Asianet Suvarna News Asianet Suvarna News

ಕಮಲ ನಾಯಕರ ವಿರುದ್ಧವೇ ಹರಿಹಾಯ್ದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್..!

ನನ್ನ ಜತೆ ಗುರುತಿಸಿಕೊಳ್ಳೋಕೆ ಮುಜುಗರ ಆದ್ರೆ ಅದು ಅವರಿಗೆ ಬಿಟ್ಟಿದ್ದು, ನನ್ನನ್ನು ಯಾವುದೇ ಪ್ರತಿಭಟನೆಗೆ ಕರೆದಿಲ್ಲ. ನಾನು ಮತ್ತು ಸೋಮಶೇಖರ್ ಬಿ.ಎಲ್.ಪಿ ಗೂ ಹೋಗ್ತಿಲ್ಲ, ಸಿ.ಎಲ್.ಪಿ ಗೂ ಹೋಗ್ತಿಲ್ಲ. ನಮ್ದು ಕೆ.ಎಲ್.ಪಿ, ಕರ್ನಾಟಕ ಲೆಜೆಸ್ಲೇಟಿವ್ ಪಾರ್ಟಿ ಎಂದ ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ 

yellapur mla shivaram hebbar  slams karnataka bjp leaders grg
Author
First Published Jul 20, 2024, 9:29 PM IST | Last Updated Jul 22, 2024, 12:02 PM IST

ಕಾರವಾರ(ಜು.20): ಬಂಡವಾಳ ಇಲ್ಲದ ಮನುಷ್ಯ ನಾನಲ್ಲ. ಏನೇನಾಗಿದೆ ಅನ್ನೋದನ್ನು ಎಲ್ಲವನ್ನೂ ಬಿಚ್ಚಿಡುತ್ತೇನೆ. ಎಲ್ಲ ಬಂಡವಾಳ ನನ್ನತ್ರ ಇದೆ, ಬಂಡವಾಳ ಖಾಲಿ ಆಗಿ ಬಂದವ ನಾನಲ್ಲ. ನಾನೇನು ಕಳವು ಮಾಡಿಲ್ಲ, ದರೋಡೆ ಮಾಡಿಲ್ಲ, ಏನಾದ್ರು ಮಾಡಿದ್ರೆ ಬೇಕಲ್ಲಾ?. ಇಡಿ ಏನು ಇವರಪ್ಪನ ಮನೆ ಆಸ್ತಿ ಅಲ್ಲ. ಯಾರನ್ನೋ ತಂದು ಬೆಳಿಗ್ಗೆ ಒಳಗೆ ಹಾಕಿಸ್ತೀನಿ ಅನ್ನೋಕೆ. ಏನ್ ಮಾಡೋಕೆ ಆಗುತ್ತೆ..? ಒಂದು ತಿಂಗಳು ಒಳಗಡೆ ಹಾಕಿಸ್ಬಹುದು ಅಷ್ಟೇ. ಸಾರ್ವಜನಿಕ ಜೀವನದಲ್ಲಿ ಎಲ್ಲವನ್ನೂ ಅನುಭವಿಸಬೇಕಾಗುತ್ತೆ. ಎದುರಿಸೋಕೆ ಆಗದಿದ್ರೆ ಉಳಿಬಾರದು. ಯಾವ ಲೆವೆಲ್‌ಗೆ ಯಾರು ಪ್ರತಿಕ್ರಿಯೆ ಕೊಡ್ಬೇಕೋ ಅವರು ಕೊಡ್ತಾರೆ ಎಂದು ಪರೋಕ್ಷವಾಗಿ ಕಮಲ ನಾಯಕರ ವಿರುದ್ಧ ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಹರಿಹಾಯ್ದಿದ್ದಾರೆ.  

ಬಿಜೆಪಿ ಜತೆ ಗುರುತಿಸಿಕೊಳ್ಳೋ ಬಗ್ಗೆ ಪ್ರತಿಕ್ರಿಯೆ ಇಂದು(ಶನಿವಾರ) ಜಿಲ್ಲೆಯ ಶಿರಸಿಯ ಮೊಗವಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿವರಾಮ ಹೆಬ್ಬಾರ್ ಅವರು, ನನ್ನ ಜತೆ ಗುರುತಿಸಿಕೊಳ್ಳೋಕೆ ಮುಜುಗರ ಆದ್ರೆ ಅದು ಅವರಿಗೆ ಬಿಟ್ಟಿದ್ದು, ನನ್ನನ್ನು ಯಾವುದೇ ಪ್ರತಿಭಟನೆಗೆ ಕರೆದಿಲ್ಲ. ನಾನು ಮತ್ತು ಸೋಮಶೇಖರ್ ಬಿ.ಎಲ್.ಪಿ ಗೂ ಹೋಗ್ತಿಲ್ಲ, ಸಿ.ಎಲ್.ಪಿ ಗೂ ಹೋಗ್ತಿಲ್ಲ. ನಮ್ದು ಕೆ.ಎಲ್.ಪಿ, ಕರ್ನಾಟಕ ಲೆಜೆಸ್ಲೇಟಿವ್ ಪಾರ್ಟಿ ಅಂತ ಹೇಳಿದ್ದಾರೆ. 
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದರಿಂದ ಟೀಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವರಾಮ ಹೆಬ್ಬಾರ್, ಸಂಸದರಾದ ಮೇಲೆ ಹೆಚ್ಚು ಟೀಕೆ ಮಾಡ್ಲೇಬೇಕಲ್ವಾ?. ಸಂಸದನಾಗಿದ್ದೇನೆ ಅಂತ ಗೊತ್ತಾಗೋದು ಹೇಗೆ?. ಟೀಕೆ ಮಾಡೇ ಮಾಡ್ತಾರೆ, ಬೇಡ ಅಂದೋರ್ ಯಾರು?. ಉತ್ತರ ಕೊಡೋ ದಿನ ಬಂದಾಗ ಕೊಡ್ತೀವಿ. ದಿನ ದಿನ ಉತ್ತರ ಕೊಡೋದು ಸರಿಯಲ್ಲ. ಕೆನರಾ ಕ್ಷೇತ್ರಕ್ಕೆ ಮೋದಿ ಅಭ್ಯರ್ಥಿ, ಆದ್ದರಿಂದ ಗೆಲ್ಲಿಸಿ ಅಂತ ಹೇಳಿದ್ದು. ಎಲ್ಲ ಪ್ರಚಾರದಲ್ಲೂ ಕೂಡ ಹೀಗೆ ಹೇಳಿದ್ರು. ಅಭ್ಯರ್ಥಿ ನಾನಲ್ಲ, ದೇಶಕ್ಕಾಗಿ ಮೋದಿಗಾಗಿ ಮತ ಕೊಡಿ ಅಂತ ಹೇಳಿದ್ರು. ಗೆದ್ದೋರು ಮೋದಿ, ಅಭ್ಯರ್ಥಿ ಅಪ್ರಸ್ತುತ ಅಂತ ಆಯ್ತಲ್ಲ ಎಂದು ವಿಶ್ವೇಶ್ವರ ಹೆಗಡೆ ಕಾಗೇರುಗೆ ಟಾಂಗ್ ಕೊಟ್ಟಿದ್ದಾರೆ. 

'ಡಿಕೆ ಸುರೇಶ್‌ರಂತೆ ಯಾರೂ ಕೆಲಸ ಮಾಡಿಲ್ಲ; ಜನ ಯಾಕೆ ಕಠಿಣ ನಿಲುವು ತಗೊಂಡ್ರೋ ಗೊತ್ತಿಲ್ಲ': ಎಸ್‌ಟಿಎಸ್ ಬೇಸರ

ರಾಜೀನಾಮೆಗೆ ಮೀನಾಮೇಷ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಿವರಾಮ್‌ ಹೆಬ್ಬಾರ್‌ ಅವರು, ನಾವೇನು ಉಚ್ಭಾಟನೆ ಮಾಡೋದು ಬೇಡ ಅಂತ ಅರ್ಜಿ ಕೊಟ್ಟಿದ್ದೀವಾ?. ನಮ್ಮ ನಡುವಳಿಕೆ ಸಮಾಧಾನ ಇಲ್ಲ ಅಂದ್ರೆ ಅವ್ರೇ ತೀರ್ಮಾನ ಮಾಡ್ತಾರೆ. ಇಂಥದ್ದೇ ನಿರ್ಣಯ ತೆಗೆದುಕೊಳ್ಳಿ ಅನ್ನೋಕೆ ನಾನ್ಯಾರು?. ಸರ್ಕಾರ ಬರೋಕೆ ಕಾರಣ ಆದವ್ರು, ಸ್ಪೀಕರ್ ಆಗೋಕೆ ಕಾರಣ ಆದವ್ರು ಯಾರೂ ಕಾಣಲ್ಲ ಈಗ. ಎಲ್ಲಾ ಆಗಿ ಆಯ್ತು, ಅನುಭವಿಸಿ ಆಯ್ತು. ದೋಣಿ ದಾಟಿದ ಮೇಲೆ ದೋಣಿಗಾರನ ಅವಶ್ಯಕತೆ ಇಲ್ಲ. ನಾನು ರಾಜೀನಾಮೆ ಕೊಟ್ಟೇ ಚುನಾವಣೆ ಎದುರಿಸಿ ಬಂದೋನು. ರಾಜೀನಾಮೆ ಬಗ್ಗೆ ಬೇರೆಯವರ ಉಪದೇಶ ಬೇಕಿಲ್ಲ. ಆಗ ನಾನು ರಾಜೀನಾಮೆ ಕೊಟ್ಟು ಬಂದಾಗ ಕಾಂಗ್ರೆಸ್ ಗೆ ಅನ್ಯಾಯ ಮಾಡ್ದೆ ಅಂತ ಅನ್ಸಿಲ್ವಾ ಬಿಜೆಪಿಗೆ?. ಅಧಿಕಾರ ಬರೋವಾಗ ಏನು ಅನ್ಸಲ್ವಾ ನಿಮ್ಗೆ? ಈಗ್ಯಾಕೆ ಹೀಗೆ ಅನ್ಸುತ್ತೆ?. ಅವಶ್ಯಕತೆ ಬಿದ್ದಾಗ ಮತ್ತೆ ರಾಜೀನಾಮೆ ಕೊಡ್ತೇನೆ, ಅದಕ್ಕೂ ನಾನು ಹೆದರಲ್ಲ. ನನ್ನ ಕ್ಷೇತ್ರದ ಜನರ ಮೇಲೆ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios