ನನಗೆ ಮಂತ್ರಿಯಾಗುವ ಅವಕಾಶವಿದೆ ಗೆಲ್ಲಿಸಿ​: ಮಾಲೀಕಯ್ಯ ಗುತ್ತೇದಾರ್‌

ಕೆಲವು ಜನ ನನ್ನ ಸಹೋದರ ನಿತಿನ್‌ ಗುತ್ತೇದಾರ್‌ಗೆ ಚುನಾವಣೆಗೆ ನಿಲ್ಲಲು ಪ್ರಚೋದನೆ ನೀಡುತ್ತಿದ್ದಾರೆ. ಆದರೆ ಕರೆಸಿ ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ನನ್ನ ಮಾತು ಮೀರುವುದಿಲ್ಲ ಎಂಬ ಭರವಸೆ ಇದೆ ಎಂದು ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್‌ ತಿಳಿಸಿದರು.

Win I have a chance to become a minister Says Malikayya Guttedar gvd

ಅಫಜಲ್ಪುರ (ಏ.15): ಕೆಲವು ಜನ ನನ್ನ ಸಹೋದರ ನಿತಿನ್‌ ಗುತ್ತೇದಾರ್‌ಗೆ ಚುನಾವಣೆಗೆ ನಿಲ್ಲಲು ಪ್ರಚೋದನೆ ನೀಡುತ್ತಿದ್ದಾರೆ. ಆದರೆ ಕರೆಸಿ ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ನನ್ನ ಮಾತು ಮೀರುವುದಿಲ್ಲ ಎಂಬ ಭರವಸೆ ಇದೆ ಎಂದು ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್‌ ತಿಳಿಸಿದರು. ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ನಾನು ಬಿಜೆಪಿಯಿಂದ ನನ್ನ ಸಹೋದರ ನಿತಿನ್‌ ಗುತ್ತೇದಾರ್‌ಗೆ ಒಂದು ವೇಳೆ ಟಿಕೆಟ್‌ ನೀಡಿದರೆ ನಾವು ನೀವು ಕೂಡಿ ಚುನಾವಣೆ ಮಾಡಿ ಗೆಲ್ಲಿಸೋಣ ಎಂದು ಹೇಳಿದ್ದೆ. 

ಆದರೆ ನಿತಿನ್‌ ಮಾತ್ರ ನನಗೆ ಟಿಕೆಟ್‌ ಬೇಕೆಬೇಕು ಎಂದು ಹಠ ಹಿಡಿದು ನನಗೆ ದೃತರಾಷ್ಟ್ರ ಎಂದು ಹೇಳಿದ್ದಾನೆ. ಆದರೆ ಪಕ್ಷ ನನಗೆ ಗುರುತಿಸಿ ಟಿಕೆಟ್‌ ನೀಡಿದೆ. ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ ಇನ್ನೂ ಸಾಕಷ್ಟುಸಮಯವಿದೆ ಏ.20ರ ವರೆಗೆ ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ಇದು ನಮ್ಮ ಕುಟುಂಬದ ಸಮಸ್ಯೆ ಇರುವುದರಿಂದ ನಾವು ಬಗೆಹರಿಸಿಕೊಳ್ಳುತ್ತೇವೆ. ಗುತ್ತೇದಾರ ಕುಟುಂಬ ಯಾವತ್ತೂ ಕೂಡ ಒಡಕು ಆಗಲ್ಲ ಆದರೆ ಕೆಲವು ಜನ ನಮ್ಮ ಮನೆಯಲ್ಲಿ ಜಗಳ ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ.

ರಾಜಕೀಯ ನಿವೃತ್ತಿ ಬಯಸಿದರೂ, ಹೈಕಮಾಂಡ್‌ ಬಿಟ್ಟಿಲ್ಲ: ಸಚಿವ ಎಂಟಿಬಿ ನಾಗರಾಜ್‌

ಅನೇಕ ಕಷ್ಟಗಳು ಬಂದರೂ ಕೂಡ ನಾನು ನಮ್ಮ ತಂದೆಯವರ ನಂತರ ಜವಾಬ್ದಾರಿ ತೆಗೆದುಕೊಂಡು ಎಲ್ಲಾ ಸಹೋದರರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಿ ಯಾರಿಗೂ ಕಷ್ಟನೀಡಿಲ್ಲ.ನನ್ನ ಅಧಿಕಾರದ ಅವಧಿಯಲ್ಲಿ ಈ ಕ್ಷೇತ್ರವನ್ನು ಹಸಿರು ಕ್ರಾಂತಿಯನ್ನಾಗಿ ಮಾಡಿದ್ದೇನೆ ಇದರಿಂದಾಗಿ ಇವತ್ತೂ ನಮ್ಮ ಜನರು ಒಳ್ಳೇ ಜೀವನ ನಡೆಸಲು ಸಾಧ್ಯವಾಗಿದೆ. ಮುಂದೆ ಈ ಕ್ಷೇತ್ರಕ್ಕೆ ಒಳ್ಳೆಯ ಅವಕಾಶವಿದೆ. ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಆ ಸಂದರ್ಭದಲ್ಲಿ ಹಿರಿಯ ಶಾಸಕನಾಗಿದ್ದ ನನಗೆ ಮಂತ್ರಿಯಾಗುವ ಅವಕಾಶವಿದೆ. 

ಆದ್ದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ದೇಶದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲಿಸಿ ಇಂದಿನಿಂದಲೇ ಪದಾಧಿಕಾರಿಗಳು ತಮಗೆ ನೀಡಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು.ನಮ್ಮ ಕಾರ್ಯಕರ್ತರು ತಮ್ಮ ಹಳ್ಳಿಯಲ್ಲಿ ಇದ್ದುಕೊಂಡು ಮತದಾರರ ಮನವೊಲಿಸಬೇಕು. ಮೇ 1ರಿಂದ 10ರವರೆಗೆ ಒಂದು ಬೃಹತ್‌ ಸಮಾವೇಶ ಮಾಡೋಣ ಈಗಾಗಲೇ ನಾನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಕರೆತರುವ ಪ್ರಯತ್ನದಲ್ಲಿದ್ದೇನೆ ಎಂದು ಹೇಳಿದರು.

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ಗೆ ಮತ ನೀಡಿ: ಡಾ.ಜಿ.ಪರಮೇಶ್ವರ್‌

ಈ ಸಂದರ್ಭದಲ್ಲಿ ಗೋವಿಂದ ಭಚ್‌, ಅವ್ವಣ್ಣ ಮ್ಯಾಕೇರಿ,ಮಳೇಂದ್ರ ಡಾಂಗೆ,ಮಂಜೂರ ಅಹ್ಮದ ಅಗರಖೇಡ ಗುರುಬಾಳ ಜಕಾಪುರ, ರಿತೀಶ ಗುತ್ತೇದಾರ, ಶೈಲೇಶ ಗುಣಾರಿ,ಮನೀಷ ಗುತ್ತೇದಾರ, ಸಾವಿರಪ್ಪಪೂಜಾರಿ,ಪ್ರವೀಣ ಗುತ್ತೇದಾರ್‌, ಸಿದ್ದು ಹಳಗೋಧಿ,ವಿಜು ಪಾಟೀಲ,ಭೀರಣ್ಣಾ ಕಲ್ಲೂರ, ಸಿದ್ದು ಸಾಲಿಮನಿ, ಶಾಂತಾಬಾಯಿ ರಾಠೋಡ ಸೇರಿದಂತೆ ಇತರರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios