ಉಡುಪಿ-ಚಿಕ್ಕಮಗಳೂರು ಲೋಕಸಭೆ ಟಿಕೆಟ್‌ ಫೈಟ್‌: ಶೋಭಾ ಸ್ಪರ್ಧಿಸುತ್ತಾರಾ? ಸಿ.ಟಿ.ರವಿಗೆ ಬಿಟ್ಟುಕೊಡ್ತಾರಾ?

ಈ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಉಡುಪಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಚಿಕ್ಕಮಗಳೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. 2008ರಲ್ಲಿ ರಚನೆಯಾದ ಉಡುಪಿ-ಚಿಕ್ಕಮಗ ಳೂರು ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ನಡೆದ 4 ಚುನಾವಣೆಗಳಲ್ಲಿ 3 ಬಾರಿ ಬಿಜೆಪಿ ವಿಜಯಿಯಾಗಿದ್ದರೆ, 1 ಬಾರಿ ಕಾಂಗ್ರೆಸ್ ಗೆಲುವಿನ ರುಚಿ ನೋಡಿದೆ. ಈ ಬಾರಿಯ ಲೋಕಸಭಾ ಚುನಾವಣೆಗೆ ಈಗಾಗಲೇ ಎರಡೂ ಪಕ್ಷಗಳಲ್ಲಿ ಅರ್ಧ ಡಜನ್ ಆಕಾಂಕ್ಷಿಗಳು ತೆರೆಮರೆಯಲ್ಲಿ ಟಿಕೆಟ್‌ ಗಾಗಿ ಕಸರತ್ತು ಆರಂಭಿಸಿದ್ದಾರೆ.

Will Shobha Karandlaje Compete or CT Ravi Contest in Udupi Chikkamagaluru grg

ಸುಭಾಶ್ಚಂದ್ರ ವಾಗ್ಗೆ/ತಾರಾನಾಥ್ 

ಉಡುಪಿ(ಜ.26): ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಆಕಾಂಕ್ಷಿಗಳಿಂದ ಲಾಜಿ ಶುರುವಾಗಿದೆ. ಕರಾವಳಿಯ ಉಡುಪಿ ಜಿಲ್ಲೆ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯನ್ನೊಳ ಗೊಂಡ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫಿಫ್ಟಿ-ಫಿಫ್ಟಿ ಪ್ರಾಬಲ್ಯ ಇದೆ.

ಈ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಉಡುಪಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಚಿಕ್ಕಮಗಳೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. 2008ರಲ್ಲಿ ರಚನೆಯಾದ ಉಡುಪಿ-ಚಿಕ್ಕಮಗ ಳೂರು ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ನಡೆದ 4 ಚುನಾವಣೆಗಳಲ್ಲಿ 3 ಬಾರಿ ಬಿಜೆಪಿ ವಿಜಯಿಯಾಗಿದ್ದರೆ, 1 ಬಾರಿ ಕಾಂಗ್ರೆಸ್ ಗೆಲುವಿನ ರುಚಿ ನೋಡಿದೆ. ಈ ಬಾರಿಯ ಲೋಕಸಭಾ ಚುನಾವಣೆಗೆ ಈಗಾಗಲೇ ಎರಡೂ ಪಕ್ಷಗಳಲ್ಲಿ ಅರ್ಧ ಡಜನ್ ಆಕಾಂಕ್ಷಿಗಳು ತೆರೆಮರೆಯಲ್ಲಿ ಟಿಕೆಟ್‌ ಗಾಗಿ ಕಸರತ್ತು ಆರಂಭಿಸಿದ್ದಾರೆ.

ಸ್ವಪಕ್ಷೀಯರ ಮುನಿಸು ಖೂಬಾ ಲೋಕಸಭಾ ಟಿಕೆಟ್‌ಗೆ ಕತ್ತರಿ ಹಾಕುತ್ತಾ?: ಪುತ್ರನ ಕಣಕ್ಕಿಳಿಸಲು ಸಚಿವ ಖಂಡ್ರೆ ತಯಾರಿ

ಎಐಸಿಸಿ ಕಾರ್ಯದರ್ಶಿಗಳಾದ ಬಿ.ಎಂ.ಸಂದೀಪ್‌, ಡಾ.ಆರತಿ ಕೃಷ್ಣ, ಚಿಕ್ಕಮಗಳೂರು ಜಿಲ್ಲಾ ಆಕಾಂಕ್ಷಿಗಳಾಗಿದ್ದಾರೆ. ಮಾಜಿ ಸಚಿವ ವಿನಯಕುಮಾರ್‌ಸೊರಕೆ ಹೆಸರು ಕೂಡ ಚಾಲ್ತಿಯಲ್ಲಿದೆ. ಇನ್ನು, ವಾಗ್ನಿ ಸುಧೀರ್‌ಕುಮಾರ್‌ ಅವರು ಕರಾವಳಿ ಮಲೆನಾಡು ಜನತಾ ವೇದಿಕೆಯೊಂದನ್ನು ಸಿದ್ದ ಮಾಡಿಕೊಂಡು ಕ್ಷೇತ್ರದಾದ್ಯಂತ ಓಡಾಡಿ, ಟಿಕೆಟ್‌ ಗಾಗಿ ಲಾಬಿ ನಡೆಸಿದ್ದಾರೆ.

