'ಡಿಕೆ ಸುರೇಶ್‌ರಂತೆ ಯಾರೂ ಕೆಲಸ ಮಾಡಿಲ್ಲ; ಜನ ಯಾಕೆ ಕಠಿಣ ನಿಲುವು ತಗೊಂಡ್ರೋ ಗೊತ್ತಿಲ್ಲ': ಎಸ್‌ಟಿಎಸ್ ಬೇಸರ
ಮತದಾರರ ತೀರ್ಮಾನವನ್ನ ಒಪ್ಪಿಕೊಳ್ಳಬೇಕು. 28 ಲೋಕಸಭಾ ಸದಸ್ಯರಲ್ಲಿ ಕೆಲಸ ಮಾಡಿದವರೆಂದರೆ ಡಿಕೆ ಸುರೇಶ್ ಅವ್ರು. ಕೇಂದ್ರದ ಅನೇಕ ಯೋಜನೆ ತಂದು ಮನೆಮನೆಗೆ ತಲುಪಿಸಿದವರು. ಆದರೆ ಅಂತಹವರಿಗೆ ಜನ ಈ ರೀತಿ ತೀರ್ಪು ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಎಸ್‌ಟಿ ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು (ಜೂ.5): ಮತದಾರರ ತೀರ್ಮಾನವನ್ನ ಒಪ್ಪಿಕೊಳ್ಳಬೇಕು. 28 ಲೋಕಸಭಾ ಸದಸ್ಯರಲ್ಲಿ ಕೆಲಸ ಮಾಡಿದವರೆಂದರೆ ಡಿಕೆ ಸುರೇಶ್ ಅವ್ರು. ಕೇಂದ್ರದ ಅನೇಕ ಯೋಜನೆ ತಂದು ಮನೆಮನೆಗೆ ತಲುಪಿಸಿದವರು. ಆದರೆ ಅಂತಹವರಿಗೆ ಜನ ಈ ರೀತಿ ತೀರ್ಪು ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಎಸ್‌ಟಿ ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.
ಇಂದು ಸದಾಶಿವನಗರದ ಡಿಕೆ ಸುರೇಶ್ ನಿವಾಸಕ್ಕೆ ಭೇಟಿ ನೀಡಿದ ಎಸ್‌ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದೆ ಜನರಿಗೆ ತಪ್ಪಿನ ಅರಿವಾಗಲಿದೆ. ಯಾಕೆ ರೀತಿ ಮಾಡಿದೆವು ಅಂತಾ ಗೊತ್ತಾಗಲಿದೆ. ಅವರನ್ನ ಈ ಬಾರಿ ಎಲ್ಲರೂ ಟಾರ್ಗೆಟ್ ಮಾಡಿದ್ರು. 24/7 ರಾಜಕಾರಣ ಮಾಡಿದವರು ಇವರು. ಡಿಕೆ ಸುರೇಶ್ ರಂತೆ ಯಾರೂ ಕೆಲಸ ಮಾಡಿಲ್ಲ. ಜನ ಯಾಕೆ ಕಠಿಣ ನಿಲುವು ತೆಗೆದುಕೊಂಡ್ರೋ ಗೊತ್ತಿಲ್ಲ. ಮೈತ್ರಿಗಿಂತ ದೇಶ ಯೋಚಿಸಿದ್ದಾರೆ. ಮತದಾನ ಮಾಡುವಾಗ ಯೋಚಿಸಬೇಕಿತ್ತು ಎಂದರು.
ಜೆಡಿಎಸ್ -ಬಿಜೆಪಿ ಮೈತ್ರಿಯಿಂದ ಸೋಲಾಯ್ತಾ ಡಿಕೆ ಸುರೇಶ್ ಹೇಳಿದ್ದೇನು?
