Asianet Suvarna News Asianet Suvarna News

ಸಚಿವೆ ಜೊಲ್ಲೆಗೆ ನಿಮ್ಮ ಮತದಾನವೆಂದರೇ ಅಭಿವೃದ್ಧಿಗೆ ಮತದಾನ: ಸಂಸದ ಅಣ್ಣಾಸಾಹೇಬ್‌ ಜೊಲ್ಲೆ

ಬಿಜೆಪಿ ಸರ್ಕಾರದ ಮೂಲಕ ಸಚಿವೆ ಜೊಲ್ಲೆ ಸ್ಥಳೀಯ ಕ್ಷೇತ್ರಕ್ಕೆ ರಾಜ್ಯದಲ್ಲೇ ಆದರ್ಶವಾದ ಯೋಗದಾನ ನೀಡಿದ್ದಾರೆ. ಭವಿಷ್ಯದಲ್ಲಿಯೂ ಸಹ ಸ್ಥಳೀಯ ಕ್ಷೇತ್ರಕ್ಕೆ ಯಾವುದೇ ಕೊರತೆಯಾಗದಂತೆ ನೋಡಲಾಗುವುದು. ಸಚಿವೆ ಜೊಲ್ಲೆಗೆ ನಿಮ್ಮ ಮತದಾನ ಎಂದರೆ ಅಭಿವೃದ್ಧಿಗೆ ಮತದಾನ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

Your vote for  Jolle is a vote for development says MP Annasaheb Jolle at chikkodi rav
Author
First Published Apr 27, 2023, 9:30 AM IST

ಚಿಕ್ಕೋಡಿ (ಏ.27) : ಬಿಜೆಪಿ ಸರ್ಕಾರದ ಮೂಲಕ ಸಚಿವೆ ಜೊಲ್ಲೆ ಸ್ಥಳೀಯ ಕ್ಷೇತ್ರಕ್ಕೆ ರಾಜ್ಯದಲ್ಲೇ ಆದರ್ಶವಾದ ಯೋಗದಾನ ನೀಡಿದ್ದಾರೆ. ಭವಿಷ್ಯದಲ್ಲಿಯೂ ಸಹ ಸ್ಥಳೀಯ ಕ್ಷೇತ್ರಕ್ಕೆ ಯಾವುದೇ ಕೊರತೆಯಾಗದಂತೆ ನೋಡಲಾಗುವುದು. ಸಚಿವೆ ಜೊಲ್ಲೆಗೆ ನಿಮ್ಮ ಮತದಾನ ಎಂದರೆ ಅಭಿವೃದ್ಧಿಗೆ ಮತದಾನ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ(MP Annasaheb jolle) ಹೇಳಿದರು.

ನಿಪ್ಪಾಣಿ ತಾಲೂಕಿನ ಬೋರಗಾವ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಚಿವೆ ಶಶಿಕಲಾ ಜೊಲ್ಲೆ(Shashikala jolle bjp candidate) ಪರವಾಗಿ ಪ್ರಚಾರ ಆರಂಭಿಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದಾರೆ. ಕೇವಲ ಬೋರಗಾವ ಪಟ್ಟಣದಲ್ಲಿ ಮಾತ್ರ .102 ಕೋಟಿ ಅನುದಾನ ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು .2 ಸಾವಿರ ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮತ್ತೊಮ್ಮೆ ಬೋರಗಾವ ಸೇರಿದಂತೆ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ವರ್ಚಸ್‌ನ್ನು ಸಿದ್ಧಪಡಿಸಲು ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

