮತ್ತೊಬ್ಬ ಪ್ರಮುಖ ಮುಸ್ಲಿಂ ನಾಯಕರಾಗಲು ಜಮೀರ್ ಅಹ್ಮದ್ ಅವರಿಗೆ ಅವಕಾಶವಿದೆ. ಎಲ್ಲೇ ಹೋದರೂ ಜಮೀರ್ ಅವರ ಜೇಬಲ್ಲಿ .5 ರಿಂದ .10 ಲಕ್ಷ ಹಣ ಇರುತ್ತದೆ. ವಾಪಸ್ ಹೋಗುವಾಗ ಖಾಲಿ ಜೇಬಿನಿಂದ ಹೋಗುತ್ತಾರೆ. ಇ.ಡಿ, ಐಟಿ ಅವರ ಹಿಂದೆ ಬಿದ್ದಿದ್ದೆ. ಆದರೆ ಅವರ ಜತೆಗೆ ಪಕ್ಷ ಮತ್ತು ಸಮುದಾಯ ಇದ್ದೇ ಇದೆ. ಮಂದಿನ ದಿನಗಳಲ್ಲಿ ಅಚ್ಛೇದಿನ್ ಬರಲಿದೆ. ಅದಕ್ಕಾಗಿ ಕಾಯಬೇಕು. ಅಲ್ಪಸಂಖ್ಯಾತ ಸಮುದಾಯದಿಂದ ಜಮೀರ್ ಅಹಮದ್ ನಾವೂ ಮುಖ್ಯಮಂತ್ರಿ ಆಕಾಂಕ್ಷಿ ಅಂದಿದ್ದಾರೆ. ನಮಗೂ ಸಾಕಷ್ಟುಜನ ಕೇಳುತ್ತಾರೆ. ಆದರೆ ನಮ್ಮ ಸರದಿ ಇನ್ನೂ ದೂರ ಇದೆ ಎಂದರು.
ಒಕ್ಕಲಿಗರು ಸಿಎಂ ಆಗಲಿ ಎಂದು ಚಾಲನೆ ಕೊಟ್ಟವರೇ ಡಿಕೆಶಿ: ಜಮೀರ್
ಒಕ್ಕಲಿಗರೇ ಮುಖ್ಯಮಂತ್ರಿ ಆಗಬೇಕೆಂದು ಹೇಳಿ ಚಾಲನೆ ಕೊಟ್ಟವರೇ ಡಿ.ಕೆ. ಶಿವಕುಮಾರ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದರು.
ಆ ಜಮೀರ್‌ಗೆಲ್ಲ ಉತ್ತರಿಸಲು ನಾನು ತಯಾರಿಲ್ಲ: ಡಿಕೆಶಿ ಕಿಡಿಚ
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಾರಾಗಬೇಕೆಂದು ನಮ್ಮ ಹೈಕಮಾಂಡ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಿರ್ಣಯ ಮಾಡುತ್ತಾರೆ ಎಂದು ಹೇಳಿದರು.
ಮುಸ್ಲಿಮರಿಗೂ ಆಸೆ ಇದೆ. ಅವರ ಸಮುದಾಯದವರು ಮುಖ್ಯಮಂತ್ರಿ ಆಗಬೇಕೆಂದು. ಅದರಂತೆ ನಾನು ಸಹ ನನ್ನ ವೈಯಕ್ತಿಕ ಅಭಿಪ್ರಾಯ ಹೇಳಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ತಿಳಿಸಿದ್ದೇನೆ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಲೆವೆಲ್ ದೊಡ್ಡದಿರಬಹುದು. ನನ್ನ ಲೆವೆಲ್ ಚಿಕ್ಕದಿರಬಹುದು. ಅವರೇ ದೊಡ್ಡವರಾಗಲಿ. ಒಕ್ಕಲಿಗರು ಸಿಎಂ ಆಗಬೇಕೆಂದು ಚಾಲನೆ ಕೊಟ್ಟವರೇ ಡಿ.ಕೆ. ಶಿವಕುಮಾರ ಎಂದು ಹೇಳಿದರು.
ಕಾಂಗ್ರೆಸ್ ಕಟ್ಟಿಬೆಳೆಸಬೇಕಿದೆ. ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕೆಂದು ಹೇಳಿಕೆ ನೀಡಿದ್ದಾರೆ. ಆದರೆ ವೈಯಕ್ತಿಕವಾಗಿ ನನ್ನ ಹೆಸರನ್ನು ಡಿ.ಕೆ.ಶಿವಕುಮಾರ ಹೇಳಿಲ್ಲ. ಎಲ್ಲರೂ ಸೇರಿ ಪಕ್ಷ ಕಟ್ಟೋಣ ಎಂದಿದ್ದಾರೆ. ಮುಖ್ಯಮಂತ್ರಿ ಯಾರು ಆಗಬೇಕೆಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತಿರ್ಮಾನ ಮಾಡುತ್ತದೆ. ನನ್ನ ವೈಯಕ್ತಿಕ ಅಭಿಪ್ರಾಯ ನಾನು ಸಿದ್ದರಾಮಯ್ಯ ಆಗಬೇಕು ಎಂದು ಹೇಳಿದ್ದೇನೆ ಎಂದು ಪುನರುಚ್ಚರಿಸಿದರು.
ಡಿಕೆಶಿ ಸಿಎಂ ಹುದ್ದೆ ಆಸೆಗೆ ಶಾಸಕ ಜಮೀರ್ ಟಾಂಗ್
ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಲು ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಮುಂಬರುವ 2023ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ಜನರೇ ಹೇಳುತ್ತಿದ್ದಾರೆ. ನಾನು ಪ್ರವಾಸ ಮಾಡಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನೀಡಿದ ಯೋಜನೆಯ ಬಗ್ಗೆ ಜನ ನೆನಪಿಸಿಕೊಳ್ಳುತ್ತಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ ನಮ್ಮ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಅವರನ್ನು ಭೇಟಿಯಾಗುತ್ತೇನೆ. ಇಲ್ಲವೆಂದರೆ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲ್ ಭೇಟಿಯಾಗೋಕೆ ಆಗುತ್ತಾ? ಎಂದು ಸುದ್ದಿಗಾರರ ಪ್ರಶ್ನೆಗೆ ಮರುಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅವರ ಅಭಿಮಾನಿಗಳೆಲ್ಲರೂ ಸೇರಿಕೊಂಡು ಆಚರಿಸುತ್ತಿದ್ದೇವೆ. ಕಳೆದ ಆರು ತಿಂಗಳಿನಿಂದ ಸಿದ್ದರಾಮಯ್ಯನವರಿಗೆ ಅಭಿಮಾನಿಗಳು ಒತ್ತಡ ಹಾಕಿದ್ದರು. ಆದ್ದರಿಂದ ಆ.3ರಂದು ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಆಚರಣೆಯನ್ನು ದಾವಣಗೆರೆಯಲ್ಲಿ ಮಾಡುತ್ತಿದ್ದೇವೆ ಎಂದರು.