ಇನ್ನು ಬೆಂ. ಉತ್ತರ ಲೋಕಸಭಾ ಕ್ಷೇತ್ರದ ಫಲಿತಾಂಶ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉಡುಪಿ-ಚಿಕ್ಕಮಗಳೂರಿನವರೇ ಗೋಬ್ಯಾಕ್ ಮಾಡಿದ್ರು. ಆದರೆ ಅಂತಹವರಿಗೆ ಜನರೇ ಮತ ಕೊಟ್ಟಿದ್ದಾರೆ ಎಂದರೆ ನಾವು ಸ್ವಾಗತ ಮಾಡ್ತೇವೆ. ವಿಧಾನಸಭೆ ಬೇರೆ, ಲೋಕಸಭೆ ಬೇರೆ, ಪಂಚಾಯತಿ ಎಲೆಕ್ಷನ್ ಬೇರೆ. ನಾನು ಅವರ ಪರ ಪ್ರಚಾರ ಮಾಡೊಲ್ಲ ಅಂತಾನೇ ಹೇಳಿದ್ದೆ. ಸರ್ಕಾರ ಗ್ಯಾರಂಟಿಗಳನ್ನ ಕೊಟ್ಟಿತ್ತು. ಕಳೆದ ಬಾರಿ ಒಂದು ಸ್ಥಾನದಲ್ಲಿತ್ತು. ಈ ಬಾರಿ ಒಂಬತ್ತು ಸ್ಥಾನಕ್ಕೇರಿದೆ. ಅಟ್‌ಲಿಸ್ಟ್ 1 ಇದ್ದಿದ್ದು 9 ಆಗಿದೆ. ಜನರು ಕಾಂಗ್ರೆಸ್ ಪರ ಮತ ಕೊಟ್ಟಿದ್ದಾರೆ. ಡಿಕೆ ಸುರೇಶ್ ಯುಟ್ಯೂಬ್ ಉಪಯೋಗಿಸಲ್ಲ. ಅವರು ಅದಿಲ್ಲದೇ ಕೆಲಸ ಮಾಡಿದ್ದರು. ಸೋಶಿಯಲ್ ಮಿಡಿಯಾನ ಜನ ನೋಡ್ತಾರೆ ಎಂದರು ಇದೇ ವೇಳೆ ಕಾಂಗ್ರೆಸ್ ಕಡೆ ಅಧಿಕೃತ ಯಾವಾಗ ಎನ್ನುವ ಪ್ರಶ್ನೆಗೆ, 2028ಕ್ಕೆ ನಾನು ಯೋಚನೆ ಮಾಡ್ತೇನೆ ಈಗ ಯೋಚನೆ ಮಾಡುವ ಅವಶ್ಯಕತೆ ಇಲ್ಲ ಎಂದರು.
Bengaluru Rural Results: ಕನಕಪುರ ಬಂಡೆಗೆ ಸರ್ಜರಿ ಮಾಡಿದ ಡಾ. ಮಂಜುನಾಥ್, ಡಿಕೆ ಸುರೇಶ್‌ಗೆ ಸೋಲು
ಸೋಮಶೇಖರ್, ಹೆಬ್ಬಾರ್ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಯಿಂದ ಅಂತರ ಕಾಪಾಡಿಕೊಂಡಿರುವ ನಾಯಕರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅಂತರ ಕಾಯ್ದುಕೊಂಡಿದ್ದ ಸೋಮಶೇಖರ್, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲೂ ಅಂತರ ಕಾಪಾಡಿಕೊಂಡಿದ್ದ ಶಿವರಾಮ್ ಹೆಬ್ಬಾರ್. ಆದರೆ ಬೆಂಗಳೂರು ಉತ್ತರ- ಉತ್ತರ ಕನ್ನಡ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಭಾರಿಸಿದೆ. ಈ ಹಿನ್ನೆಲೆ ಡಿಕೆಸು- ಎಸ್.ಟಿಎಸ್, ಶಿವರಾಮ್ ಹೆಬ್ಬಾರ್ ಭೇಟಿ ಮಹತ್ವ ಪಡೆದುಕೊಂಡಿದೆ.