ಬೆಂಗಳೂರು, (ಫೆ.08):  ರಮೇಶ್ ಜಾರಕಿಹೊಳಿ ಹಾಗೂ ಸಿಎಂ ಯಡಿಯೂರಪ್ಪ ಕೊನೆಗೂ ಮಹೇಶ್ ಕುಮಟಳ್ಳಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಚಿವ ಸ್ಥಾನ ಸಿಗದಿದ್ದಕ್ಕೆ ಮಹೇಶ್ ಕುಮಟಳ್ಳಿ ತೀವ್ರ ಅಸಮಾಧಾನಗೊಂಡಿದ್ದರು. ಇದರಿಂದ ಯಡಿಯೂರಪ್ಪ ಅವರು ಜಾರಕಿಹೊಳಿ ಬ್ರದರ್ಸ್ ಸಮ್ಮುಖದಲ್ಲಿ  ಮಹೇಶ್ ಕುಮಟಳ್ಳಿಯನ್ನ ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

'ಕುಮಟಳ್ಳಿಗೆ ಸಚಿವ ಸ್ಥಾನ ಕೊಟ್ಟಿದ್ರೆ ಗೌರವ ಹೆಚ್ಚಾಗ್ತಾ ಇತ್ತು' 

ನಿನ್ನೆ (ಶುಕ್ರವಾರ) ರಮೇಶ್ ಜಾರಕಿಹೊಳಿ ಅವರು ಮಹೇಶ್ ಕುಮಟಳ್ಳಿ ಅವರನ್ನು ಸಿಎಂ ಬಿಎಸ್ ಯಡಿಯೂರಪ್ಪನವರ ಮನೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪ್ರಮುಖ ನಿಗಮ ಮಂಡಳಿ ನೀಡುವಂತೆ ರಮೇಶ್, ಸಿಎಂಗೆ ಮನವಿ ಮಾಡಿದ್ದಾರೆ.

ಕೊನೆಗೂ ಬಿಎಸ್‌ವೈ ರಮೇಶ್ ಜಾರಕಿಹೊಳಿ ಮನವಿಗೆ ಸ್ಪಂದಿಸಿದ್ದು, ಮಹೇಶ್ ಕುಮಟಳ್ಳಿಗೆ ಪ್ರಬಲ ನಿಗಮ ಮಂಡಳಿ ಹುದ್ದೆ ನೀಡುವುದಾಗಿ ಹೇಳಿದ್ದಾರೆ. ಇದರಿಂದ ಕುಮಟಳ್ಳಿ ಸಮಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಅವರು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬಿಎಸ್‌ವೈ ಸಂಪುಟಕ್ಕೆ ಸೇರ್ಪಡೆಯಾದ 10 ನೂತನ ಸಚಿವರ ಒಂದಿಷ್ಟು ಮಾಹಿತಿ ನಿಮಗಾಗಿ

ಬೈ ಎಲೆಕ್ಷನ್‌ನಲ್ಲಿ ಗೆದ್ದ 11 ಪಕ್ಷಾಂತರಿಗಳ ಪೈಕಿ 10 ಶಾಸಕರನ್ನು ಮಾತ್ರ ಮಂತ್ರಿ ಮಾಡಲಾಗಿದೆ. ಮಹೇಶ್ ಕುಮಟಳ್ಳಿ ಅವರನ್ನು ಕೈಬಿಟ್ಟಿದ್ದಾರೆ. ಇದರಿಂದ ಅವರು ಮುನಸಿಕೊಂಡಿದ್ದರು. ಇದೀ ಜಾರಕಿಹೊಳಿ ಬ್ರದರ್ಸ್ ಸೇರಿಕೊಂಡು ರಾಜಿ ಸಂಧಾನ ಮಾಡಿದ್ದಾರೆ.