ಲಿಂಗಾಯತರಿಗೆ ಕಳಂಕ ತಂದ ಸಿಎಂ ಬೊಮ್ಮಾಯಿ: ಸಿದ್ದರಾಮಯ್ಯ ಕಿಡಿ

ನಿಪ್ಪಾಣಿ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಚಾಲಕ ಜಯಕುಮಾರ ಖೋತ ಮಾತನಾಡಿ, ಜೊಲ್ಲೆ ದಂಪತಿ ಅಭಿವೃದ್ಧಿಯ ವಿಷಯದಲ್ಲಿ ಎಂದೂ ಮುಂಚೂಣಿಯಲ್ಲಿರುತ್ತಾರೆ. ನಮ್ಮ ಕ್ಷೇತ್ರದ ಇನ್ನಷ್ಟೂಅಭಿವೃದ್ಧಿಗಾಗಿ ಸಚಿವೆ ಜೊಲ್ಲೆಯವರನ್ನು ಜಯಶಾಲಿಯಾಗಿಸಿ ಹ್ಯಾಟ್ರಿಕ್‌ ಸಾಧಿಸಲು ನಾವೆಲ್ಲರೂ ಪ್ರಯತ್ನಿಸೋಣ ಎಂದು ವಿನಂತಿಸಿದರು.

ಸುನೀಲ ಪಾಟೀಲ, ಶರದ ಜಂಗಟೆ, ಫರೋಜ ಅಪರಾಜ, ಶಿವಾಜಿ ಭೋರೆ, ವಕ್ಫ್ ಬೋರ್ಡ್‌ ಜಿಲ್ಲಾ ಅಧ್ಯಕ್ಷ ಅನ್ವರ ದಾಡಿವಾಲೆ, ಶಬ್ಬೀರ ಗವಂಡಿ ಮಾತನಾಡಿದರು. ಆರಂಭದಲ್ಲಿ ಅವರು ಬೋರಗಾವ ಪಟ್ಟಣದ ಗ್ರಾಮದೇವತೆ ಬಾಬಾ ಢಂಗವಲಿ ದರ್ಗಾದಲ್ಲಿ ಕಾರ್ಯಕರ್ತರೊಂದಿಗೆ ಆಶೀರ್ವಾದ ಪಡೆದು ನಂತರ ಪಟ್ಟಣದಲ್ಲಿ ಪ್ರಚಾರವನ್ನು ಆರಂಭಿಸಿದರು.

ಸಚಿವೆ ಶಶಿಕಲಾ ಜೊಲ್ಲೆ ಆಸ್ತಿ 68.58 ಕೋಟಿ: ನಿಪ್ಪಾಣಿ ಶಾಸಕಿಯ ವರ್ಷದ ಆದಾಯ ಎಷ್ಟು ಗೊತ್ತಾ?

ಹಾಲಶುಗ​ರ್‍ಸ್ ಕಾರ್ಖಾನೆಯ ಸಂಚಾಕ ರಾಮಗೊಂಡಾ ಪಾಟೀಲ, ಅಪ್ಪಾಸಾಹೇಬ್‌ ಜೊಲ್ಲೆ, ರಮೇಶ ಪಾಟೀಲ, ಬಾಬಾಸಾಹೇಬ್‌ ಚೌಗುಲೆ, ದೇವ ಮಾಳಿ, ಜಮೀಲ್‌ ಅತ್ತಾರ, ಪ್ರಕಾಶ ಮಾಲಗಾವೆ, ಮಹಾವೀರ ಪಾಟೀಲ, ಅಜಿತ ಕಡೋಲೆ, ಭರಮಾ ಕುಡಚೆ, ಪ್ರಶಾಂತ ತಳವಾರ, ಅಣ್ಣಾಸಾಹೇಬ್‌ ಡಕರೆ, ಮಹಿಪತಿ ಖೋತ, ಶಿಶು ಐದಮಾಳೆ, ಶಾಮತು ಪತ್ರಾವಳೆ, ಅಜಿತ ತೇರದಾಳೆ, ವಿಷ್ಣು ತೋಡಕರ, ಸಂಜು ಮಹಾಜನ, ಪಿಂಟು ಬೇವನಕಟ್ಟಿ, ಶೀತಲ ಹವಲೆ, ರಾಜು ಕುಂಭಾರ, ಆಯುಬ ಮಕಾನದಾರ, ಅಪ್ಪಾ ಮುಜಾವರ, ಅಲ್ಲು ಮುಜಾವರ, ಭರತ ಜಂಗಟೆ, ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios