ಇಷ್ಟು ದಿನ ನನಗೆ ಏನು ಸಿಕ್ಕಿರಲಿಲ್ಲವೋ ಅದು 15 ದಿನಗಳಿಂದ ಸಿಗ್ತಿದೆ: ಯದುವೀರ

ಇಷ್ಟು ದಿನ ನಾನು ಜನಸಾಮಾನ್ಯರ ಜೊತೆ ಬೆರೆಯಲು ಸಾಧ್ಯವಾಗಿರಲಿಲ್ಲ. ಇದೀಗ ಬಿಜೆಪಿ ಅಭ್ಯರ್ಥಿ ಆಗಿರುವುದರಿಂದ ಜನಸಾಮಾನ್ಯರನ್ನು ಭೇಟಿ ಮಾಡುತ್ತಿದ್ದೇನೆ. ಜನ ಕೂಡ ಪ್ರೀತಿ, ಅಭಿಮಾನದಿಂದ ಕಾಣುತ್ತಿದ್ದಾರೆ ಎಂದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
 

Yaduveer Krishnadatta Chamaraja Wadiyar Talks over Public Life in Mysuru grg

ಮೈಸೂರು(ಮಾ.30):  ಇಷ್ಟು ದಿನ ನನಗೆ ಏನು ಸಿಕ್ಕಿರಲಿಲ್ಲವೋ ಅದು 15 ದಿನಗಳಿಂದ ಸಿಗುತ್ತಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಷ್ಟು ದಿನ ನಾನು ಜನಸಾಮಾನ್ಯರ ಜೊತೆ ಬೆರೆಯಲು ಸಾಧ್ಯವಾಗಿರಲಿಲ್ಲ. ಇದೀಗ ಬಿಜೆಪಿ ಅಭ್ಯರ್ಥಿ ಆಗಿರುವುದರಿಂದ ಜನಸಾಮಾನ್ಯರನ್ನು ಭೇಟಿ ಮಾಡುತ್ತಿದ್ದೇನೆ. ಜನ ಕೂಡ ಪ್ರೀತಿ, ಅಭಿಮಾನದಿಂದ ಕಾಣುತ್ತಿದ್ದಾರೆ ಎಂದರು.

ನಾನೂ ಜನರೊಂದಿಗೆ ಬೆರೆತು ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ. ಇದು ನನಗೆ ಸಂತಸ ತಂದಿದೆ. ಈವರೆಗೆ ನನಗೆ ಏನು ಸಿಕ್ಕಿರಲಿಲ್ಲವೋ ಅದು 15 ದಿನಗಳಿಂದ ಸಿಗುತ್ತಿದೆ. ಜನ ತೋರುತ್ತಿರುವ ಕಾಳಜಿಗೆ ನಾನು ಅಬಾರಿ. ನಾನು ಮುಂದೆಯೂ ಇದೇ ರೀತಿ ಜನರ ಜೊತೆ ಇರುತ್ತೇನೆ ಎಂದು ಅವರು ಹೇಳಿದರು.

ಯದುವೀರ್ ನಗರದ ಹಲವೆಡೆ ಭೇಟಿ ಮತಯಾಚನೆ : ನಾಗರೀಕರೊಡನೆ ಸಂವಾದ

ವೈಯಕ್ತಿಕ ಟೀಕೆ ಮಾಡಲ್ಲ: ಮುಖ್ಯಮಂತ್ರಿ ಹುದ್ದೆಗೆ ತನ್ನದೇ ಆದ ಮಹತ್ವವಿದೆ. ಮುಖ್ಯಮಂತ್ರಿಗಳ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಯಾರನ್ನೂ ನಾನು ವೈಯಕ್ತಿಕವಾಗಿ ಟೀಕಿಸುವುದಿಲ್ಲ. ಕಾಂಗ್ರೆಸ್‌ನವರು ನನ್ನ ಬಗ್ಗೆ ಮೃದು ಧೋರಣೆ ತಳೆದಿರುವ ಕುರಿತು ಏನನ್ನೂ ಹೇಳುವುದಿಲ್ಲ. ಯಾರ ಬಗ್ಗೆಯೂ ವೈಯಕ್ತಿಕ ಟೀಕೆಗಳನ್ನು ಮಾಡುವುದಿಲ್ಲ ಎಂದು ತಿಳಿಸಿದರು. 

Latest Videos
Follow Us:
Download App:
  • android
  • ios