ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ನಿಜ. ಈ ವೇಳೆ ಮಳೆಯ ಕೊರತೆಯಿಂದ ನನ್ನ ಕ್ಷೇತ್ರದ ರೈತರು ಸಂಕಷ್ಟಕ್ಕೊಳಗಾಗಿದ್ದು, ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಅವರಿಗೆ ಮನವಿ ಮಾಡದೆ ಎಂದಷ್ಟೆ ಹೇಳಿದ ಶಾಸಕ ಶಿವರಾಮ ಹೆಬ್ಬಾರ್‌ 

ಮುಂಡಗೋಡ(ಆ.30): ನಾನು ಬಿಜೆಪಿಯಲ್ಲಿದ್ದೇನೆ, ಮುಂದೆಯೂ ಇಲ್ಲೇ ಇರುತ್ತೇನೆ. ಕಾಂಗ್ರೆಸ್‌ ಸೇರುವ ವದಂತಿಯನ್ನು ಯಾರು ಹಬ್ಬಿಸಿದ್ದಾರೋ ನನಗೆ ತಿಳಿಯದು ಎಂದು ಶಾಸಕ ಶಿವರಾಮ ಹೆಬ್ಬಾರ್‌ ಹೇಳುವ ಮೂಲಕ ನಿನ್ನೆಯಷ್ಟೆಅವರೇ ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ನುಡಿದು ಅಚ್ಚರಿ ಮೂಡಿಸಿದ್ದಾರೆ.

ಮಂಗಳವಾರ ತಾಲೂಕಿನ ಬಡ್ಡಿಗೇರಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ವೇಳೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ನಿಜ. ಈ ವೇಳೆ ಮಳೆಯ ಕೊರತೆಯಿಂದ ನನ್ನ ಕ್ಷೇತ್ರದ ರೈತರು ಸಂಕಷ್ಟಕ್ಕೊಳಗಾಗಿದ್ದು, ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಅವರಿಗೆ ಮನವಿ ಮಾಡದೆ ಎಂದಷ್ಟೆ ಹೇಳಿದರು.

ನಾನೀಗ ಬಿಜೇಪಿಲಿ ಇದ್ದೇನೆ, ಮುಂದೇನು ಗೊತ್ತಿಲ್ಲ: ಕುತೂಹಲ ಮೂಡಿಸಿದ ಕಮಲ ನಾಯಕನ ಹೇಳಿಕೆ..!

ಇನ್ನು ಸೋಮವಾರವಷ್ಟೇ ಮುಂಡಗೋಡ ಪ್ರವಾಸಿ ಮಂದಿರದಲ್ಲಿ ಹೆಬ್ಬಾರ್‌, ‘ಸದ್ಯಬಿಜೆಪಿಯಲ್ಲಿದ್ದೇನೆ, ಮುಂದಿನ ಭವಿಷ್ಯ ಹೇಳಲು ನಾನು ಜ್ಯೋತಿಷಿಯಲ್ಲ. ಮುಂದೆ ಏನು ಬೇಕಾದರೂ ಆಗಬಹುದು’ ಎಂದವರು ಕಾಂಗ್ರೆಸ್‌ ಸೇರ್ಪಡೆ ವದಂತಿಗೆ ಪುಷ್ಟಿನೀಡುವ ಹೇಳಿಕೆ ನೀಡಿದ್ದರು. ಆದರೆ ಮರುದಿನವೇ ‘ನಾನು ಬಿಜೆಪಿಯಲ್ಲೇ ಇರುತ್ತೇನೆ’ ಎಂದು ಬಿಜೆಪಿ ತೊರೆವ ವದಂತಿ, ಚರ್ಚೆಗಳ ಮಧ್ಯೆ ಮೊದಲ ಬಾರಿಗೆ ಹೇಳಿಕೆ ನೀಡಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.