ಶಿವಸೇನೆ ಜತೆ ಮೈತ್ರಿಗೆ ಸಿದ್ಧವಾದ ಬಿಜೆಪಿ!
ಕ್ಷಣದಲ್ಲಿ ಸರ್ಕಾರವು ಮುಸ್ಲಿಮರಿಗೆ ಶೇ.5 ಮೀಸಲು ನೀಡಲಿದೆ: ಕಾಂಗ್ರೆಸ್, ಎನ್‌ಸಿಪಿ ಘೋಷಣೆ| ಎನ್‌ಸಿಪಿ, ಕಾಂಗ್ರೆಸ್ ಮೈತ್ರಿ ಮುರಿದರೆ ಶಿವಸೇನೆಗೆ ಬೆಂಬಲಿಸಲು ಸಿದ್ಧ: ಬಿಜೆಪಿ|
ಮುಂಬೈ[ಮಾ.04]: ಮುಸ್ಲಿಂ ಮೀಸಲಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ನ ಮಹಾಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರ ಲಾಭ ಗಿಟ್ಟಿಸಿಕೊಳ್ಳಲು ಹೊರಟಿರುವ ಬಿಜೆಪಿ, ‘ಕಾಂಗ್ರೆಸ್ ಹಾಗೂ ಎನ್‌ಸಿಪಿಗಳು ಸರ್ಕಾರದಿಂದ ಹೊರಬರಲು ತೀರ್ಮಾನಿಸಿದರೆ ಶಿವಸೇನೆ ಜತೆ ಮೈತ್ರಿಗೆ ನಾವು ಸಿದ್ಧ’ ಎಂದಿದೆ.
ಶಿಕ್ಷಣದಲ್ಲಿ ಸರ್ಕಾರವು ಮುಸ್ಲಿಮರಿಗೆ ಶೇ.5 ಮೀಸಲು ನೀಡಲಿದೆ ಎಂದು ಎನ್‌ಸಿಪಿ-ಕಾಂಗ್ರೆಸ್ ಹೇಳಿವೆ. ಆದರೆ ಅಂಥ ಪ್ರಸ್ತಾಪ ತಮ್ಮ ಮುಂದಿಲ್ಲ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಈ ಬಗ್ಗೆ ಹಿರಿಯ ಬಿಜೆಪಿ ಮುಖಂಡ ಸುಧೀರ್ ಮುಂಗಂಟಿವಾರ್ ಮಂಗಳವಾರ ಮಾತನಾಡಿ, ‘ಧರ್ಮಾಧರಿತ ಮೀಸಲು ಸಲ್ಲದು. ಶಿವಸೇನೆ ನಿಲುವು ಸರಿಯಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್-ಎನ್‌ಸಿಪಿಗಳು ಸರ್ಕಾರದಿಂದ ಹೊರಬಂದರೆ ಶಿವಸೇನೆ ಸರ್ಕಾರಕ್ಕೆ ನಾವು ಬೆಂಬಲಿಸಲಿದ್ದೇವೆ’ ಎಂದಿದ್ದಾರೆ.
ಬಿಜೆಪಿ ಈ ಮಾತಿನಂತೆ ಶಿವಸೇನೆ ಕೈ ಹಾಗೂ ಎನ್‌ಸಿಪಿ ಜೊತೆಗಿನ ಮೈತ್ರಿ ಮುರಿದು ಬಿಜೆಪಿ ಜತೆ ಕೈ ಜೋಡಿಸುತ್ತಾ? ಕಾದು ನೋಡಬೇಕಷ್ಟೆ
ಮಾರ್ಚ್ 4ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