Asianet Suvarna News Asianet Suvarna News

ಸಚಿವೆ ಶಶಿಕಲಾ ಜೊಲ್ಲೆ ಆಸ್ತಿ 68.58 ಕೋಟಿ: ನಿಪ್ಪಾಣಿ ಶಾಸಕಿಯ ವರ್ಷದ ಆದಾಯ ಎಷ್ಟು ಗೊತ್ತಾ?

ನಿಪ್ಪಾಣಿ ಶಾಸಕಿ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ಒಟ್ಟು 68.58 ಕೋಟಿ ಆಸ್ತಿ ಹೊಂದಿದ್ದಾರೆ. ಅದರಲ್ಲಿ 11.6 ಕೋಟಿ ಮೌಲ್ಯದ ಚರಾಸ್ತಿಗಳು ಹಾಗೂ 56.98 ಕೊಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಇವೆ.

Karnataka Election 2023 Minister Shashikala Jolle Property Are 68 58 Crores gvd
Author
First Published Apr 17, 2023, 10:05 PM IST

ಬೆಳಗಾವಿ (ಏ.17): ನಿಪ್ಪಾಣಿ ಶಾಸಕಿ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ಒಟ್ಟು 68.58 ಕೋಟಿ ಆಸ್ತಿ ಹೊಂದಿದ್ದಾರೆ. ಅದರಲ್ಲಿ 11.6 ಕೋಟಿ ಮೌಲ್ಯದ ಚರಾಸ್ತಿಗಳು ಹಾಗೂ 56.98 ಕೊಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಇವೆ. ಶಶಿಕಲಾ ಒಬ್ಬರಿಗೇ 1.03 ಕೋಟಿ ವಾರ್ಷಿಕ ಆದಾಯವಿದೆ. ಕುಟುಂಬದಲ್ಲಿ 78.37 ಲಕ್ಷ ಹಣವಿದೆ. ಶಶಿಕಲಾ ಹೆಸರಲ್ಲಿ 3.9 ಕೋಟಿ ಹಾಗೂ ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಹೆಸರಲ್ಲಿ 5.73 ಕೋಟಿ, ಪುತ್ರರ ಹಸರಲ್ಲಿ 1.17 ಕೋಟಿ ಹಾಗೂ ಇತರರ ಹೆಸರಲ್ಲಿ 26 ಲಕ್ಷ ಮೌಲ್ಯದ ಚರಾಸ್ತಿಗಳು ಇವೆ. ಸಚಿವೆ ಹೆಸರಲ್ಲಿ 24.13 ಕೋಟಿಯ ಸ್ಥಿರಾಸ್ತಿ, ಪತಿ ಹೆಸರಲ್ಲಿ 15.04 ಕೋಟಿ, ಪುತ್ರನ ಹೆಸರಲ್ಲಿ 17.81 ಕೋಟಿ ಸೇರಿ ಒಟ್ಟು 56.98 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಅವರ ಕುಟುಂಬ ಹೊಂದಿದೆ. 

ಅಲ್ಲದೇ, 42.81 ಲಕ್ಷ ಹಣ ಅವರ ಅಕೌಂಟ್‌ನಲ್ಲಿದೆ. ಇಡೀ ಕುಟುಂಬದ ಅಕೌಂಟ್‌ಗಳಲ್ಲಿ 2.19 ಕೋಟಿ ಹಣವಿದೆ. 1.87 ಕೋಟಿ ಮೌಲ್ಯದ ವಿವಿಧ ಶೇರ್‌ ಹಾಗೂ ಬಾಂಡ್‌ಗಳನ್ನು ಅವರು ಖರೀದಿಸಿದ್ದು, ಕುಟುಂಬದಲ್ಲಿ 5.9 ಕೋಟಿ ಮೌಲ್ಯದ ಇಂಥ ಆಸ್ತಿ ಇದೆ. ಉಳಿತಾಯ ಹಾಗೂ ವಿಮೆಗಳ ಮೊತ್ತ ಸುಮಾರು 76.95 ಲಕ್ಷ. ಶಶಿಕಲಾ ಅವರೇ ವಿವಿಧ ಬ್ಯಾಂಕುಗಳಿಂದ 80 ಲಕ್ಷ ವೈಯಕ್ತಿಕ ಸಾಲ ಹಾಗೂ 9.05 ಕೋಟಿ ವಿವಿಧ ಸಾಲಗಳನ್ನು ಪಡೆದಿದ್ದಾರೆ. ಕುಟುಂಬದ ತಲೆಯ ಮೇಲೆ 22.41 ಕೋಟಿ ಸಾಲವಿದೆ. 73 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. 

ವಿಧಾನಸಭಾ ಸಾರ್ವತ್ರಿಕ ಚುನಾವಣೆ: ಚಾಮರಾಜನಗರದಲ್ಲಿ 24 ಅಭ್ಯರ್ಥಿಗಳಿಂದ 32 ನಾಮಪತ್ರ ಸಲ್ಲಿಕೆ

ಕುಟುಂಬದಲ್ಲಿ 1.45 ಕೋಟಿಯ ಚಿನ್ನ ಹಾಗೂ ಬೆಳ್ಳಿ ಆರಭರಣಗಳಿವೆ. ವಿವಿಧ ಗ್ರಾಮಗಳಲ್ಲಿ 3.9 ಕೋಟಿ ಮೌಲ್ಯದ ಕೃಷಿ ಜಮೀನು ಶಶಿಕಲಾ ಹೊಂದಿದ್ದು, 11.76 ಕೋಟಿಯ ಜಮೀನು ಕುಟುಂಬಕ್ಕಿದೆ. 15.20 ಕೋಟಿಯ ವಾಣಿಜ್ಯ ಭೂಮಿಯನ್ನು ಶಶಿಕಲಾ ಹೊಂದಿದ್ದಾರೆ. 21.85 ಕೋಟಿ ಮೌಲ್ಯದ ವಾಣಿಜ್ಯ ಭೂಮಿ ಕುಟುಂಬಕ್ಕಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಬಿಜೆಪಿ ಅಭ್ಯರ್ಥಿ ಮನ್ನೋಳಕರ ಉಮೇದುವಾರಿಕೆ ಸಲ್ಲಿಕೆ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ನಾಗೇಶ ಮನ್ನೋಳಕರ ಸೋಮವಾರ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ತಮ್ಮ ಉಮೇದುವಾರಿಕೆಯನ್ನು ಚುನಾವಣಾಧಿಕಾರಿ ರಾಜಶೇಖರ ಡಂಬಳ ಅವರಿಗೆ ಸಲ್ಲಿಸಿದರು. ನಗರದ ಧರ್ಮವೀರ ಸಂಭಾಜಿ ವೃತ್ತದಿಂದ ಶಾಸಕ ರಮೇಶ ಜಾರಕಿಹೊಳಿ, ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಕಿರಣ ಜಾಧವ, ಧನಂಜಯ ಜಾಧವ, ಸೋನಾಲಿ ಸರ್ನೋಬತ್‌, ಚಿತ್ರ ವಾಘ ಸೇರಿದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾವಿರಾರು ಸಂಖ್ಯೆಯ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದರು. 

ಮೆರವಣಿಗೆ ಉದ್ದಕ್ಕೂ ಬಿಜೆಪಿ ಪಕ್ಷದ ಬಾವುಟ ಹಿಡಿದು ಡೊಳ್ಳು ಬಾರಿಸುವ ಮೂಲಕ ಅದ್ಧೂರಿ ಮೆರವಣಿಗೆ ಆರಂಭಿಸಿದರು. ಮೆರವಣಿಗೆ ಉದ್ದಕ್ಕೂ ಪಕ್ಷದ ಪರ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಬೀರು ಬಿಸಿಲು ಲೆಕ್ಕಿಸದೇ ಪಾಲ್ಗೊಂಡಿದ್ದರು. ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಸಂಜಯ ಪಾಟೀಲ ಹಾಗೂ ಧನಂಜಯ ಜಾಧವ ಅವರನ್ನು ಒಗ್ಗೂಡಿಸಿಕೊಂಡು ನಾಗೇಶ ಮನ್ನೋಳಕರ ಅವರ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ರಮೇಶ ಜಾರಕಿಹೊಳಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ನಂತರ ಕಾಲೇಜು ರಸ್ತೆ ಮಾರ್ಗವಾಗಿ ಚನ್ನಮ್ಮ ವೃತ್ತದ ಪಕ್ಕ ಇರುವ ಶ್ರೀ ಗಣೇಶ ಮಂದಿರಕ್ಕೆ ಆಗಮಿಸಿದರು. ಬಳಿಕ ತಮ್ಮ ಆಪ್ತನಿಗೆ ಗೆಲುವು ಸಿಗಲೆಂದು ಶಾಸಕ ರಮೇಶ ಜಾರಕಿಹೊಳಿ, ಅಭ್ಯರ್ಥಿ ನಾಗೇಶ ಮನ್ನೋಳಕರ ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. 

ಕನ​ಕ​ಪುರ ಕ್ಷೇತ್ರದವರ ಬದ​ಲಾ​ವ​ಣೆ ಆಸೆ ನನ​ಸಾ​ಗ​ಲಿದೆ: ಸಚಿ​ವ ಆರ್‌.ಅಶೋಕ್‌

ಚನ್ನಮ್ಮ ವೃತ್ತದವರೆಗೂ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದ ರಮೇಶ ಜಾರಕಿಹೊಳಿ ವೃತ್ತದಿಂದ ಅನ್ಯಕಾರ್ಯದ ನಿಮಿತ್ತ ಬೇರೆ ಕಡೆ ತೆರಳಿದರು. ಬಳಿಕ ತೆರೆದ ವಾಹನದಲ್ಲಿ ಅಭ್ಯರ್ಥಿ ನಾಗೇಶ ಮನ್ನೋಳಕರ, ಮಾಜಿ ಶಾಸಕ ಸಂಜಯ ಪಾಟೀಲ, ಚಿತ್ರ ವಾಘ ಸೇರಿದಂತೆ ಇನ್ನೀತರು ಹಾಗೂ ಕಾರ್ಯಕರ್ತರು ಗ್ರಾಮೀಣ ಕ್ಷೇತ್ರ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿದರು. ಬಳಿಕ ಗ್ರಾಮೀಣ ಕ್ಷೇತ್ರ ಚುನಾವಣಾಧಿಕಾರಿ ರಾಜಶೇಖರ ಡಂಬಳ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.

Follow Us:
Download App:
  • android
  • ios