ಇನ್ನು, ಬಿಜೆಪಿಯಿಂದ ಸದ್ಯ ಕ್ಕೆ ಕ್ಷೇತ್ರದಿಂದ 2 ಬಾರಿ ಗೆದ್ದಿರುವ ಸಂಸದೆ, ಕೇಂದ್ರ ಸಚಿವೆ. ಶೋಭಾ ಕರಂದ್ಲಾಜೆ ಅವರು ಪುನರಾಯ್ಕೆಗೆ ಕಸರತ್ತು ಆರಂಭಿಸಿದ್ದಾರೆ. ಅವರು ಬೆಂಗಳೂರು ಉತ್ತರದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿ ಹರಡಿದ್ದರೂ, ತಾವು ಪುನಃ ಇದೇ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಅವರು ಪದೇ ಪದೇ ಹೇಳುತ್ತಿರುವುದರಿಂದ, ಸದ್ಯಕ್ಕೆ ಬಿಜೆಪಿಯಲ್ಲಿ ಬೇರೆ ಆಕಾಂಕ್ಷಿಗಳು ಮುಂದೆ ಬರುತ್ತಿಲ್ಲ. ಆದಾಗ್ಯೂ, ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತು, ಪ್ರಸ್ತುತ ಬಿಜೆಪಿಯಲ್ಲಿರುವ ಪ್ರಮೋದ್ ಮಧ್ವರಾಜ್ ತಾವು ಸ್ಪರ್ಧೆಗೆ ಆಸಕ್ತಿ ಹೊಂದಿರುವುದಾಗಿ ಬಹಿರಂಗವಾಗಿಯೇ ಹೇಳಿದ್ದಾರೆ. ಸಂಘ ಪರಿವಾರದ ನಾಯಕರನ್ನು ಭೇಟಿ ಮಾಡಿ, ಟಿಕೆಟ್‌ಗೆ ಒತ್ತಡ ಹೇರುತ್ತಿದ್ದಾರೆ.

ದಾವಣಗೆರೆ ಲೋಕಸಭಾ ಟಿಕೆಟ್ ಯಾರಿಗೆ? ಸತತ 4 ಸಲ ಗೆದ್ದಿರುವ ಸಿದ್ದೇಶ್ವರ ಮತ್ತೆ ಸ್ಪರ್ಧೆ?

ಈ ಮಧ್ಯೆ, ಕಾಂಗ್ರೆಸ್ಸನ್ನು ಈ ಕ್ಷೇತ್ರದಲ್ಲಿ ಒಮ್ಮೆ ಗೆಲ್ಲಿಸಿದ್ದ, ನಂತರ ಬಿ ಬಿಜೆಪಿ ಸೇರಿದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಕೂಡ ಮತ್ತೆ ಆಸಕ್ತಿಯಲ್ಲಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಮತ್ತೆ ಕಾಂಗ್ರೆಸ್ ಸೇರಿ ಸ್ಪರ್ಧಿಸುತ್ತಾರೆ. 
ಎನ್ನುವ ವದಂತಿಗಳೂ ಇವೆ. ಕಾಂಗ್ರೆಸ್ ವಲಯದಲ್ಲಿಯೂ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ವಿಧಾನಸಭೆ ಚುನಾವಣೆಯಲ್ಲಿ ಪರಾಜಿತರಾಗಿರುವ ಮಾಜಿ ಸಚಿವ ಸಿ.ಟಿ.ರವಿ ಅವರ ಹೆಸರೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಓಡಾಡುತ್ತಿದೆ. ತಮ್ಮ ಸ್ಪರ್ಧೆಯನ್ನು ಪಕ್ಷದ ಮಷ್ಕರ ನಿರ್ಧಾರಕ್ಕೆ ಬಿಟ್ಟಿದ್ದೇನೆ ಎನ್ನುವ ಮೂಲಕ ತಮ್ಮ ಆಕಾಂಕ್ಷೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.

ಇನ್ನು, ಬಿಜೆಪಿ ಹಾಗೂ ಜೆಡಿಎಸ್ ಚುನಾವಣಾ ಮೈತ್ರಿ ಮಾಡಿಕೊಳ್ಳುತ್ತಿರುವುದರಿಂದ ಸಹಜವಾಗಿಯೇ ಜೆಡಿಎಸ್ ಈ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವುದು ಖಚಿತ. ಈ ಎರಡೂ ಜಿಲ್ಲೆಗಳಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಭದ್ರ ಬುನಾದಿ ಇರುವ ಈ ಕ್ಷೇತ್ರವನ್ನು ಬಿಜೆಪಿ ಕಳೆದುಕೊಳ್ಳಲಿಕ್ಕಿಲ್ಲ. ಟಿಕೆಟ್ ಯಾರಿಗೆ ಸಿಕ್ಕರೂ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಫೈಟ್ ಇದ್ದೇ ಇದೆ. ಗೆಲ್ಲುವ ಅವಕಾಶ ಕೂಡ ಫಿಫ್ಟಿ-ಫಿಫ್ಟಿ. 

Latest Videos
Follow Us:
Download App:
  • android
  • ios